ಸರಿಯಾಗಿ ಕುಳ್ಳಿರಿಸೋ ಕುರ್ಚಿ
ಬರಹ
ಸರಿಯಾಗಿ ಕುಳ್ಳಿರಿಸೋ ಕುರ್ಚಿ
ಕುರ್ಚಿಯಲ್ಲಿ ತಪ್ಪು ಭಂಗಿಯಲ್ಲಿ ಕೂತು ಬೆನ್ನುನೋವು ಬರಿಸಿಕೊಳ್ಳುವುದು ಆಧುನಿಕ ಕಚೇರಿಗಳಲ್ಲಿ ಸರ್ವೇಸಾಮಾನ್ಯ.ಕುರ್ಚಿಯಲ್ಲಿ ಕುಳಿತುಕೊಳ್ಳುವ ಮತ್ತು ಒರಗುವ ಭಾಗಗಳಲ್ಲಿ ಸಂವೇದಕಗಳನ್ನು ಅಳವಡಿಸಿ,ಅವುಗಳ ಮೂಲಕ ತಪ್ಪು ಭಂಗಿಯಲ್ಲಿ ಕುಳಿತ ವ್ಯಕ್ತಿಯನ್ನು ಎಚ್ಚರಿಸುವ ಕುರ್ಚಿಗಳೀಗ ಇವೆ.ಹಾಗೆಯೆ ಹೆಚ್ಚು ಕುಳಿತರೂ,ಎಚ್ಚರಿಕೆಯ ಗಂಟೆ ಮೊಳಗುತ್ತವೆ.ಜರ್ಮನಿಯ ಈಶಾನ್ಯ ಭಾಗದ ನಾರ್ತ್ಈಸ್ಟರ್ನ್ ಬೈಎಲೆಫೆಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಇದರ ವಿನ್ಯಾಸ ಮಾಡಿದ್ದಾರೆ.ಕುರ್ಚಿಯ ಸಂವೇದಕಗಳು ಕಂಪ್ಯೂಟರ್ ತಂತ್ರಾಂಶವೊಂದಕ್ಕೆ ಬ್ಲೂಟೂತ್ ಮೂಲಕ ಮಾಹಿತಿ ರವಾನಿಸಿ,ಈ ಎಚ್ಚರಿಕೆಯ ಗಂಟೆ ಮೊಳಗುವಂತೆ ಮಾಡುತ್ತದೆ.ರಿಸ್ತೊಕೊವಿಯಾ ಎನ್ನುವ ಸಂಶೋಧಕ,ತಮ್ಮ ಸಂಶೋಧನೆಯ ಈ ಕುರ್ಚಿಗೆ ಇಂಟೆಲ್ಲಿ ಕುರ್ಚಿ ಎಂದು ಹೆಸರಿಸಿದ್ದಾರೆ.
