ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಳೆ ಪಾತ್ರೆ..ಹಳೆ ಕಬ್ಬಿಣ...

ಹಳೆ ಪಾತ್ರೆ..ಹಳೆ ಕಬ್ಬಿಣ..ಹಳೆ ದೀಪ..
ಅರೆ ಓಯ್..ಹಾಡು ಹೇಳುತ್ತಾ ಇದ್ದರೆ ನನ್ನ ಕತೆ ಸುರುಮಾಡುವುದು ಯಾವಾಗ?
ಈ ಹಳೇ ಐಟಮ್‌ಗಳು ಎಲ್ಲಿ ಸಿಕ್ಕಿದರೂ ಕೈಯಿಂದ ಉಜ್ಜುತ್ತಿದ್ದೇನೆ.
ಹಳೇ ಬಾಟಲ್‌( :) ) ಗಳ ಬಿರಡೆ ತೆಗೆದು ನೋಡುತ್ತಿದ್ದೇನೆ.
ಒಮ್ಮೆ ಜೀನೀ ನನ್ನ ಕೈವಶವಾದರೇ.. .. ..
ಯಾಕೆ ಅಂತೀರಾ -‘ಸಮಾಜ ಸೇವೆಗೆ’
ನಗಬೇಡಿ..ಈ ಜನರೇ ಹೀಗೆ-

ನಮಸ್ತೇ ಸಂಪದಿಗರೇ.......

ಎಲ್ಲರಿಗೂ ನಮಸ್ಕಾರ . ನಾನು ನಿಮ್ಮನೆ ಹುಡ್ಗಿ ಭವ್ಯ .... ಸಂಪದಿಗಳಾಗುವ ಆಸೆಯಿಂದ ಇಲ್ಲಿಗೆ ಬಂದಿದ್ದೀನಿ.. ಪ್ರಭಾವ ನಮ್ಮಕ್ಕಂದು . ಪಾಠ ಮಾಡ್ತಿದ್ದವಳ್ನಾ ಇಲ್ಲಿ ಕರೆದು ಕೂರ್ಸಿದ್ದಾಳೆ ನಮ್ಮಕ್ಕ. ಯಾರೂ ಅವಳು ಅಂತ ನೀವೇ ಗೆಸ್ ಮಾಡಿ . ಏನೋ ಬೇಸಿಗೆ ರಜೆಯ ಬೇಸರ ಕಳೆಯೋಕೂ ಸರಿ ಹೋಯ್ತು ಬಿಡಿ. ಏನಂತೀರಿ???? ನನಗೂ ಸ್ವಾಗತ ಇದೆ ತಾನೆ ನಿಮ್ ಕಡೆಯಿಂದ.

ಆಲ್ಬೆರ್ಟ್ ಐನ್ಸ್ಟೀನ್ ಜೀವನ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ

ಜನನ: ಮಾರ್ಚ್ ೧೪, ೧೮೭೯

ಮರಣ: ಏಪ್ರಿಲ್ ೧೮, ೧೯೫೫

ಜನ್ಮ ಸ್ಥಳ: ಜರ್ಮನಿಯ ಉಲ್ಮ್

ತ೦ದೆ: ಹರ್ಮನ್ ಐನ್ಸ್ಟೀನ್

ತಾಯಿ: ಪೌಲಿನ್

ಖುಶಿಯಾಗಿರಿ ... :-)

ಇತ್ತ ಬರಲು ಸಮಯವಿಲ್ಲ ಎಂದು ನಿರ್ಧರಿಸಿದ್ದೆ; ಆದರೂ, ಒಮ್ಮೆ ನೋಡಿ ಹೋಗುವ ಆಸೆಯಾಯ್ತು.
ಯಾರೋ ಹೇಳಿದಂತೆ "ಕೆಲವರು ಹೋದಲ್ಲೆಲ್ಲ ಖುಶಿ; ಕೆಲವರು ಹೋದರೆಂದರೇ ಖುಶಿ" ಎಂಬ ಮಾತು ನೆನಪಾಗ್ತಾ ಇದೆ.
ಖುಶಿಯಾಗಿರಿ ... :-)

ಅವಳು-ಇವಳು

ಅವಳು: ನಿನಗೆ ಬುದ್ದಿ ಇದೀಯ? ಅಷ್ಟು ಮಗುಮ್ಮಾಗಿ ಇದ್ದೆ ಕಾಲೇಜ್ ದಿನಗಳಲ್ಲಿ. ಏನ್
ಬಂದಿದ್ದಿದ್ದು ನಿನಗೆ? ಯಾಕೆ ಹೀಗಾಗಿ ಹೋದೆ?

