'ಯಾರು ಮುನಿದು ಇವರಿಗೇನು ಮಾಡುವರು?!"

'ಯಾರು ಮುನಿದು ಇವರಿಗೇನು ಮಾಡುವರು?!"

ಬರಹ

        ‘ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ?’ ಹೌದಲ್ಲವಾ?! ಎಂದು ನೀವು ತಲೆ ಕೆರೆದುಕೊಳ್ಳುತ್ತಿಬೇಕಾದರೇ ‘ಮುಖ್ಯಮಂತ್ರಿ ಮಗ ಏನು ಮಾಡಿದರೇನು? ಆತನ ಮೇಲಿನ ಟೀಕೆ ಜನಾದೇಶದ ಧಿಕ್ಕಾರ!’ ಎಂಬ ಗುಡುಗೊಂದು ಅಪ್ಪಳಿಸಿದರೂ ಅಚ್ಚರಿ ಪಡುವ ಸಂದರ್ಭ ನಮ್ಮ ಪ್ರಜಾಸತ್ತೆಯಲಿಲ್ಲ್ಲ! ಅಷ್ಟೇ ಅಲ್ಲ, ‘ನೋಡ್ರೀ ನಮ್ಮ ಹಿಂದಿನೋರೆಲ್ಲಾ 850ರಿಂದ ಕಿಲೋಗ್ರಾಂವರೆಗೆ ತಿನ್ನಬಾರದ್ದನ್ನು ತಿಂದಿದ್ದರು; ನಾವಾದರೋ ಈವರೆಗೆ 825ಗ್ರಾಂ ತಿಂದಿದ್ದೀವಷ್ಟೇ’ ಎನ್ನುವ ಹೆಮ್ಮೆ ಕೇಳಿಬಂದರೂ, ಯಾರಿಗಿಂತಾ ಯಾರು ಹೆಚ್ಚು ಮತ ಪಡೆದರು ಎಂಬ ಲೆಕ್ಕಚಾರದಿಂದ ಮಾತ್ರಾ ಗೆದ್ದ ಅಭ್ಯರ್ಥಿಯನ್ನು ಘೋಷಿಸುವ ನಮ್ಮ ಚುನಾವಣಾ ಪದ್ಧತಿಗೆ ಅನುಗುಣವಾಗೇ ಇರುತ್ತದೆ!


ಮಹಾಜನತೆಯಲ್ಲಿ, ಮಾನವ ಸಹಜ ಮೌಲ್ಯಗಳಾದ ಸಭ್ಯತೆ, ಸಂಸ್ಕಾರ, ಆತ್ಮವಂತಿಕೆಗಳನ್ನು, ನಮ್ಮ ಸಂವಿಧಾನ ಬರೆದ ದೊಡ್ಡವರು, Taken for granted ಎಂಬಂತೆ ಸ್ವೀಕರಿಸಿಬಿಟ್ಟಿದ್ದಾರೇನೋ?! ಆದ್ದರಿಂದಲೇ ಸಂವಿಧಾನದ ಎಲ್ಲಾ ಸದಾಶಯಗಳನ್ನೂ ಮಣ್ಣುಮಕ್ಕಿಸುವುದು ನಮ್ಮ Seasoned ರಾಜಕಾಣಿಗಳಿಗೆ ನೀರು ಕುಡಿದಷ್ಟು ಸುಲಭಸಾಧ್ಯವಾಗಿದೆ. ದೇಶವನ್ನು ದಲಿತರು, ಅಲ್ಪಸಂಖ್ಯಾತರು ಎಂದಷ್ಟೇ ಅಲ್ಲದೆ ಈಗ ಕುರುಬರು, ಬಣಜಿಗರು, ಬೋವಿಗಳು ಇತ್ಯಾದಿ ಸಹಸ್ರ-ಸಹಸ್ರ ಜಾತಿ, ಉಪಜಾತಿಗಳಲ್ಲೂ ಸಿಗಿದಿಡುತ್ತಿದ್ದಾರೆ. ಚುನಾವಣೆ ಗೆಲ್ಲಲು ಬಹುಜನರ ಪ್ರೀತಿಗಿಂತಾ ಮಾರ್ಜಿನ್ನೇ ಅಂತಿಮವಾಗುವುದರಿಂದ ಈ Engineering!


ಯಶಸ್ವಿಯಾದವರು ಅಧಿಕಾರಕ್ಕೆ ಬಂದಾಗ ಇಡೀ Bureaucracy ಅವರದು. ನ್ಯಾಯಾಂಗವೋ, ಲೋಕಾಯುಕ್ತವೋ, ಚುನಾವಣಾ ಆಯೋಗವೋ ಸಿಡಿಮಿಡಿಗೊಂಡು ಶಾಪ ಹಾಕಿದರೂ ಜಾರಿಗೊಳಿಸಬೇಕಾದ Bureaucracyಯೇ ಇವರ ಕೈಲಿರುವವರೆಗೆ “ಯಾರು ಮುನಿದು ಇವರಿಗೇನು ಮಾಡುವರು?!”

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet