ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶುಂಠಿ ಇಟ್ಟುಕೊಂಡವನೇ “ಶಾಣ”

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿಸ್ಸಾರಿಡ್ಸ್, ಪ್ರಶಸ್ತಿ ಯನ್ನು ಮೂರು ಪಾಲು ಮಾಡಿಕೊಂಡ ಅರ್ಥಶಾಸ್ತ್ರಜ್ಞರು. ಏಕೆ ಸಿಕ್ಕಿತು ಈ ತ್ರಿಮೂರ್ತಿಗಳಿಗೆ  ನೊಬೆಲ್? ಪೂರೈಕೆ ಮತ್ತು ಬೇಡಿಕೆ - supply and demand -  ಮೇಲಿನ ಅಧ್ಯಯನಕ್ಕೆ ಲಭಿಸಿತು ಇವರುಗಳಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್.


 

ದೋಣಿಯೊಳಗೆ ನೀನು

ಚಿತ್ರ : ಉಯ್ಯಾಲೆ
ರಚನೆ : ಆರ್. ಎನ್. ಜಯಗೋಪಾಲ್
ಸಂಗೀತ : ವಿಜಯ ಭಾಸ್ಕರ್
ಗಾಯಕಿ : ಪಿ. ಸುಶೀಲ


ದೋಣಿಯೊಳಗೆ ನೀನು ಕರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನು?

ಬೀಸುವ ತಂಗಾಳಿಯು ತಂಪೆರೆಯುವ ಬದಲು
ದೋಣಿಯ ಬಹುದೂರಕೆ ಕರೆದೊಯ್ಯುತಿರುವುದು
ಇರುಳಿನೊಲು ತೋರುತಿದೆ ಈ ನಡುಹಗಲು

ಕಾಮನಬಿಲ್ಲಿಹುದು ನೋಡ ದೂರ ಗಗನದೆ
ಕಣ್ಣಲಿ ಅದ ನೋಡಬಹುದು, ಹಿಡಿಯಲಾಗದು
ನನ್ನೆದೆಯ ಭಾವನೆಯು ಮುಗಿಯದ ಹಾಡು

ಪ್ರೀತಿಸಿದರೆ.........!

ಮೊನ್ನೆ ಸೋಮವಾರ ಆಫೀಸಿಗೆ ಹೋದಾಗ ನಂಗೆ  ಆಘಾತ ಕಾದಿತ್ತು..ನನ್ನ ಜೊತೇನೆ ಜಾಯಿನ್ ಆಗಿದ್ದ ಸ್ನೇಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು ..ಕಾರಣ  ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಮನೆಯವರು  ಒಪ್ಪಲಿಲ್ವಂತೆ ..ತಂದೆ ತಾಯಿಯ ಮೇಲಿನ ಸಿಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು ..!ಎತ್ತ ಸಾಗುತ್ತಿದೆ ಇಂತಹ ಕುರುಡು ಪ್ರೀತಿ.. ಇವಳಿಗೆ ನಾವು ಏನು ಕಮ್ಮಿ ಮಾಡಿದ್ದೇವೋ ಅನ್ನೋ ಅವಳ ಅಪ್ಪನ ಅಳು ಇನ್ನೂ ಕಿವಿಯಲ್ಲಿದೆ.. ಬಹುಶಃ ಅವರಿಗೆ ಗೊತ್ತಿರಲ್ಲಿಕ್ಕಿಲ್ಲ,  ಏನೂ ಕಮ್ಮಿ ಮಾಡಿಲ್ಲ ಆದ್ದರಿಂದಲೇ ಹೀಗಾಗಿದ್ದು ಅಂತ  ..ಮುದ್ದು ಸ್ವಲ್ಪ ಕಮ್ಮಿ ಮಾಡಿದ್ದಿದ್ದರೆ ಹೊರಗಿನ ಪ್ರೀತಿಯನ್ನು ಹೀಗೆ ಸತ್ತು ಹೋಗುವಷ್ಟು ಹಚ್ಚಿಕೊಂಡಿರುತ್ತಿರಲಿಲ್ಲವೇನೋ  ..

