ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ರಾಜ" ಕಾರಣದಲ್ಲಿ ಕುಮಾರಸ್ವಾಮಿ

ದೇವೇಗೌಡರ ರಾಜಕೀಯ ಲೆಕ್ಕಾಚಾರದ ಬಗ್ಗೆ ರಾಜಕೀಯ ವಲಯ ಮಾತನಾಡತ್ತೆ. ಹಾಗಾದ್ರೆ ಈ ಸಲದ ಲೆಕ್ಕಾಚಾರ ಏನು ? ದೇವೇಗೌಡರು ತಮ್ಮ ಮಗನನ್ನೇಕೆ ಮುಂದೆ ಬಿಟ್ಟರು ? ಹಿಂದೆ ರಾಜ್ಯದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದಾಗಲೂ ಇದೇ ನಡೆಯನ್ನು ದೇವೇಗೌಡರು ಅನುಸರಿಸಿದ್ದರು. ಏನೀ ಲೆಕ್ಕಾಚಾರ ಕೊಂಚ ಇತಿಹಾಸದ ಜೊತೆ ಸಮೀಕರಿಸಿ ನೋಡಿ...

ಪಾರ್ಲಿಮೆಂಟ್ ಪೆಪ್ಪರ್‌ಮಿಂಟ್!

ಆತ್ಮೀಯ ಓದುಗ ಮಿತ್ರರೇ,
ನಮಸ್ಕಾರ.
ಬೆನ್ನುಹಾಕಿ ಹೋದವನನ್ನು ಚೆನ್ನಾದ ನುಡಿಗಳಿಂದ ವಾಪಸ್ ಕರೆದಿದ್ದೀರಿ. ನೀವು ಪ್ರೀತಿಯ ಆಹ್ವಾನ ನೀಡಿ ಬರೆದ ಎಲ್ಲ ಪ್ರತಿಕ್ರಿಯೆಗಳನ್ನೂ ನಾನು ಓದಿದ್ದೇನೆ. ಇನ್ನು ಮುಂದೆಯೂ ನೀವು ಬರೆಯುವ ಎಲ್ಲ ಪ್ರತಿಕ್ರಿಯೆಗಳನ್ನೂ ತಪ್ಪದೆ ಓದುತ್ತೇನೆ. ಮರುತ್ತರ ನೀಡುತ್ತಿಲ್ಲವೆಂದು ತಪ್ಪು ತಿಳಿಯಬೇಡಿ.

ಮೆನ್ಸ್ ಪಾರ್ಲರ್

ಅನೇಕ ದಿನಗಳಿಂದ ನನ್ನನ್ನು ಬಲು ಆಕರ್ಷಿಸಿದ್ದ ಇಬ್ಬರು ತರುಣರನ್ನು ಇಂದು ಮಾತನಾಡಿಸಲು
ಅವಕಾಶವಾಯ್ತು.ಸದಾ ಹಸನ್ಮುಖಿಗಳಾಗಿರುವ ಈ ಇಬ್ಬರು ತರುಣರು ತಾವು ಮಾಡುವ ಕಾಯಕದಲ್ಲಿ
ಕಿಂಚಿತ್ ಬೇಸರಿಸದೆ ಅದೆಷ್ಟು ಜನ ಗಿರಾಕಿಗಳು ಬಂದರೂ ಬಲು   ತಾಳ್ಮೆಯಿಂದ " ಕೇವಲ ಎರಡು

ದೊಡ್ಡ ಆಲದ ಮರ ಧರೆಗೆ ಉರುಳಿದಾಗ...........

