ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕತ್ತರಿ ಬಂಧ

ಮೊನ್ನೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ. ಬರುವಾದ ಓವಱ ತಾಯಿ ತನ್ನ ಮಗುವನ್ನೆತ್ತಿಕೊಂಡು ಹಿಂತಿರುಗುತ್ತಿದ್ದಳು. ಸುಮಾರು 3-4 ವಷಱದ ದಷ್ಟಪುಷ್ಟವಾಗಿಯೇ ಬೆಳೆದಿದ್ದ ಮಗು ಚಾಕೀ ಚಾಕೀ ಎಂದು ಜೋರಾಗಿ ಅಳುತ್ತಾ ರಂಪಾಟ ಮಾಡುತ್ತಿತ್ತು.

ಅರಣ್ಯ ರೋದನ

ಅನಿಲ್‍ರಮೇಶ್ ಅವರ ಈ ಸುಂದರ ಚಿತ್ರ ನೋಡಿದಾಗ ಆದ ಸಂತೋಷ ಮತ್ತೆ ಶಿವು ಅವರ ‘ಮರ ಉಳಿಸಿ, ಮೆಟ್ರೊ ಕಳಿಸಿ’ ಬ್ಲಾಗ್ ಓದಿದಾಗ ಆದ ಆತಂಕವೇ ನನ್ನ ಈ ಅಳಲಿಗೆ ಕಾರಣವಾದವು.
ಓ ರವಿತೇಜ....
ನಿನ್ನ ತಡೆದು, ಇಳೆಗೆ ನೆರಳನೀವ
ಭಾಗ್ಯ ನನಗಿನ್ನಿಲ್ಲ ದೊರೆಯೇ,
ಹುಲುಮಾನವರೆನ್ನ ಕುಲವನೀಗ
ಸಂಪೂರ್ಣ ನಾಶದಾ ಹಾದಿಗಟ್ಟಿಹರು - ನಿನಗೆ
ತಡೆಯಿಲ್ಲದಂತೆ ಕದವ ತೆರೆದಿಹರು

ನೀವು ಕೇಳದಿರಿ - 5

* ಶ್ರುತಿ-ಮಹೇಂದರ್ ವಿರಸವಂತೆ?

- ಹೌದು. ಶ್ರುತಿಯ ಸರಸ ಸಂಗೀತದಲ್ಲಿ ಈಗ ವಿರಸದ ಅಪಶ್ರುತಿ ಮೂಡಿದೆ. ನಿನ್ನೆವರೆಗೂ ಇಂದ್ರ-ಚಂದ್ರ-ಮಹೇಂದ್ರ; ಈಗ, ’ಆ ಮಹೇಂದ್ರ ಯಾವ ಮಹಾ ಇಂದ್ರ?’

+++

* ಐಪಿಎಲ್ ಮ್ಯಾಚ್ ನೋಡೋಕೆ ಸ್ಟೇಡಿಯಂನಲ್ಲಿ ಜನರೇ ಇಲ್ಲವಂತೆ!

- ಮ್ಯಾಚ್ ಇಲ್ಲಿ ಅಲ್ಲ, ಆದ್ದರಿಂದ ಜನ ಅಲ್ಲಿ ಇಲ್ಲ.
(ಲಲಿತ್ ಮೋದಿಯೇ ಕಾರಣ ಬಲ್ಲ. ಆತನ ಸೊಕ್ಕಿನ ಫಲವೇ ಎಲ್ಲ!)

