ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದಷ್ಟು ಹನಿ ಹನಿ ಮಾತುಗಳು!

ನಿನ್ನ ನೆನಪಿನಿಂದಲೇ
ನನ್ನ ಬೆಳಗು

ನಿನ್ನ ನೆನಪಿನಿಂದಲೇ
ನನ್ನ ಬೈಗು

***

ನೀನು ಇರದೇ ಇದ್ದರೂ
ಸದಾ ನನ್ನ ಹತ್ತಿರ

ನಿನ್ನ ನೆನಪಿನಿಂದಲೇ
ಇರುವೆ ನಾನು ಎಚ್ಚರ

***

ಸದಾ ನೆನಪಾಗಿ
ಹೀಗೆ ನನ್ನ ಕಾಡದಿರು

ಮರೆಯುವ ಮಾತನ್ನು
ನೀನೆಂದಿಗೂ ಆಡದಿರು

***

ಅದೆಂದೋ ಅದೆಲ್ಲೋ
ಕಳೆದುಹೋಗಿದ್ದ ಆ ಸ್ನೇಹ
ಈಗ ಇಲ್ಲಿ ಮತ್ತೆ ಸಿಕ್ಕಿದೆ

ಇನ್ನೊಮ್ಮೆ ಕಳೆದುಕೊಂಡು
ಮತ್ತೆ ಪಡೆವ ಧೈರ್ಯ
ನಿಜವಾಗಿ ಯಾರಲ್ಲಿದೆ?

***

ತುಂಬಾ ಮಾತಾಡಬೇಕು
ಎಂದೆನಿಸಿದಾಗಲೆಲ್ಲಾ ನಿನಗೆ

ಗೌಡಪ್ಪನ ಮಹಾ ಸ್ನಾನ!

ಪಾಪ, ಗೌಡಪ್ಪನ ಟೇಮು ಚೆನ್ನಾಗಿಲ್ಲ ಅನ್ಸುತ್ತೆ. ಎಲ್ಲಾ ಸೇರಿ ಹಿಡಿದು ಜಗ್ಗಿ ಎಳೆದು ಗೌಡಪ್ಪ ಹೈರಾಣಾಗಿ ಹೋಗಿದ್ದರು. ಸುಗರ್ ಇದ್ರೂನೂ ಊಟದಾಸೆಯಿಂದ ಕೋಮಲ್‌ನ ಅಂಗಿಯ ಚುಂಗು ಹಿಡಿದು ಅಲ್ಲೀವರೆಗೂ ಬಂದಿದ್ದ ಗೌಡಪ್ಪ ಬರಿಯ ಸಹಜ ಕುತೂಹಲದಿಂದ ಕನ್ನಡಕ ಕಾಣಿಸ್ತಾ ಇಲ್ಲ ಎಂದುದಕ್ಕೇ, ನಸಗುನ್ನಿ ಕಾಯಿ ಹಾಕಿ ಸ್ನಾನ ಮಾಡ್ಸಿ ಲಗಾಡಿ ತೆಗ್ದೇ ಬಿಟ್ರಲ್ರೀ ನಾವಡರೇ....

'ಯಾರು ಮುನಿದು ಇವರಿಗೇನು ಮಾಡುವರು?!"

        ‘ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ?’ ಹೌದಲ್ಲವಾ?! ಎಂದು ನೀವು ತಲೆ ಕೆರೆದುಕೊಳ್ಳುತ್ತಿಬೇಕಾದರೇ ‘ಮುಖ್ಯಮಂತ್ರಿ ಮಗ ಏನು ಮಾಡಿದರೇನು? ಆತನ ಮೇಲಿನ ಟೀಕೆ ಜನಾದೇಶದ ಧಿಕ್ಕಾರ!’ ಎಂಬ ಗುಡುಗೊಂದು ಅಪ್ಪಳಿಸಿದರೂ ಅಚ್ಚರಿ ಪಡುವ ಸಂದರ್ಭ ನಮ್ಮ ಪ್ರಜಾಸತ್ತೆಯಲಿಲ್ಲ್ಲ! ಅಷ್ಟೇ ಅಲ್ಲ, ‘ನೋಡ್ರೀ ನಮ್ಮ ಹಿಂದಿನೋರೆಲ್ಲಾ 850ರಿಂದ ಕಿಲೋಗ್ರಾಂವರೆಗೆ ತಿನ್ನಬಾರದ್ದನ್ನು ತಿಂದಿದ್ದರು; ನಾವಾದರೋ ಈವರೆಗೆ 825ಗ್ರಾಂ ತಿಂದಿದ್ದೀವಷ್ಟೇ’ ಎನ್ನುವ ಹೆಮ್ಮೆ ಕೇಳಿಬಂದರೂ, ಯಾರಿಗಿಂತಾ ಯಾರು ಹೆಚ್ಚು ಮತ ಪಡೆದರು ಎಂಬ ಲೆಕ್ಕಚಾರದಿಂದ ಮಾತ್ರಾ ಗೆದ್ದ ಅಭ್ಯರ್ಥಿಯನ್ನು ಘೋಷಿಸುವ ನಮ್ಮ ಚುನಾವಣಾ ಪದ್ಧತಿಗೆ ಅನುಗುಣವಾಗೇ ಇರುತ್ತದೆ!

