ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಲ್ಲೆ

ಭೂತಾಯಿಯ ಗರ್ಭದೊಡಲಿನಿ೦ದ


ಪನ್ನೀರಿನೊರೆತದ ಉಗಮ.


ಕಲ್ಲ ಕರ ಕೊರಳಿನಿ೦ದ


ಹರಿಯುತಿದೆ ಸುಗಮ.


 


ಹನಿ ಹನಿಗಳು ಒ೦ದು ಸೇರಿ


ತಾಯ ಹಾಲ ಮೊದಲ ಬಾರಿ


ಕುಡಿದು ತಣಿದ ಇಳೆಯ ಮಗಳು,


ಝರಿಯ, ತೊರೆಯ, ತೆರೆಯ


ನಿನಾದದೊಡನೆ ಬೆಳೆವಳು,

ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು

“ಕೇಸರಿ ಭಯೋತ್ಪಾದನೆ” ಎಂಬ ನುಡಿಗಟ್ಟಿಗೆ ಆರ್ ಎಸ್ ಎಸ್ ಸರಸಂಘಚಾಲಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಇದು ಅತ್ಯಂತ ಸಮಂಜಸ.
ಹಿಂಸೆ ಯಾರು ಮಾಡಿದರೂ ಅದು ಜೀವ ವಿರೋಧಿಯೇ; ಮನುಷ್ಯತ್ವದ ಮಮಕಾರವಿರುವವರೆಲ್ಲಾ ಅದನ್ನು ವಿರೋಧಿಸಲೇ ಬೇಕು. ಪಥಭ್ರಾಂತ ಮೂರ್ಖ ಯುವಜನರನ್ನು ಹಿಡಿದು, ಅವರ ಮನುಷ್ಯತ್ವವನ್ನು Brainwashನಿಂದ ತೊಡೆದುಹಾಕಿ, ಬಾಂಬು-ಬಂದೂಕಗಳನ್ನು ಕೊಟ್ಟು ರಫ್ತು ಮಾಡುವ ‘ಢಕಾಯಿತರು’ ಯಾವ ಧರ್ಮದವರೂ ಅಲ್ಲ; ಅವರಿಂದ ಯಾವ ಧರ್ಮವೂ ಉರ್ಜಿತವಾಗುವುದಿಲ್ಲ; ಆ “ರಾಜಕೀಯ ಉದ್ಯಮಿ”ಗಳಿಗೆ ಧರ್ಮೋದ್ಧರದ ಉದ್ದೇಶವಿರುವುದೂ ಸಾಧ್ಯವಿಲ್ಲ! ಆದರೂ ಅವರು ಮಾಡಿಸುವ “ಪ್ರಳಯ” ಢಾಳಾಗಿ ಕಾಣುತ್ತದೆ; ಸಾರ್ವತ್ರಿಕ ಖಂಡನೆಗೆ ಗುರಿಯಾಗುತ್ತದೆ. ಆದರೆ ಕಣ್ಣಿಗೆ ಕಾಣಿಸಿಕೊಳ್ಳದೇ ಒಳಗೊಳಗೇ ದೇಶದ ಒಮ್ಮತಕ್ಕೇ ಬತ್ತಿಯಿಡುವ ನಯವಂಚಕ ರಾಜಕಾರಣ, ಹಾದಿತಪ್ಪಿದ ಯುವಕರು ಇಡುವ ಟೈಂ ಬಾಂಬಿನ ಬತ್ತಿಗಿಂತಲೂ “ನಿಧಾನ ದ್ರೋಹಿ”ಯಾಗಿದ್ದು, ಹೆಚ್ಚು ಅಪಾಯಕಾರಿಯಾದದ್ದು.

