ರಾಜ್ಯೋತ್ಸವದ ಸಮಯದಲ್ಲಿ ಕವಿತೆಯಾಗದೇ ತೊಟ್ಟಿಕ್ಕಿದ ಸಾಲುಗಳು

ರಾಜ್ಯೋತ್ಸವದ ಸಮಯದಲ್ಲಿ ಕವಿತೆಯಾಗದೇ ತೊಟ್ಟಿಕ್ಕಿದ ಸಾಲುಗಳು

- ಲಘು -

ಕನ್ನಡದ ಮೇಲಿನ ಅಭಿಮಾನಕ್ಕಾಗಿ
ಒಂದಕ್ಕೆ ಮೌನವ್ರತವನ್ನಾಚರಿಸಿದೆ !

ಕನ್ನಡ ರಾಜ್ಯೋತ್ಸವದ ನನ್ನ ಹೊಸ ರಿಸೊಲ್ಯೂಶನ್ನು
ಇಂಗ್ಲೀಷ್ ಮಾತನಾಡೋ ಮಧ್ಯೆ ನುಸುಳಿಸಲಾರೆ ಕನ್ನಡವ ಇನ್ನು

ರಾಜ್ಯೋತ್ಸವಕ್ಕೆ ಪ್ರಶಸ್ತಿಗೆ ನಾನೂ ಅರ್ಜಿ ಸಲ್ಲಿಸಬೇಕು
ಎಲ್ಲರಿಗೆ ಬೇಕಾಬಿಟ್ಟಿ ಸಿಗೋದು ನನಗೂ ಬೇಕು

- ಗಂಭೀರ -

ಈ ಬಾರಿ ರಾಜ್ಯೋತ್ಸವಕ್ಕೆ ಇನ್ನೂ ಮೆರುಗಿತ್ತು
ಓದಲೆಂದು ಕೊಂಡೆ ಕನ್ನಡ ಪುಸ್ತಕಗಳ ಒಂಭತ್ತು

ಓದಲು ಬರುವ ನನಗೆ ಯಾವುದಾದರೇನು
ಆದರೆ ಕನ್ನಡವೊಂದಿದ್ದರೆ ಅದರಷ್ಟು ಬೇರೆ ಆಪ್ತವೇನು?

ಕನ್ನಡಿಗನೊಬ್ಬ ಬಾಯ್ತೆರೆದರೆ ಇಂಗ್ಲೀಷಿನಲ್ಲಿ
ನನ್ನ ಉತ್ತರ ಅದಕ್ಕೆ ಕನ್ನಡದಲ್ಲಿ,

’ಅದೇನು ಎಗರಾಡ್ತೀ ಮೂರೊತ್ತೂ ಕನ್ನಡ ಕನ್ನಡ’
’ಮಾತಾಡದಿದ್ರೆ ನೋಡ್ ಬೀಳತ್ತೆ ಇನ್ನು ಮುಂದೆ ಎಕ್ಕಡ!’

Rating
No votes yet

Comments