ಬಿಂದಾಸ್ ಸೈಕಲ್ ಗಳು ಗುರು

ಬಿಂದಾಸ್ ಸೈಕಲ್ ಗಳು ಗುರು

ಬರಹ

ಸೈಕಲ್ ಜ೦ಗಮ ಬ್ಲಾಗ್ ಶಿವನ ಕೃಪೆಯಿಂದ ಸೃಷ್ಟಿಯಾದ ಬ್ಲಾಗು.ಇದರ ಉದ್ದೇಶ ಸೈಕಲ್ ಬಗ್ಗೆ ಬರೆಯುವುದು ಮತ್ತು ಸೈಕಲ್ ಯಾತ್ರೆಯನ್ನು ಶಿವಕ್ಷೇತ್ರಕ್ಕೆ ಮಾಡುವುದು ಆಗಿತ್ತು. ಎಷ್ಟೋ ದಿನ ನಾನು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಏನನ್ನು ಬರಯಲಾಗಲಿಲ್ಲಾ. ಮತ್ತೆ ಶಿವನ ಕೃಪೆ ನನ್ನನ್ನು ಎಚ್ಚರಿಸಿ ನನ್ನನ್ನು ಕಾರ್ಯೋನ್ಮುಖನನ್ನಾಗಿಸಿದೆ. ಬಹುಶ: ಕನ್ನಡದ ಈ-ಜಗತ್ತಿನಲ್ಲಿ ಸೈಕಲ್ ವಿಷಯವಾದ ಬ್ಲಾಗ್ ಅಂದರೆ ಇದೆ ಅನ್ಸುತ್ತೆ.

ಸ್ವಲ್ಪ ದಿನದ ಹಿಂದೆ ಒಂದು ಸೈಕಲ್ ಡಿಸೈನ್ ಪಂದ್ಯ ನಡೆಯಿತು.ಅದರಲ್ಲಿ ಯಾವ ಸೈಕಲ್ ಡಿಸೈನ್ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಸಾಮಾನ್ಯರೂ ಬಳಸುವಂತಹುದು ಹಾಗೂ ಮೆಚ್ಚುವಂತಹುದು ಎಂಬ ಚರ್ಚೆ ಇಂದ ಪ್ರಾರಂಭಗೊಂಡು ಜಗತ್ತಿನ ಮೂಲೆ ಮೂಲೆಯಿಂದ ಎಲ್ಲರು ತಮ್ ತಮ್ಮ್ ಡಿಸೈನ್ ಕಳಿಸಿದರು. ಗೆದದ್ದು ಈ ಸೈಕಲ್ . ಯಾಕ್ ಗೊತ್ತಾ ? ಬೇರೆ ಸೈಕಲ್ ಓಡಿಸಿದರೆ ಬೆನ್ನು ನೋವಾಗಬಹುದು. ಈ ಸೈಕಲ್ ಓಡಿಸಿದರೆ ಕರ್ ಓಡಿಸುವ ಮಜ ಮತ್ತು ಸೈಕಲ್ ಓಡಿಸುವ ಮಜ ಎರಡು ಒಟ್ಟಿಗೆ ಬರುತ್ತೆ. ಮಳೆ ಬಂದರೂ ಚಿಂತೆ ಮಾಡೋದು ಬೇಡಾ ಗುರು. ಸೈಕಲ್ ತುಳಿಯುತ್ತಾ ಇರಬಹುದು.
Cycle Design WinnerDesign Winnerಇದೇ ಪಂದ್ಯದಲ್ಲಿ ಆಯ್ಕೆಯಾದ ಮತ್ತೊಂದು ಬೈಕು ಮಡಚಿ ಕಂಕುಳಲ್ಲಿ ಒಯ್ಯುವ ಸೈಕು.foldableಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ ..ಇದೇನು ಸೈಕಲ್ ಡಿಸೈನ್ ಮಾಡೋದಕ್ಕೂ ಇಷ್ಟೋಂದು ವೈವಿಧ್ಯತೆ ಇದೆಯೆ ಅನ್ನಬಹುದು. ಹೌದು ಇದು ಜಗತ್ತಿನ ಅತ್ಯಂತ ಕುತೂಹಲಕಾರಿ ಹಾಗೂ ಅತ್ಯಂತ ಮನೋರಂಜನೆಯನ್ನು ತರುವ ಕೆಲಸ. ಅದಲ್ಲದೇ ಸೈಕಲ್ ಸಣ್ಣ ಮಕ್ಕಳಿಂದ ಹಿಡಿದು ಮುದುಕರು ಬಯಸುವ ವಾಹನ. ಇದಕ್ಕೆ ವಯಸ್ಸು ಎಷ್ಟಿದ್ದರೂ ಪರಿವಿಲ್ಲಾ,ಜೇಬಿನಲ್ಲಿ ಹಣವಿಲ್ಲದಿದ್ದರೂ ಪರಿವಿಲ್ಲಾ ದೇಹದಲ್ಲಿ ದೃಢವಾದ ಆರೋಗ್ಯ ಉಮ್ಮಸ್ಸು ಇದ್ದರೆ ಸಾಕು.ಬನ್ನಿ ಕೆಲವು ನವ ವಿನ್ಯಾಸ ಗಳನ್ನು ಜೋಡಿಸಿ ಮಾಡಿದ ಸೈಕಲ್ಲ್ ಗಳ ನ್ನು ನೋಡೋಣ.New CycleYankode BikeyankodesignTwo wheel bike

ಇನ್ನು ನಿಮ್ಗೇ ಈ ವಿಷಯದಲ್ಲಿ ಇನ್ನೂ ಪರಿಣಿತಿ ಪಡೀ ಬೇಕು ಅಂದರೆ ಈ ಪುಸ್ತಕ ಓದಿ."Mike Burrows - Bicycle design"

Book for cycle design

ಆಫ್ರಿಕಾ ದೇಶದಲ್ಲಿ ಬಿದಿರು ಜಾಸ್ತಿ , ಅದರಿಂದ ಬಿದಿರಿನ ಸೈಕಲ್ ಮಾಡಿದರೆ ಅವರಿಗೆ ಅನುಕೂಲವಾಗುತ್ತದೆ.ಇದೇ ದೃಷ್ಟಿಯಿಂದ ಒಂದು ಬಿದಿರಿನ ಸೈಕಲ್ ಮಾಡಿ ಉಪಯೋಗಿಸುತ್ತಿದ್ದಾರೆ. ಇದನ್ನು ಕೊಲಂಬಿಯೋ ವಿಶ್ವ ವಿದ್ಯಾಲಯದವ್ರೂ ಮಾಡಿದ್ದರು.Bambooo Bikeನಮ್ಮ ದೇಶದಲ್ಲಿ ವಿಶ್ವ ವಿದ್ಯಾಲಯಗಳು ಏನ್ ಮಾಡುತ್ತವೆ ಅನ್ನೋದಕ್ಕೆ ಮೊನ್ನೆ ತಾನೇ ಬಿಡುಗಡೆಯಾದ ಸಿನಿಮಾ "ಜೋಷ್" ನೋಡಬೇಕು. ಬರೀ ಸಿಗರೇಟು ಹೆಂಡ ರಾಗಿಂಗು ಇಂತಹ ಗುಂಗಿನಲ್ಲಿ ಕಾಲ ಹರಣ ವಾಗುತ್ತೆ.ಈ ಸೈಕಲ್ ಬೆಲೆ ಕೇವಲ 2,500 ರೂಪಾಯಿಗಳು.

ನಾನು ಸಣ್ಣವನಾಗಿದ್ದಾಗ ಸರ್ಕಸ್ ನಲ್ಲಿ ಒಂದೇ ಚಕ್ರದ ಉದ್ದುದ್ದ ಸೈಕಲ್ ಓಡಿಸುತ್ತಿದ್ದರು. ಅದನ್ನು ಒಬ್ಬ ಜೋಕರ್ ಓಡಿಸುತ್ತಿದ್ದ. ಈ ತಮಾಷೆ ಸೈಕಲ್ ಓಡಿಸುವುದು ಕಷ್ಟವಾದರೂ ಪರಿಸರ ಹೋರಾಟಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.UnicycleUniccy22

ಈ ಒಂದು ಚಕ್ರದ ಸೈಕಲ್ ಇದ್ರೇ ಟ್ರಾಪಿಕ್ ಸಮಸ್ಯೆ ಇರೋದಿಲ್ಲಾ ಅಲ್ವಾ ?

ಮತ್ತೊಂದು ಮುಖ್ಯ ಸೈಕಲ್ ಅಂದರೆ ಮಡಚಿ ಕಂಕುಳಲ್ಲಿ ಇಟ್ಟುಕೊಳ್ಳುವ ಸೈಕಲ್. ಇದರ ಒಳ್ಳೆ ಮಾಡಲ್ ಅಂದರೆ Strida Bike. ಈ ಸೈಕಲ್ ಅತ್ಯಂತ ಜನಪ್ರಿಯ ಸೈಕಲ್. ಇದನ್ನು ನಿಮ್ಮ ಮಿತ್ರರೇನಾದರೂ ಪರದೇಶದಲ್ಲಿದ್ದರೆ ತರಿಸಿ. ತುಂಬಾ ಒಳ್ಳೇ ಬಕು. ಪುಟಾಣಿಯಾದರೂ ಒಳ್ಳೇ ಸ್ಪೀಡಾಗಿ ಹೋಗಬಹುದು. ಇದರ ಡಿಸೈನ್ ಮಾಡಿದ್ದು ಹಾಗೂ ಅದ್ರ ಚರಿತ್ರೆ ಎಲ್ಲಾದರ ಬಗ್ಗೆ ನೀವು ಇಲ್ಲಿ ವಿಡಿಯೋ ನೋಡಬಹುದು. ತುಂಬಾ ಒಳ್ಳೆ ವಿಡಿಯೋ .ನಮ್ಮ ದೇಶದಲ್ಲಿಯೂ ಇಂತಹ ಸೈಕಲ್ ಸಿಗುತ್ತದೆ.ಇದರ ಬೆಲೆ ಕೇವಲ 7500 ರೂಪಾಯಿ ಮಾತ್ರ.

Foldman ಅಂತಾ ಹೆಸರು. Hercules Company ಯ್ವ್ರೂ ಮಾರೋದು. ಇದು ಚೆನ್ನಾಗಿದೆ .Foldman

ಕಾರ್ ಇಟ್ಟುಕೊಂಡು mg ರಸ್ತೆಯಲ್ಲಿ ಸುತ್ತಾಡುವುದು ಯಾರಿಗೂ ಬೇಡವಾದ್ಕರ್ಮ. ಅದಕ್ಕೆ ಈ ಸೈಕಲ್ ಕಾರ್ ನಲ್ಲಿ ಇಟ್ಕೊಂಡು ದೂರ ಎಲ್ಲಿಯಾದರೂ ಕಾರ್ ನಿಲ್ಲಿಸಿ ಸೈಕಲ್ ಎತ್ತಿಕೊಂಡು mg ರಸ್ತೆಗೆ ಹೋಗಿ ಬಂದರಾಯ್ತು.

ಲಗ್ಗೇಜ್ ಎತ್ಕೊಂಡ್ ಹೋಗೋದಿಕೇ "ಬೇರೆ" ಸೈಕಲ್ ಪರದೇಶದವರು ಮಾಡಿಕೊಳ್ಳುತ್ತಾರೆ.ನಮ್ಮ ದೇಶದವ್ರು ಇರೋ ತಗಡು ಗಾಡಿಯಲ್ಲಿಯೇ ಇನ್ನೂ ಓಡಾಡ್ತಾ ಇದ್ದಾರೆ.ಇದನ್ನು ಕಾರ್ಗೋ ಬೈಕ್ ಅಂತಾ ಕರೆಯುತ್ತಾರೆ. ಇಲ್ಲಿ ನೋಡಿ ವಿಧ ವಿಧವಾದ ಕಾರ್ಗೋ ಬೈಕುಗಳನ್ನು. ನನಗನ್ಸತ್ತೆ ಈ ತರಹ ಕಾರ್ಗೋ ಸೈಕಲ್ ಮಾಡಿ ಬಿಟ್ರೇ ಒಳ್ಳೇ ಮಾರ್ಕೆಟ್ ಇದೆ ಅಂತಾ .
ನಿಮ್ಗೇನು ಅನ್ಸತ್ತೆ ?

Cargo1Cargo2Cargo3

ಮುಂದಿನ ಸರಿ ಬೆಂಗಳೂರಲ್ಲಿ ಸಿಗುವ ಸೈಕಲ್ ಗಳ ಬಗ್ಗೆ ತಿಳಿಯೋಣ. ನಂಗೆ ಒಳ್ಳೆ ಸೈಕಲ್ ಬೇಕು ಯಾವ ಸೈಕಲ್ ತಗೊಳ್ಳಿ ? ನನ್ನ ಮಗ ಸೈಕಲ್ ಕೇಳ್ತಾನೆ ಯಾವ ಸೈಕಲ್ ತಗೊಳ್ಳಿ ? ಎಲ್ಲಾ ಪ್ರಶ್ನೆಗೂ ಇಲ್ಲಿ ಉತ್ತರ ಸಿಗುತ್ತೆ . ಕಾದು ನೋಡಿ.ಸೈಕಲ್ ಜಂಗಮ ಮುಂದಿನ್ ವಾರ ಬರ್ತಾನೆ. ಸೈಕಲ್ ಗೆ ಸೈ ! ಮಹಾದೇವಂಗೆ ಜೈ !

-----ಇಲ್ಲಿ ಬಿಡುವಾದಾಗ ಬನ್ನಿ ಸೈಕಲ್ ಜ೦ಗಮ