ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ೦ಪದಿಗರೇ ದಯವಿಟ್ಟು ಪ್ರತಿಕ್ರಿಯಿಸಿ (ಸಮ್ಮಿಲನ ಕುರಿತು)

ಆತ್ಮೀಯರೇ


ಸ೦ಪದ ಸಮ್ಮಿಲನಕ್ಕೆ ಬರುವವರರು ದಯವಿಟ್ಟು ತಮ್ಮ ಬರುವಿಕೆಯನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿದರೆ ಒ೦ದು ಸ್ಪಷ್ಟತೆ ಸಿಗುತ್ತೆ. ದಯವಿಟ್ಟು ಪ್ರತಿಕ್ರಿಯಿಸಿ


ಹರಿ

ಶ್ರೀಮತಿ ಶ್ಯಾಮಲಾ ಜನಾರ್ದನನ್‍ರಿಗೆ ಅಭಿನಂದನೆಗಳು!

ಪ್ರಸಕ್ತ ಸಾಲಿನ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಲಿತ ಪ್ರಬಂಧ ವಿಭಾಗದಲ್ಲಿ ಸಂಪದಗಿತ್ತಿ ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರ "ಸಂಬಂಧಗಳು" ಪ್ರಬಂಧಕ್ಕೆ ಈ ಪ್ರಶಸ್ತಿ ದೊರೆತಿರುತ್ತದೆ.

ಕಳೆದ ಶುಕ್ರವಾರದ (೨೯ ಅಕ್ಟೋಬರ್ ೨೦೧೦ರ) ವಿಜಯಕರ್ನಾಟಕದಲ್ಲಿ ಈ ಸುದ್ದಿ ಪ್ರಕಟವಾಗಿದೆ.

ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರಿಗೆ ಹಾರ್ದಿಕ ಅಭಿನಂದನೆಗಳು.

- ಆಸು ಹೆಗ್ಡೆ

ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ದುರ್ದೈವಿ!

ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯ
ಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯ

ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದು
ರೋಮಾಂಚನಗೊಳಿಸುವ ಹೊಸ ಹೊಸ ಅನುಭವ ನಮಗಾಗುವುದು

ಮೂಡಬಿದರೆಯ ವಿದ್ಯಾಗಿರಿಗೆ ಕಾಲಿಟ್ಟ ಕ್ಷಣದಿಂದ ಭಾವನಾ ಲೋಕದಲ್ಲಿ
ತಂತಾನೇ ಸಾಗಿ ಭಾವ ಬಂಧನದಲ್ಲಿ ಬಂಧಿಯಾಗುವರು ಎಲ್ಲರೂ ಅಲ್ಲಿ

ಮೂರು ದಿನಗಳಲ್ಲಿ ಹತ್ತಿಪ್ಪತ್ತು ಗ್ರಂಥಗಳ ಓದಿದಂತಹ ಅನುಭವ ನಮಗೆ
ಯಾವುದೋ ಸೆಳೆತಕ್ಕೊಳಗಾಗಿ ಎತ್ತಲೋ ಸಾಗುತ್ತಿರುವನುಭವ ನಮಗೆ

ಕರಾವಳಿಯ ಕಲೆಗಳಾದ ಯಕ್ಷಗಾನ, ಭೂತಾರಾಧನೆ, ಡೋಲು ವಾದನ

ರಾಜ್ಯೋತ್ಸವದ ಸಮಯದಲ್ಲಿ ಕವಿತೆಯಾಗದೇ ತೊಟ್ಟಿಕ್ಕಿದ ಸಾಲುಗಳು

- ಲಘು -

ಕನ್ನಡದ ಮೇಲಿನ ಅಭಿಮಾನಕ್ಕಾಗಿ
ಒಂದಕ್ಕೆ ಮೌನವ್ರತವನ್ನಾಚರಿಸಿದೆ !

ಕನ್ನಡ ರಾಜ್ಯೋತ್ಸವದ ನನ್ನ ಹೊಸ ರಿಸೊಲ್ಯೂಶನ್ನು
ಇಂಗ್ಲೀಷ್ ಮಾತನಾಡೋ ಮಧ್ಯೆ ನುಸುಳಿಸಲಾರೆ ಕನ್ನಡವ ಇನ್ನು

ರಾಜ್ಯೋತ್ಸವಕ್ಕೆ ಪ್ರಶಸ್ತಿಗೆ ನಾನೂ ಅರ್ಜಿ ಸಲ್ಲಿಸಬೇಕು
ಎಲ್ಲರಿಗೆ ಬೇಕಾಬಿಟ್ಟಿ ಸಿಗೋದು ನನಗೂ ಬೇಕು

- ಗಂಭೀರ -

ಈ ಬಾರಿ ರಾಜ್ಯೋತ್ಸವಕ್ಕೆ ಇನ್ನೂ ಮೆರುಗಿತ್ತು
ಓದಲೆಂದು ಕೊಂಡೆ ಕನ್ನಡ ಪುಸ್ತಕಗಳ ಒಂಭತ್ತು

ಓದಲು ಬರುವ ನನಗೆ ಯಾವುದಾದರೇನು
ಆದರೆ ಕನ್ನಡವೊಂದಿದ್ದರೆ ಅದರಷ್ಟು ಬೇರೆ ಆಪ್ತವೇನು?

