ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೋಡು ಬಾ ನಮ್ಮೂರ!.................೩

ಸಲಿನಾಸ್, ಕ್ಯಾಲಿಫೋರ್ನಿಯಾದ ಕೃಷಿಗಾರಿಕೆ ಕುರಿತು ಹಿಂದಿನ ಬ್ಲಾಗ್ ನಲ್ಲಿ ಬರೆದಿದ್ದೆ. ಇಲ್ಲಿ ಲೆಟಸ್ ಜೊತೆಗೆ ಇನ್ನೂ ಹಲವಾರು ತರಕಾರಿಗಳನ್ನು ಬೆಳೆಯುತ್ತಾರೆ. ಅದರಲ್ಲಿ ಕಾಲಿ - ಫ್ಲವರ್ (ಹೂವ್ ಕೋಸು), ಬ್ರಸಲ್ ಸ್ಪ್ರೌಟ್ಸ್, ಆರ್ಟಿಚೋಕ್ಸ್, ಎಲೆ ಕೋಸು, ಆಸ್ಪರಾಗಸ್, ಸಿಲೆರಿ, ಕ್ಯಾರೆಟ್ ಮುಂತಾದವು ಮುಖ್ಯವಾಗಿವೆ.

ಜೋಡಿ ಗುಲಾಬಿಗಳು!

ಆರಾಮವಾಗಿ ಸೀಟಿನಲ್ಲಿ ಕುಳಿತಿದ್ದು ’ಸ್ವಲ್ಪ ಒತ್ತಿಕೊಳ್ಳಿ’ ಎಂದು ಅಡ್ಜಸ್ಟ್ ಮಾಡಿಕೊಳ್ಳುವಂತೆ ... ಛತ್ರಿ ಹಿಡಿದು ಹೋಗುವಾಗ ಮತ್ತೊಬ್ಬರು ಬಂದು ತೂರಿಕೊಳ್ಳುವಂತೆ ... ನಮ್ಮ ಮನೆಯ ಗುಲಾಬಿ ಗಿಡದಲ್ಲೂ ಇಷ್ಟು ರಷ್ ಇದೆ ಅಂತ ಗೊತ್ತಿರಲಿಲ್ಲ ...

ಈ ಜೋಡಿ ಹೂಗಳು ಮುಂಚೇನೇ ಬೆಳೆದಿದ್ದರೆ ಕುಮಾರಣ್ಣ-ಯಡಿಯೂರಪ್ಪ ಮುಖಮಂತ್ರಿಯ ಸ್ಥಾನವನ್ನು ಹಂಚಿಕೊಡಿದ್ದಾಗ ಇಬ್ಬರಿಗೂ ಸೇರಿ ಕೊಡಬಹುದಿತ್ತು

’ನಮ್ಮೂರ ಮಂದಾರ ಹೂವೆ’ ಯಂತಹ ತ್ರಿಕೋನ ಪ್ರೇಮದ ಚಲನಚಿತ್ರ ಬಂದ ಸಮಯದಲ್ಲಿ ಈ ಗುಲಾಬಿ ಮೂಡಿದ್ದರೆ, ರಮೇಶ್-ಶಿವರಾಜಕುಮಾರ್ ಇಬ್ಬರೂ ಸೇರಿ ಪ್ರೇಮಳಿಗೆ ಒಂದೇ ಹೂವು ಕೊಡಬಹುದಿತ್ತು.

ಕಳೆದ ವ್ಯಾಲಂಟೈನ್ ದಿನದಂದು ಈ ಜೋಡಿ ಮೂಡಿದ್ದರೆ, ನಮ್ಮ ತಿರುಪತಿ ತಿಮ್ಮಪ್ಪ ತನ್ನಿಬ್ಬರ ಪತ್ನಿಯರಿಗೆ ಕೊಟ್ಟು ಇಬ್ಬರನ್ನೂ ಸಮನಾಗಿ ಪ್ರೀತಿಸುತ್ತೇನೆ ಎಂದು ಸಾರಬಹುದಿತ್ತು

ಮೊದಲ ಪ್ರೀತಿ

ಇಂದು ಸಿಡಿಲಿನ ಆರ್ಭಟ ಬಹಳ ಜೋರಾಗಿ ಇತ್ತು. ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಕಿಟಕಿಯಲ್ಲಿ ನೋಡುತ್ತಾ ಕುಳಿತಿದ್ದ ವಸುಧಾಳಿಗೆ ಬೇಡ ಬೇಡವೆಂದರೂ ಮನಸ್ಸು ಹಿಂದಕ್ಕೆ ಓಡಿತು.

ನಗರದ ಮಳೆಗಾಲದ ಒಂದು ಸಂಜೆ

ರಸ್ತೆ:-
ನದನದಿಗಳ, ಹಳ್ಳಕೊಳ್ಳಗಳ
ಝುಳು ಝುಳು ಝರಿಗಳ
ನಡುವೆ ಅಲ್ಲೊಂದಿಲ್ಲೊಂದು
ದೊಡ್ಡ ಪ್ರಪಾತಗಳು

ಅಪಘಾತ:-
ತುಸು ಜೋರು ನೆಡೆದರೂ
ಕೊಂಚ ಅಕ್ಕ ಪಕ್ಕ ಜರುಗಿದರೂ
ಮೈ ಸೋಕಿದರೂ ಜೊಕೆ
ಜಗಳವಾದೀತು...

ಸಂಚಾರೀ ದೀಪಗಳು:-
ಕೆಂಪು ಕಿತ್ತಳೆ ಹಸಿರು ಬಣ್ಣಗಳ
ಸೌಂದರ್ಯ ಸ್ವರ್ಧೆಯಲ್ಲಿ ನಿಂತೆಯೋ ಜೋಕೆ...

