ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬದಲಾವಣೆ ಮತ್ತು ಹೊಂದಾಣಿಕೆ

ನಾವೆಲ್ಲಾ ಬದಲಾವಣೆಗೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವಲ್ಲಾ ಅಂತ ಆಶ್ಚರ್ಯ ಆಗುತ್ತದೆ. ಮೊನ್ನೆ ಸಂಪದ ಬದಲಾದಾಗ ಛೇ! ಇದೇನು, ನೋಡಲು ತುಂಬಾ ಕಷ್ಟ ಆಗುತ್ತಿದೆಯಲ್ಲಾ, ಮೊದಲಿದ್ದಿದ್ದೇ ಚೆನ್ನಾಗಿತ್ತು ಅಂತ ಅನಿಸುತ್ತಿತ್ತು. ಆದರೆ ಒಂದೆರಡು ದಿನ ಕಳೆದ ಮೇಲೆ, ಮೊದಲಿಗಿಂತ ಈಗಲೇ ಚೆನ್ನಾಗಿದೆ ಎಂದೆನಿಸುತ್ತಿದೆ. ಇನ್ನೊಂದಿಷ್ಟು ಸಣ್ಣ ಪುಟ್ಟ ಬದಲಾವಣೆಗಳಾದರೆ, ಸಂಪದ ಮೊದಲಿಗಿಂತ ಸಾಕಷ್ಟು ಉತ್ತಮವಾಗಿ ಕಾಣುತ್ತದೆ. ಸಂಪದದ ಹೊಸ ರೂಪಕ್ಕಾಗಿ ಶ್ರಮಿಸಿದ ಹರಿಪ್ರಸಾದ್ ನಾಡಿಗ್ ಅವರಿಗೂ ಹಾಗೂ ಎಲ್ಲ ನಿರ್ವಾಹಕರಿಗೂ ನನ್ನ ಕೃತಜ್ಞತೆಗಳು.

ದೀಪಾವಳಿ - ಮಧುರ ನೆನಪುಗಳು..

ದೀಪಾವಳಿ...ಈ ಹೆಸರೆಂದರೆ ಮನಸಿಗೆ ಏನೋ ಒಂದು ರೀತಿ ಆನಂದ, ಸಂಭ್ರಮ, ಪುಳಕ...ವರ್ಷಕ್ಕೊಮ್ಮೆ ಬರುತ್ತಿದ್ದ ಈ ಹಬ್ಬ ಎರಡು ಮೂರು ಬಾರಿ ಬರಬಾರದೇ ಎಂದು ಅಂದುಕೊಂದಿದ್ದೂ ಉಂಟು..ಮೊದಲೆಲ್ಲ ದೀಪಾವಳಿ ಎಂದರೆ ನವರಾತ್ರಿಯಿಂದಲೇ ಸಿದ್ಧತೆಗಳು ನಡೆಸುತ್ತಿದ್ದೆವು. ಶಾಲೆಯಲ್ಲಿ, ಮನೆಯಲ್ಲಿ ಸ್ನೇಹಿತರೊಡನೆ ಬರೀ ಅದೇ ಮಾತು...ಕಳೆದ ಬಾರಿ ಹೇಗಿತ್ತು. ಈ ಬಾರಿ ಹೇಗೆ ಮಾಡಬೇಕು ಹೊಸ ಬಟ್ಟೆ ತೆಗೆದುಕೊಳ್ಳುವ ಬಗ್ಗೆ ಪಟಾಕಿಗಳನ್ನು ಹೇಗೆ ವಿಧವಿಧವಾಗಿ ಹೊಡೆಯಬೇಕೆಂದು ಚರ್ಚೆಗಳು ನಡೆಯುತ್ತಿದ್ದವು.

