ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೃಷ್ಣಮಣಿ

ಅಧ್ಯಾಪಕರು ವಿದ್ಯಾರ್ಥಿಗಳನ್ನುದ್ದೇಶಿಸಿ.

ಮಕ್ಕಳೇ..., ಈ ಜೀವನ ಎಂಬುದು ಅತೀ ಅಮೂಲ್ಯವಾದುದು. ಅದನ್ನು ನಾವು ಕಣ್ಣಿನ ಕೃಷ್ಣಮಣಿಯಂತೆ ಕಾಪಾಡಬೇಕು.

ಇದರೆಡೆಯಲ್ಲಿ ಸಂಶಯಭರಿತನಾದ ಓರ್ವ ವಿದ್ಯಾರ್ಥಿ ಎಂದು ನಿಂತು ಕೇಳಿದ.

ಕೃಷ್ಣಮಣಿಯೋ? ಅಲ್ಲಾಹುವೇ...ಅದಕ್ಕೂ ಜಾತಿಯಿದೆಯಾ? ಅದ್ಯಾಕೆ ಸರ್ ಮಹಮ್ಮದ್ ಮಣಿ ಅಂತಾ ಕರೆಯಬಾರದು?

ಹೀಗೂ ಉ೦ಟೆ! - -BSNL ಮೊಡೆಮ್ ಮತ್ತು ಮೇಡಮ್!

ಒಮ್ಮೆ ನಾನು ನನ್ನ ಸ್ನೇಹಿತ ತಪ್ಪಾಗಿ ಬ೦ದಿದ್ದ ಬಿಲ್ಲನ್ನು ಸರಿ ಪಡಿಸಲು ಬಿ ಎಸ್ ಎನ್ ಎಲ್ ಕಛೇರಿಗೆ ಹೋದಾಗಾ...

ನಾವು : ಮೇಡಮ್ ಬಿಲ್ಲ್ ಸರಿಯಿಲ್ಲ, ಸ್ವಲ್ಪ ನೋಡಿ
ಮೇಡಮ್ : (ಬಿಲ್ಲನ್ನು ನೋಡಿ) ಎಲ್ಲ ಸರಿಯಾಗೆ ಇದ್ಯಲ್ಲ?
ನಾವು: ಇಲ್ಲಿ ನೋಡಿ 15 sec ನಲ್ಲಿ 3GB download ಆಗಿದೆ, ಇದು ಹೇಗೆ ಸಾಧ್ಯ?
ಮೇಡಮ್ : ಯಾಕೆ ಸಾದ್ಯ ಇಲ್ಲ? ನಮ್ಮ ಸೇವೆ broadband ನದ್ದು..

ಕೊರಗುವುದೇಕೆ?

ಸಖೀ,
ವಾರ ಪತ್ರಿಕೆಗಳಲಿ
ಬರುವ, ಯಾರ್ಯಾರೋ
ಬರೆದ ಕವಿತೆಗಳ
ಹನಿಗವನಗಳ ಓದಿ
ಅಥೈ೯ಸಿಕೊಂಡು
ಸಂತಸ ಪಟ್ಟು
ಆ ಕವಿಗಳ
ಕಲ್ಪನಾ ಜಾಣ್ಮೆಯ
ಕೊಂಡಾಡುವ ನನ್ನಾಕೆ
ನನ್ನ ಕಾಲ್ಪನಿಕ
ಸಖಿಯಾದ ನಿನ್ನ
ಕುರಿತು ನಾ ಬರೆದ
ಈ ಕವಿತೆಗಳ ಓದಿ
ಕೆಲವೊಮ್ಮೆ
ಕೆರಳಿ ಕೆಂಡವಾಗುವುದೇಕೆ
ಮತ್ತೆ ಒಮ್ಮೊಮ್ಮೆ
ಒಳಗೊಳಗೇ ಮರುಗಿ
ಕೊರಗುವುದೇಕೆ?
*-*-*-*-*-*-*

ಸ್ವಲ್ಪಾದ್ರೂ ಸೀರಿಯಸ್ ಆಗ್ರಿ- 1

ದೇವರ ಸಂಕಟ

ಅರವತ್ತು ವರ್ಷ ವಯಸ್ಸಾದ ಅಜ್ಜಿಯೊಬ್ಬಳು ರಸ್ತೆ ದಾಟುತ್ತಿರುವಾಗ ಆಕಾಶದಿಂದ ಧ್ವನಿಯೊಂದು ಮೊಳಗಿದಂತೆ ಕೇಳಿತು: “ನೀನು ನೂರು ವರ್ಷ ಬದುಕುತ್ತೀಯ.” ಅಜ್ಜಿ ತಲೆಯೆತ್ತಿ ನೋಡಿದಳು ಯಾರೂ ಕಾಣಲಿಲ್ಲ. ಎಲ್ಲ ತನ್ನ ಭ್ರಮೆ ಅಂದುಕೊಂಡು ಆಕೆ ರಸ್ತೆ ದಾಟಿದಳು.

