ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲೋಕ್‌ ಸತ್ತಾದ ಜೇಪಿ, ಚಿತ್ರದುರ್ಗದ ಜನಾರ್ಧನ ಸ್ವಾಮಿ...

ಸರಿಯಾಗಿ ಎರಡು ವರ್ಷದ ಹಿಂದೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸುಮಾರು ನೂರು ಜನ ಸೇರಿದ್ದ ಸಭೆಯಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಿದೆ. ಅದು ನೇರವಾಗಿತ್ತು. ಅವರ ಇಡೀ ಆಶಾವಾದವನ್ನೆ, ಆದರ್ಶವನ್ನೆ, ವಾಸ್ತವದ ಹೆಸರಿನಲ್ಲಿ Undermine ಮಾಡುವ ರೀತಿಯಲ್ಲೂ ಇತ್ತು. ಆ ಪ್ರಶ್ನೆ ಚುಡಾಯಿಸುವ, ಹಂಗಿಸುವ ರೀತಿಯಲ್ಲಿ ಇರಬಾರದು ಎಂದುಕೊಂಡೆ ಸಾಕಷ್ಟು ಹುಷಾರಿನಲ್ಲಿ ಕೇಳಿದೆ.

ನಮ್ಮೂರಿನ ಗುಡಿ

ನಂದಕುಮಾರ ಅವರು ಕರಾವಳಿ ಪರಿಚಯ ಮಾಡಿಸ್ತಿದಾರೆ. ಅನಿಲ್ ಅವರಂತೂ ಹನ್ನೆರಡೂ ಜ್ಯೋತಿರ್ಲಿಂಗಳ ದರ್ಶನ ಮಾಡಿಸಿ ಆಯ್ತು.

ನಾನು ಅಷ್ಟೆಲ್ಲಾ ದೂರ ಹೋಗದೇ, ಬರೀ ನಮ್ಮೂರಿನ ಕೇಶವನ ಗುಡೀಗೆ ಕರ್ಕೊಂಡು ಹೋಗ್ತೀನಿ.

ನೋಡ್ಬನ್ನಿ - ಕೌಶಿಕದ ಲಕ್ಷ್ಮೀ ಕೇಶವನನ್ನ.

-ಹಂಸಾನಂದಿ

ನೆನಪುಗಳ ಹನಿಗಳ ನಡುವೆ ಮಲೆನಾಡಿನ ಮಳೆ

ಮಲೆನಾಡಿನ ಮಳೆಯ ಹನಿಗಳ ನಡುವೆ ನನ್ನ ಬಾಲ್ಯದ ನೆನಪುಗಳನು ಮೆಲುಕು ಹಾಕುತ ಕುಳಿತಿದ್ದೆ,ನನ್ನ ಸ್ನೇಹಿತರ ನಡುವಿನ ಒಡನಾಟ,ಹರಟೆ,ಜಗಳ,ಎಲ್ಲದರ ನೆನಪು ಮಾಸಿ ಹೋಗದಂತೆ ಅಚ್ಚೆಯಾಗಿ ನನ್ನ ಈ ಮನದಲ್ಲಿ ಉಳಿದಿತ್ತು,ಅಂದು ಶನಿವಾರ ಶಾಲೆಗೆ ಮಧ್ಯಾನ ರಜೆ ಇದ್ದರಿಂದ ನಾನು ಮತ್ತು ನನ್ನ ಸ್ನೇಹಿತರು ಮನೆಗೆ ಬೇಗ ಬಂದಿದ್ದೆವು ಅಮ್ಮ ನೀಡಿದ ತಿಂಡಿಯನ್ನು ತಿಂದು ಆಟ ಆಡಲು ಹೊರಗೆ

