ಅಯೋದ್ಯ ಒಂದು ವಿವಾದವಲ್ಲ

ಅಯೋದ್ಯ ಒಂದು ವಿವಾದವಲ್ಲ

ಅಯೋದ್ಯ ಒಂದು ವಿವಾದವಲ್ಲ


ಬೆಂಕಿ ಅದು ಕಾಡಿನಲ್ಲಿದ್ದರೆ ಕಾಡ್ಗಿಚ್ಚು ಅಡಿಗೆಮನೆಯಲ್ಲಿದ್ದರೆ ಒಲೆ ಹೋಮಕುಂಡದಲ್ಲಿದ್ದರೆ ಅಗ್ನಿ ದೇವರ ಮನೆಯಲ್ಲಿದ್ದರೆ ನಂದಾ ದೀಪ . ಆದರೆ ವಸ್ತುವೊಂದೇ ಅದು ಬೆಂಕಿ.


ನೀರು ಅದು ಹರಿಯುತ್ತಿದ್ದರೆ ನದಿ ನಿಂತಿದ್ದರೆ ಕೆರೆ ಕುಂಟೆ ದೊಡ್ಡದಾಗಿದ್ದರೆ ಸಮುದ್ರ ದೇವಾಲಯದಲ್ಲಿದ್ದರೆ ತೀರ್ಥ ಅಡಿಗೆ ಮನೆಯಲ್ಲಿದ್ದರೆ ಶುದ್ದ ಪಾಯಿಖಾನೆಯಲ್ಲಿದ್ದರೆ ನೀರಿನ ಚೊಂಬು (ಕ್ಷಮಿಸಿ) ದೇವರಮನೆಗೆ ಬಂದರೆ ಅದೇ ಕಳಶ ಆದರೆ ವಸ್ತುವೊಂದೇ ಅದು ನೀರು, ಜಲ.


ಮನುಷ್ಯ ಹುಟ್ಟುವಾಗ ಕೈ ಕಾಲು ದೇಹ ಎಲ್ಲ ಸಮಾನವೇ ಹುಟ್ಟಿದ ನಂತರ ಅವನೆ ಹಿಂದು ಮುಸಲ್ಮಾನ ಯಹುದಿ ಎನೆಲ್ಲವು ಆದರೆ ಪ್ರಕೃತಿಗೆ ಅವನು ಕೇವಲ ಮನುಷ್ಯ.


ಈ ತತ್ವ ಎಲ್ಲರಿಗೂ ಗೊತ್ತು ಯಾವುದು ಹೊಸದಲ್ಲ ಆದರೆ ನೀವು ಅದನ್ನು ಅರ್ಥಮಾಡಿಕೊಳ್ಳಲು ಬಿಡಲ್ಲ ನಮ್ಮ ನಿಮ್ಮ ರಾಜಕೀಯ ನಾಯಕರು ಧಾರ್ಮಿಕ ನಾಯಕರು ಗುರುಗಳು ಪುಡಾರಿಗಳು.


ಸಾವಿರಾರು ವರ್ಷದ ಇತಿಹಾಸದಲ್ಲಿ ಈ ರಾಜಕೀಯ ಹಾಗು ಧಾರ್ಮಿಕ ನಾಯಕರುಗಳು ಮುಖಂಡರು ರಾಜಮಹಾರಾಜರುಗಳು ಸರ್ಕಾರಗಳು ದ್ವೇಷದ ಹೊಲಸು ಬೆಳೆ(ಕಳೆ)ಗಳನ್ನು ಮನುಷ್ಯನ್ನ ಮನಸ್ಸಿನಲ್ಲಿ ಬೆಳಸುತ್ತ ಹೋದಂತೆ ಅದರ ಬೇರು  ಅವನ ಮನಸ್ಸು ಸುಪ್ತಮನಸ್ಸನ್ನು ದಾಟುತ್ತ ಎದೆಯಾಳಕ್ಕೆ ಇಳಿದು ಬಿಟ್ಟಿದೆ. ಆ ಪಾಪದ ಫಲವೇ ಭಾರತದ ಸಾವಿರಾರು ದೇವಾಲಯಗಳ ನಾಶ , ಅಮೇರಿಕ ಅವಳಿ ಗೋಪುರಗಳ ನಿರ್ನಾಮ , ಮುಂಬಯಿಮೇಲಿನ ದಾಳಿಗಳಂತ ಸಂಘರ್ಷಗಳು . ಅವುಗಳ ಸಾಲಿನಲ್ಲಿಯೇ ನಿಲ್ಲುವುದು ಈ 'ಅಯೋದ್ಯ ವಿವಾದ' . ಅಯೋದ್ಯ ವಿವಾದ ಖಂಡಿತ ವಿವಾದವಲ್ಲ ಅದಕ್ಕೆ ಪರಿಹಾರಗಳು ಒಂದಲ್ಲ ಸಾವಿರ ಸಾವಿರವಿದೆ ಆದರೆ ಅದನ್ನು ಒಪ್ಪಬೇಕು ಅಷ್ಟೆ. ಅಯೋದ್ಯ ವಿವಾದ ಒಂದು ಎಕರೆ ಜಮೀನಿನ ವಿವಾದವಲ್ಲ 'ಒಂದು ಸೂಜಿಯ ಮೊನೆಯಷ್ಟು ಜಾಗವನ್ನು ಕೊಡೆನೆಂದ ' ಕೌರವನ ಮನಸ್ಸು. ಇದೊಂದು ಕತ್ತಲು ಮನಸ್ಸುಗಳ ಹೋರಾಟ. ಆದರೆ ಬೆಳಕಿನ ದರ್ಶನ ಆಗುವುದು ಸದಾ ಕತ್ತಲೆಯಲ್ಲಿಯೆ. ಅಂತಾ ಬೆಳಕಿನ ನಿರೀಕ್ಷೆಯಲ್ಲಿದ್ದಾರೆ ನಮ್ಮ ಭವ್ಯ ಭಾರತದ ನೂರು ಕೋಟಿಯನ್ನು ಮೀರಿದ ಜನ


 


 


 


 

Rating
No votes yet