ಕ್ಷಿಪಣಿ ದಾಳಿ

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...


 


ಇದು ಕೇವಲ ಹಾಸ್ಯಕ್ಕಾಗಿ...

 

ಶೀತಲ ಸಮರದ ಮಧ್ಯದಲ್ಲಿ..ಅಮೆರಿಕ ಏನಾದರೂ ಒಂದು ಕ್ಷಿಪಣಿಯನ್ನು ದಾಳಿ ಮಾಡಿದರೆ...

 

ಸೋವಿಯತ್ ಉಪಗ್ರಹಗಳು ಅದರ ಮಾಹಿತಿಯನ್ನು ೩ ಸೆಕೆಂಡ್ಗಳಲ್ಲಿ ಅದನ್ನು ಸೋವಿಯತ್ ಸೈನ್ಯಕ್ಕೆ ರವಾನಿಸಿ ೫ ಸೆಕೆಂಡ್ಗಳಲ್ಲಿ ಸೋವಿಯತ್ ಮರು ದಾಳಿ ನಡೆಸುತ್ತಿದ್ದವು..

ಇದು ಅವರ ತಂತ್ರಗಾರಿಕೆ...

 

ಅದೇ ಭಾರತ ಹಾಗೂ ಪಾಕ್ ನಡುವೆ ಕ್ಷಿಪಣಿ ದಾಳಿ ನಡೆದರೆ...

ಪಾಕ್ ಸೈನ್ಯ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಲು ನಿರ್ಧರಿಸಿತು..ಅದಕ್ಕೆ ಅವರಿಗೆ ಸರ್ಕಾರದ ಅನುಮತಿ ಬೇಕಿಲ್ಲ. ಹಾಗೆ ದಾಳಿ ನಡೆಸಲು ಸಿದ್ಧತೆ ನಡೆಸಿತು...

 

ಭಾರತ ತಂತ್ರಜ್ಞಾನ ಬಹಳ ಮುಂದುವರಿದದ್ದು...ಕೇವಲ ೮ ಸೆಕೆಂಡ್ ಗಳಲ್ಲಿ ಅದರ ಮಾಹಿತಿ ಭಾರತ ಸೇನೆಗೆ ಲಭಿಸಿ ಮರು ದಾಳಿ ನಡೆಸಲು ನಿರ್ಧರಿಸಿತು..

ವಾರೇ..... ವಾಹ್.......

ವಾರೇ..... ವಾಹ್.......

ನಮ್ಮೂರಿನ ಕೆಸರು ಗದ್ದೆಯಲ್ಲಿ
ಸೊಗಸಾಗಿ ಬೆಳದ ಹುಲ್ಲಿನ ಮದ್ಯ
ಸುಂದರವಾಗಿ ಕಂಡ
ಹುಡುಗಿಯೊಬ್ಬಳ ಜೊತೆಯಲ್ಲಿ
ಅಣ್ಣಾವ್ರ ಹಾಡು ಹಾಡಿಕೊಂಡು
ಹಾಗೆ ಸುಮ್ಮನೆ
ಒಂದು ಲುಕ್ ಕೊಟ್ಟರೆ
ಎನ್ ಮಜಾ ಅಂತೀರಾ...!
ವಾರೇ..... ವಾಹ್.....

ಬೆಂಗಳೊರಿನ M G ರಸ್ತೆಯಲ್ಲಿ
ಧೋ ಎಂದು ಸುರಿಯುತ್ತಿರುವ ಮಳೆಯ ಮದ್ಯ
ಇಷ್ಟವಾದ ಹುಡುಗಿಯನ್ನು
ಹೃದಯಕ್ಕೆ ಅಪ್ಪಿಕೊಂಡು
ರಸ್ತೆಯಲ್ಲಿ, ಸುರಿಯುತ್ತಿರುವ ಮಳೆಯಲ್ಲಿ
ಹಾಗೆ ಒಂದು ರೌಂಡ್ ಬಂದರೆ
ವಾರೇ..... ವಾಹ್.....
ಎನ್ ಮಜಾ ಅಂತೀರಾ...!