ಮಂಜು ಮುಸುಕಿದ ಒಂದು ಶಾಮಲ ಸಂಜೆ

ಅಮೆರಿಕದ ಸುಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟನ “Stopping by Woods on a Snowy Evening” ಎನ್ನುವ ಕವನ ಅವನ ಬಹು ಚರ್ಚಿತ ಕವನಗಳಲ್ಲೊಂದು. ಈ ಕವನವನ್ನು ೧೯೨೨ ರಲ್ಲಿ ಬರೆದು ಬೆಳಕು ಹರಿಯುವಷ್ಟರಲ್ಲಿಯೇ ಆತ ಜಗತ್ತಿನ ತುಂಬಾ ಮನೆಮಾತಾಗಿಬಿಟ್ಟ. ಈತ ನಾಲ್ಕು ಸಾರಿ ಕವನ ರಚನೆಗಾಗಿ ಪ್ರತಿಷ್ಟಿತ ಪುಲ್ಟಿಜರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಅದರಲ್ಲಿ ಮೊಟ್ಟ ಮೊದಲಬಾರಿಗೆ ಈ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡ “New Hampshire” ಎನ್ನುವ ಕವನ ಸಂಕಲನದಿಂದ ಈ ಕವನವನ್ನು ಆಯ್ದು ಕೊಳ್ಳಲಾಗಿದೆ. ವಿಮರ್ಶಕರು ಇದನ್ನು ಇಂಗ್ಲೀಷ ಸಾಹಿತ್ಯದ “masterpiece” ಎಂದು ಗುರುತಿಸುತ್ತಾರಲ್ಲದೆ ಸ್ವತಃ ಕವಿಯು ಸಹ ತಾನು ಬರೆದ ಕವನಗಳಲ್ಲಿ ಅತ್ಯಂತ ಹೆಚ್ಚು ತೃಪ್ತಿ ತಂದುಕೊಟ್ಟ ಕವನವಿದಾಗಿದೆಯೆಂದು ಭಾವಿಸಿದ್ದಾನೆ.

ಎಂದರೋ ಮಹಾನುಭಾವುಲು !!

ಪುಷ್ಯ ಬಹುಳ ಪಂಚಮಿಯ ದಿನ ತ್ಯಾಗರಾಜರ ಆರಾಧನೆ
ತಂಜಾವೂರಿನಿಂದ ಸುಮಾರು ಹದಿನೈದು ಕಿ.ಮಿ ತಿರುವಯ್ಯಾರಿನಲ್ಲಿ ನಡೆಯುತ್ತದೆ.  ಅದು
ತ್ಯಾಗರಾಜರ ಪುಣ್ಯತಿಥಿ. ಇಂಗ್ಲೀಶ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳ
ಪೂರ್ವಾರ್ಧದಲ್ಲಿ ಈ ದಿನಾಂಕ ಬರುತ್ತದೆ.

ಕರ್ನಾಟಕ ಸಂಗೀತದಲ್ಲಿ
ತ್ಯಾಗರಾಜರದು ದೊಡ್ಡ ಹೆಸರು. ತ್ಯಾಗರಾಜರು ರಚಿಸಿದ ಪಂಚರತ್ನ ಕೃತಿಗಳನ್ನು ಆರಾಧನೆಯ
ದಿನ ಹಾಡಲಾಗುತ್ತದೆ. ಸುಮಾರು ಎರಡು ಸಾವಿರ ಜನರು ಒಂದೇ ಬಾರಿಗೆ ಹಾಡುವುದನ್ನು
ಕೇಳುವುದೇ ಒಂದು ಸೊಗಸು. ನಿತ್ಯಶ್ರೀ ಮಹದೇವನ್, ಸುಧಾ ರಘುರಾಮನ್ ರಂತಹ ಖ್ಯಾತನಾಮರು
ಎರಡು ಸಾವಿರ ಜನರ ನಡುವೆ ಅವರ ಜೊತೆಯೇ ಹಾಡುತ್ತಾರೆ. ಇಷ್ಟು ದಿನ ಕುನ್ನುಕ್ಕುಡಿ
ವೈದ್ಯನಾಥನ್ ಆರಾಧನೆಯ ನೇತೃತ್ವ ವಹಿಸುತ್ತಿದ್ದರು.