ಶುಕ್ರವಾರ ಬೆಳಿಗ್ಗೆ... ನಾನು ಏಳುವುದು ತುಂಬ ತಡವಾಗಿತ್ತು....ರಾತ್ರಿ ಕೆಲಸ ಇತ್ತು ಅಂಥ ಲೇಟ್ ಆಗಿ ಮಕ್ಕೊಂಡಿದ್ದೆ.... ಬೆಳಿಗ್ಗೆ ಎದ್ದಾಗ 7:30 ಆಗಿತ್ತು... ಯಾಕೋ ಒಂದು ಥರ ಆಲಸ್ಯ....ಇವಾಗ ಏನು ವಾಕಿಂಗ್ ಗೆ ಹೋಗೋದು ಅಂಥ... ಸುಮ್ಮನೆ ಆಗಿ ಬಿಟ್ಟೆ.. ಅಪ್ಪ ಅಮ್ಮ ಇಬ್ಬರು ಯಾವಾಗಲೋ ಎದ್ದು ವಾಕಿಂಗ್ ಗೆ ಹೋಗಿದ್ದರು... ಸರಿ ಅಂಥ ನನ್ನ ಪಾಡಿಗೆ ನಾನು ಸೋಮ್ಬೇರಿಯಾಗಿ....ನಾಳೆ ಹೋದರಾಯಿತು ಅಂಥ ಪೇಪರ್ ಓದುತ್ತ ಕೂತಿದ್ದೆ . 8:00 ಗಂಟೆಗೆ ಅಮ್ಮ ಬಂದರು,, ಬರುತ್ತಿರಬೇಕಾದರೆ ಪಕ್ಕದ ಮನೆ ಅವರ ಹತ್ತಿರ...ಏನೋ ಮಾತಾಡ್ತಾ ಇದ್ದಿದು ಕೇಳಿಸ್ತು,, ಅಸ್ಪಷ್ಟವಾಗಿ...... ಅಮ್ಮ ಹೇಳ್ತಾ ಇದ್ರೂ..." ಹೌದು ರಾತ್ರಿ ಅಂತೆ ಆಗಿರೋದು..... ನೆನ್ನೆ ಮಧ್ಯಾನ ನೆ ಒಂದು ಕಡೆ ಬಿತ್ತಂತೆ...." ಅದಕ್ಕೆ ಪಕ್ಕದ ಮನೆ, ಎದುರುಮನೆ ಆಂಟಿ..." ಹೌದು ನಾವು ಹೋಗಿ ನೋಡ್ಕೊಂಡ್ ಬಂದ್ವಿ,,ರಾತ್ರಿ ೧೨:೦೦ ಗಂಟೆ ಗೆ ಅಂತೆ" ಅಂಥ ಹೇಳುತ್ತಾ ಇದ್ರೂ, ನನಗೆ ಇವರು ಯಾವ ವಿಷಯದ ಬಗ್ಗೆ ಮಾತಾಡ್ತಾ ಇದಾರೆ ಅಂಥ ಗೊತ್ತಾಗಲಿಲ್ಲ..... ಯಾರೋ ಸತ್ತು ಹೊಗಿರಬೇಕೆನೋ,,,,ಏನ್ ಕತೆನೋ.....ಅಂಥ ತಲೆಕೆಡಿಸಿ ಕೊಳ್ತಾ ಇದ್ದೆ ... ಸರಿ ಅಮ್ಮ ಮೇಲೆ ಹತ್ತಿ ಬರ್ತಾ ಇದ್ದರಲ್ವ ನೋಡೋಣ.....ಅವರೇ ಹೇಳ್ತಾರೆ ಏನೋ ಬಿಸಿ ಬಿಸಿ ಸುದ್ದಿ ಅಂಥ ಅನ್ಕೊಂಡೆ.....

ಸದರ್ಜನೆ

ವರಂ ದಾರಿದ್ರ್ಯಮನ್ಯಾಯಪ್ರಭವಾದ್ವಿಭವಾದಿಹ
ಕೃಶತಾಭಿಮತಾ ದೇಹೇ ಪೀನತಾ ನ ತು ಶೋಫತಃ

ಚುನಾವಣೆ---ಪರಿಣಾಮ

ಪರಿಣಾಮ ಹೊರಬಂದಿದೆ ಮತದಾರ ಮತ್ತೊಮ್ಮೆ ತನ್ನ ಪ್ರಭುತ್ವ ತೋರಿದ್ದಾನೆ.. ಯಾವ ಜಾತಿ,ಧರ್ಮ,ರಾಮ
ಮಸೀದಿ ಅವನ ಮೇಲೆ ಪರಿಣಾಮ ಬೀರಿಲ್ಲ. ಅವನಿಗನಿಸಿದ್ದನ್ನು ನೇರವಾಗಿ ಹೇಳಿದ್ದಾನೆ ಅವನ ನೇರ ನುಡಿ ಹಲವ
ರನ್ನು ಬೆಚ್ಚಿ ಬೀಳಿಸಿದೆ...ಹಲವರಿಗೆ ಖುಷಿ ಕೆಲವರಿಗೆ ಕಳವಳ. ಈ ಪರಿಣಾಮ ಯಾಕೆ ಹೀಗೆ ಬಿಜೆಪಿ ತಲೆ ಕೆಡಿಸಿ
ಕೊಂಡಿದೆ ಆದರೇನು ಕೈ ಮೀರಿ ಹೋಗಿದೆ....

ಹನಿಗವನದ ಅಣಿಮುತ್ತುಗಳು-೩

ಪ್ರತಿಯೊಬ್ಬರೂ
ಸಾಯುತ್ತಾರೆ
ಆದರೆ
ಪ್ರತಿಯೊಬ್ಬರೂ
ಜೀವಿಸುವುದಿಲ್ಲ!

****
ಆಶಾವಾದಿ
ರೆಕ್ಕೆಗಳನ್ನು
ಬೆಳೆಸಿದರೆ
ನಿರಾಶಾವಾದಿ
ಊರುಗೋಲು
ಖರೀದಿಸುತ್ತಾನೆ!

****

ಕೊನೇ ಕ್ಷಣದ ತನಕ
ಹೆಣಗಾಡುವುದು
ಕೊನೆಯ ಕ್ಷಣದ ಬಳಿಕ
ಹೆಣವಾಗುವುದು
ಇದೇನಾ ಬದುಕ?

****

ಜೀವನ ಅ೦ದ್ರೆ
ಒ೦ದು ರೈಲುಬ೦ಡಿ
ಕೆಲವರು ಹತ್ತುತ್ತಿರುತ್ತಾರೆ.
ಕೆಲವರು ಇಳಿಯುತ್ತಿರುತ್ತಾರೆ.