ಕನ್ನಡಿಗನೊಬ್ಬ ಬಾಯ್ತೆರೆದರೆ ಇಂಗ್ಲೀಷಿನಲ್ಲಿ
ನನ್ನ ಉತ್ತರ ಅದಕ್ಕೆ ಕನ್ನಡದಲ್ಲಿ,

ಹುಚ್ಚು ಬಯಕೆ

ನಿನ್ನ ಪ್ರೀತಿಯ ಸಾಲಗಾರ ನಾನಾಗ ಬೇಕಿದೆ
ನನ್ನ  ಕನಸ ಪಾಲುಗಾರ ನೀನಾಗ ಬೇಕಿದೆ
ದಿನಕೆ ನೂರು ಬಾರಿ ಪ್ರೀತಿ ನಾ ಹೇಳಬೇಕಿದೆ
ಈ ವಿಧದಲ್ಲೇ ನಾ ಮಾಡಿದ ಸಾಲ ತೀರಿಸಬೇಕಿದೆ
ನನ್ನ ಕನಸ ಬುತ್ತಿಯ ಕೈ ತುತ್ತು ನಿನಗೆ ತಿನಿಸಬೇಕಿದೆ
ನಿನ್ನೊಂದಿಗೆ ನನ್ನ ಪಾಲು ನಾ ಸವೆಯಬೇಕಿದೆ


ಮುಚ್ಚಿರುವ ನಿನ್ನ ಆ ಕಣ್ಣ ಒಳನೋಟ ನಾ ನೋಡ ಬೇಕಿದೆ
ಆ ಕಣ್ಣಿಗೆ ಅರಿವಾಗದಂತೆ ನಾ ಮುತ್ತನೊಂದು ಇಡಬೇಕಿದೆ
ಬಯಲೋಳು ತುಸುದೂರ ನನ್ನ ನಾ ಮರೆತು ನಿನ್ನ ನಾ ಹಿಂಬಾಲಿಸಬೇಕಿದೆ
ನಿನ್ನ ಪ್ರತಿ ಹೆಜ್ಜೆಯ ಅಚ್ಚಿಗೂ ನನ್ನ ಪಾದ ಮುತ್ತಿಡಬೇಕಿದೆ


ಪ್ರತಿ ಇರುಳು ನಿನ್ನೊಂದಿಗೆ ನಾ ಹುಸಿ ಮುನಿಸು ಮಾಡ ಬೇಕಿದೆ
ಪ್ರತಿ ಮುನಿಸಿಗೂ ಕಾರಣ ನಾನಾಗಿರಬೇಕಾಗಿದೆ

ಸ೦ಪದ ಸಾಹಿತ್ಯ ಸಮ್ಮಿಲನ

ದಿನಾ೦ಕ ೨೧ ನವೆ೦ಬರ್ ರ೦ದು ಸ೦ಪದ ಸಮ್ಮಿಲನವನ್ನು ಆಯೋಜಿಸೋಣವೆ೦ದು ಹೇಳಿ ಕಾಣೆಯಾಗಿಬಿಟ್ಟಿದ್ದಕ್ಕೆ ಕ್ಷಮೆ ಇರಲಿ. ಕೆಲಸದ ಒತ್ತಡದಲ್ಲಿ ಸಮ್ಮಿಲನ ಬಗ್ಗೆ ಬರೆಯಲು ಸಾಧ್ಯವಾಗಲಿಲ್ಲ. ಸ೦ಪದದ ಕಥೆಗಾರರು, ಕವಿಗಳು, ಲೇಖಕರು ಕಲೆತು ಮಾತನಾಡುವ ಸುಸ೦ದರ್ಭ ದಿನಾ೦ಕ ೨೧ರ೦ದು ಬ೦ದಿದೆ. ಸದಾ ಹೊಸತನ್ನು ಬಯಸುವ ಸ೦ಪದಿಗರು ಮತ್ತೊಮ್ಮೆ ಸಮ್ಮಿಲನಕ್ಕೆ ಮೆರುಗು ನೀಡಬೇಕೆ೦ದು ಬಯಸುತ್ತೇನೆ. ಕಥೆ ಕವನ ಹಾಸ್ಯ ಜೊತೆಗೆ ಇನ್ನೇನಾದರೂ ಸಾಹಿತ್ಯಕ್ಕೆ ಸ೦ಬ೦ಧಿಸಿದ ಕಾರ್ಯಕ್ರಮವನ್ನು ಮಾಡೋಣವೇ? ಸ್ಥಳ ಕಾಯ್ದಿರಿಸುವ ಕೆಲಸ ಮುಗಿದಿದೆ. ವಿವರಗಳು ಇ೦ತಿವೆ


ಸ೦ಪದ ಸಮ್ಮಿಲನ