ಮಲೆನಾಡಿನ ಪವಿತ್ರ ಸ್ಥಳ ಶೃಂಗೇರಿ

ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಆದಿ ಶಂಕರರು ಸ್ಥಾಪಿಸಿದ ೪ ಪೀಠಗಳಗಳ್ಲಿ ಇದುನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ.

ಭಾನುವಾರದ ಮಳೆ, ಪಾಟೀಲರ ನಾಟಕ

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರೆ ಹಲವು ವರ್ಷಗಳ ಕಾಲ ಹಲವು ಸಮುದಾಯಗಳಲ್ಲಿ ಪಾಲ್ಗೊಂಡವರಿಗೆ ಗೊತ್ತಿರುತ್ತದೆ, ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ಆಮಂತ್ರಿಸುವ ಈ ರೀತಿ ಸಮುದಾಯಗಳಲ್ಲಿ ಹೊಸತೇನಲ್ಲ ಎಂಬುದು. ಸಮುದಾಯದಲ್ಲಿ ಸಮಾನತೆ ಕಾಣಿಸುವ ಹಲವು ವಿಷಯಗಳಲ್ಲಿ ಇದೂ ಒಂದು.

ಅಂದು 'ನಾಟಕ ಇದೆ, ಬನ್ನಿ' ಎಂದು ಬರೆದ ಲೇಖನ ಸರಿಯಾಗಿ ಪ್ರಕಟವಾಗಿಲ್ಲವೆಂದು ಜಯಲಕ್ಷ್ಮಿಯವರು ಸಂಪರ್ಕಿಸಿದಾಗ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸಿ "ನಾವೂ ಬರುತ್ತೇವೆ" ಅಂದಿದ್ದೆ. "ಬರ್ತೀರಾ?" ಎಂದು ಎರಡೆರಡು ಸಾರಿ ಕೇಳಿದ್ದರು, ಇವರೆಲ್ಲ ಕಂಪ್ಯೂಟರ್ ಬಿಟ್ಟು ಹೊರಗೆ ಹೋಗುವುದೇ ನಂಬಲಾಗದು ಎಂಬಂತೆ.

ಭಾನುವಾರ ಬಂತು, ನಾಟಕ ನೋಡೋಕೆ ಹೊರಟಿದ್ದೇನೋ ಸೈ, ಆದರೆ ಎಂದಿನಂತೆ ನಮ್ಮ ಪ್ರೋಗ್ರಾಮಿನಲ್ಲಿ twists ಎಂಡ್ turnsಉ. ಅರವಿಂದ ಮೈಸೂರಿನಿಂದ ಬಂದಿದ್ದ, ಅವ ಹಿಂದಿನ ದಿನ ಫೋನ್ ಮಾಡಿ "ಶ್ರೀನಗರದಲ್ಲಿದೀನಿ, ಸಿಗೋಣ್ವ?" ಅಂದಿದ್ದ.

ದಾರಿಯುದ್ದಕ್ಕು ಮಳೆ ಬೇರೆ ಭೋರ್ ಎಂದು ಹೊಡೆಯುತ್ತಿತ್ತು. ಪಾಲನಿಗೆ "ನೀನು ಆಶ್ರಮ ಬಸ್ ಸ್ಟಾಪಿಗೆ ಬಂದುಬಿಡು" ಎಂದು ಹೇಳಿ ಘಂಟೆಗಳೇ ಆಗಿಹೋಗಿತ್ತು. ಅವ ನಾಲ್ಕೈದು ಕಾಫಿ ಕುಡಿಯುತ್ತ, ನಮಗೆ ಕಾಯುತ್ತ ತಾಳ್ಮೆಯನ್ನು ಪರೀಕ್ಷೆಗೆ ಹಚ್ಚಿದ್ದ.