ಕೊಂಕಣಿ ಭಾಷಾ ಮಾಲಿಕೆ ೧


ಗೆಳೆಯ ರವೀಶ್ ಬರೆದ ಬ್ಲಾಗ್ ನೋಡಿ ನಾನು ಯಾಕೆ ಕೊಂಕಣಿ ತರಬೇತಿ ಶುರುಮಾಡಬಾರದು ಎಂದು ಕೊಂಡೆ.ಅದಕ್ಕಾಗಿಯೇ ನಾನು ಕೊಂಕಣಿ ಭಾಷೆಗೆ ಅಳಿಲು ಸೇವೆ ನೀಡುವ ಸಲುವಾಗಿ ಪ್ರಯತ್ನ ಆರಂಬಿಸಿರುವೆ.
 "ಕೊಂಕಣಿ " ಇದರಲ್ಲಿ ನಾನಾ ಬಗೆಗಳಿವೆ, ಮಂಗಳೂರಿನಲ್ಲಿ ೪-೫ ಬಗೆಗಿನ ಕೊಂಕಣಿ ಬಳಕೆಯಲ್ಲಿದೆ, GSB ಯವರು ಮಾತಾಡುವ ಕೊಂಕಣಿ, ಕ್ರಿಶನ್ ಕೊಂಕಣಿ ,RSB ಕೊಂಕಣಿ, ಹೀಗೆ ಬೇರೆ ಬೇರೆ ಕೊಂಕಣಿ ಬಳಕೆ ಯಲ್ಲಿದೆ, ಎಲ್ಲ ಕೊಂಕಣಿ ಯ ಮೂಲ ಒಂದೇ ಆದರೆ ಕೆಲವು ಪದಗಳ ಬಳಕೆಯಲ್ಲಿ ಮತ್ತು ಮಾತಾಡುವ ಧಾಟಿಯಲ್ಲಿ ವ್ಯತ್ಯಾಸ ವಿದೆ. ನಾನು ಇಲ್ಲಿ ಹೇಳ ಹೊರಟಿರುವುದು GSB  ಕೊಂಕಣಿ.



ಮೊದಲ ಕಂತಾಗಿ ದಿನಬಳಕೆಯ ಕೆಲವು ನಾಮ ಪದಗಳನ್ನು  ಕಲಿಯುವ

ನಾನು - ಹಾಂವ್
ನೀನು - ತೂ

ಬೆಳದಿಂಗಳ ಬಾಲೆ...

ಅವತ್ತು ಭಾನುವಾರ...ಸಿಕ್ಕಾಪಟ್ಟೆ ಮಳೆ ಬಂದು ಸಂಜೆ ೬  ಗಂಟೆಗೆ ಒಳ್ಳೆ ೮  ಗಂಟೆಯ ಹಾಗೆ ಕತ್ತಲು ಆವರಿಸಿತ್ತು...ಆಗ ತಾನೇ ಮಳೆ ನಿಂತಿತ್ತು...

ಆಚೆ ಒಳ್ಳೆ ಹವೆ ಇತ್ತು...ಆ ಮಣ್ಣಿನ ವಾಸನೆ ಆಹ್ಲಾದಕರವಾಗಿತ್ತು...ಸರಿ ಹಾಗೆ ಒಂದು ಸುತ್ತು ಹಾಕಿಕೊಂಡು ಬರೋಣ ಎಂದು ಮನೆಯಿಂದ ನಡೆದೇ

ಹೊರಟೆ..

