ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಥಟ್ ಅಂತ ಕವನ"!!!

"ಥಟ್ ಅಂತ ಕವನ" ಬರೆಯುವ ಸ್ಪರ್ಧೆ ಇದ್ದರೆ
ನನಗೂ ಹೇಳಿ ಬರುತ್ತೇನೆ ಪುರುಸೊತ್ತಿದ್ದರೆ

ನನಗಿನ್ನೇನೂ ಬೇಕಾಗಿಲ್ಲ ಪುರಸ್ಕಾರ ಪ್ರಶಸ್ತಿ
ಅನ್ನುತ್ತೀದ್ದೀರಲ್ಲಾ "ಆಶು ಕವಿ" ಇದೇ ಜಾಸ್ತಿ

ಪದ್ಯರೂಪದಲಿ ಬರೆಯುವ ರೂಡಿಯಾಗಿ ಬಿಟ್ಟಿದೆ
ಲೇಖನಗಳ ಸಂಖ್ಯೆ ಏರದೇ ಅಲ್ಲಿಗಲ್ಲಿಗೇ ನಿಂತಿದೆ

ಓದುಗರ ಮನಮುಟ್ಟಿ ಸಂತಸ ನೀಡಿದರೆ ಕವನ

ಮಿಡತೆ ಸಂತೆ ಕತೆ

locust_USFWSಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
ಇದರದ್ದದು ಅದರದ್ದಿದು ಕಾಲ್ಕೆರೆದೂ ಕೆರೆದೂ
ಮತ್ಮತ್ತೆ ಸೆರಟೊನನ್ ತಲೇಲಿ ಉಕ್ಕೀ ಉಕ್ಕಿ
ಹುಚ್ಚೆದ್ದು ಲಗ್ಗೆಯಿಟ್ಟಲ್ಲೆಲ್ಲಾ ಹಾವಳಿ;
ಮರಾ ಗಿಡಾ ಬೆಳೆಗಳಿಗೆಲ್ಲಾ
ಕಂಟಕಪ್ರಾಯ
ಈ ಬೈರಾಗಿ ಮಿಡತೆ ರೌಡಿ ಸಂತೆ.

ಕಾಡುವ ಹಾಡು: ದಿಬ್ಬಣದ ಶೀರ್ಷಿಕೆ ಗೀತೆ

ಝೀ ಕನ್ನಡ ವಾಹಿನಿಯ ದಿಬ್ಬಣ ಧಾರಾವಾಹಿಯ ಸುಧೇಶ್ ಮಹಾನ್ ರಚಿಸಿದ ಈ ಶೀರ್ಷಿಕೆ ಗೀತೆ ಬಹಳ ದಿನದಿಂದ ಕಾಡುತ್ತಿದೆ. ಹಾಡಿದವರು ಯಾರೊ ಗೊತ್ತಿಲ್ಲ ಆದರೆ ಅದ್ಭುತವಾಗಿಯಂತೂ ಹಾಡಿದ್ದಾರೆ!!  ನಿಮಗೂ ಇಷ್ಟವಾಗಬಹುದು...

ನೀವು ಕೇಳಿದಿರಿ - ೧ . ೬

*೨೦೦೦ ರೌಡಿಗಳ ಮಾಹಿತಿಗಳ ಕೈಪಿಡಿ ಪೊಲೀಸರಿಗೆ !

-ಇನ್ನಾದರು ಮಾಮೂಲು ವಸೂಲು ಮಾಡುವುದು ಸುಲಭವಾಗಬಹುದೆಂದು ಅವರು ಯೋಚಿಸುತ್ತಿರಬಹುದು . :D
+++++++
*ಗೂಳಿಯ ನಾಗಾಲೋಟ , ಸಿಕ್ಸರ್ ಬಾರಿಸಿದ ಸೆನ್ಸೆಕ್ಸ್ .

-ಕಾಲು ಮುರಿದುಕೊಂಡಾಗ ರನ್ 'ಔಟ್'.
++++++
*ಸಿಕ್ಕಿಬಿದ್ದಳು ಹಾಸ್ಟೆಲ್ ,ಪಿಜಿ ಕಳ್ಳಿ !

ಎಲೆಕ್ಷನ್ ಗುಳಿಗೆಗಳು! - 2

* ಮನಮೋಹನ್ ಸಿಂಗರಿಗೂ ಎಲ್.ಕೆ. ಅಡ್ವಾಣಿ ಅವರಿಗೂ ಏನು ವ್ಯತ್ಯಾಸ?
- ಒಬ್ಬರು ದೇಹಕ್ಕೆ ತಲೆಬಾಗುವವರು, ಇನ್ನೊಬ್ಬರು ದೇಶಕ್ಕೆ ತಲೆಬಾಗುವವರು.

***

* ಲಾಲ್ ಕೃಷ್ಣ ಅಡ್ವಾಣಿ ನಿವೃತ್ತಿ ಹೊಂದುತ್ತಾರಾ ಶ್ರೀಕೃಷ್ಣಾ?
- ಸೇವಾವೃತ್ತಿಗೆ ನಿವೃತ್ತಿ ಎಂಬುದಿಲ್ಲ ಅರ್ಜುನಾ.

***

* ಮನಮೋಹನ್ ಸಿಂಗರಿಗೆ ಮೊದಲ ವಿದೇಶಿ ಅಭಿನಂದನೆ ಜರ್ದಾರಿಯಿಂದ ಬಂತಂತೆ.

ಕರಾವಳಿಯ ಸಂಗ್ರಾಮದ ಕತೆ!!

