ಸಂಪದಿಗ ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"
ಮಿತ್ರರೇ
ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ ಮನಸ್ಸು ತವಕಿಸುತ್ತಿದೆ.
ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" , ಸಂಪದಿಗರಾದ ಡಿ ಎಸ್ ರಾಮಸ್ವಾಮಿಯವರ "ತೆರೆದರಷ್ಟೇ ಬಾಗಿಲು" ಕೃತಿಗೆ ಲಭಿಸಿದೆ.
ಇವರ "ಮರೆತ ಮಾತು’(೨೦೦೨);’ಉಳಿದ ಪ್ರತಿಮೆಗಳು’(೨೦೦೭) ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ.
ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಮತ್ತು ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿಗಳು ಲಭಿಸಿವೆ.
ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ ೨೦೦೪,೨೦೦೫ ಮತ್ತು ೨೦೦೮ರ ಬಹುಮಾನ. ಆಕಾಶವಾಣಿ ಹಾಸನಕೇಂದ್ರದಿಂದ ಇವರ ೧೦೦ಕ್ಕೂ ಹೆಚ್ಚು ಚಿಂತನ ಬರಹಗಳು ಪ್ರಸಾರಗೊಂಡಿವೆ.
ಭಾರತೀಯ ಜೀವ ವಿಮಾನಿಗಮದ ಅರಸೀಕೆರೆ ಶಾಖೆಯಲ್ಲಿ ಉದ್ಯೋಗದಲ್ಲಿರುವ ಶ್ರೀಯುತ ರಾಮಸ್ವಾಮಿಯವರು ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗವಾಗಿ ಅಧಿಕಾರ ಸ್ವೀಕರಿಸಿದ್ದಾರೆ .
ನಮ್ಮ ನಿಮ್ಮೆಲ್ಲರ ಮೆಚ್ಚುಗೆಗೆ ಪ್ರಶಂಶೆಗೆ ಪಾತ್ರರಾಗಿರುವ ಇವರ ಲೇಖನಿಯಿಂದ ಇನ್ನೂ ಇಂತಹ ಹಲವಾರು ಕೃತಿಗಳು ಉದ್ಭವಿಸಲಿ ಮತ್ತು ಇನ್ನೂ ಇಂತಹ ಹತ್ತು ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಲಿ
ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ.