ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನುಗ್ರಹ ದಿನ

ಪ.ಪೂ. ಶ್ರೀ ಶ್ರೀಕಾಂತ ಗುರೂಜಿಯವರು ಪ.ಪೂ. ಶ್ರೀ ಶ್ರೀ ಶಂಕರಲಿಂಗ ಭಗವಾನರಿಂದ ಅನುಗ್ರಹವನ್ನು ಪಡೆದ ೧೨ನೇ ವರ್ಷದ ದಿನಾಚರಣೆಯನ್ನು ಮೈಸೂರಿನಲ್ಲಿ ದಿನಾಂಕ ೧೯-೦೫-೨೦೦೯ ರಂದು ಜಯಲಕ್ಷ್ಮೀಪುರಂನಲ್ಲಿರುವ ಪ್ರಸನ್ನ ಪಾರ್ವತಿ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ ೮ ಗಂಟೆಯಿಂದ ಆಚರಿಸಲಾಗುತ್ತಿದೆ. ಪ.ಪೂ.

ಇಡಗುಂಜಿ ಗಣಪತಿ ದೇವಸ್ಥಾನ

ಕರಾವಳಿಯ ಪ್ರಸಿದ್ಧ ಆರು ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿಗೆ ವಿಶೇಷ ಸ್ಥಾನ. ಏಕೆಂದರೆ ಇಲ್ಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಚೌತಿಯಂದು ಹಾಗೂ ಸಂಕಷ್ಟಿಯಂದು ೫೦೦೦೦ ಕ್ಕೂ ಮೇಲ್ಪಟ್ಟಿನ ಜನಸಾಗರ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ೧೪ ಕಿ.ಮೀ ದೂರವಿರುವ ನಿಸರ್ಗ ರಮಣೀಯ ಕ್ಷೇತ್ರ. ಹಿಂದೆ ಈ ಕ್ಷೇತ್ರಕ್ಕೆ ಇಡಕುಂಜಾವನ, ಕುಂಜವನ, ಗುಂಜಾವನ ಎಂಬ ಪುರಾತನ ಹೆಸರುಗಳಿವೆ. ಕರಾವಳಿಯ ಹಲವು ಕ್ಷೇತ್ರಗಳಂತೆ ಈ ಕ್ಷೇತ್ರಕ್ಕೂ ಪುರಾತನ ಹೆಸರುಗಳಿವೆ.

ನನ್ನವಳಿಗೆ……

ಕಾಣದ ಮನಸಿನ ತು೦ಬಾ
ಪ್ರೀತಿಯ ಅಕ್ಷರವಿದೆಯೋ
ಮಿ೦ಚುವ ಕಣ್ಣಿನ ಒಳಗೆ
ಸ್ನೇಹದ ಅಕ್ಕರೆ ಇದೆಯೋ
ಜೀವನದ ಪ್ರತಿ ಪುಟದೊಳಗೆ
ನಿನ್ನದೆ ಬಣ್ಣದ ಚಿತ್ರ
ಸಾಧನೆಯ ಪ್ರತಿ ನಡೆಯಲ್ಲಿ
ನಿ೦ತಿದೆ ನಿನ ನೆನಪಿನ ಚಿತ್ರ
ಬಾರೆನ್ನ ಒಲವೇ ನನ್ನೊಲವೇ

ಆಗಸದ ಮಳೆಬಿಲ್ಲಿನಲೂ
ನಿನ ಚೆಲುವಿನ ಪ್ರತಿಬಿ೦ಬ
ಕೈಗೆ ಸಿಗದ೦ತೆ ನಿ೦ತು
ಕರೆಯುವ ಪರಿಯೇ ಚೆ೦ದ
ಬಾನಿನಾ ತಾರೆಯ೦ತೆ

ನಾಲ್ಕು ಹನಿ

ನನ್ನಾಕೆ ಆಗಾಗ್ಗೆ
ನೀಡುತ್ತಿದ್ದ ಮುತ್ತಿನ
ಹಿಂದೆ!
ಮುತ್ತಿನ ಹಾರದ
ರಹಸ್ಯ ಇದೆ ಎಂದು
ನಾ ತಿಳಿಯದಾದೆ.

----------------

ನಾಚಿದಾಗಲೆಲ್ಲ
ಈಗಲೂ ಮೂಡುತ್ತದೆ
ನನ್ನವಳ ಗಲ್ಲದಲ್ಲಿ
ಹೊಳಿ ಹಬ್ಬದ
ರಂದು!!

---------------

ಎಲ್ಲವನ್ನು
ಮರೆಯುವೆ
ನನ್ನವಳ ಸಿಹಿ
ಮುತ್ತಿನ ಮತ್ತಿನಲ್ಲಿ!!
ಎಲ್ಲದನ್ನು
ಕತ್ತಲಾಗಿಸುವೆ
ನನ್ನವಳ ಸೀರೆ
ಸೆರಗಿನ ಮರೆಯಲ್ಲಿ!!

