ಕ್ಷಿಪಣಿ ದಾಳಿ

ಕ್ಷಿಪಣಿ ದಾಳಿ

ಬರಹ

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...


 


ಇದು ಕೇವಲ ಹಾಸ್ಯಕ್ಕಾಗಿ...

 

ಶೀತಲ ಸಮರದ ಮಧ್ಯದಲ್ಲಿ..ಅಮೆರಿಕ ಏನಾದರೂ ಒಂದು ಕ್ಷಿಪಣಿಯನ್ನು ದಾಳಿ ಮಾಡಿದರೆ...

 

ಸೋವಿಯತ್ ಉಪಗ್ರಹಗಳು ಅದರ ಮಾಹಿತಿಯನ್ನು ೩ ಸೆಕೆಂಡ್ಗಳಲ್ಲಿ ಅದನ್ನು ಸೋವಿಯತ್ ಸೈನ್ಯಕ್ಕೆ ರವಾನಿಸಿ ೫ ಸೆಕೆಂಡ್ಗಳಲ್ಲಿ ಸೋವಿಯತ್ ಮರು ದಾಳಿ ನಡೆಸುತ್ತಿದ್ದವು..

ಇದು ಅವರ ತಂತ್ರಗಾರಿಕೆ...

 

ಅದೇ ಭಾರತ ಹಾಗೂ ಪಾಕ್ ನಡುವೆ ಕ್ಷಿಪಣಿ ದಾಳಿ ನಡೆದರೆ...

ಪಾಕ್ ಸೈನ್ಯ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಲು ನಿರ್ಧರಿಸಿತು..ಅದಕ್ಕೆ ಅವರಿಗೆ ಸರ್ಕಾರದ ಅನುಮತಿ ಬೇಕಿಲ್ಲ. ಹಾಗೆ ದಾಳಿ ನಡೆಸಲು ಸಿದ್ಧತೆ ನಡೆಸಿತು...

 

ಭಾರತ ತಂತ್ರಜ್ಞಾನ ಬಹಳ ಮುಂದುವರಿದದ್ದು...ಕೇವಲ ೮ ಸೆಕೆಂಡ್ ಗಳಲ್ಲಿ ಅದರ ಮಾಹಿತಿ ಭಾರತ ಸೇನೆಗೆ ಲಭಿಸಿ ಮರು ದಾಳಿ ನಡೆಸಲು ನಿರ್ಧರಿಸಿತು..

ಆದರೆ ಅವರಿಗೆ ಭಾರತ ಸರ್ಕಾರದ ಅನುಮತಿ ಬೇಕು..ಕೂಡಲೇ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು...ಅವರು ಅದನ್ನು ಸದನಕ್ಕೆ ರವಾನಿಸಿದರು..ಪ್ರಧಾನ ಮಂತ್ರಿ

ತುರ್ತು ಸಭೆಯನ್ನು ಕರೆದರು.  ಆಡಳಿತ ಪಕ್ಷ ಹಾಗು ಪ್ರತಿಪಕ್ಷಗಳ ಪ್ರತಿರೋಧಗಳ ನಡುವೆ ಸಭೆಯನ್ನು ಮುಂದೂಡುತ್ತಲೇ ಇದ್ದರು..

 

ರಾಷ್ಟ್ರಪತಿ ಶೀಘ್ರವಾಗಿ ನಿರ್ಧರಿಸಲು ಆದೇಶಿಸಿದರು...

 

ಅದೇ ಸಮಯದಲ್ಲಿ ಪಾಕ್ ಕೆಲವು ಲೋಪದೋಷಗಳ ನಡುವೆ ದಾಳಿ ನಡೆಸಲು ವಿಫಲವಾಯಿತು...ಆದರೆ ಅದು ಸುಮ್ಮನೆ ಕೂಡಲಿಲ್ಲ ಮತ್ತೆ ದಾಳಿಗೆ ಪ್ರಯತ್ನ ಶುರು ಮಾಡಿತು..