+++

ಹಸಿರು ಹಸಿರು ಕನಸುಗಳು

ಕನಸುಗಳಿಗೇನು ಬಿಡಿ, ಲೆಕ್ಕವಿಲ್ಲದಷ್ಟಿರುತ್ತವೆ. ಆದರೆ ಕೆಲವಿರುತ್ತವೆ ಕನಸುಗಳು..ಓಹ್!! ಅವೆಷ್ಟು ತೀವ್ರವಾಗಿರುತ್ತವೆ ಎಂದರೆ ಅವು ನನಸಾಗಿಬಿಟ್ಟರೆ ಬಹುಶಃ ನಾವು ಅಷ್ಟೊಂದು ಆನಂದ ಪಡುವುದಿಲ್ಲ ಏಕೆಂದರೆ ಆ ಕನಸುಗಳನ್ನು ಮತ್ತೆ ಕಾಣಲು ಸಾಧ್ಯವಿಲ್ಲವಲ್ಲ. ಅಂಥವೇ ನನ್ನದೊಂದೆರೆಡು ಕನಸುಗಳಿವೆ. ಇದನ್ನು ಏಕೆ ಬರೆಯುತ್ತಿದ್ದೇನೆಂದರೆ ಅಕಸ್ಮಾತ್ ಅವು ಪೂರೈಸುವ ಸಾಧ್ಯತೆಗಳು ಕಂಡರೆ ಆ ಎಕ್ಸೈಟ್ ಮೆಂಟ್ ಅನ್ನು ಹೇಳಿಕೊಂಡು ಸ್ವಲ್ಪ ಅದನ್ನು ತಹಬಂದಿಗೆ ತಂದು ಕೊಳ್ಳಲು ಸಾಧ್ಯವಾಗುತ್ತದೆ ಎಂದು. ನಾನು ಮತ್ತೆ ಅವು ಸಾಧ್ಯವಾಗುತ್ತಿವೆ ಅಂತ ಬರೆದರೆ, ನೀವೆಲ್ಲಾ ‘ಸಂತೋಷ, ನಿಮಗೆ ಗುಡ್ ಲಕ್’ ಅಂತೆಲ್ಲಾ ಬರೀತೀರಲ್ಲಾ, ಆಗ ಆ ನನ್ನ ಸಂತೋಷ ಇನ್ನೂ ಜಾಸ್ತಿಯಾಗುತ್ತದೆ. ಇರಲಿ ಪೀಠಿಕೆಯೇ ಮುಗಿಯುವುದಿಲ್ಲ ನನ್ನ ಮಾತಿನಲ್ಲಿ..ಮಾತು ಕಮ್ಮಿ ಮಾಡಬೇಕು ಅಂತ ಅದೆಷ್ಟು ಹೊಸ ವರ್ಷಗಳಲ್ಲಿ ರೆಸೊಲ್ಯೂಷನ್ ಮಾಡಿಕೊಂಡಿದ್ದೇನೋ..ಬಿಡಿ ಬಿಡಿ ಈಗ ನನ್ನ ಕನಸುಗಳನ್ನು ಕೇಳಿ ಪ್ಲೀಸ್..

ಒಂದು ಸಾರಿ, ಜೀವನದಲ್ಲಿ ಒಂದು ಸಾರಿ ಲೇಡಿ ಮ್ಯಾಕ್‘ಬೆತ್ ಪಾತ್ರ ಮಾಡಬೇಕು. ಅಬ್ಬಾ ಎಂಥಾ ಹೆಂಗಸು ಆಕೆ! ಅಂಥಾ ಕ್ರೌರ್ಯ, ಅಂಥಾ ತೀವ್ರವಾದ ಆಸೆ ಜೊತೆಗೆ ಅತ್ಯಂತ ಪ್ರಾಕ್ಟಿಕಲ್ ಮತ್ತು ತೀಕ್ಷ್ಣ ಬುದ್ಢಿ. ಎದೆಹಾಲು ಕುಡಿಯುತ್ತಾ ನಗುತ್ತಿರುವ ಮಗುವನ್ನು ಎದೆಯಿಂದ ಕಿತ್ತು ನೆಲಕ್ಕಪ್ಪಳಿಸಿ ಕೊಲ್ಲುವ ಕ್ರೌರ್ಯವನ್ನು ಬೇಡುತ್ತಾಳೆ ಅವಳು!! ಅದ್ಯಾವ ಘಳಿಗೆಯೋ ಅವಳಿಗೆ ಅದು ಸಿದ್ಢಿಸಿಯೂಬಿಡುತ್ತದೆ..ಎಲ್ಲಾ ನಾಶ,ಎಲ್ಲಾ ರಕ್ತಪಾತದ ನಂತರ ಅದರಿಂದ ಪಡೆದ ಏನನ್ನೂ ಅನುಭವಿಸದೆ ಹುಚ್ಚಿಯಾಗಿ ಉಳಿದೆಲ್ಲಾ ಜೀವನವನ್ನೂ ಕೈಗೆ ಮೆತ್ತಿದ ಭ್ರಾಮಕ ರಕ್ತವನ್ನು ತೊಳೆಯುವುದರಲ್ಲೇ ಕಳೆದು ಸಾಯುತ್ತಾಳೆ. ಅಬ್ಬಾ!! ಶೇಕ್‍ಸ್ಪಿಯರ್!! ಪ್ರತಿ ರಂಗಕರ್ಮಿಯೂ ಈ ಮಹಾಶಯನ ಫೋಟೋ ಇಟ್ಟುಕೊಂಡು ದಿನಾ ತುಪ್ಪದ ದೀಪ ಹಚ್ಚಬೇಕು. ಲೇಡಿ ಮ್ಯಾಕ್‘ಬೆತ್, ಇಯಾಗೋ ಎಂಥೆಂಥ ಪಾತ್ರಗಳನ್ನ ಸೃಷ್ಟಿಸಿದ್ದಾರಲ್ಲ. ಒಂದು ಸಾರಿ ಕನಿಷ್ಠ ಒಂದು ಸಾರಿಯಾದರೂ ಲೇಡಿ ಮ್ಯಾಕ್‘ಬೆತ್ ಆಗಬೇಕು ನಾನು. ಅದು ನನಸಾದ ದಿನ ಅದರ ಶೋ ಯಾವತ್ತು ಎಲ್ಲಿ ಇದೆ ಅನ್ನೋದನ್ನ ಇಲ್ಲೇ ಬರೀತೀನಿ. ನೀವೆಲ್ಲಾ ಪ್ಲೀಸ್ ಬರಬೇಕು. ಇದನ್ನ ಬರೆಯುತ್ತಿರುವಾಗಲೇ ನನ್ನ ಹೃದಯದ ಬಡಿತ ಹೆಚ್ಚಾಗುತ್ತಿದೆ.

