ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೂ ಒಂದು ಮತ ಯಾಚನೆ!

ಮತದಾರರಿಗೆ ಹಲವಾರು ಭರವಸೆಗಳನ್ನು ನೀಡಿ, ತಗ್ಗಿ ಬಗ್ಗಿ ಮತಯಾಚಿಸುವ ಗೋಸುಂಬೆ ರಾಜಕಾರಣಿಗಳನ್ನು ನೋಡಿದ್ದೇವೆ.
ಮತಯಾಚನೆ ವೇಳೆ ಕೂಡಾ ಒಬ್ಬರನ್ನೊಬ್ಬರು ಅನುಕರಿಸುವ (ಕಾಪಿ ಹೊಡೆಯುವ) ಜಾಯಮಾನದ ರಾಜಕಾರಣಿಗಳ ಬಗ್ಗೆ ಗೆಳೆಯ ಹೇಳಿದ ಒಂದು ಹಾಸ್ಯ ನಿಮ್ಮ ಮುಂದಿಡುತ್ತಿದ್ದೇನೆ.

ಸುಮ್ನೆ !

ಅರೆ ... ಎಷ್ಟೋಂದು ದಿನ ಆಯ್ತು ನಾನು ಬರ್ದು!.... ಛೆ.. ಎನಾದ್ರೂ ಬರೀಬೇಕು...

 

ಕೊನೆ ವಾರ ಪೂರ್ತಿ ನೆಟ್ ಇಂದಾನೆ ದೂರ ಇದ್ದೆ.. ಅದಕ್ಕೂ ಮುಂಚೆ ಕಂಪ್ಯೂಟರ್ ಮುಂದೆ ಕೂತಿದ್ರೂ , ಸಂಪದದ ಬರಹ/ ಪ್ರತಿಕ್ರಿಯೆಗಳನ್ನು ಓದ್ತಾ ಇದ್ರೂ ಬರಿಯಕ್ಕೆ ತಾಳ್ಮೆ ಇರಲಿಲ್ಲ. ಅದೆಷ್ಟು ವಿಶಯಗಳು ತಲೆಗೆ ಬಂದು ಹೋದ್ವೊ...ಛೆ ತುಂಬಾ ಲಾಸು! ;)

ಉಡುಪಿ ಶ್ರೀಕೃಷ್ಣ ಅತ್ತು ಬಿಟ್ಟ!

ಶಿರೋನಾಮೆ ನೋಡಿ ಅಚ್ಚರಿ ಪಡಬೇಡಿ. ಆದ್ರೆ ಇದು ನಿಜ ಸಂಗತಿ...

ಅಂದು ನಮ್ಮ ಶಾಲೆಯ ವಾರ್ಷಿಕೋತ್ಸವ ದಿನ. ನಾನಾಗ ಎರಡನೇ ತರಗತಿ ವಿದ್ಯಾರ್ಥಿನಿ. ಎಲ್ಲಾ ಮಕ್ಕಳಂತೆ ನನಗೂ ಉತ್ಸಾಹ ಸಂಭ್ರಮ. ಅದಕ್ಕೆ ಕಾರಣವೂ ವಿಶೇಷವಾಗಿತ್ತು. ನಾನು ಇದೇ ಮೊದಲ ಬಾರಿಗೆ ನಾಟಕದಲ್ಲಿ ಅಭಿನಯಿಸುತ್ತಿದೆ. ಅದೂ ಒಂದಲ್ಲ ಎರಡು ನಾಟಕದಲ್ಲಿ ಪ್ಲಸ್ ಒಂದು ಸ್ವಾಗತ ನೃತ್ಯ. ಇನ್ನೇನು ಬೇಕು ಹೇಳಿ?

ನಾಟಕದಲ್ಲಿ ಅಭಿನಯಿಸಬೇಕೆಂಬುದು ಬಲು ದೊಡ್ಡ ಆಸೆಯಾಗಿತ್ತು. ಅಂತೆಯೇ ಯಕ್ಷಗಾನದಲ್ಲೂ ನನಗೆ ತುಂಬಾ ಆಸಕ್ತಿ. ಯಕ್ಷಗಾನದ ಊರಾದ ನಮ್ಮೂರ ಶಾಲೆಯಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದ್ದರೂ ನಾನಾಗ ಶಾಲೆಗೆ ಸೇರಿರಲಿಲ್ಲ. ನಾನು ಒಂದನೇ ಕ್ಲಾಸಿಗೆ ಸೇರಬೇಕಾದರೆ ಆ ಮೇಸ್ಟ್ರು ವರ್ಗವಾಗಿ ಹೋದರು. ಪಕ್ಕದ ಅಂಗನವಾಡಿಗೆ ಹೋಗಲು ಇಷ್ಟವಿಲ್ಲದಿದ್ದರೂ, ಶಾಲೆಯಲ್ಲಿ ನಡೆಯುವ ಯಕ್ಷಗಾನ ಕ್ಲಾಸಿಗೆ ತಪ್ಪದೆ ಹಾಜರಾಗುತ್ತಿದ್ದೆ. ಅಲ್ಲಿ ಕಲಿಸುತ್ತಿದ್ದುದ್ದನ್ನು ನೋಡಿ ಕುಳಿತುಕೊಳ್ಳುವುದೇ ಒಂಥರಾ ಖುಷಿ. ಇದಾದ ಮೇಲೆ ಮನೆಗೆ ಬಂದು ಅಮ್ಮ ಅಪ್ಪನ ಮುಂದೆ ಕಿರು ಬಯಲಾಟ ಪ್ರದರ್ಶನ. ಇಲ್ಲಿನ ಕಲಾವಿದರು ನಾನು, ನನ್ನ ಅಕ್ಕ ಮತ್ತು ಅಣ್ಣ. ಮನೆಯ ಮುಂದಿನ ಜಗಲಿಯೇ ನಮ್ಮ ಸ್ಟೇಜ್, ನನ್ನ ತಮ್ಮ, ಅಪ್ಪ ಅಮ್ಮನೇ ವೀಕ್ಷಕರು.

ನನ್ನ ಪ್ರಥಮಗಳು - ಈಜು ಕಲಿತಿದ್ದು - 1

ಹಿಂಗೆ ನಾನ್ಮೊದಲ್ನೆ ಸಲ ಮಾಡಿದ ಕೆಲವು ಸಾಧನೆ(!)ಗಳ್ನ ಜ್ನಾಪಿಸ್ಕಳಾನ ಅನ್ನಿಸ್ತು. ಯಾವುದ್ರದೂ ಡೇಟ್ ಜ್ನಾಪಕ ಇಲ್ಲ. ಒಂದೊಂದು ಸಾಧನೇದೂ ಒಂದೊಂದು ಕಥೆ. ಆದಷ್ಟೂ ಚಿಕ್ಕದಾಗಿ ಇಲ್ಲಿ ಬರೀತಿದೀನಿ.

ಮಸ್ತ್ ಹಾಲಿವುಡ್ ಚಿತ್ರಗಳ ದೇಶೀ ಶೀರ್ಷಿಕೆಗಳು...

ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಚಿತ್ರಗಳು...!

The good Shepard : ಮಸ್ತ್ ಕುರಿ ಕಾಯಾ೦ವ..
Saving private Ryan : ಹವಲ್ದಾರ್ ರಾಮ್ಯಾನ ಉಳಸ್ರಿ..
Body heat : ಮೈಯಾಗಿನ್ ಬಿಶಿ
spiderman : ಜಡ್ಬೂಡ್ ಮನ್ಷಾ
HP and the Sorcerer's Stone : ಹರ್ಯಾ ಕು೦ಬಾರ ಮತ್ತು ಜಾದೂಗಾರನ ಕಲ್ಲು
Terminator : ಮುಗ್ಸಾ೦ವ..!
Once upon a time in Mexico : ಒ೦ದ್ಸಲ ಮಹ೦ತೇಶ್ ನಗರ್ ನ್ಯಾಗ..
American pie : ಬೆಳಗಾ೦ವ್ ಕು೦ದಾ
American pie 2 : ಧಾರ್ವಾಡ್ ಪೇಡಾ