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಗೋಕುಲನಂದನ ಶ್ರೀ ಕೃಷ್ಣನ ನೆನೆಯಿರೋ..
ದೇವಕಿಸುತನು ಶ್ರೀ ಕೃಷ್ಣನು..ಕಂಸನ ಕೊಂದವ ಶ್ರೀ ಕೃಷ್ಣನು..
ಬೆಣ್ಣೆಯ ಕದ್ದವ  ಬಾಲಕೃಷ್ಣನು...ತಾಟಕಿಯ ಕೊಂದವ ಶ್ರೀ ಕೃಷ್ಣನು..
ಮಣ್ಣನು ನುಂಗಿ ಬ್ರಮ್ಹಾಂಡವ ತೋರಿದ ಬಾಲಕನಿವನು
ಕಲ್ಲು ಗುಂಡನು ಎಳೆದು ಮರಕ್ಕೆ ಶಾಪವಿಮೋಚನ ಮಾಡಿದ ಪುಟ್ಟ ಕಂದನಿವನು..
ಕಾಳಿಂಗ ಸರ್ಪವ ಮೆಟ್ಟಿನಿಂತ ಮುದ್ದು ಕಂದನಿವನು..
ಗೋವರ್ಧನ ಗಿರಿಧಾರಿ ಶ್ರೀ ಕೃಷ್ಣನು ಇವನು...
ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಲೋಕೋದ್ಧಾರಕ ಶ್ರೀ ಕೃಷ್ಣನ ನೆನೆಯಿರೋ..
ಗೋವುಗಳ ಕಾಯ್ದ ಗೋಪಾಲಕನಿವನು..

ಹೆಬ್ರಿ ಸಮೀಪದ ಕಾಡಿನಲ್ಲಿ ನಕ್ಸಲ್ ಹೆಣ್ಣಿನ ಆತ್ಮಹತ್ಯೆ!

ಹೆಬ್ರಿಯಿಂದ  ಕಬ್ಬಿನಾಲೆಗೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿ, ಕಾಡಿನ ಮಧ್ಯೆ  ಇದ್ದ,  ಆ ದೊಡ್ಡ ಮರದ  ಗೆಲ್ಲಿನಿಂದ  ನೇತಾಡುತ್ತಿದ್ದ ಹೆಣ್ಣಿನ ಶವವನ್ನು ಕೆಳಗಿಳಿಸಿ ಪಂಚನಾಮೆ ನಡೆಸಲಾಯಿತು. ಶವವಾಗಿ ಮಲಗಿದ್ದ ಆ ಹೆಣ್ಣಿನ ಪರಿಚಯ ಅಲ್ಲಿ ಎಲ್ಲರಿಗೂ ಇದ್ದಂತಿತ್ತು. ಆಕೆ ಕಬ್ಬಿನಾಲೆಯ ಬಡ ರೈತ ವಾಸು ನಾಯ್ಕ ಮತ್ತು ಗಿರಿಜ ದಂಪತಿಗಳ ಹಿರಿಯ ಮಗಳಾದ ಜಯಂತಿ ಎಂದೂ, ಅಲ್ಲದೇ, ಹೆಬ್ರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಆಕೆ, ಈಗ್ಗೆ ಏಳೆಂಟು ತಿಂಗಳಿಂದ ಕಾಣೆಯಾಗಿದ್ದಳೆಂದೂ, ಅಲ್ಲಿ ನೆರೆದಿದ್ದ ಜನರು ಗುಸು ಗುಸು ಮಾತಾಡಿಕೊಳ್ಳುತ್ತಿದ್ದರು. ಮರಣೋತ್ತರ ಪರೀಕ್ಷೆಗೆ  ಶವವನ್ನು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ಸಾಗಿಸಲಾಯಿತು.

'ರಾಜನ ಕನಸುಗಳು' ಕಥೆ ಮತ್ತು ಉಬುಂಟು ತತ್ವಜ್ಞಾನ

ಒಬ್ಬ ರಾಜ, ಅವನಿಗೆ ಒಂದು ದಿನ ಒಂದು ಕನಸು . ಆ ಕನಸಿನಲ್ಲಿ ಅವನ ಸುತ್ತ ನರಿಗಳು ಓಡಾಡುತ್ತಿದ್ದವು. ಇದರ ಅರ್ಥವನ್ನು ಹೇಳಿದವರಿಗೆ ಬಹುಮಾನ ಕೊಡ್ತೀನಿ ಅಂತ ಸಾರಿದ, ಒಬ್ಬ ಹಳ್ಳಿಗನಿಗೆ ಒಂದು ಹಾವು ಆ ಬಹುಮಾನವನ್ನು ಹಂಚಿಕೊಳ್ಳುವ ಶರತ್ತಿನ ಮೇಲೆ ಅರ್ಥವನ್ನು ಹೇಳಿತು. ಹಳ್ಳಿಗ ಅದಕ್ಕೆ ಒಪ್ಪಿ ಅದನ್ನು ಕೇಳಿಕೊಂಡು ಬಂದು ರಾಜನಿಗೆ ಹೇಳಿದ "ರಾಜನೇ, ನರಿಯ ಹಾಗೆ ಮೋಸಗಾರರು ಕುತಂತ್ರಿಗಳು ನಂಬಿಕೆದ್ರೋಹ ಮಾಡುವವರು ರಾಜ್ಯದಲ್ಲಿ ಹೆಚ್ಚುತ್ತಿದ್ದಾರೆ. ನೀನು ಹುಷಾರಾಗಿರಬೇಕು." ಅಂತ. ರಾಜ ಅವನಿಗೆ ಬಹುಮಾನ ಕೊಟ್ಟು ಕಳಿಸಿದ.