---------------------------------------------
ಅನಿಮೇಶನ್ ಚಿತ್ರ ಲವ-ಕುಶ ತೆರೆಗೆ
ಹೈದರಾಬಾದಿನ ಆರ್ವಿಎಂಎಲ್ ಅನಿಮೇಶನ್ ಸ್ಟುಡಿಯೋ ಇಪ್ಪತ್ತೈದು ಕೋಟಿ ವೆಚ್ಚದಲ್ಲಿ ನಿರ್ಮಿಸಿದ "ಲವ-ಕುಶ"ಅನಿಮೇಶನ್ ಚಿತ್ರ ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ,ಹಲವು ಅನಿಮೇಶನ್ ಚಿತ್ರಗಳು ಬಿಡುಗಡೆಗೆ ಕಾದಿವೆ.ವಿವಿಧ ಭಾಷೆಗಳಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುವುದರಿಂದ ಹಿಂದಿ,ಇಂಗ್ಲೀಷ್,ತೆಲುಗು,ಮತ್ತು ತಮಿಳು ಭಾಷೆಗಳಲ್ಲೂ ಚಿತ್ರ ತೆರೆ ಕಾಣಲಿದೆ.ಡಭ್ಬಿಂಗ್ ನಿಷೇಧವಿರುವ ಕನ್ನಡ ಅವತರಣಿಕೆಯಿರದು.ಲವ-ಕುಶ ಸಿದ್ಧವಾಗಲು ಐದುವರ್ಷವೇ ಹಿಡಿಯಿತು.ಇದರ ಬೆನ್ನಲ್ಲೇ,"ರಾಮಾಯಣ-ದ ಎಪಿಕ್" ಅಕ್ಟೋಬರ್ ಮಧ್ಯಭಾಗದಲ್ಲಿ ತೆರೆಕಾಣಲಿದೆ.ಇದು ಮಾಯಾ ಡಿಜಿಟಲ್ ಮೀಡಿಯಾದಿಂದ ನಿರ್ಮಾಣಗೊಂಡ ಚಿತ್ರ.ತಮಿಳು,ತೆಲುಗು ಮತ್ತು ಹಿಂದಿಯಲ್ಲಿ ಇದು ಮೊದಲು ವೀಕ್ಷಕರ ನಾಡಿಮಿಡಿತ ಪರೀಕ್ಷಿಸಲಿದೆ.ಆಲ್ಫಾ-ಒಮಿಗಾ ಅಮೆರಿಕಾದಲ್ಲಿ ಸದ್ಯ ತೆರೆಕಂಡು,ದೀಪಾವಳಿ ಸಮಯ ನಮ್ಮಲ್ಲೂ ಚಿತ್ರಮಮಂದಿರಗಳಿಗೆ ಲಗ್ಗೆಯಿಡಲಿದೆ.ತೂನ್ಪುರ್ ಕಾ ಸೂಪರ್ಹೀರೋ ತೆರೆ ಕಾಣಲು ಸಿದ್ಧವಾಗಿರುವ ತ್ರೀಡಿ ಮಕ್ಕಳನ್ನು ಗುರಿಯಾಗಿಸಿ ತಯಾರಿಸಿದ ಅಜಯ್ ದೇವಗನ್-ಕಾಜೋಲ್ ತಾರಾಗಣದ ಚಿತ್ರ.ಈ ಚಿತ್ರಗಳು ಇಪ್ಪತ್ತು ಕೋಟಿ ರೂಪಾಯಿ ನಿರ್ಮಾಣವೆಚ್ಚ ಅಪೇಕ್ಷಿಸುವಂತಹ,ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಿರ್ಮಾಣವಾಗಿರುವ ಚಿತ್ರಗಳು.
---------------------------------------------
ಓದುಗರ ಪ್ರತಿಕ್ರಿಯೆಗಳು
*ವೆಬ್ಪಿ ಚಿತ್ರ ಉಳಿಸುವ ಶೈಲಿ ಲಿನಕ್ಸ್ ವ್ಯವಸ್ಥೆಗಳಲ್ಲಿ ಮಾತ್ರಾ ಸದ್ಯ ಲಭ್ಯ-ಶ್ರೀನಿವಾಸ ಬಂಗೋಡಿ.
*ಮಿತವ್ಯಯಿ ಇಂಕ್ಯುಬೇಟರನ್ನು ಆಗೀಗ ಚಾರ್ಜ್ ಮಾಡಲೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಇಲ್ಲದ ಸಮಸ್ಯೆ ಕಾಡಬಹುದು-ಪ್ರಸನ್ನ.
*ಸ್ವತಂತ್ರ ತಂತ್ರಜ್ಞರ ಸಮಾವೇಶದ ಬಗ್ಗೆ ಬರೆದದ್ದಕ್ಕೆ ಧನ್ಯವಾದಗಳು-ಸಂಪತ್ಕುಮಾರ್.
