ಕುಲಕಸುಬಿಗೆ ಸೃಷ್ಟಿಶೀಲತೆಯ ಮೆರುಗು ನೀಡುವ ಮಂಜುನಾಥ್ ಆಚಾರ್

ಕುಲಕಸುಬಿಗೆ ಸೃಷ್ಟಿಶೀಲತೆಯ ಮೆರುಗು ನೀಡುವ ಮಂಜುನಾಥ್ ಆಚಾರ್

ಬರಹ

ಆವಿನಹಳ್ಳಿಯ ಮಂಜುನಾಥ್ ಆಚಾರ್ ಅವರದು ''ಕಾಯಕವೇ ಕೈಲಾಸ'' ಎಂದು ನಂಬಿರುವ ಶ್ರಮದ
ಬದುಕು. ತಮ್ಮ ಕುಲಕಸುಬಿನ ಕಮ್ಮಾರ ವೃತಿಯೊಡನೆ ಸೃಷ್ಟಿಶೀಲತೆಯ ಮೈದುಬಿ ಬಂದಂತೆ
ಕೈಗಾರಿಕಾ ಶೆಡ್‌ನಲಿ ತಮ್ಮ ಕನಸಿನ ಪುಟ್ಟ ಫಾಬ್ರಿಕೇಷನ್ ಯಂತ್ರಗಾರವನ್ನು
ಸ್ಥಾಪಿಸಿಕೊಂಡಿದ್ದಾರೆ. ಕೆಲಸ ಸಣ್ಣದಿರಲಿ,ದೊಡ್ಡದಿರಲಿ ಮಂಜುನಾಥ್ ಆಚಾರ್ ಹಾಜರಿರಲೇ
ಬೇಕು. ಸಣ್ಣ ಪೆಟ್ಟಿಗೆಯ ಕೆಲಸದಿಂದ ಹಿಡಿದು ಹೊಸ ಮನೆಯ ಗೇಟ್, ಗ್ರಿಲ್, ಕಿಟಕಿ,
ಬಾಗಿಲು ಕೆಲಸಗಳನ್ನು ಸೇರಿಸಿ ಪುಟ್ಟ ಯಂತ್ರದ ಮರು ತಯಾರಿಕೆಗೂ ಆಚಾರ್
ಸೃಷ್ಟಿಶೀಲತೆಗೆ ಹಿಡಿದ ಕನ್ನಡಿ. ಆಚಾರ್‌ರ ಪ್ರಸಿದ್ಧ ಆವಿನಹಳ್ಳಿ ನೇಗಿಲು ಅವರ
ಸೃಷ್ಟಿಶೀಲತೆಗೆ ಹಿಡಿದ ಕನ್ನಡಿ. ಇಂದಿದು ಸುಮಾರು ಸುತ್ತಲಿನ ಐದು ಜಿಲ್ಲೆಗಳಲ್ಲಿ
ಜನಪ್ರಿಯಗೊಂಡು ತನ್ನದೇ ಆದ ಮಾರುಕಟ್ಟೆ ನಿರ್ಮಿಸಿಕೊಂಡಿದೆ. ಇವರು ನಿರ್ಮಿಸಿದ
ಬಹೂಪಯೋಗಿ ಕೈಗಾಡಿ ಎರಡಾಳಿನ ಕೆಲಸವನ್ನು ಮಾಡಬಲ್ಲದು! ಆಚಾರ್ ಆಸಕ್ತಿಯಿಂದ
ಅಭಿವೃದಿಪಡಿಸಿದ ಮತ್ತು ವಿನ್ಯಾಸಗೊಳಿಸಿದ ಹಪ್ಪಳ ಒತ್ತುವ ಯಂತ್ರವು ಹತ್ತಿರದ
ಗೃಹಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಸಾಧಾರಣ ಮೈಕಟ್ಟಿನ, ನಿಧಾನ ಮಾತಿನ
ಆಚಾರ್ ರವರನ್ನು ನೋಡಿದರೆ ಅವರ ಕರ್ತವ್ಯ ಶಕ್ತಿಯನ್ನು ಮೆಚ್ಚಲೇ ಬೇಕಾಗುತ್ತದೆ. ಇದೀಗ
ಅಡಿಕೆ ಸುಲಿಯುವ ಯಂತ್ರದ ಸುಧಾರಣೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ
ಅವರು ತಮ್ಮ ವೃತ್ತಿಜೀವನಕ್ಕೆ ಹೊಸ ಮೆರಗನ್ನು ಕೊಡುವ ಪ್ರಯತ್ನದಲಿದ್ದ್ಲಾರೆ. ಇವರ
ವೃತ್ತಿಪರತೆ ಯನ್ನು ಗಮನಿಸಿದ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಎಂಬ ಸ್ಥಳೀಯ
ಸ್ವಯಂ ಸೇವಾ ಸಂಸ್ಥೆ ಇವರಿಗೆ ಸ್ಥಳದಾನ ನೀಡಿದರೆ, ಕಟ್ಟಡವನ್ನು ಜಿಲ್ಲಾಪರಿಷತ್
ಸಹಾಯದಿಂದ ನಿರ್ಮಿಸಿಕೊಂಡಿದ್ದಾರೆ.
 ಮಲೆನಾಡಿನಲ್ಲಿ ಕತ್ತಿಗಳಿಗೆ ಬೇಡಿಕೆ ಚೆನ್ನಾಗಿದೆ ಎನ್ನುವ ಅವರು ತಮ್ಮ ಸ್ವದೇಶಿ
ತಂತ್ರಜ್ಞಾನವನ್ನು ಆಸಕ್ತರಿಗೆ ಧಾರೆಯೆರೆಯಲು ಸಿದ್ದರಾಗಿದ್ದಾರೆ. ಸುಮಾರು ಹತ್ತು
ಜನರಿಗೆ ಕೆಲಸಕೊಟ್ಟಿರುವ ಆಚಾರ್ ಇತರರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಸ್ವಂತ
ಉದ್ಯೋಗ ಕೈಗೊಳ್ಳ ಬಯಸುವ ಸಾವಿರಾರು ಯುವಜನರಿಗೆ ಪ್ರೇರಣೆಯು ಆಗಿದ್ದಾರೆ.