line of control

" ಓಹ್, ಸಮಯವೇ ಸಿಗುವುದಿಲ್ಲ ವ್ಯಾಯಾಮಕ್ಕೆ"
"ಒಮ್ಮೆ ವ್ಯಾಯಾಮ ಶುರು ಮಾಡಿದ್ರೆ ಬಿಡಲೇ ಬಾರದಂತೆ, ಇಲ್ದಿದ್ರೆ muscles ಲೂಸ್ ಆಗ್ಬಿಡತ್ತಂತೆ"

"ನನಗೆ ಡಿಗ್ರಿ ಮಾಡಲು ತುಂಬಾ ಇಷ್ಟ, ಆದರೇನು ಮಾಡೋದು, ನನಗೀಗ ೩೪ ವಯಸ್ಸು, ಡಿಗ್ರೀ ಮುಗಿಸುವಷ್ಟರಲ್ಲಿ ೩೭ ಆಗ್ಬಿಡತ್ತೆ"

"ಏನಾದರೂ ಹೊಸ ಹವ್ಯಾಸ ಅಥವಾ ಕೋರ್ಸ್ ಮಾಡೋಣ ಅಂದ್ರೆ ನೆರೆಯವರು, ಗೆಳಯ/ತಿ ಯರು ತಮಾಷೆ ಮಾಡಬಹುದು ಅಂತ ಭಯ"

" ಈ ವಯಸ್ನಲ್ಲಿ ಓದಾ? ಒಳ್ಳೆ ತಮಾಷೆ"

ಮೇಲೆ ಹೇಳಿದ ಸಾಲುಗಳೇ line of control. ಇವು ನಿಮ್ಮಲ್ಲಿರುವ ಅಭಿಲಾಷೆಯನ್ನು, ಆಸಕ್ತಿಯನ್ನು, ತುಡಿತವನ್ನು ಹೊಸಕಿ ಹಾಕಲು ಉಪಯೋಗಿಸಲ್ಪಡುವ ಹಲವು ಮಾತುಗಳಲ್ಲಿ ಕೆಲವು. ಮೇಲೆ ಹೇಳಿದ ಸಾಲುಗಳೇ ನಿಯಂತ್ರಣ ರೇಖೆಯನ್ನು ದಾಟಿ ಮುಂದೆ ಸಾಗಿ ಭವಿಷ್ಯವನ್ನು ರೂಪಿಸಲು, ಸ್ವಪ್ನವನ್ನು ಸಾಕಾರಗೊಳಿಸಲು, ಹೊಸ ತನ್ನತನವನ್ನು ಕಂಡುಕೊಳ್ಳಲು ನಿಮ್ಮನ್ನು ಅಡ್ಡಿ ಪಡಿಸುವಂಥವು.

ನನ್ನ ಪ್ರೀತಿಯ ಚಿತ್ರಾನ್ನ

ಪದಾರ್ಥಗಳು:
೧ ಲೋಟ ಅಕ್ಕಿಗೆ ೨ ಲೋಟ ನೀರನ್ನು ಕುಕ್ಕರಲ್ಲಿ ಹಾಕಿ ಒಲೆಯ ಮೇಲೆ ಬೇಯಲು ಇಡಿ.
ಎರಡು ವಿಷಲ್ ಗೆ ಇಳಿಸಿಬಿಡಿ
ಅನ್ನ ಬೇಯಲು ೧೦ ನಿಮಿಷಗಳ ಕಾಲಾವಕಾಶ ಬೇಕು
ಆ ಸಮಯದಲ್ಲಿ,
ಈರುಳ್ಳಿ - ೧ ,
ಮೆಣಸಿನ ಕಾಯಿ (ಕಾರವಿಲ್ಲದಿದ್ದಲ್ಲಿ) - ೪
ಬೆಳ್ಳುಳ್ಳಿ - ನಾಲ್ಕು ಎಸಳು
ಕಡಲೆ ಬೇಳೆ - ೧ ಚಮಚ
ಶೇಂಗಾ ಬೀಜ - ಒಂದು ಸಣ್ಣ ಹಿಡಿ
ಸಾಸಿವೆ - ೧/೨ ಚಮಚ
ಜೀರಿಗೆ - ೧/೨ ಚಮಚ

ನೀರ ಹನಿಗಳು

ಜಾರದೆ ಅಂಟಿದ ನೀರ ಹನಿಗಳು
ದೇಹವನು ಅಪ್ಪಿ ಮುದ್ದಿಸುತ್ತಿವೆ
*****
ಈಜಾಡಲಿ ಬಿಡು ನಿನ್ನ ಮಧು ಬಟ್ಟಲಲಿ
ನನ್ನ ವಿರಹ ತಪ್ತ ಮುಗ್ಧ ತುಟಿಗಳು
*****
ನಿನ್ನ ಸುತ್ತಲೂ ಕಣ್ಣೋಟದ ಬಲೆ ಬೀಸಿದ್ದೇನೆ
ಮೊಗದಲ್ಲಿನ ಜಿಂಕೆ ನಗುವನು ಸೆರೆ ಹಿಡಿಯಲು
*****
ಪದಗಳೇ ದಯವಿಟ್ಟು ಸ್ವಲ್ಪವೇ ಜಾಗ ಕೊಡಿ
ಕಳೆದು ಹೋಗುವ ಅವಳ ರೂಪವನು ತುಂಬಿಸಿಡುವೆ
*****

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ-3

ಸಾರ್ ಬೆಳಿಗ್ಗೆ ೫ ಗಂಟೆಗೆ ಹೊರಡೋಣ ಇಲ್ಲಾಂದ್ರೆ ಒಂದೆ ದಿನದಲ್ಲಿ ಹತ್ತಿ ಇಳಿಯುವುದು ಕಷ್ಟ ಆಗುತ್ತೆ ಎಂದ ಪಾಂಡೆ ಮಾತಿಗೆ ತಲೆದೂಗಿದೆವು. ಎತ್ತರಕ್ಕೆ ಹೋದಹಾಗೆ ಆಮ್ಲಜನಕದ ಕೊರತೆಯಾಗುತ್ತೆ ಎಂದು ಆಮ್ಲಜನಕದ ಸಿಲಿಂಡರ್ಗಳನ್ನು ಕೊಂಡೆವು. ಬೆಳಿಗ್ಗೆ ೫ ಗಂಟೆಗೆ ಪಾಂಡೆಯನ್ನು ಎಚ್ಚರಗೊಳಿಸಿ ವಾಹನದಲ್ಲಿ ಹೊರಟೆವು. ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು.

ಉಪ್ಪಿನಕಾಯಿ!!!

ಸಖೀ,
ಕೇಳಿದೆಯಾ ನೀ
ನನ್ನ ಕತೆ
ಕವಿತೆಗಳಿಗೆ
ಕಿವಿಗೊಟ್ಟು ಸೋತು
ನನ್ನಾಕೆ ನನಗೆ
ನೀಡಿದ ಈ ಕಿವಿಮಾತು:

ನಿಮ್ಮ ಈ
ಕತೆ - ಕವಿತೆಗಳೆಲ್ಲಾ
ಬರೇ ಪುಸ್ತಕದ
ಬದನೆಕಾಯಿ

ಇದಕೆ ನೀವು
ಮಾಡಿದ ಖರ್ಚಿನಲಿ
ತಂದಿದ್ದರೆ ನಾಲ್ಕು
ಕೇಜಿ ನಿಂಬೇಗಾಯಿ

ಹಾಕುತ್ತಿದ್ದೆ ನಾನು
ಮಳೆಗಾಲವಿಡೀ
ತಿನ್ನಲಾಗುವಷ್ಟು
ಉಪ್ಪಿನಕಾಯಿ!
*-*-*-*-*-*-*

ಬಾ ನಲ್ಲೆ

ನಲ್ಲೆ , ನಿನ್ನ ಆ ತಿಳಿನಗುವ ಕಂಡು
ಬಿದಿಗೆ ಚಂದ್ರಮನು ಕೂಡ
ಜೋಲು ಮೊಗವ ಹಾಕಿಕೊಂಡಿರುವನು ಇಂದು
ತನ್ನ ಆ ಹಾಲಬೆಳದಿಂಗಳಿಗಿಂತ ಈ
ನಿನ್ನ ನಗುವಿನ ಬೆಳಕೆ ಚಂದಿರುವುದೆಂದು

ನಲ್ಲೆ , ನಿನ್ನ ಆ ಪಾದ ಸ್ಪರ್ಶಕೆ
ನಾಚಿ ನೀರಾಗಿರುವ
ಭುವಿಯು ಕೂಡ ತಣ್ಣಗಾಗಿರುವುದಿಂದು

ನಲ್ಲೆ , ಗು ಗುಟ್ಟುವ ಗೂಬೆಯು
ಕೂಡ ಸುಮ್ಮನಾಗಿರುವುದು ಇಂದು
ನಿನ್ನ ಆ ಗೆಜ್ಜೆಯ ಸವಿ ಸದ್ದೇ