ಗೌಡಪ್ಪನ ಸೈಕಲ್ ರೇಸ್

ಬೆಳಗ್ಗೆನೇ ಸುಬ್ಬ, ಹೊಸಾ ಸೈಕಲ್ ತೊಳೀತಾ ಇದ್ದ. ಅಟೊತ್ತಿಗೆ ಗೌಡಪ್ಪ ಬಂದೋನು, ಲೇ ಸುಬ್ಬ ಸೈಕಲ್್ಗೆ ಏನ್ಲಾ ಕೊಟ್ಟೆ. ಕಾಸು ಅಂದ ಸುಬ್ಬ. ಅದು ನನಗೂ ಗೊತ್ತು. ಎಷ್ಟು ಕೊಟ್ಟೆ ಹೇಳಲಾ ಬಡ್ಡೆ ಐದನೆ. 2ಸಾವಿರ ಆತು. ಸೀಟಿಗೆ ಅಂಗೇ ಗಾಲಿಗೆ ಎಕ್ಸ್್ಟ್ರಾ ಅಂದ ಸುಬ್ಬ. ಅಲ್ಲ ಕಲಾ ಸೈಕಲ್ ತಗೊಂಡು ಮ್ಯಾಕೆ ಗಾಲಿ ಫ್ರೀ ಅಲ್ವೇನ್ಲಾ. ಗಾಳಿ ಮಾತ್ರ ಫ್ರೀ ಗಾಲಿಗೆ ಕಾಸು ಕೊಡಬೇಕು ಅಂದ ಸುಬ್ಬ. ಹೋಗಲಿ ಒಂದು ರವಂಡ್ ಹೋಗಿ ಬರ್ತೀನಿ ಕೊಡ್ಲಾ ಅಂದೋನೆ ಗೌಡಪ್ಪ ಸ್ಟಾಂಡು ತೆಗಿದೇ ಓಡಿ ಬಂದು ಹಾರು ಕುಂತ. ರಭಸಕ್ಕೆ ಸ್ಟಾಂಡು ಅಂಗೇ ಮುರಿದೇ ಹೋತು. ಸೀಟು ಮುಂದಕ್ಕೆ ಜಾರಿದ್ದಕ್ಕೆ ಹೋಗಿ ಮಗಾ ಬಾರ್ ಮೇಲೆ ಕುಂತಿದ್ದ. ಸ್ಪೀಡಾಗಿ ಹೋದ. ಅಡ್ಡ ಹಂದಿ ಬತ್ತಿದ್ದಾಗೆನೇ ಅಂಗೇ ಚೆರಂಡಿ ಮೂಲ್ಯಾಗೆ ಕಿಸ್ಕಂಡಿದ್ದ.

ಈ ಜೀವನ ಇಷ್ಟೇನಾ... ಅಷ್ಟೇನಾ...?

"ಸಖೀ,
ಈ ಜೀವನ
ಇಷ್ಟೇನೇ,
ಈ ಜೀವನ
ಅಷ್ಟೇನೇ,
ಅನ್ನದಿರು
ಸುಮ್ಮನೇ,
ನಿಜವಾಗಿ
ಹೇಳು,
ಈ ಜೀವನ
ನಿನಗಿಷ್ಟಾನಾ?"

"ಇಷ್ಟೇ ಆಗಲೀ,
ಅಷ್ಟೇ ಆಗಲೀ,
ನೀ ಜೊತೆಗಿರಲು,
ನಿಜವಾಗಿಯೂ
ಈ ಜೀವನವೂ
ನನಗಿಷ್ಟಾನೇ,
ನೀ ಹೇಳು
ಈ ಜೀವನ
ನಿನಗಿಷ್ಟಾನಾ?"

"ಈ ಜೀವನ
ನಿನಗಿಷ್ಟ
ಅನ್ನುವ
ನೀನು ನನಗಿಷ್ಟ,
ನನಗಿಷ್ಟಳಾದ
ನೀನು ನನ್ನ
ಜೊತೆಗಿರಲು,
ನಿಜವಾಗಿಯೂ
ಸಖೀ,
ಈ ಜೀವನವೂ
ನನಗಿಷ್ಟಾನೇ!"
****
ಆಸು ಹೆಗ್ಡೆ

ಬ್ಲಾಗ್ಗವನ

ಒಂಟಿಹಕ್ಕಿ ಹಾಡಿದು,
ಬರಿಯ ಕವಿತೆಯಲ್ಲ
ಆಶುಮನದ ಕವಿತೆಗಳ
ಅಂತರಂಗದ ಮಾತು
ಅನವರತವಿದು ಅನುಭವ ಮಂಟಪ
ನನ್ನದೇ ಲೋಕದಲ್ಲಿ
ನಮ್ಮ ಭಾಷೆಯ ಪ್ರಹರಿಗಾಗಿ
ನಡೆಯುತ್ತಿರುವ
ಸ್ಪಂದನ
ಪರಿವೇಷಣ
ಹಳೆಯ ಸೇತುವೆಗಳು
ನಡೆಯುವ ಹಾದಿಯಲ್ಲಿ
ಜೊತೆಯಾಗಲಿ ನವ ಪೀಳಿಗೆ
ಹೊಸ ದೃಷ್ಟಿ ಹೊಸ ಬೆಳಕಿನೊಂದಿಗೆ
ತೆರೆಯಲಿ ಕವಿಮನ ಬೀಸಲಿ ತಿಳಿಗಾಳಿ
ಹರಿಯಲಿ ವೇದ ಸುಧೆ
ತೆರೆದ ಮನದಿಂದ ನಾಡನ್ನು
ಬೆಳೆಸುವ ಕನಸನು ಕಟ್ಟೋಣ
ಮಾಯಾಜಾಲವಾಗಿದ್ದರೂ
ಜೀವನವನ್ನು ಅನ್ವೇಷಿಸುತ್ತಾ
ನಾಡಿಗಾಗಿ ಹುಟ್ಟುತ್ತಿರಲಿ
ನಮ್ಮಲ್ಲಿ ಅಂತಸ್ಫುರಣ
ನಮ್ಮ ದೇಶದ ಡೆಸ್ಕಿನಲ್ಲಿ ಹಬ್ಬುತ್ತಿರಲಿ
ಕನ್ನಡದ ಕೀರ್ತಿ

ಪ್ರೇಮ (ಪ್ರಶ್ನೆ) ಪತ್ರಿಕೆ

ಒಬ್ಬ ಕಾಲೇಜ್ ಹುಡುಗ ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದನೆಯನ್ನು ತಿಳಿಸಿದ ಬಗೆ..

 

ಪ್ರಿಯ ಪೂಜಾ..

ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸು...ಆಯ್ಕೆಗಳ ಮೇಲೆ ಅಂಕಗಳನ್ನು ನಿರ್ಧರಿಸುವುದು.

 

೧) ನಾನು ಕ್ಲಾಸಿಗೆ ಬಂದ ತಕ್ಷಣ ನಿನ್ನ ನೋಟ ನನ್ನ ಮೇಲೆ ಬೀಳುವುದು..ಯಾಕೆ?

ಅ) ಪ್ರೀತಿಯಿಂದ

ಆ) ನನ್ನನ್ನು ನೋಡದೆ ಇರಲು ಸಾಧ್ಯವಾಗದೆ.

ಇ) ನಿಜವಾಗಲು..ನಾನು ಹಾಗೆ ಮಾಡುತ್ತಿದ್ದೇನ?

 

೨) ಕ್ಲಾಸಿನಲ್ಲಿ ಉಪನ್ಯಾಸಕರು ಜೋಕ್ ಮಾಡಿದಾಗ, ನೀನು ನಕ್ಕು ತಕ್ಷಣ ನನ್ನ ಕಡೆ ನೋಡುವೆ ಏಕೆ?

ಅ) ನೀನು ಯಾವಾಗಲು ನನ್ನ ನಗುವನ್ನು ಬಯಸುವುದರಿಂದ

ಆ) ನನಗೆ ಹಾಸ್ಯ ಎಂದರೆ ಇಷ್ಟವೋ ಇಲ್ಲವೋ ಎಂದು ಪರೀಕ್ಷಿಸಲು

ಇ) ನನ್ನ ನಗುವಿನಿಂದ ನೀನು ಆಕರ್ಷಿತಳಾಗಿದ್ದೀಯ..

 

ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು ಸೃಜಿಸಲಾಗಿದೆ.

ಆಮಂತ್ರಣ

ಭಾವಾಂತರಂಗದ ಅಲೆಗಳ ನಡುವೆ


ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ


ಮನದ ಭಾವನಗಳನರಿತು ಜೊತೆಗೂಡಿ


ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ


ಗುರು ಹಿರಿಯರ ಆಶೀರ್ವಾದದೊಂದಿಗೆ


ಮಂಗಳಕಾರ್ಯ ನೆರವೇರಲಿದೆ


ಕಷ್ಟವೋ, ಸುಖವೋ ಎಲ್ಲವೂ ಜೊತೆ ಜೊತೆಯಲಿ


ಪರಸ್ಪರ ಅರಿತು ಬಾಳನೌಕೆಯನೇರಿ ಸಾಗಲಿದ್ದೇವೆ 


ಸಿಹಿ ಕಹಿಗಳ ಬುತ್ತಿಯ ಹೊತ್ತು


ನನಗೊಂದುತುತ್ತು, ಅವಳಿಗೊಂದು ತುತ್ತು 


ಜೀವನದಿ ಸಮಪಾಲು ಅಕ್ಕರೆಯ ಸಿರಿಬಾಳು 


ಬಾಳನೌಕೆಯಿದು ತೇಲಿಸಾಗಲಿ

ಜ್ಞಾನೋದಯ



ನಾ ನಿನ್ನ ಪ್ರೀತಿಸಿದೆ
ನೀನೂ ಪ್ರೀತಿಸಿದೆ
ಕೊನೆತನಕ ಹೆಜ್ಜೆ ಹಾಕುವೆ
ಎ೦ದು ಎದೆಯುಬ್ಬಿಸಿ
ನೀಡಿದೆ ವಾಗ್ದಾನ
ಅದು ಬರೀ ವಾಗ್ದಾನವಾಗೇ
ಉಳಿಯಿತು
ಆ ಹೆಜ್ಜೆಗಳು

ನನ್ನ ಮು೦ದೆ ಮೂಡಲೇ ಇಲ್ಲ
ಹಿ೦ದೆಯೇ ನಿಗೂಢವಾದವು
ಯಾವ ಸುಳಿವೂ ನೀಡದೇ..
......
ಎದೆಯಾಳದಿ೦ದ ಮೊರೆತು
ಮಿಡಿದವು ನನ್ನೆರಡು
ಕಣ್ಣೀರ ಹನಿಗಳು
....
ಆ ಹನಿಗಳ
ಪ್ರತಿಬಿ೦ಬದಲ್ಲಿ
ನನಗೆ
ಜ್ಞಾನೋದಯವಾಯಿತು..

*********