----------------------------------
ಸರಳತೆಗೆ ನೋಬೆಲ್ ಪ್ರಶಸ್ತಿ
ಈ ಸಲ ಭೌತಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಗ್ರಾಫೀನ್ ಎನ್ನುವ ವಸ್ತುವನ್ನು ಪ್ರತ್ಯೇಕಿಸಿದ ವಿಧಾನಕ್ಕೆ ಲಭಿಸಿದೆ.ಇಂದಿನ ಆಧುನಿಕ ಸಾಧನಗಳ ಈ ದಿನಗಳಲ್ಲೂ ಸಂಶೋಧಕರು ಬಳಸಿದ್ದು ಬರೇ ಗಮ್ಟೇಪ್! ಗಮ್ಟೇಪ್ಗೆ ಪೆನ್ಸಿಲ್ ಮೊನೆಯನ್ನು ಉಜ್ಜಿದರೆ,ಈ ವಸ್ತು ಪ್ರತ್ಯೇಕಗೊಳ್ಳುತ್ತದೆ ಎಂದವರ ಸಂಶೋಧನೆ.ಗ್ರಾಫೀನ್ ಇಂಗಾಲದ ಅತ್ಯಂತ ತೆಳು ಪದರ.ಈ ಪದರವು ಅತ್ಯಂತ ಶಕ್ತಿಶಾಲಿ-ಉಕ್ಕಿನ ಪದರಕ್ಕಿಂತಲೂ ಕೂಡಾ.ರಶ್ಯಾ ಸಂಜಾತ ವಿಜ್ಞಾನಿಗಳಾದ ಕೊನ್ಸ್ಟಾಂಟಿನ್ ನೊವೋಸೆಲೋವ್ ಮತ್ತು ಆಂಡ್ರೆ ಗಿಮ್ ಅವರುಗಳು ಈ ಸಲ ನೋಬೆಲ್ ಪ್ರಶಸ್ತಿಯ ಭೌತಶಾಸ್ತ್ರ ವಿಭಾಗದ ಪ್ರಶಸ್ತಿಯನ್ನು ಗೆದ್ದದ್ದು ತಮ್ಮ ಸರಳ ವಿಧಾನದಿಂದ ಎನ್ನುವುದು ಗಮನಾರ್ಹ.ಗ್ರಾಫೀನ್ನ ಅತ್ಯಂತ ತೆಳು ಹಾಳೆಯು,ಇತರ ಯಾವುದೇ ವಸ್ತುವಿನ ಅಷ್ಟೆ ತೆಳ್ಳಗಿನ ಹಾಳೆಗಿಂತ ಗಟ್ಟಿಯಾಗಿದೆ.ಗ್ರಾಫೀನ್ ಪಾರದರ್ಶಕವಾಗಿದ್ದು,ಗಟ್ಟಿತನ ಪ್ರದರ್ಶಿಸುವ ಕಾರಣ,ಅದನ್ನು ಸ್ಪರ್ಶಸಂವೇದಿ ತೆರೆ,ಅರೆವಾಹಕ ಗುಣದಿಂದಾಗಿ ಸಿಲಿಕಾನ್ ಬದಲು ಬಳಸಲಾಗಬಹುದು.ಈಗ ಗ್ರಾಫೀನ್ ಪದರವನ್ನು ಬೇರ್ಪಡಿಸಲು ಹೈಟೆಕ್ ವಿಧಾನಗಳನ್ನು ಅನ್ವೇಷಿಸಲಾಗಿದ್ದರೂ,ನೋಬೆಲ್ ಪ್ರಶಸ್ತಿ ಬಂದದ್ದು ಮಾತ್ರಾ ಮೊದಲ ಬಾರಿಗೆ ಹಾಗೆ ಮಾಡಲು ಯಶಸ್ವಿಯಾದ ಸರಳ ವಿಧಾನಕ್ಕೆ!ಅಂದಹಾಗೆ ಈ ಸಂಶೋಧಕರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದವರು.
