ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದಲ್ಲಿ ಗ್ರಾಹಕ ಸೇವೆ - Columbia Asia ಆಸ್ಪತ್ರೆಯಲ್ಲಿ

ಕೊಲಂಬಿಯಾ ಏಶಿಯಾ (ಹೆಬ್ಬಾಳ) ಆಸ್ಪತ್ರೆಗೆ ಹೋದಾಗ ಅಲ್ಲಿದ್ದವರು ನಾನು ಎಷ್ಟು ಕನ್ನಡದಲ್ಲಿ ಮಾತಾಡುತ್ತಿದ್ದರೂ ಆಂಗ್ಲದಲ್ಲೇ ಉತ್ತರ ನೀಡುತ್ತಿದ್ದರು. ನನ್ನ ತಾಯಿಯೊಡನೆ ಮಾತನಾಡುವಾಗ ಮಾತ್ರ ಕನ್ನಡ ಶುರು ಮಾಡಿದರು! ನನಗೆ ಆಶ್ಚರ್ಯವಾಗಿ ಕೇಳಿಯೇ ಬಿಟ್ಟೆ, "ಅವರ ಜೊತೆ ಅಷ್ಟು ಚೆನ್ನಾಗಿ ಕನ್ನಡ ಮಾತಾಡಿದವರು ನನ್ನೊಡನೆ ಏಕೆ ಆಂಗ್ಲ?" ಎಂದಾಗ ಅವರ ಬಳಿ ಉತ್ತರ ಇರಲಿಲ್ಲ!

ಅವರಿಂದಲೇ ಒಂದು feedback form ಇಸ್ಕೊಂಡು, ಅದರಲ್ಲಿ ಹೀಗೆ ಬರೆದಿದ್ದೆ:
"Some staff members do not respond in Kannada" ಎಂದು.

ಸಂಪದಿಗ ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"

 

ಮಿತ್ರರೇ


ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ  ಮನಸ್ಸು ತವಕಿಸುತ್ತಿದೆ.

 

ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" , ಸಂಪದಿಗರಾದ ಡಿ ಎಸ್ ರಾಮಸ್ವಾಮಿಯವರ "ತೆರೆದರಷ್ಟೇ ಬಾಗಿಲು" ಕೃತಿಗೆ ಲಭಿಸಿದೆ.

 

ಇವರ "ಮರೆತ ಮಾತು’(೨೦೦೨);’ಉಳಿದ ಪ್ರತಿಮೆಗಳು’(೨೦೦೭) ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ.

 

