ಪ್ರೇಮ (ಪ್ರಶ್ನೆ) ಪತ್ರಿಕೆ
ಬರಹ
ಒಬ್ಬ ಕಾಲೇಜ್ ಹುಡುಗ ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದನೆಯನ್ನು ತಿಳಿಸಿದ ಬಗೆ..
ಪ್ರಿಯ ಪೂಜಾ..
ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸು...ಆಯ್ಕೆಗಳ ಮೇಲೆ ಅಂಕಗಳನ್ನು ನಿರ್ಧರಿಸುವುದು.
೧) ನಾನು ಕ್ಲಾಸಿಗೆ ಬಂದ ತಕ್ಷಣ ನಿನ್ನ ನೋಟ ನನ್ನ ಮೇಲೆ ಬೀಳುವುದು..ಯಾಕೆ?
ಅ) ಪ್ರೀತಿಯಿಂದ
ಆ) ನನ್ನನ್ನು ನೋಡದೆ ಇರಲು ಸಾಧ್ಯವಾಗದೆ.
ಇ) ನಿಜವಾಗಲು..ನಾನು ಹಾಗೆ ಮಾಡುತ್ತಿದ್ದೇನ?
೨) ಕ್ಲಾಸಿನಲ್ಲಿ ಉಪನ್ಯಾಸಕರು ಜೋಕ್ ಮಾಡಿದಾಗ, ನೀನು ನಕ್ಕು ತಕ್ಷಣ ನನ್ನ ಕಡೆ ನೋಡುವೆ ಏಕೆ?
ಅ) ನೀನು ಯಾವಾಗಲು ನನ್ನ ನಗುವನ್ನು ಬಯಸುವುದರಿಂದ
ಆ) ನನಗೆ ಹಾಸ್ಯ ಎಂದರೆ ಇಷ್ಟವೋ ಇಲ್ಲವೋ ಎಂದು ಪರೀಕ್ಷಿಸಲು
ಇ) ನನ್ನ ನಗುವಿನಿಂದ ನೀನು ಆಕರ್ಷಿತಳಾಗಿದ್ದೀಯ..
೩) ನೀನು ಕ್ಲಾಸಿನಲ್ಲಿ ಹಾಡುತ್ತಿದ್ದಾಗ ನಾನು ಬಂದ ತಕ್ಷಣ ನೀನು ಹಾಡು ನಿಲ್ಲಿಸುತ್ತೀಯ ಯಾಕೆ?
ಅ) ನನ್ನೆದುರು ಹಾಡಲು ನಾಚಿಕೆ ಉಂಟಾಗಿ
ಆ) ನನ್ನ ಆಗಮನ ನಿನಗೆ ಸಂತೋಷ ತಂದಿತು.
ಇ) ನಾನು ನಿನ್ನ ಹಾಡನ್ನು ಇಷ್ಟ ಪಡುವೆನೋ ಇಲ್ಲವೋ ಎಂದು ಭಯವಾಗಿ
೪) ನೀನು ನಿನ್ನ ಬಾಲ್ಯದ ಫೋಟೋ ತೋರಿಸುತ್ತಿದ್ದಾಗ, ನಾನು ಕೇಳಿದಾಗ ನೀನು ಮುಚ್ಚಿಟ್ಟುಕೊಂಡೆ ಏಕೆ?
ಅ) ನಿನಗೆ ನಾಚಿಕೆ ಉಂಟಾಯಿತು.
ಆ) ನಿನಗೆ ಮುಜುಗರ ಉಂಟಾಗಿ
ಇ) ನಿನಗೆ ಗೊತ್ತಿಲ್ಲ
೫) ಬೆಟ್ಟ ಹತ್ತುವಾಗ ನಾನು ನನ್ನ ಗೆಳೆಯರಿಬ್ಬರು ನಿನ್ನನ್ನು ಮೇಲೆತ್ತಲು ಕೈ ನೀಡಿದಾಗ ನೀನು ಬರಿ ನನ್ನ ಗೆಳೆಯನ ಕೈಯನ್ನು ಹಿಡಿದುಕೊಂಡದ್ದು ಏಕೆ?
ಅ) ನೀನು ನನ್ನ ನಿರಾಶೆಯಿಂದ ಖುಷಿ ಪಡುತ್ತಿದ್ದೆ..
ಆ) ಒಂದು ಸಲ ಕೈ ಹಿಡಿದರೆ ಮತ್ತೆ ಬಿಡಲು ನಿನಗೆ ಮನಸಿರಲಿಲ್ಲ..