-----------------
ಸಂಗೀತ ಇಷ್ಟ

ಹನಿ ಹನಿಯಾದರೂ ಒಂದೇ ಕವನ!!!

ಜನ ಜಾತ್ರೆಯ ನಡುವೆಯೂ ನನಗೆ
ನನ್ನ ಒಂಟಿತನ ಕಾಡುತ್ತಿದ್ದಾಗ
ಅಂದುಕೊಳ್ಳುತ್ತಿದ್ದೆ ನಾನು ನನ್ನ
ಅದೃಷ್ಟದಲ್ಲಿ ಜೊತೆಗಾರರಿಲ್ಲೆಂದು;

ಒಂದು ದಿನ ಆಕಸ್ಮಿಕವಾಗಿ ನಿನ್ನ
ಗೆಳೆತನವಾದಾಗ ಅಂದುಕೊಂಡೆ
ನಾನು ನನ್ನ ಹಸ್ತರೇಖೆಯಲೇ
ಏನೋ ವಿಶೇಷತೆಯಿರಬೇಕೆಂದು!!!

ಇಂದು ಯಾರದೋ ಹರಕೆಯ
ಕೊರತೆ ಇದೆ ನನ್ನೀ ಬಾಳಲಿ
ಅದಕೇನೋ ನೋಡಿ ಹನಿಗಳು
ತುಂಬಿವೆ ನನ್ನೀ ಕಂಗಳಲಿ

ನೀವು ಕೇಳಿದಿರಿ - ೧ . ೫

*ಅಪ್ಪನ ಮ್ಯಾಜಿಕ್ ಗೆ ಗೆದ್ದ ಮಗ .

-ಇನ್ನೆಲೆಲ್ಲಿ ಮ್ಯಾಜಿಕ್ ಮಾಡಿದ್ದಾರೋ ಅಪ್ಪ ! :D
++++
*ಮೇಡಂ ಹು ಅಂದ್ರೆ ಕುಮ್ಮಿನು ಆಗ್ತಾರಂತೆ ಮಂತ್ರಿ .

-ಕೊಡಲೇಬೇಕು ಕುರ್ಚಿ , ಅವ್ರಾಕಿ ಹೆಣ್ಣು ನಮ್ಮದ ತೆನಿ ಅಂದ್ರಂತೆ ಗೌಡ್ರು .
++++++
*ಯು ಪಿ ಎ ಗೆ ಬೇಕಿಲ್ಲವಂತೆ ಕೈ ಕೊಟ್ಟ ಮಿತ್ರರು .

-ಪರರ ಸಂಗ ನಮಗೆತಕೈಯ್ಯ ಅನ್ನೋ ದಾಸರ ಪದ ಕೇಳಿರಬೇಕು ಅನ್ಸುತ್ತೆ .
+++++

ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ



ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ
ಗೂಗಲ್ ಶೋಧ ಸೇವೆಗೆ ಹೊಸ ತೆರನ ಪ್ರತಿಸ್ಪರ್ಧಿ ಎಂದು ಬಿಂಬಿತವಾಗಿರುವ ವೂಲ್ಫಾರ್ಮ್ ಆಲ್ಫಾ http://www.wolframalpha.com
ಸೇವೆ ಇದೀಗ ಲಭ್ಯ.ಈ ಸೇವೆ ’ಇಂಡಿಯಾ"ದಂತಹ ಪದಗಳಿಗೆ ಅತ್ಯಂತ ಉಪಯುಕ್ತ ವರದಿ ತಯಾರಿಸಿ

ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ

ಆತ್ಮೀಯರೆ,

ಕನ್ನಡ ಪ್ರಭದ ಪತ್ರಿಕೆಯಲ್ಲಿ ನನ್ನ ಹೊಸ ಅಂಕಣ "ಗಣಕಿಂಡಿ" ಇಂದಿನಿಂದ ಪ್ರಾರಂಭವಾಗಿದೆ. ಅದರಲ್ಲಿ ಒಂದು ಜಾಲತಾಣ, ಉಪಯುಕ್ತ ಡೌನ್‌ಲೋಡ್, ಸ್ವಾರಸ್ಯಕರ ಸುದ್ದಿ, ಸಲಹೆ ಮತ್ತು ಜೋಕುಗಳಿವೆ. ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಅಂತರಜಾಲದಲ್ಲಿ ಓದುವವರಿಗೆ ಕೊಂಡಿಗಳು-
PDF ಆವೃತ್ತಿ - http://www.kannadaprabha.com/pdf/epaper.asp?pdfdate=5/18/2009