----------------------------------------------
ಗೂಗಲ್ ಟಿವಿಗೆ ಲಾಜಿಟೆಕ್ ಯಂತ್ರಾಂಶ
ಲಾಜಿಟೆಕ್ ಕಂಪೆನಿಯು ಲಾಜಿಟೆಕ್ ರೆವ್ಯು ಎನ್ನುವ ಯಂತ್ರಾಂಶವನ್ನು ತಯಾರಿಸಿದೆ.ಇದನ್ನು ಬಳಸಿ,ಟಿವಿಯಲ್ಲೇ ಅಂತರ್ಜಾಲ,ಕಡತ ತೆರೆಯುವುದು,ಶೋಧಿಸುವುದು ಮತ್ತು ಟಿವಿ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು.ಗೂಗಲ್ನ ಆಂಡ್ರಾಯಿಡ್ ತಂತ್ರಾಂಶಗಳನ್ನೂ ಬಳಸಲು ಈ ವ್ಯವಸ್ಥೆ ಅನುವು ಮಾಡುತ್ತದೆ.ರಿಮೋಟ್ ಬಳಸುವ ಮೂಲಕ ಅಥವಾ ಆಂಡ್ರಾಯಿಡ್ ವ್ಯವಸ್ಥೆಯಿರುವ ಸಾಧನದಿಂದ ಟಿವಿಯನ್ನು ನಿಯಂತ್ರಿಸಬಹುದು,ಐಫೋನನ್ನು ಬಳಸಲೂ ಸಾಧ್ಯ.ನಿಸ್ತಂತು ಕೀಲಿಮಣೆ ನಿಯಂತ್ರಣ ಸಾಧನಕಾದರೆ ಮತ್ತೆ ನೂರಮೂವತ್ತು ಡಾಲರು ತೆರಬೇಕು-ಸೆಟ್ಟಾಪ್ ಬಾಕ್ಸಿನ ಬೆಲೆಯು ಮುನ್ನೂರು ಡಾಲರು.
-----------------------------------------------
ಕನ್ನಡ ಸಂಗೀತ
ಜನಪ್ರಿಯ ಕನ್ನಡ ಚಿತ್ರಗೀತೆಗಳು ಮತ್ತಿತರ ಸಂಗೀತ ಕಡತಗಳನ್ನಾಲಿಸಲು ನೀವು ಬಯಸುವಿರಾದರೆ,http://kannada-music.blogspot.com ಅಂತರ್ಜಾಲತಾಣವನ್ನು ಸಂದರ್ಶಿಸಿ.ಇಂಡಿ ಬ್ಲಾಗರ್ ಎನ್ನುವ ಭಾರತೀಯ ಭಾಷೆಗಳ ಬಗೆಗೆ ಕಣ್ಣಿರಿಸುವ ತಾಣವು,ಕನ್ನಡ ಬ್ಲಾಗುಗಳ ಪೈಕಿ ಸದ್ಯ ಈ ತಾಣವನ್ನು ಮೊದಲ ಸ್ಥಾನದಲ್ಲಿರಿಸಿದೆ.ಈ ರಾಂಕಿಂಗ್ ಪ್ರತಿ ತಿಂಗಳೂ ಜನಪ್ರಿಯತೆಯ ಆಧಾರದಲ್ಲಿ ಕೊಡಲ್ಪಡುತ್ತದೆ.ಇಲ್ಲಿ ಚಿತ್ರಗಳ ಕ್ಲಿಪ್ಪಿಂಗ್ಗಳೂ,ಕನ್ನಡ ಟಿವಿ ಚಾನೆಲುಗಳ ಕೊಂಡಿಗಳೂ ಇದ್ದು,ಉಪಯುಕ್ತವೆನ್ನಿಸುವುದು ಖಾತರಿ.ಚಲನಚಿತ್ರಗಳ ಚಿತ್ರಗಳನ್ನೂ ಕೊಟ್ಟಿರುವುದರಿಂದ,ಬ್ಲಾಗಿನ ಪುಟಗಳಿಗೆ ರಂಗೇರಿದೆ.