ಇ) ನಿನಗೆ ಗೊತ್ತಿಲ್ಲ..
೬) ನೆನ್ನೆ ನೀನು ಬಸ್ಸಿಗೆ ಕಾಯುತ್ತಿದಾಗ ನಿನ್ನ ಬಸ್ ಬಂದರೂ ನೀನೇಕೆ ಹತ್ತಲಿಲ?
ಅ) ನನಗಾಗಿ ಕಾಯುತ್ತಿದ್ದೆ
ಆ) ನನ್ನ ಬಗ್ಗೆ ಕನಸು ಕಾಣುತ್ತ ಬಸ್ ಬಂದದ್ದನ್ನು ಗಮನಿಸಲಿಲ್ಲ
ಇ) ಬಸ್ ಭರ್ತಿಯಾಗಿತ್ತು.
೭) ನಿಮ್ಮ ತಂದೆ ತಾಯಿಗಳು ಕಾಲೇಜ್ ಗೆ ಭೇಟಿ ಕೊಟ್ಟಾಗ ನನ್ನನ್ನು ಪರಿಚಯಿಸಿದೆ ಏಕೆ?
ಅ) ನಾನು ನಿನ್ನ ಭಾವಿ ಪತಿ ಎಂದುಕೊಂಡು
ಆ) ನಿನ್ನ ತಂದೆ ತಾಯಿಗಳ ಪ್ರತಿಕ್ರಿಯೆ ತಿಳಿಯಲು
ಇ) ಹಾಗೆ ಸುಮ್ಮನೆ ಪರಿಚಯಿಸಿದೆ
೮) ಗುಲಾಬಿ ಮೂಡಿದ ಹುಡುಗಿಯರೆಂದರೆ ನನಗೆ ಇಷ್ಟವೆಂದ ಮರುದಿನ ನೀನು ಗುಲಾಬಿ ಮುಡಿದು ಬಂದದ್ದು ಏಕೆ?
ಅ) ನನ್ನ ಆಸೆಯನ್ನು ಪೂರೈಸಲು
ಆ) ನಿನಗೂ ಗುಲಾಬಿ ಎಂದರೆ ಇಷ್ಟ
ಇ) ಅನಿರೀಕ್ಷಿತವಾಗಿ ಗುಲಾಬಿ ಸಿಕ್ಕಿತು..ಮುಡಿದೆ
೯) ನನ್ನ ಹುಟ್ಟುಹಬ್ಬದ ದಿನ ನೀನು ಕೂಡ ಬೆಳಿಗ್ಗೆ ೬ ಗಂಟೆಗೆ ದೇವಸ್ಥಾನಕ್ಕೆ ಬಂದೆ..ಏಕೆ?
ಅ) ನನ್ನೊಡನೆ ಪ್ರಾರ್ಥಿಸಲು
ಆ) ಬೇರೆ ಯಾರಾದರೂ ನನ್ನನ್ನು ಭೇಟಿ ಮಾಡುವ ಮೊದಲು ನೀನು ಭೇಟಿ ಮಾಡುವ ಉದ್ದೇಶದಿಂದ..
ಇ) ದೇವಸ್ಥಾನದಲ್ಲೇ ನನಗೆ ಶುಭ ಕೋರಲು
ನೀನು ೪೦ ಅಂಕಗಳಿಗಿಂತ ಜಾಸ್ತಿ ಗಳಿಸಿದ್ದರೆ ನೀನು ನನ್ನನ್ನು ಪ್ರೀತಿಸುತ್ತಿದ್ದೀಯ ಎಂದು...ಬೇಗ ಹೇಳಿಬಿಡು
ನೀನು ೩೦-೪೦ ಅಂಕಗಳನ್ನು ಗಳಿಸಿದ್ದರೆ ಈಗ ತಾನೇ ನಿನ್ನ ಹೃದಯದಲ್ಲಿ ನನ್ನ ಬಗ್ಗೆ ಪ್ರೇಮ ಮೊಳಕೆ ಒಡೆಯುತ್ತಿದೆಯೆಂದು
ನೀನು ಮೂವತ್ತಕ್ಕಿಂತ ಕಮ್ಮಿ ಅಂಕ ಗಳಿಸಿದ್ದರೆ ನನ್ನನು ಪ್ರೀತಿಸಲೋ ಬೇಡವೋ ಎಂಬ ಗೊಂದಲದಲ್ಲಿದ್ದೀಯ...