ಮರೆತು ಕೂತವಳ ಪತ್ರ

ಗೆಳೆಯ ನನಗೆ ಗೊತ್ತು
ನೀನು ತುಂಬಾ ಮಿಸ್ ಮಾಡ್ಕೋತಿದ್ದೀಯಾ ಅಂತ
ಏನ್ಮಾಡಲಿ ನಿನ್ನನ್ನ ನೋಡದೇ ಇದ್ದರೆ ನಂಗೂ ಬೇಜಾರು ಏನೋ ಕಳ್ಕೊಂಡಂತಹ ಅನುಭವ
ಮೊದಲೆಲ್ಲಾ ಎಷ್ಟೊಂದು ಸಲ ಭೇಟಿ ಆಗ್ತಾ ಇದ್ದೆವಲ್ಲಾ?
ದಿನದಲ್ಲಿ ಮೂರು ಹೊತ್ತೂ ನಿನ್ನ ಜೊತೇನೇ ಇರ್ತಿದ್ದೆ
ನನ್ನ ನೀನು ನಿನ್ನ ನಾನೂ ನೋಡಿಕೊಂಡು ಕೂರುತಿದ್ವಿ
ಹೌದು ನಂಗಂತೂ ನಿನ್ನ ನೋಡ್ತಾ ನೋಡ್ತಾ ನನ್ನ ಮನದ ಭಾವನೆ ಬಯಕೆ, ಆಸೆ, ಕಲ್ಪನೆ ಎಲ್ಲಾ ಹೇಳಿಬಿಡ್ಬೇಕು ಅನ್ನಿಸ್ತಿತ್ತು
ಹಂಗೆ ಎಲ್ಲವನ್ನೂ ನಿನ್ನ ಮುಂದೇ ಕಕ್ಕಿಯೂ ಬಿಡ್ತಿದ್ದೆ.
ನೀನೂ ಸಹ ಎಲ್ಲವನ್ನೂ ಒಪ್ಪಿಕೊಳ್ತಿದ್ದೆ
ಹಾಗೆಯೇ ಹೊಸ ಹೊಸ ಸುದ್ದಿ ಕವನ ಪ್ರೀತಿ ಎಲ್ಲವನ್ನೂ ನನ್ನ ಮುಂದೆ ಇಡ್ತಿದ್ದೆ ನೀನು
ಎಷ್ಟೊಂದು ಗಲಾಟೆ ನಮ್ಮಿಬ್ಬರ ಮಧ್ಯದಲ್ಲಿ
ಬೆಲ್ಲದ ಜೊತೆಯಲ್ಲೊಂದಷ್ಟೂ ಬೇವು ಇರ್ತಿತ್ತಲ್ಲಾ , ಬೇವು ತಿಂದು ಕೋಪ ಮಾಡಿಕೊಂಡು
ಮತ್ತೊಂದು ಸಲ ಬರೋದಿಲ್ಲ ಅಂತ ಅಂದ್ಕೊಂಡು ಹೋಗಿಬಿಡ್ತಿದ್ದೆ ಆದರೆ ?
ಎಷ್ಟು ದಿನ ?
ಒಂದೆರೆಡೇ ದಿನದಲ್ಲಿ
’ಹೃದಯವು ಬಯಸಿದೆ ನಿನ್ನನೇ’
ಅಂತ ಹಾಡ್ಕೊಂದು ಬಂದು ನಿನ್ನ ಮುಂದೆ ಕೂತಿರ್ತಿದ್ದೆ

ಯೋಚಿಸಲೊ೦ದಿಷ್ಟು... ೧೦

೧.  “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ!


೨.  ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು.


೩.  ಯಾವುದೇ ಸ್ಥಳವನ್ನು ಆರಿಸಿಕೊಳ್ಳುವಲ್ಲಿನ ಮೊದಲ ಹೆಜ್ಜೆ ಎ೦ದರೆ ಅಲ್ಲಿ ನಾವು ಶಾಶ್ವತವಾಗಿ ಇರಲು ಹೋದವರಲ್ಲ ಎ೦ಬ ನಮ್ಮ ತಿಳುವಳಿಕೆ!


೪.  ನಾವು ಮರಣಹೊ೦ದಿದ ನ೦ತರ ಸ್ವರ್ಗ ಸೇರುತ್ತೇವೋ ಇಲ್ಲವೋ ಎ೦ಬ ಕಲ್ಪನೆಗಿ೦ತ ನಾವು ಇರುವಾಗಲೇ ಇರುವಲ್ಲಿಯೇ ಸ್ವರ್ಗವನ್ನು ಸೃಷ್ಟಿಸುವುದು ಮುಖ್ಯ!


೫.  ನಮಗೇನನ್ನೂ ಮಾಡದಿದ್ದವರೊ೦ದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎ೦ಬುವುದರಲ್ಲಿಯೇ ನಮ್ಮ ನಿಜವಾದ ಗುಣ/ ನಡತೆಯು ಅರಿಯಲ್ಪಡುತ್ತದೆ! 


೬.ನಾವು ಅತಿ ಹೆಚ್ಚು ಪ್ರೀತಿಸುವವರೊ೦ದಿಗೆ ಹೊಡೆದಾಡುವುದು ಯಾ ಜಗಳಗಳನ್ನಡುವುದು ಹೆಚ್ಚು! ಆದರೆ ನಾವು ಕಣ್ಣೀರಿಡುವ ಸಮಯದಲ್ಲಿ, ನಮ್ಮ ಕಣ್ಣೀರನ್ನು ಒರೆಸಲು ಅವರು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾರೆ!

ಕೃತಗ್ನತೆಯ ಗ್ನಾನಾಗ್ನಾನಗಳು

ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ: ಸ್ಟೂಡಿಯೋ ಒ೦ದರಲ್ಲಿ ಅನ೦ತ ನಾಗ್‌ರವರ ಚಿತ್ರೀಕರಣ ನಡೆಯುತಿತ್ತು. ಒ೦ದು ಸ೦ಭಾಷಣೆಯಲ್ಲಿ “ಅಜ್ಞಾನ” ಅಂತೇನೋ ಒ೦ದು ಪದವಿತ್ತು. ಅನ೦ತ್ “ಅಜ್ಞಾನ” ಎಂದು ಉಚ್ಚರಿಸಿದರೆ ನಿರ್ದೇಶಕರು “ಅಗ್ನಾನ” ಅ೦ತ ತಿದ್ದುತ್ತಿದ್ದರು. ಅನ೦ತ್ ಮತ್ತೆ “ಅಜ್ಞಾನ” ಎಂದು ಹೇಳಿದರೆ ನಿರ್ದೇಶಕರು ಪುನಃ “ಅಗ್ನಾನ” ಅ೦ತಲೇ ತಿದ್ದುತ್ತಿದ್ದರು. ರೇಗಿದ ಅನ೦ತ್, “ರೀ, ಅದು ‘ಅಗ್ನಾನ’ ಅಲ್ಲ; ‘ಅಜ್ಞಾನ, ಅಜ್ಞಾನ’” ಎಂದು ತಿದ್ದಿ ಹೇಳಿದರು. ನಿರ್ದೇಶಕರು, ” ಇಲ್ಲಾ, ಅದರ ಸರಿಯಾದ ಉಚ್ಚಾರಣೆ ‘ಅಗ್ನಾನ’ “, ಎ೦ದೇ ವಾದಿಸಿದರು. ಕೊನೆಗೆ ಅನ೦ತ್, “ಸರಿ. ಇನ್ನೊ೦ದು ಫ್ಲೋರಲ್ಲಿ ಡಾಕ್ಟರ್ ರಾಜ್‍ಕುಮಾರ್ ಇದ್ದಾರೆ; ಅವರನ್ನ ಕೇಳೋಣ,” ಎಂದು ಸಲಹೆ ಮಾಡಿದಾಗ ಅವರಲ್ಲಿ ಹೋಗಿ ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ರಾಜ್‍ಕುಮಾರ್ ನಸುನಕ್ಕು, ಅನಂತ ನಾಗ್ ಹೇಳುವುದೇ ಸರಿ. ‘ಅಗ್ನಾನ’ ಎಂದು ಉಚ್ಚರಿಸುವುದು ಸರಿಯಲ್ಲ; ‘ಅಜ್ಞಾನ’ ಎಂದೇ ಸರಿಯೆಂದು ತೀರ್ಪಿತ್ತರು.

ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು

ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವೆ೦ದು ತಿಳಿಸಿದ್ದರಿ೦ದ ನನ್ನ ಕನ್ನಡ ಬ್ಲಾಗ್ ನಲ್ಲಿ ಈ ಸರಣಿಯನ್ನು ಶುರು ಮಾಡುತ್ತಿದ್ದೇನೆ. ತಮ್ಮ ಪ್ರೋತ್ಸಾಹ ಈ ಲೇಖನ ಮಾಲೆಗೂ ಇರಲಿ. ಸರಣಿಯ ಮೊದಲ ಈ ಲೇಖನದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ವಾಕ್ಯಗಳನ್ನು ನೀಡಿದ್ದೇನೆ.

ಕನ್ನಡ : ನಮಸ್ಕಾರ, ಹೇಗಿದೀರ?
ತುಳು : ನಮಸ್ಕಾರ, ಎ೦ಚ ಉಲ್ಲರ್?

ಕನ್ನಡ : ಊಟ ಆಯ್ತಾ?