ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೈಸೂರ್ ಷಾಕಾ(Shocka) ಇಲ್ಲ ಧಾರವಾಡ ಪೆದ್ದನ ...

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಯಾಕಂದ್ರ ನಾನು ಧಾರವಾಡದವಾ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬನ್ದಿದೆ ಅವರ ಭಾಷೆ ನೋಡಿ ಅಂದ್ರ ಕೇಳಿ ನನಗ ಅಲ್ಲೇ ಅಡ್ಜಸ್ಟ್ ಆಗೋದ ಸ್ವಲ್ಪ ಕಷ್ಟ (ತ್ರಾಸ) ಆತು. ಯಾಕಂದ್ರ ನಾವು ಯಾವದ ವಿಷ್ಯ ಇರಲಿ ಬಹಳ ಎಳಯನ್ಗಿಲ್ಲ. ಆದ್ರ ಮೈಸೂರಿನವರು ರಬ್ಬರ್ ಏಳದ ಹಂಗ ಏಳಿತಾರಿರೀ.

ಕಪ್ಪೆ ಕಥೆ

ಒಂದು ದೊಡ್ಡ ಬಾಣಲೆಯಲ್ಲಿ ಎರಡು ಕಪ್ಪೆಗಳಿದ್ವಂತೆ, ಬಹಳ ದಿನ ಅಲ್ಲೇ ಈಜಾಡಿ, ಸುಖವಾಗಿದ್ವಂತೆ. ಒಂದು ದಿನ ಯಾರೋ ಬಂದು ಆ ಬಾಣಲೆಯನ್ನ ಒಲೆ ಮೇಲಿಟ್ರಂತೆ. ನೀರು ತುಸು ಬೆಚ್ಚಗಾಗ್ತಿದ್ದ ಹಾಗೇ ಎರಡೂ ಕಪ್ಪೆಗಳಿಗೂ ತಳಮಳ ಶುರುವಾಯ್ತಂತೆ.

ಸ್ಲ್ಯಾಮ್ ಬುಕ್ ಎಂಬ ಮಾಂತ್ರಿಕ

ಹತ್ತು ವರ್ಷಗಳ ಹಿಂದೆ ಪದವಿ ಮುಗಿಸಿ, ಕಾಲೇಜಿನಿಂದ ಹೊರಗಡಿಯಿಡುವ ಸಂದರ್ಭ. ಮುಂದಿನ ಜೀವನದ ಬಗ್ಗೆ, ಹೊರ ಪ್ರಪಂಚದ ಬಗ್ಗೆ ಅರಿವೇ ಇಲ್ಲದೇ ನಮ್ಮದೇ ಲೋಕದಲ್ಲಿ ಕಳೆದುಹೋಗಿದ್ದ ನಮಗೆ ಕಾಲೇಜಿನ ವಿದ್ಯಾರ್ಥಿ ದೆಸೆಯ ಆ ಐದು ವರ್ಷಗಳು ಓಡಿದ್ದೇ ತಿಳಿದಿರಲಿಲ್ಲ.

ಕಾಲೇಜು ಬಿಡುವ ಸಂದರ್ಭ ಅಂದಮೇಲೆ ಎಲ್ಲರ ನೆನಪಿಗಾಗಿ ಸ್ಲ್ಯಾಂ ಬುಕ್ ಬರೆಸಿಕೊಳ್ಳೋದು ಒಂದು ಚಟ. ಈ ಸ್ಲ್ಯಾಂ ಬುಕ್ ಆಟೋ ಗ್ರಾಫ್ ಬುಕ್ ನ ಹಿರಿಯಣ್ಣನ ಹಾಗೆ ಅಂದರೆ ಬರೀ ಆಟೋಗ್ರಾಫ್ ಜೊತೆಗೆ ಬರೆಯುವವರ ಛಾಯಾಚಿತ್ರ ಮತ್ತೆ ಇತರ ವಿವರಣೆಗಳನ್ನೂ,, ನಮ್ಮ ಬಗ್ಗೆ ಅವರ ಅಭಿಪ್ರಾಯಗಳನ್ನೂ ನೇರಮಾತುಗಳಲ್ಲಿ ಯಾವುದೇ ಬಣ್ಣ ಹಚ್ಚದೇ ಅದ್ರಲ್ಲಿ ತುಂಬೋದು ಅದರ ವಿಶೇಷತೆ. ಈಗೀಗ ಸಿನಿಕತನ ಹೆಚ್ಚಾದಾಗ ಇಂಥವುಗಳ ಬಗ್ಗೆ ನಗೆ ಬಂದರೂ ಆಗ ಅದಕ್ಕಿದ್ದ ಮೌಲ್ಯ ನಿಜಕ್ಕೂ ಹೆಚ್ಚಿನದು.

ಹೀಗೆ ಬರೆಸಿಕೊಂಡ ಕೆಲದಿನಗಳ ನಂತರವೂ ಅದನ್ನ ಆಗಾಗ ಓದ್ತಾ ಇದ್ದು ಕೊನೆಗೆ ಎಲ್ಲೋ ಇದ್ದಕ್ಕಿದ್ದಂತೆ ಪುಸ್ತಕವೂ ಅದರ ಜೊತೆ ಬೆಸೆದುಕೊಂಡ ಭಾವನೆಗಳೂ ನೆನಪಿನಾಳಕ್ಕೆ ಹೋಗಿ ಬಿಟ್ಟಿತ್ತು.

