ನಾನು ಇತ್ತೀಚಿಗೆ ಓದಿದ ಕಾದಂಬರಿ

ನಾನು ಇತ್ತೀಚಿಗೆ ಓದಿದ ಕಾದಂಬರಿ

ಎಲ್ಲರಿಗೂ ನಮಸ್ಕಾರಗಳು
ಹೌದು! ನೀವು ಕೇಳಿದ್ದು ನಿಜ. ನಾನು ಇತ್ತೀಚಿಗೆ ಓದಿದ ಕಾದಂಬರಿಯ ಬಗೆಗೆ ಬರೆಯುವ ಆಸೆಯಾಯಿತು. ಅಂದ ಹಾಗೆ ನಾನು ಇತ್ತೀಚಿಗೆ ಓದಿದ ಕಾದಂಬರಿ, ಎಸ್.ಎಲ್. ಭೈರಪ್ಪನವರ "ದೂರ ಸರಿದರು". ಭೈರಪ್ಪನವರ ಕಾದಂಬರಿಗಳಲ್ಲಿನ ಒಂದು ಸಾಮಾನ್ಯ ಅಂಶವೆಂದರೆ, ಅದು ಓದುಗರನ್ನು ಯಾವಾಗಲೂ ತುಡಿಯುವಂತೆ ಮಾಡುವುದು. ಒಬ್ಬ ಓದುಗನಿಗೆ ಆ ಒಂದು ಕಾದಂಬರಿಯಲ್ಲಿಯೇ ಮೂರು ನಾಲ್ಕು ಕಾದಂಬರಿಗಳನ್ನು ಓದಿದ ಅನುಭವ ಉಂಟಾಗುತ್ತದೆ. ಅದು ಭೈರಪ್ಪನವರ ಕಾದಂಬರಿಗಳ ವೈಶಿಷ್ಟ್ಯ. ಓದುಗನಿಗೆ, ತಮ್ಮ ಭಾಷೆಯ ಮೂಲಕ ಅಥವಾ ತಮ್ಮ ತತ್ವಶಾಸ್ತ್ರದ ಬಗೆಗಿನ ಆಳವಾದ ಜ್ಞಾನದ ಮೂಲಕ ಯಾವುದೋ ಲೋಕಕ್ಕೆ ಕರೆದೊಯ್ದರೂ, ವಾಸ್ತವಕ್ಕೆ ಹತ್ತಿರವಾಗಿ ನಮ್ಮ ಜೀವನಕ್ಕೆ ಸಮೀಪವಾಗಿ ಸಾಗುವಂಥದು.
"ದೂರ ಸರಿದರು" ಕಾವ್ಯಾತ್ಮಕವಾಗಿ ರಸವತ್ತಾದ ಕಥೆಯಾದರೂ, ವಾಸ್ತವವನ್ನು ಸಮೀಕರಿಸಿರುವುದರಿಂದ ಜೀವನಕ್ಕೆ ಬಹು ಹತ್ತಿರವಾಗಿ ತೋರುತ್ತದೆ. "ದೂರ ಸರಿದರು" ಸರ್ವಕಾಲಿಕ ಸತ್ಯವಾದ ಪ್ರೀತಿ ಮತ್ತು ತ್ಯಾಗಗಳನ್ನು ಬಿಂಬಿಸುವ ಒಂದು ಅನನ್ಯವಾದ ಕಾದಂಬರಿ. ಬಹುಶಃ ಅವರ ಕಾದಂಬರಿಗಳೆಲ್ಲಾ ಇದೇ ಕಾರಣಕ್ಕಾಗಿ ಓದುಗರನ್ನು ಆಕರ್ಷಿಸುತ್ತದೆ. ಅವರ ಕಾದಂಬರಿಗಳಲ್ಲಿನ ವಸ್ತುವಿನ ಗಟ್ಟಿತನ, ರಸವತ್ತಾದ ನಿರೂಪಣೆ, ಜೀವನ ಮೌಲ್ಯಗಳು, ಮತ್ತು ಭಾಷೆಯ ಆ ಸವಿ, ಕೆಲವೇ ಕೆಲವು ಇನ್ನಿತರ ಲೇಖಕರಿಗೆ ಎಟುಕಬಹುದಾದ ಹಣ್ಣು ಎಂದರೆ ಅತಿಶಯೋಕ್ತಿಯಾಗಲಾರದು. ಇದೇ ಬೇರೆಯ ಕಾದಂಬರಿಗಳಿಗೂ, ಭೈರಪ್ಪನವರ ಕಾದಂಬರಿಗಳಿಗೂ ಇರುವ ಒಂದು ಬಹು ದೊಡ್ಡ ಅಂತರ ಎಂಬುದು ನನ್ನ ಅಭಿಪ್ರಾಯ.

Rating
No votes yet

Comments