ಕಾತುರನಾಗಿ ಕಾಯುತ್ತಿರುವ ನಿನ್ನ ಪ್ರೀತಿಯ
ಆಕಾಶ್...
***************************************************
ಪೂಜಾಳ ಪ್ರತಿಕ್ರಿಯೆ ಕೂಡ ಪ್ರಶ್ನೆ ಪತ್ರಿಕೆ ರೀತಿಯಲ್ಲಿತ್ತು...
ಆಕಾಶ್,
ಈ ಕೆಳಗಿನ ಪ್ರಶ್ನೆಗಳಿಗೆ ಹೌದು / ಇಲ್ಲ ಉತ್ತರಿಸಿ..
೧) ಕ್ಲಾಸಿನಲ್ಲಿ ಮೊದಲನೇ ಸಾಲಿನಲ್ಲಿ ಕುಳಿತವರನ್ನು ಬಂದವರು ನೋಡುತ್ತಾರೆ...
ಹೌದು / ಇಲ್ಲ.
೨) ಒಂದು ಹುಡುಗಿ ನಕ್ಕು ಬೇರೆಯವರ ಕಡೆ ನೋಡಿದರೆ, ಅದು ಪ್ರೀತಿನಾ?
ಹೌದು / ಇಲ್ಲ.
೩) ಹಾಡುತ್ತಿದ್ದಾಗ ಹಾಡಿನ ಸಾಲು ಮರೆತರೆ ನಿಲ್ಲಿಸುವರೋ ಇಲ್ಲವೋ?
ಹೌದು / ಇಲ್ಲ.
೪) ನಾನು ನನ್ನ ಫೋಟೋ ತೋರಿಸುತ್ತಿದ್ದದ್ದು ನನ್ನ ಗೆಳತಿಯರಿಗೆ(ಹುಡುಗಿಯರಿಗೆ) ಮಾತ್ರ..ಮಧ್ಯದಲ್ಲಿ ತಲೆ ಹಾಕಿದ್ದು ನೀನು ತಾನೇ?
ಹೌದು / ಇಲ್ಲ.
೫) ಬೆಟ್ಟ ಹತ್ತುವಾಗ ನಿನ್ನ ಕೈಯನ್ನು ತಿರಸ್ಕರಿಸಿದೆ...ನಿನಗೆ ಅರ್ಥ ಆಗುವುದಿಲ್ಲವ?
ಹೌದು / ಇಲ್ಲ.
೬) ನಾನು ನನ್ನ ಗೆಳತಿ (ಅಂಜಲಿ) ಗೆ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೆ..ಕಾಯಬಾರದ?
ಹೌದು / ಇಲ್ಲ..
೭) ನನ್ನ ತಂದೆ ತಾಯಿಗಳಿಗೆ ಇವನು ನನ್ನ ಸ್ನೇಹಿತ ಎಂದು ಪರಿಚಯಿಸಬಾರದೆ?
ಹೌದು / ಇಲ್ಲ.
೮) ನೀನು ಕಮಲ, ಬಾಳೆಹೂ, ಹೂಕೋಸು ಕೂಡ ಇಷ್ಟ ಅಂತ ಹೇಳಿದ್ದೀಯ...
ಹೌದು / ಇಲ್ಲ.
೯) ಓ ಅವತ್ತು ನಿನ್ನ ಹುಟ್ಟಿದ ಹಬ್ಬನಾ? ಅದಕ್ಕೆ ನೀನು ದೇವಸ್ಥಾನಕ್ಕೆ ಬಂದಿದ್ದೆ...ನಾನು ಪ್ರತಿನಿತ್ಯವೂ ಹೋಗುತ್ತೇನೆ..ನಿನಗದು ಗೊತ್ತ...
ಹೌದು / ಇಲ್ಲ..
ನೀನು ಯಾವುದೇ ಪ್ರಶ್ನೆಗಳಿಗೆ "ಹೌದು" ಎಂದು ಉತ್ತರಿಸಿದ್ದಾರೆ..ನಾನು ನಿನ್ನನ್ನು ಪ್ರೀತಿಸುವುದಿಲ್ಲ..
ನೀನು ಇಲ್ಲ ಎಂದು ಉತ್ತರಿಸಿದ್ದಾರೆ..ನಿನಗೆ ಪ್ರೀತಿಯ ಅರ್ಥ ಗೊತ್ತಿಲ್ಲ...
ನಿನಗೆ ಅರ್ಥವಾಯಿತೆಂದು ಭಾವಿಸುತ್ತೇನೆ...
ಪೂಜಾ...
ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ..