ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾನವನೇ ಶ್ರೇಷ್ಠ ಎಂಬುದೊಂದೇ ಪ್ರಾಣಿವಾಣಿ! -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೩

(೨೨೧) ಸಾಂಸ್ಕೃತ್ಕ ಸಂವಾದವೆಂಬುದು ’ಸರಳ’ತೆಯನ್ನು ತೊಂದರೆಗೀಡುಮಾಡುತ್ತದೆ. ಆದರೆ ಸರಳತೆಯು ಆ ಸಾಂಸ್ಕೃತಿಕ ಸಂವಾದವನ್ನೇ ನಾಶಮಾಡಿಬಿಡುತ್ತದೆ!


(೨೨೨) ದುಃಖಿತನಾಗುವುದು ವಿಧಿನಿಯಮವಾಗಿತ್ತು ಎಂದು ಅರಿಯದೆ ವಿಧಿಯನ್ನೇ ತರ್ಕದ ತೆಕ್ಕೆಗೊಪ್ಪಿಸಿದಾಗ ಆಗುವುದೇ ನಿಜವಾದ ದುಃಖ!


(೨೨೩) ಸಾರ್ವತ್ರಿಕ ಆಗುಹೋಗುಗಳಲ್ಲಿ ತೊಡಗಿಸಿಕೊಂಡವರ ವೈಯಕ್ತಿಕ ಆಗುಹೋಗುಗಳಲ್ಲಿ ತಲೆ ತೂರಿಸುವುದೂ ಒಂದು ತೆರನಾದ ಸಾರ್ವತ್ರಿಕ ವ್ಯವಹಾರವೇ.


(೨೨೪) ಮಾನವ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠ ಎಂದು ಸಾಬೀತು ಪಡಿಸುವ ಯಾವುದಾದರೂ ಒಂದು ಉದಾಹರಣೆ ನೀಡಿ, ನಾನು ಅದಕ್ಕೆ ಪ್ರತಿಯಾಗಿ ಹಲವು ಉದಾಹರಣೆಗಳನ್ನು ನೀಡುವೆ. ಏಕೆಂದರೆ ನಾವೆಲ್ಲರೂ ಮಾನವರೇ ಅಲ್ಲವೆ!

ಅಯೋಧ್ಯೆ ತೀರ‍್ಪು

 


ನ್ಯಾಯಾಂಗ ತನ್ನ ನಂಬಿಕೆ ಉಳಿಸಿಕೊಂಡಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಇದು ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ಹೋಗಲಾಡಿಸಿ, ಹೃದಯವಂತಿಕೆನ್ನೂ ಇದು ಕಾಣಿಸಿರುವುದು ಸ್ವಾಗತಾರ್ಹ.


       ಈ ಎಲ್ಲಾ ಸದ್ಗುಣಗಳೂ ಎಕ್ಕುಟ್ಟಿ ಹೋಗಿರುವುದು ನಮ್ಮ ರಾಜಕಾರಣ ವ್ಯವಸ್ಥೆಯಲ್ಲಿ. ರಾಜಕಾರಣಿಗಳು ಉಚ್ಚರಿಸುವ ರಾಮ, ಬಾಬರ್, ಮಂದಿರ, ಮಸೀದಿ, ಸ್ವಾಮಿಗಳು, ಸಿದ್ಧಾಂತ ಇತ್ಯಾದಿಗಳೆಲ್ಲಾ ಬರೀ ಬೊಗಳೆ. ಇದು ಓಟ್‌ ಬ್ಯಾಂಕ್ ಸೃಷ್ಟಿಸಿಕೊಳ್ಳುವ ನಯವಂಚನೆ. ಫಲಾನುಭವಿಗಳಮೇಲೆ ಹೊಟ್ಟೆ ಉರಿದುಕೊಳ್ಳುವುದು ಬೇಡ. ರಾಜಕಾರಣದ ಕೃತಕ ಒಲೈಕೆಯನ್ನು ನೇರವಾಗಿ ಹೀಗಳೆಯುವುದು ನಮ್ಮ ವಿವೇಕವಾಗುತ್ತದೆ.

ಮೌನ ಮಾತಾದಾಗ :-(

ನಿನಗೆ ರಿಜೆಕ್ಷನ್ ಬಗ್ಗೆ ಗೊತ್ತಿದೆಯಾ?  ಇಲ್ಲದಿದ್ದರೆ ಒಮ್ಮೆ ಓದಿನೋಡು. ಒಂದು ಸಲ ವ್ಯಕ್ತಿ, ಯಾರಿಂದಾದ್ರೂ ಅವಳ/ನ ತಪ್ಪಿಲ್ಲದೆ, ರಿಜೆಕ್ಟ್ ಆಗಿಬಿಟ್ಟರೆ especially emotionally rejection  ಅನುಭವಿಸಿಬಿಟ್ಟರೆ, ಅವರಿಗೆ ಅದರಿಂದ ಮೇಲೇಳಲು ಸಾಧ್ಯವಿಲ್ಲವೇ ಇಲ್ಲ.  ಅದು ನನಗೆ ನನ್ನ ಅತಿ ಸಣ್ಣ ವಯಸ್ಸಿನಿಂದ ಆಗಿದೆ.  ಜೀವ ಭಯಕ್ಕಿಂತ ಹೆಚ್ಚಾಗಿ ಪ್ರತಿ ಕ್ಷಣವೂ ನಾನು ರಿಜೆಕ್ಷನ್ ಪದಕ್ಕೆ ಹೆದರುತ್ತೇನೆ.  ಹಾಗಾಗಿಯೇ ನಾನು ಅಷ್ಟು ಸರಿ / ತಪ್ಪು ಅಂತಾ ಯೋಚಿಸುವುದು.  ನಾನು ರಿಜೆಕ್ಟ್ ಆಗಿಬಿಡುವುದರಿಂದ / ಆಗಿರುವುದರಿಂದ ನನಗೆ ನಾನು ಯಾವಾಗಲೂ ತಪ್ಪಿತಸ್ಥ ಸ್ಥಾನಕ್ಕೆ ಬಂದುಬಿಡುತ್ತೇನೆ. ಅಂದರೆ ನಾನೇನೋ ತಪ್ಪು ಮಾಡಿರಬೇಕು. ಅದಕ್ಕೆ ಇವರು ನನ್ನಿಂದ ದೂರ ಹೋಗಿಬಿಡ್ತಾರೆ ಅಂತಾ ಅನ್ನಿಸಿಬಿಡುತ್ತೆ.

