ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ಅಪೂರ್ಣ ಕವಿತೆ...

ಮರೆಯಲಾಗದ ಕಹಿನೆನಪು
ಹರಿದ ಹಾಳೆಗಳಲ್ಲಿ...
ಹರಿವ ಕಣ್ಣೀರು, ದುಃಖ ಉಮ್ಮಳಿಸಲು
ಬೇಡವೀ ಜೀವನ....

ಜೀವನದ ಕಹಿ ಗಳಿಗೆಯಲ್ಲಿ ತೋಚಿದ ಕವನವನ್ನು ನನ್ನ ಡೈರಿಯಲ್ಲಿ ಗೀಚಿದ್ದೆ. ಇನ್ನೇನು ಜೀವನಕ್ಕೆ ವಿದಾಯ ಹಾಡುವ ಯೋಚನೆ ಒಂದೇ ಸಮನೆ ನನ್ನ ಹೃದಯದ ಬಾಗಿಲು ತಟ್ಟುತ್ತಿತ್ತು. ಆಮೇಲೆ ಏನೂ ಯೋಚಿಸಿಲ್ಲ...

ಸುಟ್ಫು ಹಾಕಿದೆ ಜಾತಕ ‍‍‍‍‍: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

ಸುಟ್ಟು ಹಾಕಿದೆ ಜಾತಕ

ನಾನು ರಜಾದಿನಗಳನ್ನು ಕಳೆಯಲು ಭದ್ರಾವತಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪಕ್ಕದ ಮನೆಯಲ್ಲಿದ್ದ ಒಬ್ಬರು ಕೈಯ ರೇಖೆಗಳನ್ನು ನೋಡಿ ಭವಿಷ್ಯ ಹೇಳುತ್ತಿದ್ದರು. ಭೂತಕಾಲಕ್ಕಿಂತ ಭವಿಷ್ಯದ ಬಗ್ಗೆ ಮನುಷ್ಯನಿಗೆ ಆಸಕ್ತಿ. ನನಗೂ ಭವಿಷ್ಯ ತಿಳಿಯುವ ತವಕ. ಅವರನ್ನು ಕಾಡಿಸಿ ಪೀಡಿಸಿ ನನ್ನ ಭವಿಷ್ಯವನ್ನು ಕೇಳಿದೆ. ನಿನಗೆ ವಿದ್ಯೆ ಹತ್ತುವುದಿಲ್ಲವೆಂದು ಅವರು ಭವಿಷ್ಯ ನುಡಿದರು. ಓದುವುದರಲ್ಲಿ ಹಿಂದಿದ್ದ ನನಗೆ ಅವರ ಭವಿಷ್ಯ ನಿಜವಾಗಬಹುದೇನೋ ಎಂಬ ಭಯ ಕಾಡತೊಡಗಿತು.

ಅಬ್ಬಾ ಒಂದು ಓಟು ಹಾಕಲು ಎಷ್ಟೊಂದು ಕಷ್ಟ!

"ಬೇಗಾ ಬಾ ಓಟು ಹಾಕೋ ಟೈಮ್ ಮುಗಿದು ಹೋಗುತ್ತೆ " ಅಂತ ಇವರು ಆತುರ ಪಡಿಸಿದರು
ಎಲ್ಲೋ ಇಟ್ಟಿದ್ದ ಓಟರ್ ಐಡಿ ಕಾರ್ಡ್ ಹುಡುಕಿ ತೆಗೆದುಕೊಂಡೆವು
ನನ್ನ ಒಂದೊಂದೂ ಓಟು ಎಷ್ಟು ಅಮೂಲ್ಯ ಎನ್ನುವುದನ್ನು ನೆನೆದುಕೊಂಡು ಬೇಗ ಬೇಗ ಹೊರಟಿದ್ದಾಯ್ತು
ಮತ ಕಟ್ಟೆಗೆ ಹೋದ ನಂತರ ಲಿಸ್ಟ್‌ನಲ್ಲಿ ನಮ್ಮಗಳ ಹೆಸರೇ ಇರಲಿಲ್ಲ

ಬಿಂದಾಸ್ ಸೈಕಲ್ ಗಳು ಗುರು

ಸೈಕಲ್ ಜ೦ಗಮ ಬ್ಲಾಗ್ ಶಿವನ ಕೃಪೆಯಿಂದ ಸೃಷ್ಟಿಯಾದ ಬ್ಲಾಗು.ಇದರ ಉದ್ದೇಶ ಸೈಕಲ್ ಬಗ್ಗೆ ಬರೆಯುವುದು ಮತ್ತು ಸೈಕಲ್ ಯಾತ್ರೆಯನ್ನು ಶಿವಕ್ಷೇತ್ರಕ್ಕೆ ಮಾಡುವುದು ಆಗಿತ್ತು. ಎಷ್ಟೋ ದಿನ ನಾನು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಏನನ್ನು ಬರಯಲಾಗಲಿಲ್ಲಾ. ಮತ್ತೆ ಶಿವನ ಕೃಪೆ ನನ್ನನ್ನು ಎಚ್ಚರಿಸಿ ನನ್ನನ್ನು ಕಾರ್ಯೋನ್ಮುಖನನ್ನಾಗಿಸಿದೆ.

ಕನ್ನಡದಲ್ಲಿ ಪ್ರೊಗ್ರಾಮಿಂಗ್

ನಿವೆಲ್ಲಾ ಬಾಳ್ ಸರತೀ ಯೊಚಿಸಿರಬಹುಬದು programming language ಎಲ್ಲಾ englishನ್ಯಾಗ್ ಅಸ್ಟ್ ಅದಾವಲಾ ಅಂತ !!!! ಆದರ್ ಈಗ್ ನಾವು C# ಬಳಸಕೊಂದು
ಕನ್ನಡದಾಗು programming ಮಾಡಬಹುದು...

C#ಲ್ಲಿ
unicode ಅಕ್ಷರಗಳನ್ನ್ ಉಪಯೊಗಿಸೊಕ್ಕ್ ಅನೂಕುಲ ಇರೊದರಿಂದ್,
ಪುರ್ತಿ ಅಲ್ಲದಿದ್ದರು class names, method names ಮತ್ತ್ property ಎಲ್ಲಾ ಕನ್ನಡದಾಗ್ define ಮಾಡಿ ಬಳಸಬಹುದು.

ಇವ್ವತ್ತೆ ಇದನ್ನಾ try ಮಾಡಿ

ಸಂಸಾರ ಸಾಗರದಿ ಕಂಪ್ಯೂಟರ್ conceptsಉ

ನಮ್ಮ ಮನೆ ಬಟ್ಟೆ ಒಗೆವ ಹೆಂಗಸಿನ ಮಗ ಅಮೇರಿಕಕ್ಕೆ ಹೋಗಿಬಂದ ಮೇಲೆ ದಿನವೂ ವಿಶಾಲೂದು ಒಂದೇ ವರಾತ... ನೀವೂ ಒಂದು ಕಂಪ್ಯೂಟರ್ ಕೋರ್ಸ್ ಮಾಡಿ. ನಿಮಗೂ ಹೊರದೇಶಕ್ಕೆ ಹೋಗೋ ಅವಕಾಶ ಒದ್ದುಗೊಂಡು ಬರಬಹುದು ಅಂತ. ನಾನು ಅರ್ಥಾತ್ ರಾಮಣ್ಣಿ ಒಬ್ಬ ಸೀದಾ ಸಾದಾ ಮನುಷ್ಯ. ಅತೀ ದೊಡ್ಡ ಟೆಕ್ನಾಲಜಿ ಅಂತೆಲ್ಲ ತಲೆ ಕೆಡಿಸಿಕೊಳ್ಳುವಂತಹ ಜಾಯಮಾನದವನಲ್ಲ.... ಹಾಗಂತ ನನಗೆ ಕಂಪ್ಯೂಟರ್ ಬಗ್ಗೆ ಜ್ಞ್ನಾನ ಇಲ್ಲ ಅಂತಲ್ಲ. ನಮ್ಮ ಆಫ಼ೀಸಿನಲ್ಲೂ ಎಷ್ಟು ಬೇಕೋ ಅಷ್ಟು ಉಪಯೋಗಿಸುವದನ್ನು ಕಲಿತಿದ್ದೀನಿ.... ಈ ಜಾವಾ, ಭಾವಾ ಅಂತೆಲ್ಲ ಕಲಿಯೋದಕ್ಕೆ ಯಾಕೋ ಮನ ಹಿಂಜರಿಯುತ್ತಿದೆ...

ಹೀಗಿರುವಾಗ ದೂರದ ನೆಂಟನ ಮಗ UK ಗೆ ಹೊರಟು ನಿಂತಿದ್ದ.... ಒಂದು ವರ್ಷದ ಪ್ರಾಜೆಕ್ಟ್’ಗಾಗಿ ... ಮೊದಲ ಬಾರಿಗೆ ಹೊರದೇಶಕ್ಕೆ ಹೋಗುತ್ತಿದ್ದಾನೆ. ಹಾಗಾಗಿ ಅವನ ಜೊತೆ ಅಪ್ಪ-ಅಮ್ಮ ಇಬ್ಬರೂ ಶಿವಮೊಗ್ಗದಿಂದ ನಮ್ಮ ಮನೆಗೆ ಬಂದು ಸಂಜೆಗೆ ಇಲ್ಲಿಂದ ಏರ್ಪೋರ್ಟ್’ಗೆ ಹೋಗುವುದು ಎಂದು ತೀರ್ಮಾನ ಮಾಡಿದ್ದರು.

ಗಂಡ ಹೆಂಡತಿ ಹಾಗೂ ಮಗರಾಯನ ಸವಾರಿ ಬೆಳಿಗ್ಗೆ ಕಾಫಿ ಸಮಯಕ್ಕೇ ಆಯಿತು. ನಾನೂ ರಜೆ ಹಾಕಿದ್ದೆ ಅನ್ನಿ. ಸ್ವಲ್ಪ ಹೊತ್ತು ಮಲಗಿ ನಂತರ ಎದ್ದು ಕಾಫೀ ಕುಡಿಯುತ್ತೇನೆ ಎಂದು ಅಶೋಕ ಅಂದರೆ ನನ್ನ ನೆಂಟನ ಮಗರಾಯ ಕೋಣೆ ಸೇರಿ ಮಲಗಿದ. ಅಲ್ಲಾ, ಶಿವಮೊಗ್ಗದಿಂದ ಬೆಂಗಳೂರಿಗೆ ಬಂದೇ ಇವನಿಗೆ ಜೆಟ್ಲ್ಯಾಗ್ ಆದರೆ ಇನ್ನು ಯು.ಕೆ ಗೆ ಹೋಗಿ ಇನ್ನೆಷ್ಟು ಸುಧಾರಿಸಿಕೊಳ್ಳುತ್ತಾನೋ ಏನೋ ?

ಲಂಡನ್ ಪಬ್ಬಿನ ಜಗಳ ಹಾಗು ಸಹಾಯಕ್ಕೆ ಬಂದ PAN ಕಾರ್ಡು

ಇದು ಸುಮಾರು ಎರಡೂವರೆ ವರ್ಷದ ಹಿಂದೆ ನಡೆದ ಘಟನೆ, ಅಂದ್ರೆ November 2006. ಆ ವರ್ಷ ಸೆಪ್ಟೆಂಬರಿನಲ್ಲಿ ನಾನು ಮೊದಲ ಬಾರಿ ವಿದೇಶಕ್ಕೆ ಕಾಲಿಟ್ಟಿದ್ದು.
ನಾನು ಭಾರತದಿಂದ ಹೊರಗೆ ಕಾಲಿಟ್ಟ ಮೊದಲ ದೇಶ England. ಲಂಡನ್ನಿನಿಂದ ಸುಮಾರು ೬೦ ಮೈಲಿ ದೂರ ಇದ್ದ BASILDON ಅನ್ನೋ ಊರಲ್ಲಿ ನನ್ನ ಕೆಲಸ ಇದ್ದದ್ದು.

ದೇವರು- ಅದೊಂದು ಸಂಸ್ಕೃತಿ, ಸಂಸ್ಕೃತಿ ಪಲ್ಲಟ ನಿಲ್ಲಲಿ.

ಹಿನ್ನಲೆ..

 

ಕೊನೆ ವಾರ ಪೂರ್ತಿ ಊರಲ್ಲಿದ್ದೆ. ಹಾಗೇನೆ ಮನೆಗೆ ಕೆಲವೊಂದು ಸಾಮಾನು ತರಬೇಕಿತ್ತು. ಅಜ್ಜಂಪುರಕ್ಕೆ ಹೋದೆ. ಅಜ್ಜಂಪುರ ನಮಗೆ ೨೫-೩೦ ನಿಮಿಶದ ದೂರ.

 

ಹರಿಹರದಲ್ಲಿರುವ ಇರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಕೊಡಲಾದೀತಾ

ನಾವು ಶನಿವಾರ ಹರಿಹರಕ್ಕೆ ಕೆಲಸದ ಮೇಲೆ ಹೋಗುತ್ತಿದ್ದೇವೆ
ಹಾಗೆ ಅಲ್ಲಿ ಯಾವುದಾದರೂ ಪ್ರೇಕ್ಷಣೀಯ ಸ್ಥಳಗಳಿದ್ದರೆ ಮಾಹಿತಿ ಗೊತ್ತಿದ್ದರೆ ಕೊಡಲಾದಿಈತಾ