ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕುಲಕಸುಬಿಗೆ ಸೃಷ್ಟಿಶೀಲತೆಯ ಮೆರುಗು ನೀಡುವ ಮಂಜುನಾಥ್ ಆಚಾರ್

ಆವಿನಹಳ್ಳಿಯ ಮಂಜುನಾಥ್ ಆಚಾರ್ ಅವರದು ''ಕಾಯಕವೇ ಕೈಲಾಸ'' ಎಂದು ನಂಬಿರುವ ಶ್ರಮದ
ಬದುಕು. ತಮ್ಮ ಕುಲಕಸುಬಿನ ಕಮ್ಮಾರ ವೃತಿಯೊಡನೆ ಸೃಷ್ಟಿಶೀಲತೆಯ ಮೈದುಬಿ ಬಂದಂತೆ
ಕೈಗಾರಿಕಾ ಶೆಡ್‌ನಲಿ ತಮ್ಮ ಕನಸಿನ ಪುಟ್ಟ ಫಾಬ್ರಿಕೇಷನ್ ಯಂತ್ರಗಾರವನ್ನು
ಸ್ಥಾಪಿಸಿಕೊಂಡಿದ್ದಾರೆ. ಕೆಲಸ ಸಣ್ಣದಿರಲಿ,ದೊಡ್ಡದಿರಲಿ ಮಂಜುನಾಥ್ ಆಚಾರ್ ಹಾಜರಿರಲೇ
ಬೇಕು. ಸಣ್ಣ ಪೆಟ್ಟಿಗೆಯ ಕೆಲಸದಿಂದ ಹಿಡಿದು ಹೊಸ ಮನೆಯ ಗೇಟ್, ಗ್ರಿಲ್, ಕಿಟಕಿ,
ಬಾಗಿಲು ಕೆಲಸಗಳನ್ನು ಸೇರಿಸಿ ಪುಟ್ಟ ಯಂತ್ರದ ಮರು ತಯಾರಿಕೆಗೂ ಆಚಾರ್
ಸೃಷ್ಟಿಶೀಲತೆಗೆ ಹಿಡಿದ ಕನ್ನಡಿ. ಆಚಾರ್‌ರ ಪ್ರಸಿದ್ಧ ಆವಿನಹಳ್ಳಿ ನೇಗಿಲು ಅವರ

ವಿಜಯ ದೊರಕಲಿ ನಮಗೆ


ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ
ತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ

(ಸುಭಾಷಿತರತ್ನಭಾಂಡಾಗಾರ)

ಗೆಲಬೇಕು ಲಂಕೆಯನು, ಪದಕ್ರಮಿಸಬೇಕು ಕಡಲನು
ವೈರಿಯವ ರಾವಣನು, ಯುದ್ಧದಿ ನೆರವು ಕಪಿಗಳದು
ಆದರೂ ರಾಮನೊಬ್ಬನೆ ರಾಕ್ಷಸಕುಲವನಳಿಸಿದನು
ಶ್ರೇಷ್ಠರಿಗೆ ಸಿದ್ಧಿ ಸತ್ತ್ವದಲಿಹುದು, ಸಾಮಗ್ರಿಯಲಿರದು

***

ವಿಜಯ ದೊರಕಲಿ ನಮಗೆ ದಶ ದಿಕ್ಕುಗಳಮೇಲೆ;
ಯಶದ ಸೌಧ ಏಳಲಿ ಯತ್ನದ ತಳಹದಿಮೇಲೆ

ವಿಜಯ ದೊರಕಲಿ ನಮಗೆ ನವ ದ್ವಾರಗಳಮೇಲೆ;
ಅವು ನಮ್ಮ ಅಂಕೆಯಲ್ಲಿರಲಿ, ಮನ ಗುರುಶಾಲೆ

ಇಂದುಶ್ರೀ ಅವರಿಗೆ ಜನ್ಮದಿನದ ಶುಭಾಶಯಗಳು

ಈ ದಿನ ಸಂಪದದ ಸದಸ್ಯೆ ಇಂದುಶ್ರೀ ಅವರ ಜನ್ಮದಿನ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಹಾಗೂ ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಯಶಸ್ಸು ಸಾಧಿನಲಿ ಎಂದು ಹಾರೈಸುತ್ತೇನೆ.

ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

ನಮ್ಮ ಮನೆಯ ಬೊಂಬೆ ಹಬ್ಬ - ೨೦೧೦ :)

ಈ ವರ್ಷದ ನವರಾತ್ರಿಯ ಕಡೆಯ ದಿನದಂದು, ನಮ್ಮ ಮನೆಯ ಬೊಂಬೆ ಹಬ್ಬದ ಕೆಲವು ನೋಟಗಳು:

ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತದ ರಚನೆ ನನ್ನದೇ. ರಂಜನಿ ರಾಗ,ಆದಿತಾಳದಲ್ಲಿರುವ ಸ್ವರಜತಿ.

-ಹಂಸಾನಂದಿ

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!

ಏನಾಗಬೇಕೋ ಅದು ಖ೦ಡಿತ ಆಗಿಯೇ  ಆಗುತ್ತದೆ
ಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!

ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವ
ಏನೆಲ್ಲ ಮಾಡುವ ನಾ ಹಾಗೆ ಹೀಗೆ ಧಾ೦ ಧೋ೦ ಎ೦ದು!

ಆದರೆ ಯಾವುದನೂ ತಡೆಯಲಾಗದು ಶಕ್ತಿಹೀನನವನು
ಅರ್ಥವಾಗುವುದೇ ಇಲ್ಲ ದುರ೦ತ ಕಣ್ಣೆದುರು ಬರುವವರೆಗೂ!

ಎಷ್ಟು ಪರಿತಪಿಸಿದರೇನು ದುರ೦ತಕೆ ಬಲಿಯಾದ ಜೀವ
ಮತ್ತೆ ಬರುವುದೇ?  ಅರ್ಥವಿರುವುದೇ ಈ ಹಪಹಪಿತನಕೆ?

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!

ಮತ್ತೆ ಬರುವನೇ ದ್ರಾವಿಡ್ ತಂಡಕ್ಕೆ???

ಸಧ್ಯಕ್ಕೆ ಕರ್ನಾಟಕದಿಂದ ಭಾರತ ತಂಡದಲ್ಲಿ ಉಳಿದಿರುವ(ಖಾಯಂ ಆಗಿ) ಹಿರಿಯ ಆಟಗಾರನೆಂದರೇ,ದ್ರಾವಿಡ್.  ಇನ್ನೇನು ಭಾರತ ತನ್ನ ನೆಲದಲ್ಲೇ
ನಡೆಯಲಿರುವ ವಿಶ್ವಕಪ್ ಗೆ ಸಿದ್ದ್ದವಾಗಬೇಕಿದೆ. ನಮ್ಮ ಹಿರಿಯ ಆಟಗಾರರಿಗೆ ಇದು ಬಹುಶಃ ಕೊನೆಯ ವಿಶ್ವಕಪ್. ಹೀಗಿನ ದ್ರಾವಿಡ್ ಫ಼ಾರ್ಮ್
ಅಷ್ಟಾಗಿ ಸರಿಯಿಲ್ಲ. ಬಿಸಿಸಿಐ ತನ್ನ ಕಿರಿಯ ಅಟಗಾರರ ಮೇಲೆ ನಂಬಿಕೆ ಇಟ್ಟು ಕೂರುವಂತಿಲ್ಲ!! ಇದಕ್ಕೆ ICC ಯ ಪಂದ್ಯಗಳಲ್ಲಿ ಅವರ ಪ್ರದರ್ಶನದ
ಮಟ್ಟ ತೀರ ಕಳಪೆಯದುದೆಂಬುದನ್ನು ಅವರು ಬಲ್ಲರು.
    ಇತೀಚಿನ ಪಂದ್ಯಗಳಲ್ಲಿ, ಅದರಲ್ಲೂ ಟೆಸ್ಟ್ ಪಂದ್ಯಗಳಲ್ಲಿ ಹಿರಿಯರ ಮೇಲೆ ತಂಡ ಅತಿ ಹೆಚ್ಚು ಅವಲಂಬಿತರಾಗಿರುವುದು ನಮಗೆಲ್ಲ

ಕರುಣಾಳು ಬಾ ಬೆಳಕೇ......


ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್  ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ.

 

ನಾ ಮೌನವಾಗುವ ಮೊದಲು...

ನನಗೆ ಹಾಡು ಬರೋದಿಲ್ಲ. ನಿನಗೆ 

ಮಾತು ಬರೋದಿಲ್ಲ. ನನ್ನ ಪ್ರಯತ್ನ ನಡೆದಿದೆ.

ನಿನ್ನ ಪ್ರಯತ್ನವಂತೂ ಇಲ್ಲವೇ ಇಲ್ಲ..

 

ಮೌನವಾದರೆ ಹೇಗೆ ಒಲವೆ. ನಾನಿಲ್ಲವೆ

ನಿನ್ನ ಬಳಿಯೆ. ಮಾತನಾಡು ಒಮ್ಮೆಯಾದರು.

ಕೇಳಿ ಜೀವ ಸಾಗಿಸುವೆ. ನಿನಗಾಗಿಯೇ...

 

ನಾ ಕಲಿತ ಮಾತು ನಿನ್ನವೆ ಅಲ್ಲವೆ. ನನ್ನಿಂದಾದ

ಮುನಿಸು ಇನ್ನು ಹೋಗಿಲ್ಲವೆ. ವರುಷ ಉರುಳಿ

ಮಕ್ಕಳು ದೊಡ್ಡವಾದವು. ಇನ್ನು ಹೋಗಿಲ್ಲವೇ

ಸಿಟ್ಟು ನನ್ನ ಮೌನಗೌರಿಯೇ...

 

ಮಾತನಾಡು ನಾ ಮೌನವಾಗುವ ಮೊದಲು...

ದಿನದ ನನ್ನ ಅನುಭವ

 


ಇವತ್ತು ಮಧ್ಯಾನ್ಹ .......


ನಮ್ಮ ಪ್ರೊಫೆಸರ್ ಒಬ್ಬರು ಊಟಕ್ಕೆ ಕ್ಯಾಂಪಸ್ ನ ಕನ್ನಡ ಬಂಧುಗಳನ್ನೆಲ್ಲ ಕರೆದಿದ್ದರು. ಸವಿಯಾದ ಭೋಜನ ಸವಿದು ಅಮ್ಮನ ನೆನಪಾಗಿ ಎಲ್ಲರೂ ಭಾವುಕರಾಗಿದ್ದೆವು. ಸುಮಾರು ೪:೩೦ ಗೆ ಅವರ ಮನೆಯಿಂದ ಚಾರ್ಮಿನಾರ್ ನೋಡಲು ನಾವು ಕೆಲ ಗೆಳಯರು,ನಮ್ಮಿಬ್ಬರು ಪ್ರೊಫೆಸರಗಳು ಹೊರೆಟೆವು. ಅತಿಯಾದ ಜನ ಸಂದಣಿಯಿಂದಾಗಿ, ವಾಹನ ಸಂಚಾರದಿಂದಾಗಿ ಮಿನಾರು ಕಳೆಗುಂದಿದಂತೆ ನನಗೆ ಭಾಸವಾಯಿತು.ಸುತ್ತಲೂ ಜನ,ಜನ,ಜನ. ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರು, ಪ್ರವಾಸಕ್ಕೆಂದು ಬಂದ ವಿದೇಶಿಯರು, ಸುತ್ತಲಿನ ರಸ್ತೆಯಂಗಡಿಯ ವ್ಯಾಪರಿಗಳೊಂದಿಗೆ ಚೌಕಾಶಿಗಿಳಿದ 

ಮೌನವೆಂಬ ಮಹಾನಿಧಿ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!