ವ್ಯಕ್ತಿತ್ವ ವಿಭಿನ್ನತೆ

ಒಂದು ತಿಂಗಳ ಹಿಂದೆ ಊರಿಗೆ ಹೋಗ್ಲಿಕ್ಕೆ ನವರಂಗ್ ಹತ್ತಿರ ಬಸ್ (ರಿಸರ್ವೇಶನ್ ಆಗಿತ್ತು) ಕಾಯ್ತಿದ್ದೆ. ಬಸ್ ಬಂತು ಹತ್ತಿ ಹೋದೆ, ಬಸ್ ಫುಲ್ ಆಗಿತ್ತು, ಲಗೇಜ್ ಸಹ ತುಂಬಿಕೊಂಡಿದ್ವು. ನವರಂಗ್ನಿಂದ ಒಬ್ರು ಆಂಟಿ ಮತ್ತೆ ಅಜ್ಜಿ ಸಹ ಹತ್ತಿದ್ರು.

ಮಾಸ್ತಿ ಒ೦ದು ನುಡಿನಮನ

ಓಡಾಡಿದ್ದಿ,ನೀ
ಹಾರಾಡಿದ್ದಿ, ಕ೦ಡದ್ದು
ಕತೆಯಾಗಿಸಿದ್ದಿ.
ನನ್ನೊಳಗೆ ನಿನ್ನೊಳಗೆ
ನುಡಿದ೦ಥ ನುಡಿಯನ್ನೇ
ಮೀಟಿದ್ದೀ, ಮೀಟಿ
ನಾದ ಚಿಮ್ಮಿಸಿದ್ದಿ

ಅವಳ್ಯಾರೋ ಮ೦ಗಮ್ಮ
ಇನ್ಯಾರೋ ವೆ೦ಕಟಿಗ
ಮತ್ಯಾರೋ ಮದಲಿ೦ಗ
ಎಲ್ಲರೂ ನಿನ್ನವರೇ
ನಿನ್ನ ಕ೦ಡವರೇ ?
ನೋಡಿದ್ದು ಬರೆದೆ
ಬರೆದದ್ದು ನೋಡಿದೆ
ತಿರುತಿರುಗಿ ಒರೆ
ಹಚ್ಚಿ ನೋಡಿದರೆ
ಕಣ್ಕುಕ್ಕೋ ಹೊಳಪು

ರಾಜ್ಯ ಗ್ರಾಹಕರ ವೇದಿಕೆಗೊಂದು ನಿಷ್ಪ್ರಯೋಜಕ ಯಾತ್ರೆ.

ನನ್ನ ರಿಲಿಯನ್ಸ್ ಫೋನಿನ ಸಮಸ್ಯೆ ತೀರಾ ಗೊಜಲಾಗಿತ್ತು. ನನ್ನ ದೂರವಾಣಿಯ ಸಮಸ್ಯೆಯನ್ನು ಅವರು ಕೊಟ್ಟ ಹಿಂಸೆಯನ್ನೂ ಮಂಗಳೂರಿನ ಗ್ರಾಹಕ ನ್ಯಾಯಾಲಯ ಗುರುತಿಸಿದರೂ ಅವರಿಗೂ ಸಂಪೂರ್ಣ ಚಿತ್ರಣ ದೊರಕಿರಲಿಲ್ಲ.

ಶೇಕ್ಸ್ ಪಿಯರ್ ಯಾರು? ಒ೦ದು ಶೇಷ ಪ್ರಶ್ನೆಯೋ, ಯಕ್ಷಪ್ರಶ್ನೆಯೋ??

ಉದಯ್ ಇಟಗಿಯವರ ಲೇಖನ "ನಮಗೆ ಗೊತ್ತಿರದ ಶೇಕ್ಸ್ ಪಿಯರ್" ಈ ನನ್ನ ಲೇಖನಕ್ಕೆ ಸ್ಫೂರ್ತಿ.

ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ಅನೇಕ ಸ೦ದರ್ಭಗಳಲ್ಲಿ ರೋಚಕ ಕುತೂಹಲದಿ೦ದ ಕೂಡಿರುತ್ತವೆ. ಇದನ್ನು ಅರಿಯಬಯಸುವುದೂ ಒ೦ದು ಮಾನವಸಹಜವಾದ instinct ಎ೦ದೇ ನಾನು ಭಾವಿಸುತ್ತೇನೆ.

ಋಣಂ ಕೃತ್ವಾ ಘೃತಂ ಪಿಬೇತ್

ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಉರಿದು ಬೂದಿಯಾದ ಒಡಲು
ಮರಳಿ ಬರುವ ದಾರಿಯೆಲ್ಲಿ?
ಇರಲೇಬೇಕು ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಸಂಸ್ಕೃತ ಮೂಲ (ಚಾರ್ವಾಕನದ್ದು ಎಂದು ಹೇಳುವುದುಂಟು- ಸರಿಯೋ ತಪ್ಪೋ ಕಾಣೆ):

ಸದಾ ಕಾಡುವ ಬುಪೆನ್ ಹಜಾರಿಕಾ

ನನ್ನನ್ನು ಕಾಡೊ ಹಾಡುಗಾರರಲ್ಲಿ ಬುಪೆನ್ ಹಜಾರಿಕಾ ಪ್ರಮುಖರು.. ಅವರ ದ್ವನಿಯಲ್ಲಿನ ಆ ಅರ್ದ್ರತೆ.. ಕೇಳಿದಷ್ಟೂ ಮತ್ತೂ ಕಾಡುತ್ತಲೇ ಇರುತ್ತವೆ..