----------------------
ನವಂಬರ್ 1:ಟ್ವಿಟರ್,ಫೇಸ್ಬುಕ್ ಬೇಡ
ಚಿಕ್ಕ ಮಕ್ಕಳು ಇತರರ ಜತೆ ವ್ಯವಹರಿಸಲಾಗದಂತೆ ಮಾಡುವ ಆಟಿಸಂ ಎನ್ನುವ,ತೊಂದರೆಯಿಂದ ಅವರಿಗಾಗುವ ಸಮಸ್ಯೆಗಳನ್ನು ಇತರರಿಗೂ ಮನವರಿಕೆ ಮಾಡುವ ಉದ್ದೇಶದಿಂದ,ನವಂಬರ್ ಒಂದರಂದು ಸಾಮಾಜಿಕ ಜಾಲತಾಣಗಳಾದ ಟ್ವಿಟರ್,ಫೇಸ್ಬುಕ್ ಮತ್ತು ಅರ್ಕುಟ್ ಮುಂತಾದ ತಾಣಗಳಿಂದ ದೂರವಿರಲು ಜನರಿಗೆ ವಿನಂತಿಸಲಾಗಿದೆ.ಕಮ್ಯುನಿಕೇಶನ್ ಶಟ್ಡೌನ್ ಎನ್ನುವ ಜಾಗತಿಕ ಉಪಕ್ರಮ ಈ ಚಳುವಳಿಯನ್ನು ಹುಟ್ಟಿಹಾಕಿದೆ.ಮೂರನೇ ವರ್ಷದ ವೇಳೆಗೆ ಮಕ್ಕಳಲ್ಲಿ ಆಟಿಸಂ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಮಾತಿನ ಸಮಸ್ಯೆ,ಭಾಷಾ ಸಮಸ್ಯೆಗಳೂ ಕಾಡಬಹುದು.ಈ ಸಂಪರ್ಕ ನ್ಯೂನ್ಯತೆಗಳಿಂದ ಇತರ ಮಕ್ಕಳ ಜತೆ ಬೆರೆಯುವುದೂ ಅಂತಹ ಸಮಸ್ಯೆಯಿದ್ದ ಮಕ್ಕಳಿಗೆ ಕಷ್ಟವಾಗುತ್ತದೆ.ಹಾಗೆಂದು ಮಕ್ಕಳ ಬುದ್ಧಿಶಕಿ ಸಾಮಾನ್ಯ ಅಥವಾ ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿರಬಹುದು.ಇದಕ್ಕೆ ಮದ್ದಿಲ್ಲವಾದರೂ,ಸರಿಯಾಗಿ ತರಬೇತಿ ನೀಡುವ ಮೂಲಕ ಮಕ್ಕಳಿಗೆ ನೆರವಾಗಬಹುದು.
----------------------------------------------------
ಟ್ವಿಟರ್ ಚಿಲಿಪಿಲಿ:
*ಪಾಕಿಸ್ತಾನ್ ಟಾಸ್ ಗೆದ್ದು,ಬೆಟ್ಟಿಂಗ್ ಮಾಡಲು ನಿರ್ಧರಿಸಿತು :)
*ಕೇರಳ,ತಮಿಳ್ನಾಡಿನ ದೇವ-ದೇವತೆಗಳು ಕರ್ನಾಟಕದ್ದಕ್ಕಿಂತ ಶಕ್ತಿಶಾಲಿ...
*ಅದು ಚರಿತ್ರೆಯಲ್ಲೇ ಅತ್ಯಂತ ದುಬಾರಿ ಚಲನಚಿತ್ರ..ನಾಯಕನ ವಯಸ್ಸು ಮುಚ್ಚಲು,ಮೇಕಪ್ಪಿಗೆ ತಗಲಿದ ಖರ್ಚೇ ಕಾರಣ!
*ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ,ಹತ್ತು ವರ್ಷ ಪೂರೈಸಿದ್ರು..ಯೆಡ್ಡಿ?
*ರಜನೀಕಾಂತ್ ಸರ್ವಶಕ್ತ..ಆತ ಸೊನ್ನೆಯಿಂದಲೂ ಭಾಗಿಸಬಲ್ಲ..
*ಅಶೋಕ್ಕುಮಾರ್ ಎ