ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದ ಈ ಲೋಕ

ಇಂಟರ್ ನೆಟ ನಲ್ಲಿ ಕನ್ನಡವನ್ನು ಬಳಸುವುದರ ಬಗ್ಗೆ ನಾನು ಬರೆದ ಪುಸ್ತಕ ಕನ್ನಡದ ಈ ಲೋಕ. ಈಪುಸ್ತಕದಲ್ಲಿ ನೂರು ಪುಟಗಳಿವೆ. ೨೨-೯-೧೦ರಂದು ಪ್ರಜಾವಾಣಿ ಈ ಪುಸ್ತಕದ ಬಗ್ಗೆ ಲೇಖನ ಪ್ರಕಟಿಸಿದಾಗ ನನಗೆ ೨೫೦ಕ್ಕೂ ಹೆಚ್ಚು ಕರೆಗಳು ಬಂದವು. ಹಳ್ಳಿಗಳ ಜನ ಆಸಕ್ತಿ ತಾಳಿದರು. ಕನ್ನಡದಲ್ಲಿ ಇ ಮೈಲ್ ಮಾಡಲು ಸಾದ್ಯವೇ ಎಂದು ಕೇಳಿದರು. ನಮ್ಮ ಸಾಮಾನ್ಯ ಜನರಿಗೆ ಇಂಟ್ರ್ನೆಟ್ ತಂತ್ರಜ್ನಾನವನ್ನು ತಲಪಿಸಬೇಕಾಗಿದೆ.

KFCC ನಿಯಮಗಳನ್ನು ಗಾಳಿಗೆ ತೂರಿ ಬಿಡುಗಡೆಯಾದ ಎಂಧಿರನ್

ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (link) ಬರೆದಿದ್ದೆ.  

ಈ ರಾಜ್ಯದ ಸಂಸತ್ ಸದಸ್ಯರಲ್ಲಿ ನಂದೊಂದು ಬಿನ್ನಹ!

ರಾಜ್ಯದ ಸಂಸತ್  ಸದಸ್ಯರಲ್ಲಿ ನನ್ನದೊಂದು ಬಿನ್ನಹ, ನಮ್ಮೆಲ್ಲರ ಶಾಂತಿಗಾಗಿ,
ನಮ್ಮನ್ನು ಇಲ್ಲಿ ನಮ್ಮಷ್ಟಕ್ಕೆ ಬಿಟ್ಟು, ದೆಹಲಿಯಲ್ಲೇ ಕೆಲಸಮಾಡಿ ಈ ರಾಜ್ಯಕ್ಕಾಗಿ;

ರಾಜ್ಯದಲ್ಲಿ ನಾವು ಆರಿಸಿ ಕೂರಿಸಿರುವ ಸರಕಾರ ಇರುವುದು ನಮ್ಮೆಲ್ಲರಿಗಾಗಿ,
ಆ ಸರಕಾರ ತನ್ನ ಅವಧಿ ಪೂರ್ತಿ ಕೆಲಸಮಾಡಲು ಬಿಡಿ, ರಾಜ್ಯದ ಏಳಿಗೆಗಾಗಿ;

ದಿನ ಬೆಳಗಾದರೆ, ಹೊಸ ಹೊಸ ಕೀಟಲೆ ಕೊಡುವುದನ್ನು ಇನ್ನಾದರೂ ನಿಲ್ಲಿಸಿ,
ಈ ನಾಡಿನ ಜನತೆಯ ಶಾಂತಿಗಾಗಿ, ನೀವೂ ದಯವಿಟ್ಟು ಕೊಂಚ ಸಹಕರಿಸಿ;

ರೋಸಿ ಹೋಗಿದ್ದಾರೆ ಜನತೆ, ನಿಮ್ಮ ಈ ಪುರುಸೊತ್ತಿನ ದೊಂಬರಾಟಗಳಿಂದ,
ನಿಮಗಾದರೆ ಅದುವೇ ಕಾಯಕ, ನಮಗೆ ದಿನವೂ ಬರೀ ಕಿರಿಕಿರಿ ಅವುಗಳಿಂದ;

ಮಂಡೆ ಬಿಸಿ ಮಾರಾಯ್ರೆ !!!

ಮಂಡೆ ಬಿಸಿ ಮಾರಾಯ್ರೆ !!!