ದಶಲಕ್ಷ ಹಿಂಬಾಲಕರತ್ತ ಸಿಎನೆನ್

ದಶಲಕ್ಷ ಹಿಂಬಾಲಕರತ್ತ ಸಿಎನೆನ್

ದಶಲಕ್ಷ ಹಿಂಬಾಲಕರತ್ತ ಸಿಎನೆನ್
ಸಿ
ಎನ್ ಎನ್ ಸುದ್ದಿ ಚಾನೆಲ್ ಟ್ವಿಟರ್ ಖಾತೆ ಹೊಂದಿದೆ. ಇದರ ಬಿಸಿಬಿಸಿ ಸುದ್ದಿ ಟ್ವಿಟರ್
ಖಾತೆಯು ಈಗ ದಶಲಕ್ಷ ಚಂದಾದಾರರನ್ನು ಹೊಂದುವತ್ತ ದಾಪುಗಾಲಿಟ್ಟಿದೆ.ಬುಧವಾರದ ವೇಳೆಗೆ

ಮತ್ತೆ ಬದುಕ ಬಯಸುವೆ

ಅಮ್ಮನ ಮಡಿಲಲ್ಲಿ ಎಗ್ಗಿಲ್ಲದೆ ಮಲಗಿದ ಮುದ್ದಿನ ಮಗುವಾಗಿ
ಅಪ್ಪನ ನಡೆಯಲ್ಲಿ ನಿಖರ ಬಾಳ್ವೆಯ ಕಲಿತು ಬೆಳೆದ ಕಿರುಶಿಖರವಾಗಿ
ಅಕ್ಕನ ನಡು ಕೂಸಾಗಿ, ಅಣ್ಣನ ಬೆನ್ನೇರಿ ಮಾರದ ಕುರಿಮರಿಯಾಗಿ
ತ೦ಗಿ ತಮ್ಮರ ಆಟಕ್ಕೆ ಕುದುರೆಯಾಗಿ ಬೆಳೆದ ಆ ಕ್ಷಣಗಳ........

ಅಪ್ಪನ ಚುರುಕ್ ಚಪ್ಪಲಿ ಮೆಟ್ಟಿ, ಕಳೆದು ಬ೦ದ ಚಣಗಳ
ಅಣ್ಣನ ಹಳೆಯ ಅ೦ಗಿಯ ಮೊದಲು ಉಟ್ಟು ಮೆರೆದ ದಿನಗಳ

ಬದುಕು ,ಭಾವ ಮತ್ತು ನಾನು

ಪಟ್ ಪಿಟ್ ಟುಳುಮ್......................ಸದ್ದು ಮಾಡುತ್ತ ಆಗ ತಾನೇ ನಿಂತ ಮಳೆಯ ಹನಿಗಳು ಸೂರಿನಿಂದ ಕೆಳಗೆ ಅಂಗಳದಲ್ಲಿ ನಿಂತ ನೀರಿನ ಮೇಲೆ ಬೀಳುತ್ತಿತ್ತು .ಡುಂ ಡುಡುಂ ಎಂದು ಸದ್ದು ಮಾಡುತ್ತಿದ್ದ ಗುಡುಗು ,ಅದಕ್ಕೆ ತಾಳ ಬದ್ದವಾಗಿ ಬಂದು ಹೋಗುತಿದ್ದ ಮಿಂಚು ತಮ್ಮ ಆಟ ಇನ್ನು ಮುಗಿದಿಲ್ಲ ಎಂಬ ಸೂಚನೆ ಆಗಲೇ ಕೊಡುತ್ತಿದ್ದವು .

ನನ್ನ ದೇವರು

ಇರುವನ೦ತೆ ಅವನು.....
ನನ್ನ ನಿನ್ನ ಎಲ್ಲರ ಹೃದಯದಲಿ....!
ಸದಾ ಸುಖಿಯಲ್ಲವೆ ಅವನಿರುವ ಜಾಗ...!
ದುಖ:ವಿರುವುದೆ ಸದಾನ೦ದನ ಸದನದಲಿ.....!?
ಚಿದಾನ೦ದನಿರುವ ಚಿತ್ತದಲಿ....!?
ನೋವೆ೦ದು ನಲುಗಿದರೆ....
"ಬೆ೦ಕಿ ನೀರನು ಸುಟ್ಟ೦ತೆ"!!
ಆಟವಿದು ಆಡಿನಲಿ....!
ಪ್ರತಿ ಸೊಲಿನಲಡಗಿರುವ....
ಗೆಲುವ ತಿಳಿ...!
ನಗುತ ಬೆಳಿ.....!
ಸ೦ಪದದಲ್ಲಿ ಮೊದಲು ಬರೆದ ಕವಿತೆ ಇದು...