ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ), "ದೇವಕೃಪ ಹೌ. ಸೊ". ಯ ಹೊರ-ಆಂಗಣದಲ್ಲಿ !

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ) ದಲ್ಲಿರುವ, "ದೇವಕೃಪಾ ಹೌಸಿಂಗ್ ಸೊಸೈಟಿ" ಯ ಹೊರ ಆಂಗಣದಲ್ಲಿ, ಅಕ್ಟೋಬರ್, ೧೮ ರ ಪ್ರಾತಃಕಾಲ, ಪ್ರಾರಂಭವಾಗಿ, ಸುಮಾರು ೩-೩೦ ರ ಹೊತ್ತಿಗೆ,  ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಹಾಗೂ ಇರುಮುಡಿ ಕಟ್ಟುವಿಕೆ, ಮತ್ತು ಪಡಿಪೂಜೆಯು ವಿವಿಧ ಧಾರ್ಮಿಕ ವಿಧಿ-ವಿಧಾನಗಳಿಂದ ವಿಜೃಂಭಣೆಯಿಂದ ನೆರವೇರಿತು.

ಅನ್ಯಗ್ರಹ ಜೀವಿಗಳಿವೆಯೆ?

ಅನ್ಯಗ್ರಹ ಜೀವಿಗಳಿವೆಯೆ?

 

14ನೇ ಅಕ್ಟೋಬರ್ 2010ರ `ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ `ಅನ್ಯಗ್ರಹದಲ್ಲಿ ಜೀವಿಗಳಿವೆಯೆ?' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ. ಈ ಲೇಖನವನ್ನು ನನ್ನ ಬ್ಲಾಗ್ `ಅಂತರಗಂಗೆ'ಯಲ್ಲೂ ಓದಬಹುದು.

-ಡಾ.ಜೆ.ಬಾಲಕೃಷ್ಣ

 

ಕಡ್ಡಾಯ ಮತದಾನ ಇಂದಿನ ಅಗತ್ಯ; ಎಳೆಯರಲ್ಲಿ ನೈತಿಕತೆಯ ಪ್ರಜ್ಞೆ ಮುಂದಿನ ಅಗತ್ಯ

  ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯವನ್ನು ಕಾಡುತ್ತಿರುವ ಅರಾಜಕತೆಯೆಂಬ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ ಏನು? ಇದು ಈ ರಾಜ್ಯದ ಆರು ಕೋಟಿ ಜನರ ಮನದಲ್ಲಿಂದು ಎದ್ದಿರುವ ದುಗುಡಭರಿತ ಪ್ರಶ್ನೆ.

ಜಂಬೂ ಸವಾರಿ ೨೦೧೦- ದುರ್ ದರ್ಶನ

ಚಂದನದ courtesyಯಿಂದ ನಮಗೆ ’ನಮ್ಮ ನಾಡಹಬ್ಬ ದಸರಾ’ದ ’ಜಂಬೂಸವಾರಿ’ಯ ನೇರ ಪ್ರಸಾರ ನೋಡುವ ಭಾಗ್ಯ ಸಿಕ್ಕಿತು.


’ದೂರ ದರ್ಶನ’ ಎಂದು ಇನ್ನೂ ಸ್ವಲ್ಪ ದೊಡ್ಡದಾಗಿ, ದಪ್ಪ ಅಕ್ಷರದಲ್ಲಿ ಹಾಕಿ, ಹಳೇ ದಸರಾದ ರೀಲನ್ನೇ ಹಿನ್ನಲೆಯಲ್ಲಿ ಹಾಕಿರುತ್ತಿದ್ದರೆ, ಮೈಸೂರಿಗೆ ಹೋಗಿ ರಿಲೇ ಮಾಡುವ ಕಷ್ಟನೂ ತಪ್ಪುತ್ತಿತ್ತು.


(ಕ್ಷಮಿಸಿ. ಚಿತ್ರದಲ್ಲಿ ಇನ್ನೂ ದಪ್ಪ ಅಕ್ಷರದಲ್ಲಿ ಹಾಗೂ ಕನ್ನಡದಲ್ಲಿ ಬರೆಯಲಾಗಲಿಲ್ಲ)

ಕುಲುಕುತ್ತಾ ಮುಲುಕುತ್ತಾ.........!

ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರು
ಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ  ಕಾರು

ಭೋರ್ಗರೆವ ಸಾಗರದ ಅಲೆಗಳು  ಗಢಚಿಕ್ಕುವ  ಸಿಡಿಲಿನ  ಅಬ್ಬರ
ಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರ

ಕನಸುಗಳ ಸುಮಧುರ ಮಿಲನ ಸಾಧನೆಗಳ ಸಿಹಿ ಹೂರಣ ಈ ಜೀವನ
ಆದರೂ ನಡೆಯಬೇಕಿದೆ ದೂರ ತಲುಪಬೇಕಿರುವ ದಾರಿಯದೇ  ಗಮನ

ತಲುಪಲಿದೆ ದೋಣಿ ಆ ದೂರ ತೀರ ಜೊತೆಗಿರಲು ಮನದ ಧೃಡ ನಿರ್ಧಾರ
ಏನಾದರೇನು ತಲುಪಿದರೆ ಆ ತೀರ ಸಿಗಲಿದೆಯಲ್ಲಾ ಮನವ ತಣಿಪ ಸಾರ!!

ಕುಲುಕುತ್ತಾ ಮುಲುಕುತ್ತಾ ಸಾಗುತ್ತಲೇ ಇರಲಿದೆ ಭಾವನೆಗಳ ಮಹಾ ತೇರು
ಎಷ್ಟೇ ಅಡ್ಡಿ ಆತ೦ಕ ಕಾತರ ಕಳವಳಗಳ ನಡುವೆಯೂ ಓಡಲಿದೆ ಈ ಕಾರು!!