ನಿನ್ನ ಕಣ್ಣ ನೋಟದಲ್ಲಿ

ನಿನ್ನ ಕಣ್ಣ ನೋಟದಲ್ಲಿ

ಬರಹ

ನಿನ್ನ ಕಣ್ಣ ನೋಟದಲ್ಲಿ ಕಂಡೆ ನಾ ಮಿಂಚೊಂದನು..

ಆ ಕ್ಷಣಕ್ಕೇ ನಾ ನನ್ನನು ನಿನಗೆ ಅರ್ಪಿಸಿದೆನು..

ಇದೇನಾ ಕಂಡೊಡನೆ ಪ್ರೀತಿ ಎಂದು ನಾನರಿಯೆ..

ನನ್ನೊಳಗೆ ಗೂಡು ಕಟ್ಟಿರುವ ಭಾವನೆಗಳ ನೀನರಿಯೆ...

ಮನದ ಮುಗಿಲ ಕಾರ್ಮೋಡ ಸರಿದು ಮೂಡಿದ ಕಾಮನಬಿಲ್ಲು..

ಏನೆಂದು ಹೆಸರಿಡುವುದು ಈ ನನ್ನ ಭಾವನೆಗಳಿಗೆ..

ನನ್ನೀ ಮನದ ಗಾಳಿಪಟಕೆ ಸೂತ್ರವ ಹಾಕಿದ ಮಿಂಚುಳ್ಳಿ ನೀನು..

ಜಕಣಾಚಾರಿಯ ಕೆತ್ತನೆಯ ನೀನು....ರವಿವರ್ಮನ ಕಲೆಯಾ ನೀನು..

ದಂತದ ಗೊಂಬೆಯಂತಿರುವ ನಿನ್ನಂದಕೆ ನಾ ಸೋತು ಹೋದೆನು

ಆಕರ್ಷಣೆಯಲ್ಲ ಇದು ಬರೀ..ನಂಬು ನೀ ನನ್ನನು..

ಜೀವಗಂಗೆ ಹರಿದಿದೆ ನನ್ನೆದೆಯಲ್ಲಿ ಅಲೆ ಅಲೆಯಾಗಿ

ಧುಮ್ಮಿಕ್ಕುತ್ತಿದೆ ಪ್ರೀತಿಯ ಜಲಪಾತ ನಿತ್ಯೋತ್ಸವವಾಗಿ

ನಿನ್ನ ಕಣ್ಣ ನೋಟದಲ್ಲಿ ಕಂಡೆ ನಾ ಮಿಂಚೊಂದನು..

ಒಪ್ಪಿಕೊ ನನ್ನ ನೀ ನಿನ್ನವನಾಗಿ...