ಸಂಪದಕ್ಕೊಂದು ನಾಟಕತಂಡ

modmani ಯವರ ಒಂದು ಬುಡುಬುಡಿಕೆ ಪ್ರಸಂಗ ಬ್ಲಾಗ್ನಲ್ಲಿ ಮಾಲತಿಯವರ ಕಮೆಂಟ್ ನೋಡಿ ತಟ್ಟನೆ ಬಂದ ಆಲೋಚನೆಯನ್ನು ಸಂಪದಿಗರ ಮುಂದಿಡುತ್ತಿದ್ದೇನೆ..

ಕರ್ಮಧಾರಯ ಸಮಾಸ

ಈಗ ಆರನೆಯ ತರಗತಿಗೆ ಹೋಗಲಿರುವ ನನ ಮಗ ಅವನ ಹೊಸ ಪುಸ್ತಕಗಳನ್ನ ತಂದು 'ಅಪ್ಪಾಜಿ ಬೈಂಡ್ ಹಾಕಿಕೊಡಿ' ಎಂದು ಮುಂದಿಟ್ಟಾಗ ಅವನ ಸಂಸ್ಕ್ರತ ಪುಸ್ತಕ ನನ್ನ ಗಮನ ಸೆಳೆಯಿತು. ಹಾಗೆ ಅದನ್ನ ತಿರುವಿ ಹಾಕುತ್ತಿದ್ದಾಗ ನಾನು ಕಾಲೇಜಿನಲ್ಲಿ ಓದುವಾಗ ನಮಗೆ ಸಂಸ್ಕ್ರತ ತರಗತಿ ತೆಗೆದುಕೊಳ್ಳುತ್ತಿದ್ದ ಶ್ರೀ ಮೃತ್ಯುಂಜಯಾಚಾರ್ಯರು ನೆನಪಿಗೆ ಬಂದರು.

ಹಾಗೆ ಒಮ್ಮೆ,- 2

ಮಾತು ಮೌನದ ಮೆರವಣೆಗೆ,
ಮಾತಿನೊಂದಿಗೆ ಮೌನದ ಮೆರವಣೆಗೆ
ಮಾತಿನ ಮೇಲೆ ಮೌನದ ಸವಾರಿ
ಬೆಳ್ಳಿಯ ಮೇಲೆ ಬಂಗಾರದ ಸವಾರಿ
ಮಾತು ಮುಗಿಯಲಿಲ್ಲ, ಮೌನ ಹರಿಯಲಿಲ್ಲ,
ಮಾತು ಎಂದಿದ್ದರು ಮಾತೇ
ಮಾತಿನ ಮೇಲೆ ಮೌನದ ಸವಾರಿ,
ಮಾತಿನ ಮೇಲೆ ಮೌನದ ಸವಾರಿ.
******************************

ಕನಸುಗಳವು ನಿನ್ನವು ನನಸಾಗಿಸದಿರಲಿ ಹೇಗೆ ?
ಕಣ್ಣುಗಳವು ನಿನ್ನವು ಕಣ್ಣರೆಪ್ಪೆ ನಾನಾಗದಿರಲಿ ಹೇಗೆ?

ಹಾಗೆ ಒಮ್ಮೆ-1

ಇರಲಿರಲಿ ಒಲವು
ಚಿತ್ತಾರದ ಚೆಲುವು
ಚಂದ್ರಮನ ಚಂದ್ರಿಕೆಯ
ಸವಿಸವಿಯ ನೆನಪು.
*************
ಮಾತು ಮುಗಿದು, ಮೌನವರಳಿ
ಹೇಳದೆ ಉಳಿದಿದ್ದೇನೋ,
ಮನದಲ್ಲೇ ಉಳಿಯಿತಲ್ಲ,
ಏನದು?

****************

ಚಂದ್ರನ ಚದುರಿಕೆಯ, ಕಮಲದ ಕಮರಿಕೆಯ
ಕಂಡು ಕನಲಲಿಲ್ಲ ಗೆಳತಿ ಮನವು,
ನಿನ್ನೊಂದು ಕಣ್ಣ ಬಿಂದುವಿಗೆ ಕಾರ್ಮೋಡದೆ ಸಿಡಿಲು ಸಿಡಿದಂತಾಯ್ತು,
ಏಕೆ ಮನವು ?

----------------
ಹಾರಿ ಹೋಗಿತ್ತು ಉಲ್ಕೆ

black & decker

ಆಸ್ಟ್ರೇಲಿಯದಲ್ಲೊಂದು ವಿಸ್ಮಯಕಾರಿ, ನಂಬಲಸಾಧ್ಯವಾದ ಶಸ್ತ್ರ ಚಿಕಿತ್ಸೆ. ೧೨ ವರ್ಷ ಪ್ರಾಯದ ನಿಕೊಲಸ್ ರೊಸ್ಸಿ ಸೈಕಲ್ ನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ. ತಲೆನೋವು ಮತ್ತು ಸ್ನಾಯು ಸೆಳೆತ ಬಿಟ್ಟರೆ ಮೇಲ್ಮೆಯಲ್ಲಿ ಯಾವುದೇ ಗುರುತರವಾದ ಗಾಯ ಕಾಣದಿದ್ದರೂ ಅವನ ತಾಯಿಗೆ ಕಂಡಿತು ಮಗನ ಕಿವಿಯ ಹಿಂದೆ ಸಣ್ಣ ಊತ.