ಅಯೋಧ್ಯ ತೀರ್ಪು ಹೊರಬಿದ್ದಿದೆ...

ಅಲಹಾಬಾದ್ ಉಚ್ಛ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ...


The ownership of the disputed site is to be divided into three parts: the site of the Ramlala idol to Lord Ram, Nirmohi Akhara gets Sita Rasoi and Ram Chabutara, Sunni Wakf Board gets the rest.
Status quo to be maintained for three months.


ಹಿಂದೂ ಮುಸ್ಲಿಂ ಒಟ್ಟಿಗಿ ಇದ್ದೇವೆ, ಒಟ್ಟಾಗಿ ಬಾಳುತ್ತೇವೆ ಎಂದು ಸಾರುವ ತೀರ್ಪು.... ನೀವೆನಂತೀರಾ??

ಶ್ರೀರಾಮಜನ್ಮಭೂಮಿಯಲ್ಲಿಯೇ ಶ್ರೀರಾಮನ ಜನ್ಮವಾಗಿದೆ

ಅಲಹಾಬಾದ್ ಹೈಕೋರ್ಟ್ ತೀರ್ಪು:ಹಿಂದುಗಳ ನಂಬಿಕೆಯಂತೆ ಶ್ರೀರಾಮಜನ್ಮಭೂಮಿಯಲ್ಲಿಯೇ ಶ್ರೀರಾಮನ ಜನ್ಮವಾಗಿದೆ.ಇದು ಬಹುಮತದ ನಿರ್ಣಯ. ಉಳಿದಂತೆ ಉಳಿದ ಜಾಗವು ಮೂರು ಭಾಗಗಳಾಗಿ ವಿಂಗಡಿಸಬೇಕೆನ್ನುವುದು ಅಭಿಮತ. ಮೂರನೇ ಒಂದು ಭಾಗ ಶ್ರೀರಾಮಜನ್ಮ ಭೂಮಿಗೆ,
ಮೂರನೇ ಒಂದು ಭಾಗನಿರ್ಮೋಹಿಯಾ ಅಖಾಡಕ್ಕೆ  ಹಾಗೂ ಮೂರನೇ ಒಂದು ಭಾಗಸುನ್ನಿ ಕೇಂದ್ರ ಸಮಿತಿಗೆ. ಇದು ಒಟ್ಟು ನಿರ್ಣಯದ ಸಾರ.

ಅಯೋದ್ಯ ಒಂದು ವಿವಾದವಲ್ಲ

ಅಯೋದ್ಯ ಒಂದು ವಿವಾದವಲ್ಲ


ಬೆಂಕಿ ಅದು ಕಾಡಿನಲ್ಲಿದ್ದರೆ ಕಾಡ್ಗಿಚ್ಚು ಅಡಿಗೆಮನೆಯಲ್ಲಿದ್ದರೆ ಒಲೆ ಹೋಮಕುಂಡದಲ್ಲಿದ್ದರೆ ಅಗ್ನಿ ದೇವರ ಮನೆಯಲ್ಲಿದ್ದರೆ ನಂದಾ ದೀಪ . ಆದರೆ ವಸ್ತುವೊಂದೇ ಅದು ಬೆಂಕಿ.


ನೀರು ಅದು ಹರಿಯುತ್ತಿದ್ದರೆ ನದಿ ನಿಂತಿದ್ದರೆ ಕೆರೆ ಕುಂಟೆ ದೊಡ್ಡದಾಗಿದ್ದರೆ ಸಮುದ್ರ ದೇವಾಲಯದಲ್ಲಿದ್ದರೆ ತೀರ್ಥ ಅಡಿಗೆ ಮನೆಯಲ್ಲಿದ್ದರೆ ಶುದ್ದ ಪಾಯಿಖಾನೆಯಲ್ಲಿದ್ದರೆ ನೀರಿನ ಚೊಂಬು (ಕ್ಷಮಿಸಿ) ದೇವರಮನೆಗೆ ಬಂದರೆ ಅದೇ ಕಳಶ ಆದರೆ ವಸ್ತುವೊಂದೇ ಅದು ನೀರು, ಜಲ.


ಮನುಷ್ಯ ಹುಟ್ಟುವಾಗ ಕೈ ಕಾಲು ದೇಹ ಎಲ್ಲ ಸಮಾನವೇ ಹುಟ್ಟಿದ ನಂತರ ಅವನೆ ಹಿಂದು ಮುಸಲ್ಮಾನ ಯಹುದಿ ಎನೆಲ್ಲವು ಆದರೆ ಪ್ರಕೃತಿಗೆ ಅವನು ಕೇವಲ ಮನುಷ್ಯ.