ಹಳ್ಳಿಗರನು ಹಾವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಅರ್ಧ ಬಹುಮಾನವನ್ನು ಹಾವಿಗೆ ಕೊಡಬೇಕಾಗುತ್ತದಲ್ಲ ಅಂದು ಹಾವನ್ನು ತಪ್ಪಿಸಿ ಬೇರೆ ದಾರಿಯಿಂದ ಮನೆ ಸೇರಿದ.

 

ನಾನು ಬರೆವ ಕವಿತೆ ನನಗೆ...

ನಾನು ಬರೆವ ಕವಿತೆ ನನಗೆ
ನನ್ನ ಮನದ ಕನ್ನಡಿ
ಪ್ರೀತಿ ಸ್ನೇಹ ತ್ಯಾಗ ಸ್ವಾರ್ಥ
ಎಲ್ಲ ಇದಕೆ ಮುನ್ನುಡಿ

ಮನದ ಎಲ್ಲ ಕದವು ತೆರೆಯೆ
ಭಾವ ಹೊರಗೆ ಹರಿವುದು
ಅದಕೆ ನೈಜ ರೂಪವನ್ನು
ಎನ್ನ ಕವಿತೆ ಕೊಡುವುದು

ಮನವು ಹರ್ಷದಿಂದ ಕುಣಿಯೆ
ಕವಿತೆ ತುಂಬ ಪದಗಳು
ಒಮ್ಮೆ ಮನವು ಅಳುತ ಕೂತ್ರೆ
ಕಣ್ಣ ತುಂಬ ಹನಿಗಳು

ಮನಸು ಅಳಲು ಕವಿತೆ ಬರೆಯೆ
ಎಲ್ಲ ಎಲ್ಲ ನಶ್ವರ
ಮನಸು ಕುಣಿಯೆ ಕವಿತೆ ಬರೆಯೆ
ಎಲ್ಲಾ... ಬೇಕೋ ಈಶ್ವರ

ಪ್ರೀತಿ ನೀನು ಪ್ರೇಮ ನೀನು
ಮನದ ನೂರು ಆಸೆ ನೀನು
ತ್ಯಾಗ ನೀನು ಸ್ವಾರ್ಥ ನೀನು
ಮನದ ಕವಲು ದಾರಿ ನೀನು

ನಗುವು ನೀನು ನೋವು ನೀನು

ಗೌಡಪ್ಪನ ದುಬೈ ಪ್ರವಾಸ - ಭಾಗ ೨: ಮಲ್ಯನ ಜೊತೆ ಕಿ೦ಗ್ ಫಿಷರ್ ಡೀಲು!