ಒಬ್ಬ ಅಸಾಮಿ ಹೆಂಡಂತಿಯೊಂದಿಗೆ  ಜಗಳ ಆಡಿ ಬಾರ್ ನ  ಒಂದು ಮೂಲೆಯಲ್ಲಿ ಕೂತು ಎಣ್ಣೆ ಹೊಡೆಯುತಿದ್ದ,ಮಂಗಳೂರು ದಸರಾ ನೋಡಲು ಬಂದ ಒಬ್ಬ ಅಮೆರಿಕನ್ ಪ್ರಜೆ ಬೇರೆ ಎಲ್ಲೂಜಾಗ ಸಿಗದೇ ಅವನ ಎದುರು ಕೂತು ಕೊಳ್ಳುತ್ತಾನೆ. ಎದುರಿಗಿದ್ದ ಮನುಷ್ಯನನ್ನು ತುಂಬ ಟೆಂಶನ್ ನಲ್ಲಿ ನೋಡಿ ಅಮೆರಿಕ ಪ್ರಜೆ "ಏನಾಯ್ತು ಮಾರಾಯ್ರೆ ...?"
ನಮ್ಮವ "ಮಂಡೆ ಬಿಸಿ ಮಾರಾಯ್ರೆ "
ಅಮೆರಿಕನ್ "ಸರಿಯಾಗಿ ಹೇಳಿ "
ನಮ್ಮವ "ಏನು ಹೇಳುದು ಮಾರಾಯ್ರೆ? ಹೆಂಡತಿ ಮಕ್ಕಳದೇ ಮಂಡೆ ಬಿಸಿ "
ಅಮೆರಿಕನ್ "ಭಾರತಿಯನಾಗಿ ನೀವು ಹೀಗೆ ಹೇಳುವುದು ಸರಿಯೇ, ನನ್ನ ಮಂಡೆ ಬಿಸಿ ಕೇಳಿದರೆ ನೀವು ಏನು ಮಾಡುತ್ತಿರೋ ...? "
ನಮ್ಮವ " ಹೇಳಿ ಮಾರಾಯ್ರೆ ,.. ನಿಮ್ಮ ಕಥೆ "

ದುರ್ಗಾಷ್ಟಮಿ, ಆಯುಧಪೂಜೆ ಹಾಗೂ ವಿಜಯದಶಮಿಯ


 ಎಲ್ಲ ಸಂಪದಿಗರಿಗೂ ದುರ್ಗಾಷ್ಟಮಿ, ಆಯುಧಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.



ಆ ದುರ್ಗಾಮಾತೆ ಎಲ್ಲರಿಗು ಆಯುರಾರೋಗ್ಯ, ಐಶ್ವರ್ಯ, ಸಕಲ ಸಂಪತ್ತನ್ನು ನೀಡಿ ಒಳ್ಳೆಯದನ್ನು ಮಾಡಲೆಂದು ಮನ:ಪೂರ್ವಕವಾಗಿ ಬೇಡಿಕೊಳ್ಳುತ್ತೇನೆ..


(ರಜೆಯ ಪ್ರಯುಕ್ತ ಬರಹಗಳಿಗೆ ಪ್ರತಿಕ್ರಿಯೆ ನೀಡಲಾಗುವುದಿಲ್ಲ..ಕ್ಷಮಿಸಿ) :)
..

ವಿಡಿಯೋಕಾನ್ ಇಲೆಕ್ಟ್ರಾನಿಕ್ಸಿನಿಂದ ಸುಳ್ಳು ಕೆಲಸದ ಆಮಿಷ!

ಸ್ನೇಹಿತರೇ,
ನನ್ನ ವಿಳಾಸಕ್ಕೆ ಮಿಂಚಂಚೆ ಮೂಲಕ ವಿಡಿಯೋಕಾನ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆಯಿಂದ ಉದ್ಯೋಗದ ಆಮಿಷದೊಂದಿಗೆ ಒಂದು ಪತ್ರ ಬಂದಿದೆ.
ಈ ಕೆಲಸ ಬೇಕಾದರೆ ಸಂದರ್ಶನಕ್ಕೆ ಮೊದಲು ಹಣಕಟ್ಟಬೇಕಾಗಿದೆ.
ಇಂಥ ಸಂದೇಶಗಳು ನಿಮಗೂ ಬರಬಹುದು.
ಜಾಗರೂಕರಾಗಿರಿ.
ದಯವಿಟ್ಟು ಮೋಸ ಹೋಗಬೇಡಿ.
ಆಂಗ್ಲ ಭಾಷೆಯಲ್ಲಿರುವ ಆ ಪತ್ರದ ಪೂರ್ತಿಪಾಠಕ್ಕಾಗಿ ನನ್ನ ವೈಯಕ್ತಿಕ ಬ್ಲಾಗ್ ಆಸುಮನಕ್ಕೆ ಭೇಟಿಕೊಡಿ. (ಅದರ ಕೊಂಡಿ ಇಲ್ಲೇ ಮೆಲ್ಗಡೆ ನನ್ನ ಪರಿಚಯ ಪುಟದಲ್ಲಿದೆ)
********
ಆತ್ರಾಡಿ ಸುರ‍ೇಶ ಹೆಗ್ಡೆ

 