ಕರಾವಳಿಯಲ್ಲಿ ಬಿಜೆಪಿ ಮತ್ತೆ ಈಗ ಜಯಭೇರಿ ಬಾರಿಸಿದೆ
ಪೂಜಾರಿ ಕಂಡ ಕನಸುಗಳ ಹೇಗೆ ನುಚ್ಚು ನೂರಾಗಿಸಿದೆ

ಮೊಯ್ಲಿ ಸೋಲುವ ಕುದುರೆ, ನಾನೇ ಗೆದ್ದು ಬರುವೆ ಎಂದಿದ್ದ
ಬಂಡು ಧೈರ್ಯಮಾಡಿ ಮತ್ತೆ ಅದೇಕೋ ಕಣಕ್ಕೆ ಧುಮುಕಿದ್ದ

ಮೊಯ್ಲಿ ಹಲವು ಬಾರಿ ಮಾಡಿದ ತಪ್ಪನ್ನೀ ಬಾರಿ ಮಾಡದಿದ್ದ
ಅದಕ್ಕೆ ಚಿಕ್ಕ ಬಳ್ಳಾಪುರದಲ್ಲಿ ನೋಡಿ ನಿರಾಯಾಸವಾಗಿ ಗೆದ್ದ

ರಂಗಪಂಚಮಿ.....

ಮಂಡ್ಯದ ವಿವೇಕಾನಂದ ರಂಗಮಂದಿರದಲ್ಲಿ ರಂಗಪಂಚಮಿ .... ನಾಟಕ ಪ್ರದರ್ಶನ ನಡೀತಾ ಇದೆ. ಕಳೆದ ನಾಲ್ಕು ದಿನಗಳಿಂದ ರಂಗಾಸಕ್ತರಿಗೆ ಭರ್ಜರಿ ಔತಣ... ಮಂಡ್ಯದ ಜನದನಿ ಸಂಸ್ಥೆಯವರ ’ಘಾಷಿರಾಂ ಕೊತ್ವಾಲ್’ ಅಂತೂ ಜನರ ಮನ ಸೂರೆಗೊಂಡಿತು.ಬೆಂಗಳೂರಿನ ಕ್ರಿಯೇಟಿವ್ ಥಿಯೇಟರ್ ನವರು”ಹೀಗಾದ್ರೆ ಹೇಗೆ ’ಅನ್ನೋ ಹಾಸ್ಯಭರಿತ ನಾಟಕವನ್ನು ಅಭಿನಯಿಸಿದರು.

ಆಚೆಯ ದಡ

ಈ ವೈತರಣೀ ನದಿಯಾಚೆಗೆ
ಏನಿದೆಯೋ ಕಾಣೆ,
ಸಿಕ್ಕಿಲ್ಲ ನನಗೆ ಇನ್ನು
ಅಲ್ಲಿಗೆ ಹೋಗುವ ಛಾನ್ಸು.

ನನ್ನಜ್ಜನ ಪ್ರಕಾರ
ಆ ಕಡೆ ಇರಬಹುದು
ನಾಕ - ನರಕ

ನನ್ನಜ್ಜಿಯೂ ಹೇಳುತ್ತಿದ್ದಳು
ನದಿಯಾಚೆ
ನಾಕ ಬಲಕ್ಕೆ
ನರಕ ಎಡಕ್ಕೆ

ಅಂದ ಹಾಗೆ
ಒಂದೇ ದೇಹದ ಈ ಎರಡು
ಕೈಗಳಲ್ಲಿ
ಎಡಗೈ ಅಸ್ಪೃಷ್ಯವಾದುದೇಕೋ?

ನನ್ನಂತೆ ಇರಬಹುದು
ಕೆಲವರಿಗಾದರೂ ಕುತೂಹಲ
ತಣಿಸಲು ಒಮ್ಮೆಯಾದರೂ

ಕೂಡಲಿ ಕ್ಷೇತ್ರ ದರ್ಶನ

ಕೂಡಲಿ ಶಿವಮೊಗ್ಗ ಜಿಲ್ಲೆಯ ತುಂಗಾ-ಭದ್ರ ನದಿಗಳ ಸಂಗಮದಲ್ಲಿರುವ ಪುಣ್ಯ ಕ್ಷೇತ್ರ. ಆದಿ ಶಂಕರಾಚಾರ್ಯರು ಶಾರದಾಂಬೆಯನ್ನು ಶ್ರಂಗೇರಿಗೆ ಕರೆದುಕೊಂಡು ಹೋಗುವಾಗ ದೇವಿಯ

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 8

ದ್ರಶ್ಯ ೨೧
ಕಾಡು ದಾರಿ
ಕಳ್ಳ-ಸದಾರಮ
ಕಳ್ಳ: ಹೆಣ್ಣೇ ನಿನ್ನ ಹೆಸರೇನು ಅ೦ತ ಹೇಳ್ಲೇ ಇಲ್ಲವಲ್ಲ…
ಸದಾರಮ: ಅದ್ರಿ೦ದ ನಿನಗಾಗಬೇಕಾದ್ದೇನು..?
ಕಳ್ಳ: ನಾನು ನಿನ್ನ ಚಿನ್ನ ಬಣ್ಣ ಬ೦ಗಾರ ಸುಣ್ಣ ಸುಡುಗಾಡು ಅ೦ತ ಕರೆದು ಕರೆದೂ
ಬೇಜಾರಾಗ್ಬುಡ್ತು.ಅದಕ್ಕೆ ನಿನ್ನ ಹೆಸರೇನು ಅ೦ತ ಹೇಳಿಬಿಟ್ರೆ ಕರೆಯೋಕೆ ಚೆ೦ದಾಗಿರ್ತೈತೆ
ಸದಾರಮ: ನನ್ನ ಹೆಸರು ಸದಾರಮ ಎ೦ದು