ನನ್ನ ಪ್ರೀತಿಯ ಚಿತ್ರಾನ್ನ

ನನ್ನ ಪ್ರೀತಿಯ ಚಿತ್ರಾನ್ನ

ಪದಾರ್ಥಗಳು:
೧ ಲೋಟ ಅಕ್ಕಿಗೆ ೨ ಲೋಟ ನೀರನ್ನು ಕುಕ್ಕರಲ್ಲಿ ಹಾಕಿ ಒಲೆಯ ಮೇಲೆ ಬೇಯಲು ಇಡಿ.
ಎರಡು ವಿಷಲ್ ಗೆ ಇಳಿಸಿಬಿಡಿ
ಅನ್ನ ಬೇಯಲು ೧೦ ನಿಮಿಷಗಳ ಕಾಲಾವಕಾಶ ಬೇಕು
ಆ ಸಮಯದಲ್ಲಿ,
ಈರುಳ್ಳಿ - ೧ ,
ಮೆಣಸಿನ ಕಾಯಿ (ಕಾರವಿಲ್ಲದಿದ್ದಲ್ಲಿ) - ೪
ಬೆಳ್ಳುಳ್ಳಿ - ನಾಲ್ಕು ಎಸಳು
ಕಡಲೆ ಬೇಳೆ - ೧ ಚಮಚ
ಶೇಂಗಾ ಬೀಜ - ಒಂದು ಸಣ್ಣ ಹಿಡಿ
ಸಾಸಿವೆ - ೧/೨ ಚಮಚ
ಜೀರಿಗೆ - ೧/೨ ಚಮಚ
ಹಳದಿ ಪುಡಿ - ೧/೨ ಚಮಚ
ಕೊತ್ತಂಬರಿ ಸೊಪ್ಪು - ೧/೪ ಕಟ್ಟು
ಕರಿ ಬೇವು - 5 - 6 ಎಲೆ
ನಿಂಬೆ ಹಣ್ಣು - ೧
ಉಪ್ಪು - ೨ ಚಮಚ
ಒಳ್ಳೆಣ್ಣೆ - ೪ ಚಮಚ

ವಿಧಾನ:
ಮೊದಲಿಗೆ ಇ ಮೇಲಿನ ತರಕಾರಿಗಳನ್ನ ಹೆಚ್ಚಿ, ಇನ್ನೊದು ಒಲೆಯಲ್ಲಿ ಒಂದು ತಾವಾ ದಲ್ಲಿ ೪ ಚಮಚ ಎಣ್ಣೆಯನ್ನು ಹಾಕಿ, ೧ ನಿಮಿಷದ ನಂತರ ಜೀರಿಗೆ, ಸಾಸಿವೆ, ಶೇಂಗ, ಕಡಲೆ ಬೀಜವನ್ನು ಹಾಕಿ.. ಶೇಂಗ ಬೀಜ ಮತ್ತು ಕಡಲೆ ಬೀಜ ಸ್ವಲ್ಪ ಕೆಂಪಾಗುವವರೆಗೂ ಅದನ್ನ ಹುರಿಯಬೇಕು.. ಆಮೇಲೆ ಬೆಳ್ಳುಳ್ಳಿಯ ಎಸುಳನ್ನು
ಹಾಗು ಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಒಂದು ೫ ನಿಮಿಷಗಳ ಕಾಲ ಬೇಯಿಸ ಬೇಕು...
ಹಾಗೆ ೨ ಚಮಚ ಉಪ್ಪನ್ನು ಮತ್ತು ೧/೨ ಚಮಚ ಹಳದಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು..
ಇದಾದ ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಒಲೆಯನ್ನು ಬಂದ್ ಮಾಡಿ ಒಂದು ೫ ನಿಮಿಷಗಳ ಕಾಲ ಆರಲು ಬಿಡಿ.. ಈಗ ಒಗ್ಗರಣೆ ರೆಡಿ......
ಅನ್ನವನ್ನು ಸ್ವಲ್ಪ ಆರಲು ಬಿಟ್ಟು, ಸ್ವಲ್ಪ ಆರಿದ ನಂಥರ ಅದಕ್ಕೆ ನಿಂಬೆ ಹುಳಿಯನ್ನು ಹಿಂಡಿ, ರೆಡಿ ಮಾಡಿದ ಒಗ್ಗರಣೆಯನ್ನು ಅನ್ನಕ್ಕೆ ಕಲಸಿ ಬಿಟ್ಟರೆ ರುಚಿಯಾದ ಚಿತ್ರಾನ್ನ ರೆಡಿ....
ಇವತ್ತೇ ಪ್ರಯತ್ನಿಸಿ, ಸಹಾಯ ಬೇಕಿದ್ದಲ್ಲಿ ನನ್ನ ದೂರವಾಣಿ ಸಂಖೆ ೯೮೪೫೦ ೨೯೨೦೮ ಗೆ ಕರೆ ಮಾಡಿ.

Rating
No votes yet

Comments