 

ಮನೆಯಿಂದ ಸ್ವಲ್ಪ ದೂರ ಬಂದು ರಸ್ತೆ ತಿರುವಿನಲ್ಲಿ ತಿರುಗಿದಾಗ ಕಂಡಳು ಅವಳು...ಅದೇಕೋ ಅವಳನ್ನು ಕಂಡ ಕೂಡಲೇ ನಾನು ಆಚೆ ಬಂದ

ಉದ್ದೇಶ ಮರೆತು ಅಲ್ಲೇ ನಿಂತುಬಿಟ್ಟೆ...ಕತ್ತಲು ಆವರಿಸಿದ್ದರಿಂದ ಅವಳ ಮುಖ ಅಸ್ಪಷ್ಟವಾಗಿ ಕಾಣುತ್ತಿತ್ತು. ಹತ್ತಿರ ಹತ್ತಿರ ಬರುತ್ತಿದ್ದ ಹಾಗೆ ಅವಳ ಮುಖ

ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದು
ಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು

"ಎಸ್" "ವೈ" ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡು
ವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜು

ಕಾಂಗ್ರೇಸಿಗರು ಕೂಡಲೇ ಕಡತಗಳ ನಕಲುಗಳನ್ನು ತೆಗೆದು
ನಡೆಯುತ್ತಾರೆ ರಾಜಭವನದಾ ಏಜಂಟನಿಗೆ ದೂರು ಕೊಡಲು

ದೂರದ ಮಂಗಳೂರಲ್ಲಿ ನಿದ್ದೆಯಿಂದೆದ್ದ ಜನಾರ್ದನ ಪೂಜಾರಿ
ಮತ್ತು ಇತ್ತ ಈ ಬಂಗಾರಪ್ಪ ಶುರುಮಾಡುತ್ತಾರೆ ತೊದಲಲು

ತಾನೇ ರಾಜೀನಾಮೆ ಕೊಟ್ಟಿದ್ದ ಸಿದ್ದರಾಮಯ್ಯ ಸೋನಿಯಾಳ
ಮುಂದೆ ಯಡ್ಡಿಯ ಹುಳುಕನ್ನು ಬಿಚ್ಚಿಡಲು ದೌಡಾಯಿಸುತ್ತಾನೆ

ನಾನೂ ನನ್ನ ಬಾಸೂ ೬ ನೇರ ಗುರಿಯ ಬಾಣ

                                                         ನಾನೂ ನನ್ನ ಬಾಸೂ   ೬   ನೇರ ಗುರಿಯ ಬಾಣ   

" ಏನಯಾ ಜೋಗಾ ಯಾಕೆ ಹೀಗ್ಮಾಡ್ದೆ...?  ನಮ್ ಸಾಹೇಬ್ರಿಗೇ ಬೈಸಿದ್ಯಂತಲ್ಲಾ, ಅಲ್ಲಯ್ಯಾ ಏನಾದ್ರೂ ತೊಂದರೆಯಿದ್ದರೆ ನಂಗೆ ಹೇಳ್ಬೇಕಾಗಿತ್ತೂ, ಅದನ್ನ ಬಿಟ್ಟೂ ದೊಡ್ಡ ಸಾಹೇಬ್ರಿಗೇ ಸೀದಾ ಹೇಳೋದಾ?" ನನ್ನ ಮಾತು ಅವನನ್ನು ದಿಗಿಲು ಮಾಡಿದ ಹಾಗೆ ಕಂಡಿತು, ಅದನ್ನು ನೋಡಿ ನಾನೇ ಮುಂದುವರಿದೆ " ಸಾಹೇಬ್ರೂ ತುಂಬಾನೇ ಸಿಟ್ಟಲ್ಲಿ ಇದ್ದಾರೆ, ಏನ್ಮಾಡ್ತೀಯಾ  ಈಗ, ನಿಂದೆಲ್ಲಾ ವಿಷ್ಯ ಅವ್ರಿಗೆ ಗೊತ್ತಾಯ್ತು, ರುದ್ರ ಸಾಹೇಬ್ರು ಎಲ್ಲಾ ಅವ್ರಿಗೆ ಹೇಳಿದ್ರು "  ಸುಮ್ಮನೇ ಹೇಳ್ದೆ, ಬಾಣ ನೇರ ಗುರಿಗೇ ತಾಗ್ತು.