ಅಷ್ಟರಲ್ಲಿ ಭಾರತ ಸರ್ಕಾರಕ್ಕೆ ಬೆಂಬಲ ನೀಡಿದ್ದ ಪಕ್ಷವೊಂದು ತನ್ನ ಬೆಂಬಲವನ್ನು ವಾಪಸ್ ಪಡೆದಿದ್ದರಿಂದ ಸರ್ಕಾರ ಅತಂತ್ರವಾಯಿತು. ರಾಷ್ಟ್ರಪತಿಯವರು ಪ್ರಧಾನಿಗೆ

ಒಂದು ವಾರದಲ್ಲಿ ಬಹುಮತ ಸಾಬೀತುಪಡಿಸಲು ಆಗ್ರಹಿಸಿದರು...ಸರ್ಕಾರ ಬಹುಮತ ಸಾಬೀತುಪಡಿಸಲು ವಿಫಲವಾದಾಗ ಆಪದ್ಧರ್ಮ ಸರ್ಕಾರ ರಚನೆಯಾಯಿತು..

 

ಆಪದ್ಧರ್ಮ ಪ್ರಧಾನಿ ಕ್ಷಿಪಣಿ ದಾಳಿ ನಡೆಸಲು ಅನುಮತಿ ನೀಡಿದರು...

 

ಆದರೆ ಚುನಾವಣಾ ಆಯೋಗ ಇದಕ್ಕೆ ಅಡ್ಡಿಪಡಿಸಿತು. ಆಪದ್ಧರ್ಮ ಸರ್ಕಾರಕ್ಕೆ ಇಂಥಹ ಸೂಕ್ಷ್ಮ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ...ಅದು ಅಲ್ಲದೆ

ಚುನಾವಣಾ ಸಮಯ ಬೇರೆ.

ಅಷ್ಟರಲ್ಲಿ ಅಧಿಕಾರ ದುರುಪಯೋಗದ ಆರೋಪದ ಮೇಲೆ ಚುನಾವಣ ಆಯೋಗದ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು  ಸುಪ್ರೀಂ ಕೋರ್ಟ್

ನಲ್ಲಿ ಸಲ್ಲಿಸಲಾಯಿತು...

 

ಸುಪ್ರೀಂ ಕೋರ್ಟ್ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಪದ್ಧರ್ಮ ಪ್ರಧಾನ ಮಂತ್ರಿಗೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿತು..

 

ಅಷ್ಟರಲ್ಲಿ ಪಾಕ್ ಪಡೆಯು ಯಶಸ್ವಿಯಾಗಿ ಒಂದು ಕ್ಷಿಪಣಿ ದಾಳಿ ನಡೆಸಿತು ಆದರೆ ದುರದೃಷ್ಟವಶಾತ್ ಅದು ತನ್ನ ನಿಗದಿತ ಗುರಿ ತಲುಪಲು ಆಗದೆ ೩೬೭ ಕಿ.ಮೀ. ಹಿಂದೆಯೇ

ಅಂದರೆ ತಮ್ಮದೇ ಸರ್ಕಾರಿ ಕಚೇರಿಯ ಮೇಲೆ ಬೆಳಿಗ್ಗೆ ೧೧ ಗಂಟೆಗೆ  ಬಿತ್ತು....ಆದರೆ ಅಷ್ಟು ಬೇಗ ಯಾರು ಕೆಲಸಕ್ಕೆ ಬಂದಿರಲಿಲ್ಲವಾದ್ದರಿಂದ ಸಾವು ನೋವು ಸಂಭವಿಸಲಿಲ್ಲ..

ಈ ಸಲ ಉತ್ತಮ ತಂತ್ರಜ್ಞಾನಕ್ಕಾಗಿ ಪಾಕ್ ಸೇನೆ ಚೀನಾ ಹಾಗು ಅಮೆರಿಕಾದ ಮೊರೆ ಹೋಯಿತು...