ಜನಾರ್ಧನ ಹೋಟೆಲ್ನಿ೦ದ ಆಚೀಗ್ ಬ೦ದ ಮ೦ಜಣ್ಣ, ಕಾರಿನ ಢಿಕ್ಕಿ ತೆಗೆದು ದುಡ್ಡು ತು೦ಬಿದ್ದ ಬ್ಯಾಗನ್ನು ಉಸಾರಾಗಿಟ್ಟು ’ಹತ್ಕಳಲಾ ಸಾಬ್ರೆ’  ಅ೦ತ೦ದ್ರು.  ಅವ್ರ ದೋಸ್ತು ಸಾಬಿ, ಬಡ್ಡಿ ಐದ ಅಲ್ಲಿಗ೦ಟ ಸುಮ್ಕೆ ಇದ್ದೋನು ಈಗ ಸುರು ಅಚ್ಕೊ೦ಡ, ’ಅಲ್ಲಾ ಕಲಾ, ನಿ೦ಗೇನಾದ್ರೂ ತಲೆ ನೆಟ್ಟಗೈತಾ?  ಹತ್ತು ಲಕ್ಸದಾಗೆ ಇಪ್ಪತ್ತೈದು ಜನಗಳ್ನ ಅದೆ೦ಗಲಾ ದುಬೈ ತೋರ್ಸುಕೊ೦ಡ್ ಬರಕ್ಕಾಯ್ತದೆ”?  ಅದಕ್ಕೆ ಮ೦ಜಣ್ಣ ಮೀಸೆ ಅಡೀಲೆ ನಗ್ತಾ ಯೋಳುದ್ರು, ’ಅದೇ ಕಣ್ಲಾ ಡೀಲು, ಅ೦ಗೇ ನೋಡ್ತಾ ಇರು’ ಅ೦ತ ಕಾರನ್ನು ಸೀದಾ ಯುಬಿ ಸಿಟಿ ಕಡೆಗೆ ತಿರುಗಿಸಿದ್ರು,  ಗೇಟಲ್ಲಿದ್ದ ಸಕ್ರೂಟಿಗಳು ಮ೦ಜಣ್ಣನ್ನ ನೋಡ್ತಿದ್ದ೦ಗೇ ಠಪ್ಪ೦ತ ಶೂ ಕಾಲು ನೆಲಕ್ಕೊಡ್ದು ಸಲ್ಯೂಟ್ ಒಡುದ್ರು, ಚಡ್ಡಿ ದೋಸ್ತು ಸಾಬ್ರು ಅ೦ಗೇ ಬಾಯಿ ಬಿಟ್ಕೊ೦ಡ್ ನೋಡ್ತಾ ಇದ್ರು!  ಕಾರನ್ನು ಪಾರ್ಕಿ೦ಗಿನಾಗೆ ನಿಲ

ಮಾತುಪಲ್ಲಟ - ೧೧ ಮತ್ತೊನ್ದಿಷ್ಟು ಕೊರೆತ

♫♫♫ಮಾತುಪಲ್ಲಟ - ೧೧♫♫♫

ಇದು ಮಾತುಪಲ್ಲಟ ಸರಣಿಯ ಹನ್ನೊನ್ದನೆಯ ಹಾಡು. ಈ ಸಲ ಮಾತುಪಲ್ಲಟದ ಹಾಡುಗಳ ಸವಿಯುವವರು ಕೊರೆತವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. (ಹೆಚ್ಚೇನೂ ಇಲ್ಲ)

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

ಚಿತ್ರ              : ಓರ್ಕ್ಕುಗ ವಲ್ಲಪ್ಪೋೞುಂ♪
ಸಂಗೀತ          : ಎಂ. ಜಯಚಂದ್ರನ್♪
ಮೂಲ ಸಾಹಿತ್ಯ   : ಗಿರೀಶ್ ಪುತ್ತಂಚೇರಿ♪
ಹಾಡುಗಾರರು    : ಆನನ್ದ್♪, ರಾಜಲಕ್ಷ್ಮಿ♪
ವಿಡಿಯೋ        : http://www.youtube.com/watch?v=f9bMgBWVpmk

ಜಯ ಹೋ ಕರ್- ನಾಟಕ ಮಾತೆ

ನಮ್ಮ ರಾಜ್ಯದ ಹೆಸರಲ್ಲೇ ಇದೆ ನಾಟಕ 


ಚೆಡ್ಡಿ ರಾಜಕಾರಣಿಗಳು ಪಾಲಿಸುತಿಹರು 


ಅದನು ಚಾಚೂ ತಪ್ಪದೆ 


ಹೇಗಿದೆ ನೋಡಿ ಅವರ ಮರಕೋತಿಯಾಟ.


ರೈತರ ಎದೆಗೆ ಗುಂಡಿಟ್ಟು ಮಾಧ್ಯಮದ


ಮುಂದೆ ಮೊಸಳೆ ಕಣ್ಣೀರು ಸುರಿಸುವರು.


ಗಣಿಯ ಧೂಳನು ನಮ್ಮ ಕಣ್ಣಿಗೆರಚಿ


ರೆಸಾರ್ಟ್ ಗಳಲ್ಲಿ ತಮ್ಮ ಕೈ ತೊಳೆಯುವರು


ನೈಸು, ಪೀಸು ಮುಂತಾದ ಮಂತ್ರ


ಜಪಿಸುತ್ತ ಕಾಲಹರಣ ಮಾಡುವರು.


ಮೊನ್ನೆ ತಾನೇ ಹರಾಜಾಯಿತು