ಮೊದಲ ದಿನವೇ ಮನಸ್ಸು ನೊಂದುಕೊಂಡರೆ!!!

ಯಾವ ಸಾಧನೆಗೋ ಏನೋ ಈ ಪ್ರವೇಶ ಪರೀಕ್ಷೆ
ಸಾಮಾನ್ಯ ಎಂದರೂ ಇದು ಅಸಾಮಾನ್ಯ ಪರೀಕ್ಷೆ

ಜೀವಶಾಸ್ತ್ರದ ಪ್ರಶ್ನೆಗಳು ಕಹಿ-ಸಿಹಿ ಪಾನಕದಂತೆ
ಗಣಿತಶಾಸ್ತ್ರದವು ಇದ್ದವು ಕಬ್ಬಿಣದ ಕಡಲೆಗಳಂತೆ

ಸಮಯದ ಕೊರತೆಯಲಿ ಮನ ಬೇಸರಗೊಂಡಾಗ
ಅರಿತ ಉತ್ತರಗಳೂ ನೆನಪಾಗುವುದಿಲ್ಲ ಅಲ್ಲಿ ಆಗ

ಮಗಳ ಮುಖವಾಗಿತ್ತು ಮೋಡದ ಮರೆಯ ಚಂದಿರ
ಆ ಮನದ ದುಗುಡ ತಂದಿದೆ ಹೆತ್ತವರಿಗೂ ಬೇಸರ

ಪತ್ರೊಡೆ

ಕೆಸು Araceae ವಂಶಕ್ಕೆ ಸೇರಿದ, ಏಷಿಯಾದ ಜವುಗು ಪ್ರದೇಶಗಳಲ್ಲಿ ಕಂಡು ಬರುವ, ಏಕದಳ ಸಸ್ಯ. ಎಲೆಗಳು ಹೃದಯಾಕಾರದಲ್ಲಿ ಇದ್ದು, ಎಲೆಯ ಮೇಲ್ಮೈ ತೈಲ ಸವರಿದಂತೆ ನುಣುಪಾಗಿದ್ದು, ನೀರಿನ ಹನಿ ಜಾರುವಂತಿರುತ್ತದೆ. ನೆಲದೊಳಗೆ ಹುದುಗಿರುವ ಗಡ್ಡೆ, ನೆಲದ ಮಟ್ಟದಿಂದಲೇ ಕವಲೊಡೆದ ಮೃದುವಾದ ಕಾಂಡ, ಕಾಂಡಕ್ಕೊಂದೇ ಎಲೆ ಈ ಗಿಡದ ಸಾಮಾನ್ಯ ರೂಪ.

