ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಲುಗಳಿವೆ, ನಡೆಯುತ್ತೇನೆ!

ಎದೆಯೊಳಿಷ್ಟು ದುಗುಡ
ಪಾವು ಕುತೂಹಲ
ಭವಿಷ್ಯವೆಂಬ ತಲ್ಲಣ
ಬದುಕ ಕಟ್ಟುವೆನೆಂಬ ಧೈರ್ಯ
ಕಟ್ಟಲೇಬೇಕೆಂಬ ಛಲ
ದಾರಿಯ ಅರಿವಿಲ್ಲ
ದಾರಿ ತಾನಾಗಿ
ದಾರಿ ತೋರಿಸುವುದು
ಎಂಬ ಭರವಸೆ!
ಇಷ್ಟನ್ನು ಇಟ್ಟುಕೊಂಡು
ಮುನ್ನಡೆಯಬಲ್ಲೆನೇ?
ಪ್ರಶ್ನಿಸುತ್ತಾ ಕೂತರೆ
ಎಂದಿಗೂ ಕುಳಿತೇ ಇರುವೆ
ನಡೆದರೆ ಉತ್ತರವ ಕಂಡುಕೊಳ್ಳುವೆ
ದಾರಿ ಮುಂದಿದೆ
ಕಾಲುಗಳಿವೆ,
ನಡೆಯುತ್ತೇನೆ

ಕಣ್ಣು ಮುಚ್ಚಾಲೆ...

ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ
ಹೂವಿನ ಮೇಲೆ ಕುಳಿತು
ಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ
ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದು
ನೆಮ್ಮದಿಯ ಸಾ೦ತ್ವನ.
ಹಾ, ಇವತ್ತು ಅರುಣ ಬ೦ದ!

ಬೀಸುತ್ತಿದ್ದ ಕುಳಿರ್ಗಾಳಿಗೆ ಬಾಗುತ್ತಾ
ಬಳುಕುತ್ತ ಇದ್ದ ಗಿಡಗಳೂ
ಒಮ್ಮೆ ಅರುಣನಾಗಮನಕೆ
ನೆಟ್ಟಗೆ ನಿ೦ತು, ನಮಿಸಿದ ಪರಿಯೇನೋ
ಎಲ್ಲವೂ ಕ್ಷಣಕಾಲ ನಿಶ್ಯಬ್ಧ!

ತರಗೆಲೆಗಳೆಲ್ಲಾ ಚದುರದೇ ನಿ೦ತ ಸಮಯವದು!
ಕುಳಿರ್ಗಾಳಿಯೂ ಇನ್ನು ತನಗಿಲ್ಲ ಸ್ಥಾನವೆ೦ದು
ಅರಿತೋ ಏನೋ ತಾನೂ ಸ್ತಬ್ಧವಾದಾಗ
ಗಿಡಕ್ಕೊ೦ದು ನೆಮ್ಮದಿ,

ಮೈಮೇಲೆ ಹಾಸಿಕೊ೦ಡ
ಹೊದಿಕೆಗಳೆಲ್ಲವನ್ನೂ ಎತ್ತೆಸೆದು
ದಿನಗಳಿ೦ದ ಕಾಣದ ರವಿಯ ನೋಡಲೆ೦ದು
ಬರುವಷ್ಟರಲ್ಲಿಯೇ, ಮೋಡದೊಳಗೆ ಕಾಣಿಸದಾದ
ರವಿ ಬುವಿಯನ್ನು ನೋಡಿ ನಗುತ್ತಿರುವನೇನೋ
ಎ೦ದೆನಿಸಿದ್ದು ಸುಳ್ಳಲ್ಲ.

ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು!

ಗೌರವದ ಸ್ಥಾನದಲ್ಲಿದ್ದುಕೊಂಡು
ತನ್ನ ಗೌರವವನ್ನು ಉಳಿಸಿಕೊಂಡು
ನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರು

ದಿನ ಪ್ರತಿದಿನ ಹೇಳಿಕೆಗಳ ನೀಡಿ
ಸರಕಾರವನ್ನು ಎಡೆಬಿಡದೇ ಕಾಡಿ
ಮೆರೆಯಲು ಹೋಗಿ ಈಗ ಎಡವಿಬಿದ್ದಿಹರು

ವಿರೊಧಪಕ್ಷದವರ ಮಾತೇ ಬೇಕಿಲ್ಲ
ಮಾತೃ ಪಕ್ಷದವರೇ ಬೆಲೆಕೊಡುತ್ತಿಲ್ಲ
ಎಲ್ಲಾ ಕಡೆಯಿಂದಲೂ ಉಗಿಸಿಕೊಳ್ಳುತಿಹರು

ಸಭಾಪತಿಗೆ ಬರೆದ ಪತ್ರ ಕಸದಬುಟ್ಟಿಗೆ
ಬೆಲೆಯಿಲ್ಲ ದಿಲ್ಲಿಯಲ್ಲೀತನ ಶಿಫಾರಸ್ಸಿಗೆ
ಉಳಿವಿಗಾಗಿ ಓಲೈಕೆಯ ನಾಟಕವಾಡುತಿಹರು

ಗೌರವದ ಸ್ಥಾನ ಪಡೆಯುವವರು ಹಲವರು
ಆ ಸ್ಥಾನಕ್ಕೇ ಗೌರವ ತರುವವರು ಕೆಲವರು
ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು

ರಿಮೋಟ್ ಎಲ್ಲಿ?

ರಿಮೋಟ್ ಎಲ್ಲಿ?

ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ
 ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲ
ಒಳಗಡೆಯಿಂದ ತಿಳಿದ ದನಿಯೇ
ಮೇಣದ ಬತ್ತಿ ಎಲ್ಲಿದೆಯೇ?
ಅಮ್ಮ ಕ್ಯಾಂಡಲ್ ಎಲ್ಲಿ?
ರಿಮೋಟ್ ಎಲ್ಲಿ?
ಟಾರ್ಚ್ ಎಲ್ಲಿಟ್ಟಿದ್ದೀಯಾ?
"ಈ ಮನೆಯಲ್ಲಿ ಒಂದೂ
ಇಟ್ಟಜಾಗದಲ್ಲಿ ಇರಲ್ಲ ನೋಡು "
ಹೊರಗಿನಿಂದ ತೂರಿ
ಬರುವ ಶಬ್ದ ಹಾವಳಿಯಲ್ಲಿ
ಅದೂ ನೆನಪಿಗೆ ಬರಲ್ಲ
ರಿಮೋಟ್ ಎಲ್ಲಿ?
ಅಲ್ಲೇ ಇರಬೇಕು ತಲೆದಿಂಬಿನಡಿಯಲ್ಲಿ
ಅಯ್ಯಯ್ಯೋ?  ಎನೂ ಏನಾಯ್ತು?
ಇನ್ನೇನು ಜಿರಲೆ ಸಿಕ್ಕಿರಬೇಕು
ತಗೊಳ್ಳಿ ನಿಮ್ಮ ಮೇಣದ ಬತ್ತಿ
ರಿಮೋಟ್ ಎಲ್ಲಿ?
ಬೆಂಕಿ ಪೆಟ್ಟಿಗೆ ..?
ನಿನ್ನೆನೇ ಹೇಳಿದ್ದೆ

ಕತ್ತಲಲ್ಲಿ ಕಂಡದ್ದೇನು????

ಸುಮಾರು 6 ವರ್ಷಗಳ ಹಿಂದಿನ ಮಾತು...ಆಗಷ್ಟೇ ಹೊಸದಾಗಿ "Bajaj Caliber " ಗಾಡಿ ಕೊಂಡಿದ್ದೆ...ಆದರೆ ಇನ್ನು ಗಾಡಿ

ಓಡಿಸಲು ಕಲಿತಿರಲಿಲ್ಲ...ಹಾಗಾಗಿ ದಿನಾಲೂ ನನ್ನ ಸ್ನೇಹಿತ ಬಂದು ನನ್ನನ್ನು ಕರೆದುಕೊಂಡು ಹೋಗಿ ಗಾಡಿ ಓಡಿಸಲು ಹೇಳಿಕೊಡುತ್ತಿದ್ದ..ನಮ್ಮ ಮನೆ ಇದ್ದದ್ದು ಚಾಮರಾಜಪೇಟೆಯಲ್ಲಿ...ಮೊದಮೊದಲು ಅಲ್ಲಲ್ಲೇ ಮೈದಾನದಲ್ಲಿ ಕಲಿಸಿಕೊಡುತ್ತಿದ್ದ...ನಂತರ ರಸ್ತೆಗಿಳಿದು "Long Ride " ವರೆಗೂ ಬಂದು ತಲುಪಿತು ನನ್ನ ಗಾಡಿ ಕಲಿಯುವಿಕೆ..

ಹೀಗೆ ಒಮ್ಮೆ ಗಾಡಿ ಕಲಿಯಲು ಚಾಮರಾಜಪೇಟೆಯಿಂದ ಖಾಲಿ ರಸ್ತೆ ಹುಡುಕಿಕೊಂಡು ಕೆಂಗೇರಿಗೆ ಬಂದು ತಲುಪಿದೆವು..ಕೆಂಗೇರಿ

ಬಸ್ ನಿಲ್ದಾಣ ದಾಟಿ ಸ್ವಲ್ಪ ಮುಂದೆ ಹೋದರೆ ಈಗಿರುವ ಮೇಲ್ಸೇತುವೆ ಪಕ್ಕ ಒಂದು ರಸ್ತೆ ಇತ್ತು...ಅದು ಎಂಥಹ ಜಾಗ ಎಂದರೆ..

ನಿರ್ಮಾನುಷವಾದ ಜಾಗ...ಸುತ್ತಲೂ ಖಾಲಿ ನಿವೇಶನಗಳು, ಹುಡುಕಿದರೂ ಒಂದು ನರಪಿಳ್ಳೆಯ ಸುಳಿವು ಇರಲಿಲ್ಲ..ಅದೇಕೋ

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!

(೨೫೨) ನಿಮಗೊಂದು ಮಹತ್ವಾಕಾಂಕ್ಷೆ ಇಲ್ಲದಿದ್ದಲ್ಲಿ ನೀವು ಕನಸು ಕಾಣಲಾರಿರಿ. ಮಹತ್ವಾಕಾಂಕ್ಷೆ ಇದ್ದರೂ ಕನಸು ಕಾಣಲಾರಿರಿ. ಏಕೆಂದರೆ ಆಗ ನಿಮಗೆ ನಿದ್ರೆಯೇ ಬರುವುದಿಲ್ಲವಲ್ಲ!

(೨೫೩) ಎರಡು ಸಂದರ್ಭಗಳಲ್ಲಿ ಇತರರು ನಮ್ಮನ್ನು ನಾವು ಇರುವಂತೆಯೇ ಸ್ವೀಕರಿಸಲಾರರು--(೧) ಬದುಕಿದ್ದಾಗ, "ಯಾಕಾದರೂ ಬದುಕಿದ್ದಾನೀತ" ಎನ್ನುತ್ತಾರೆ. (೨) ಸತ್ತಾಗ, "ಸಾಯಬಾರದಾಗಿತ್ತು ಈತ", ಎನ್ನುತ್ತಾರೆ!