ರಾತ್ರಿಯ ನವಿರಾದ ನಿದ್ರೆಯಲ್ಲಿ
ಸುಂದರವಾದ ಕನಸಿನ ಒಳಗೆ
ಪ್ರೀತಿಸಿದ ಹುಡುಗಿಯನ್ನ

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..

ಏನೋ ಆಗಿದೆ ನನಗೇನೋ ಆಗಿದೆ
ಏನೆಂದು ಕೇಳ ಬೇಡ ನೀನು,
ನೀ .. ಸಿಗಲಿಲ್ಲ ವಾದ್ದರಿಂದ
ನನ್ನೀ ಜೀವನ ಬೇಸರವಾಗಿದೆ .

ಹುಡುಕಾಡಿದೆ ನಿನ್ನನ್ನು
ಸುತ್ತಾಡಿದೆ ನಿನ್ನ ಮನೆಯನ್ನು
ಧಣಿದು ಬಸವಳಿದಿರುವೆ, ಆದರೋ
ಹುಡುಕಲಾಗಲಿಲ್ಲ ನಿನ್ನ ಸುಳಿವನ್ನು .

ಕೊರಗುತಿಹೇನು ನಿನ್ನ ನೆನೆಪಲ್ಲೆ
ನೊಂದು , ಬೆವರುತಿಹೇನು ನೀನಿಲ್ಲದ ನೋವಲ್ಲೆ
ಸುಮ್ಮನೆ ಕೂರಲು  ಮನಸಿಲ್ಲ,
ನಿನ್ನ ಹುಡುಕುವ ಉತ್ಸಾಹವೂ ನನಗಿಲ್ಲ .

ಕಾರಣ ಹೇಳದೆ ಹೋರಟು ಹೋದ ಗೆಳತಿ ನೀನು ,
ನೀನಿಲ್ಲದ ಕಾರಣ ಜೀವನ ಸಾಗಿದೆ
ತಂತಿ ಮುರಿದ ವೀಣೆಯ ರೀತಿ....,
ನಾವಿಕನಿಲ್ಲದ ದೋಣಿಯ  ರೀತಿ...!

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿ


ಅಂದದ ತೊದಲು ನುಡಿ
ಕಚಗುಳಿ ಇಡುವ ಕಣ್ಣ ನೋಟ
ರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆ
ಸುಂದರ , ರಮಣೀಯ , ಮನೋಹರ ...

 

ನನ್ನ ನಿನ್ನ ಮಿಲನ
ಹೇಳಲಾಗದ ಪದಗಳ ನಯನ
ಗೀಚಿ ಬರೆದರೂ ಕೂಡ
ಮುಗಿಯಲಾರದ ಪ್ರೇಮ ಕವನ .

 

ದೇವರ ಮಹಿಮೆ ನಾ ಕಾಣೆ ಗೆಳತಿ
ನಿನ್ನ ಕಣ್ಣ ನೋಟಕ್ಕೆ ನಾನದೆ
ಸಿಪ್ಪೆಕಳಚಿದ ಬಾಳೆಹಣ್ಣಿನಂತೆ ,
ಭೂಮಿಯಲ್ಲಿ  ಬಿದ್ದು ಒದ್ದಾಡುವ ಮೀನಿನಂತೆ .

 

ನಿನ್ನ ಒಂದು ಸ್ಪರ್ಶಕ್ಕೆ
ಕ್ಷಣರ್ದದಲ್ಲಿ   ಮೂಡಿದ ಸಂಚಲನ
ಯಾವ ಬಿರುಗಾಳಿಗೂ ಕಡಿಮೆ ಇರಲಿಲ್ಲ ,
ಮತ್ತು ಬರಿಸುವ ಮದುರೆಯು ಅದಕ್ಕೆ ಸಾಟಿಯೇನಿಲ್ಲ.