ಕೆಸುವಿನಲ್ಲೇ ಹಲವು ಪ್ರಭೇದಗಳಿದ್ದರೂ ನಮ್ಮ ಪ್ರಯೋಜನ ದೃಷ್ಟಿಯಿಂದ ಬೆಳಿ ಕೆಸು, ಕರಿ ಕೆಸು, ಮರ ಕೆಸು ಈ ಹೆಸರುಗಳನ್ನಷ್ಟೇ ತಿಳಿದುಕೊಂಡರೆ ಸಾಕು. ಬಿಳಿ ಕೆಸು ತಿಳಿ ಹಸುರು ಬಣ್ಣದ ಕಾಂಡ ಮತ್ತು ಎಲೆಯಂಚು ಹೊಂದಿದ್ದರೆ, ಕರಿ ಕೆಸು ಕಡು ಕಪ್ಪು ಬಣ್ಣವನ್ನು ಹೋಲುವ ಕಾಂಡ, ಎಲೆಯಂಚು ಹೊಂದಿದೆ. ಮರದ ಮೇಲೆ ಆರ್ಕಿಡ್ನಂತೆ ಬೆಳೆಯುವುದು ಮರ ಕೆಸು. ಉಡುಪಿ, ದ.ಕ.ಗಳಲ್ಲಿ ತಯಾರಿಸುವ ಪತ್ರೊಡೆಗೆ ಇವೇ ಎಲೆಗಳನ್ನು ಅನಾದಿ ಕಾಲದಿಂದ ಬಳಸಿಕೊಂಡು ಬರುತ್ತಿದ್ದಾರೆ. ಗುಜರಾತಲ್ಲೂ ಈ ಬಗೆಯ ಖಾದ್ಯ ಮಾಡಿ ಅದಕ್ಕೆ "ಪಾತ್ರ" ಎಂಬ ಹೆಸರನ್ನು ಇಟ್ಟಿದ್ದಾರಾದರೂ, ಎರಡರ ರುಚಿಯನ್ನೂ ಸವಿದ ನನ್ನ ನಾಲಿಗೆ ನಿಶ್ಪಕ್ಷಪಾತಿಯಾಗಿ ಪತ್ರೊಡೆಯತ್ತ ಒಲವು ತೋರಿಸಿದ್ದರಿಂದ "ಪಾತ್ರ"ವನ್ನು ಕಡೆಗಾಣಿಸಲಾಗಿದೆ. ಮೇಲೆ ತಿಳಿಸಿದ ಎಲೆಗಳನ್ನು ರುಚಿಯ ದೃಷ್ಟಿಯಿಂದ, ಮೃದುತ್ವದ ದೃಷ್ಟಿಯಿಂದ ಸಮೀಕರಣದಲ್ಲಿ ಹೀಗೆ ವಿವರಿಸಬಹುದು: ಬಿಳಿ ಕೆಸು < ಕರಿ ಕೆಸು < ಮರ ಕೆಸು.

ಚಂದ್ರಾಯಣ!

ಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.

ಲಿನಕ್ಸಾಯಣ - ೫೫ - ಉಬುಂಟು ೯.೦೪ ನಲ್ಲಿ ಕನ್ನಡ - ೩

ಈಗ ಕನ್ನಡ ಓದ್ಲಿಕ್ಕೆ, ಬರೀಲಿಕ್ಕೆ ಆಯ್ತು. ಈಗ ಕನ್ನಡದ ಲಾಗಿನ್ ಪೇಜ್  ಹಾಗು ಮೆನು ಇತ್ಯಾದಿಗಳನ್ನು ಕನ್ನಡದಲ್ಲಿ ಕಾಣೋದು ಹ್ಯಾಗೆ? ನೋಡೋಣ್ವಾ?

 ಮೊದಲ ಲೇಖನದಲ್ಲಿ ಕನ್ನಡ ಭಾಷೆಯ ಸಪೋರ್ಟ್ ಹ್ಯಾಗೆ ಹಾಕಿಕೊಳ್ಳೋದು ಅಂತ ತಿಳಿದುಕೊಂಡಿದ್ದೀವಿ ಅಲ್ವಾ? ನೆನಪಿಗೆ ಬರ್ತಿಲ್ಲಾ ಅಂತಂದ್ರೆ ಈ ಕೆಳಗಿನ ಚಿತ್ರ ನೋಡಿ, ಜ್ಞಾಪಕ ಬರುತ್ತೆ.