’ಟ್ವೆಂಟಿ ಟೆನ್’ ಕ್ರೀಡಾಕೂಟ : ಭಾರತದ ಶಕ್ತಿಯ ಅನಾವರಣ

೧೯ನೇ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತವು ವಿಶ್ವಕ್ಕೆ ತನ್ನ ಸಂಘಟನಾ ಶಕ್ತಿಯನ್ನು ತೋರಿಸಿದೆ. ಪದಕ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನಕ್ಕೇರುವ ಮೂಲಕ ನಮ್ಮ ಕ್ರೀಡಾ ಶಕ್ತಿಯನ್ನು ವಿಶ್ವಕ್ಕೆ ಜಾಹಿರುಗೊಳಿಸಿದ್ದೇವೆ. ಇಂಗ್ಲೆಂಡನ್ನು ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ, "ನೀವು ನಮ್ಮನ್ನಾಳಿದವರಿರಬಹುದು, ಆದರೆ ಇನ್ನೆಂದೂ ಯಾವ ರೀತಿಯಲ್ಲೂ ಆಳುವವರಲ್ಲ", ಎಂಬ ಸಂದೇಶವನ್ನು ಬ್ರಿಟಿಷರಿಗೆ ರವಾನಿಸಿದ್ದೇವೆ. "ಮುಂದಿನ ದಿನಗಳಲ್ಲಿ ಇಡೀ ವಿಶ್ವವನ್ನಾಳಬಲ್ಲ ರಾಷ್ಟ್ರ ಭಾರತ", ಎಂಬ ಸೂಚನೆಯನ್ನು ಇಡೀ ವಿಶ್ವಕ್ಕೇ ನೀಡಿದ್ದೇವೆ.

ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು?

 

 

 

 

 

 

 

 

 

ಸಂಪದಾ ನೀನು ನಮಗಾಗಿ
ಸಾವಿರ ವರುಷ ಹಿತವಾಗಿ
ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ
//ಸಂಪದಾ ನೀನು ನಮಗಾಗಿ//1

 

ಸಾವಿರ ಬ್ಲಾಗೂ ಬಂದರೆ ಏನು
ಸಂಪದಕೆಂದೂ ಸರಿ ಸಾಟಿಯೇನು
ಜತೆಯಲಿ ಎಂದೆಂದು ನೀನಿರಬೇಕು
ನಿನ್ನಯ ಸಂಗವೇ ನಮಗೆಲ್ಲಾ ಸಾಕು
//ಸಂಪದಾ ನೀನು ನಮಗಾಗಿ//2

 

ಕಪ್ಪುಕುಳಿಯಲ್ಲಿ(black hole) ಮಾಯವಾದ ವಸ್ತು ಏನಾಗುತ್ತದೆ?

 

 

 

ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಏನಾಗುತ್ತದೆ ಅನ್ನುವುದಕ್ಕೆ ಎರಡು ವಾದಗಳಿವೆ ಆದರೆ ಯಾವುದನ್ನೂ ಸರ್ವವ್ಯಾಪಿಯಾಗಿ ಸ್ವೀಕರಿಸಿಲ್ಲ

 

 

 

1. ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಇನ್ನೊದು ವಿಶ್ವಕ್ಕೆ ರವಾನೆಯಾಗುತ್ತದೆ ಅಥವಾ ನಮ್ಮ ವಿಶ್ವದಲ್ಲಿಹೆ ಬೇರೆಡೆಗೆ ರವಾನೆಯಾಗುತ್ತದೆ

 

 

ರಾಗೋಶಾ ಅಡುಗೆ ಮನೆ

ನಾನು ರಾಗೋಶಾ ,
ಸಂಪದಕ್ಕೆ ಹೊಸಬಳೇನಲ್ಲ,

ಸಂಪದವನ್ನು ಅತಿಥಿಯಾಗಿ ನೋಡುತ್ತಾ ಬಂದವಳು ನಾನು. ಇದರಲ್ಲಿ ಗೃಹಿಣಿಯರು, ಬೆರಳೆಣಿಕೆಯಷ್ಟೇ ಮಂದಿ ಇರುವರು.

ಇದು ನನ್ನ ಮೊದಲ ಬರಹ.


ಹೇಗೆ ಸ್ವೀಕರಿಸುತ್ತೀರೋ ಎಂಬ ದುಗುಡದಿಂದ ಇಲ್ಲಿಗೆ ಕಾಲಿಡುತ್ತಿದ್ದೇನೆ.

ತುಂಬಾ  ಬೇಗನೇ ಬೇಕಾದಾಗ ಮಾಡುವಂತಹಾ ಎರಡು ತಿನಿಸುಗಳನ್ನು ಇಲ್ಲಿ ನೀಡುತ್ತಿದ್ದೇನೆ.



೧.  ಸುರುಳಿ  ತರಕಾರೀ  ಚಪಾತಿ