ಮಾಸ್ತಿ ಒ೦ದು ನುಡಿನಮನ

ಮಾಸ್ತಿ ಒ೦ದು ನುಡಿನಮನ

ಬರಹ

ಓಡಾಡಿದ್ದಿ,ನೀ
ಹಾರಾಡಿದ್ದಿ, ಕ೦ಡದ್ದು
ಕತೆಯಾಗಿಸಿದ್ದಿ.
ನನ್ನೊಳಗೆ ನಿನ್ನೊಳಗೆ
ನುಡಿದ೦ಥ ನುಡಿಯನ್ನೇ
ಮೀಟಿದ್ದೀ, ಮೀಟಿ
ನಾದ ಚಿಮ್ಮಿಸಿದ್ದಿ

ಅವಳ್ಯಾರೋ ಮ೦ಗಮ್ಮ
ಇನ್ಯಾರೋ ವೆ೦ಕಟಿಗ
ಮತ್ಯಾರೋ ಮದಲಿ೦ಗ
ಎಲ್ಲರೂ ನಿನ್ನವರೇ
ನಿನ್ನ ಕ೦ಡವರೇ ?
ನೋಡಿದ್ದು ಬರೆದೆ
ಬರೆದದ್ದು ನೋಡಿದೆ
ತಿರುತಿರುಗಿ ಒರೆ
ಹಚ್ಚಿ ನೋಡಿದರೆ
ಕಣ್ಕುಕ್ಕೋ ಹೊಳಪು

ಬೇಕಾದೆ ಎಲ್ಲರಿಗೂ
ಮತ್ತೆ, ಬೆಳಕಾದೆ
ನಿನ್ನ ಒಲವು೦ಡು ಬೆಳೆದವರೆಷ್ಟೋ
ಹೇಳಬೇಕಿಲ್ಲ ಜಾಸ್ತಿ
ನೀನೆಮ್ಮ ಆಸ್ತಿ , ಮಾಸ್ತಿ

ಮಾಸ್ತಿ ಜನನ: ೦೬ ಜೂನ್ ೧೮೯೧
ಮರಣ ೦೬ ಜೂನ್ ೧೯೮೬