 

ಇತ್ತ ಭಾರತದಲ್ಲಿ ಎಲ್ಲ ಪಕ್ಷಗಳ ಸಭೆಯಲ್ಲಿ ದಾಳಿ ಮಾಡುವುದೆಂದು ಒಮ್ಮತದಿಂದ ನಿರ್ಧರಿಸಿತು...(ದಾಳಿ ನಡೆಸಲು ಮನವಿ ಸಲ್ಲಿಸಿ ಮೂರು ತಿಂಗಳ ನಂತರ ನಡೆದ ಬೆಳವಣಿಗೆ)

ಅಷ್ಟರಲ್ಲಿ "ಮಾನವ ಹಕ್ಕು" ಹಾಗು "ಪರಿಸರವಾದಿಗಳು" ವಿರೋಧ ವ್ಯಕ್ತ ಪಡಿಸಲು ಶುರು ಮಾಡಿದರು...ಮಾನವ ಸರಪಳಿಗಳನ್ನು ನಿರ್ಮಿಸಿ, ರಸ್ತೆ ತಡೆಗಳನ್ನು ಮಾಡಿ. ಕ್ಯಾಲಿಫೋರ್ನಿಯಾ

ಹಾಗು ವಾಶಿಂಗ್ ಟನ್ ಗಳಲ್ಲಿ ಭಾರತವನ್ನು ಖಂಡಿಸಿ ಈ ಮೇಲ್ ಗಳು ಹರಿದಾಡಿದವು...ಇದನ್ನು ಎಷ್ಟು ಭಾರತೀಯರಿಗೆ ಸಾಧ್ಯವೋ ಅಷ್ಟು ಕಳುಹಿಸಿ ಎಂದು...

 

ಅತ್ತ ಪಾಕ್ನಲ್ಲಿ ಪದೇ ಪದೇ ದಾಳಿ ವಿಫಲಗೊಂಡವು...ಕೆಲವು ತಂತ್ರದೋಷದಿಂದ ವಿಫಲವಾದರೆ ಇನ್ನು ಕೆಲವು ಗುರಿ ಮುಟ್ಟುವಲ್ಲಿ ವಿಫಲವಾದವು..ಕೆಲ ಕ್ಷಿಪಣಿಗಳು ಹಿಂದೂ ಮಹಾ ಸಾಗರದಲ್ಲಿ

ಬಿದ್ದು ಅನೇಕ ಮೀನುಗಳ ಸಾವಿಗೆ ಕಾರಣವಾದವು...ಅಮೇರಿಕಾದಿಂದ ಕಳ್ಳತನದಲ್ಲಿ ತಂದಿದ್ದ ಕ್ಷಿಪಣಿ ಒಂದರ ತಂತ್ರಾಂಶದ ಬಗ್ಗೆ ಅರಿವಿಲ್ಲದ ಪಾಕ್ ಸೇನೆ ಅದನ್ನು ಉಡಾಯಿಸಿದಾಗ

ಅದು ತನ್ನ ನಿಗದಿತ ಕಕ್ಷೆಯಾದ ರಷ್ಯಾದ ಮೇಲೆ ಹೋಗಿ ಬಿತ್ತು.

 

ದಾಳಿಯಿಂದ ಚೂರು ಕಂಗೆಡದ ರಷ್ಯಾ ಇಸ್ಲಾಮಾಬಾದ್ ಮೇಲೆ ಮರುದಾಳಿ ನಡೆಸಿತು...ಅದರ ಪರಿಣಾಮ ಅಪಾರವಾದ ಸಾವು ನೋವು, ಆಸ್ತಿ ನಷ್ಟ ಸಂಭವಿಸಿತು...

ಪಾಕ್ ಸರ್ಕಾರ ಸಹಾಯಕ್ಕಾಗಿ ಕೈ ಚಾಚಿತು..ಭಾರತ ಸರ್ಕಾರ ತೀವ್ರ ಸಂತಾಪ ವ್ಯಕ್ತ ಪಡಿಸಿ ಕೋಟಿ ಡಾಲರ್ ಬೆಲೆಯ "ಪಾರ್ಲೆ-ಜಿ" ಬಿಸ್ಕತ್ತುಗಳನ್ನು ಪರಿಹಾರವಾಗಿ ಕಳುಹಿಸಿತು...

 

ಹೀಗೆ ಭಾರತ ಸೇನೆಯ ಕ್ಷಿಪಣಿ ದಾಳಿಯ ಕನಸು ಹಾಗೆ ಉಳಿಯಿತು

ಪಾಕ್ ಸೇನೆ ಅದನ್ನು ಸರಿಯಾಗಿ ಉಪಯೋಗಿಸಲು ಕಲಿಯಲೇ ಇಲ್ಲ...