ಇವಳು: ಏನಾಯ್ತು ಅಂತ ಹೀಗ್ ಕೂಗಾಡ್ತಿದೀಯೆ? ಕೂಲ್ ಡೌನ್.

ಅವಳು: ಇನ್ನು ಏನಾಗ್ಬೇಕು ಅಂತ ಇದೀಯ ಹೇಳು? ಈ ಫೋಟೋಗಳನ್ನ ನೋಡಿದ್ಯ? ಕರ್ಮ, ಅಸಹ್ಯ ಅನಿಸೋಲ್ವೇನೆ ನಿನಗೆ ಇದನ್ನೆಲ್ಲ ಮಾಡೋಕೆ?

ಇವಳು: ಅಸಹ್ಯ ಯಾಕನಿಸ್ಬೇಕು? ಅದೆಲ್ಲ ಗ್ಲಾಮರ್ ಲೋಕದಲ್ಲಿ ಸಹಜ. ಅದಕ್ಕಿಂತಲೂ ಕಡಿಮೆ
ಬಟ್ಟೆಯಲ್ಲಿ ಫೋಸ್ ಮಾಡೋರಿದಾರೆ ಗೊತ್ತ? ತೋರಿಸ್ಲ?

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು

(ಭಾಗ-೨)

ನನಗೆ ಮೊದಲಿನಿಂದಲೂ ಹೇಳಿಕೊಳ್ಳುವಂಥ ಬರೆಯುವ ತುಡಿತವೇನೂ ಇರಲಿಲ್ಲ. ಆದರೆ ಓದುವ ತುಡಿತಕ್ಕೆ ಏನೂ ಕೊರತೆಯಿರಲಿಲ್ಲ. ಕತೆ, ಕಾದಂಬರಿಗಳನ್ನು ಓದುತ್ತಲೇ ಇರುತ್ತಿದ್ದೆ. ಒಂದೊಂದು ಸಾರಿ ಮನೆಯವರಿಂದ “ಬರಿ ಕತೆ, ಕಾದಂಬರಿ ಓದಿದರೆ, ಪಠ್ಯಪುಸ್ತಕಗಳನ್ನು ಓದೋದು ಯಾವಾಗ?” ಎಂದು ಬೈಸಿಕೊಂಡಿದ್ದಿದೆ. ಹಾಗೆ ನೋಡಿದರೆ ನಾನು ಮೊಟ್ಟ ಮೊದಲಿಗೆ ಬರೆದಿದ್ದು ತೀರ ಆಕಸ್ಮಿಕವಾಗಿ. ಅಲ್ಲಿ ಯಾವುದೇ ಪೂರ್ವಯೋಜನೆಗಳಾಗಲಿ, ಸಿದ್ಧತೆಗಳಾಗಲಿ ಇರಲಿಲ್ಲ. ನನಗಿನ್ನೂ ಚನ್ನಾಗಿ ನೆನಪಿದೆ. ನಾನು ಮೊಟ್ಟಮೊದಲಿಗೆ ಬರೆದಿದ್ದು “ಮಳೆ” ಎನ್ನುವ ಕವನವನ್ನು. ಅದು ನಾನು S.S.L.C ಓದುತ್ತಿರಬೇಕಾದರೆ ಬರೆದಿದ್ದು. ಮಳೆಗಾಲದ ಒಂದು ದಿನ ಯಾವುದೋ leisure period ಇತ್ತು. ಕ್ಲಾಸ್ ರೂಮಿನಲ್ಲಿ ಕುಳಿತಂತೆ ಹೊರಗೆ ಮಳೆ ಹುಯ್ಯತೊಡಗಿತು. ಮೆಲ್ಲಗೆ ಮಳೆಮಣ್ಣಿನ ವಾಸನೆ ಮೂಗಿಗೆ ಅಡರಲಾರಂಭಿಸಿತು. ತಕ್ಷಣ ಅದೇನನ್ನಿಸಿತೋ ಗೊತ್ತಿಲ್ಲ ನೋಟ್ ಪುಸ್ತಕದ ಕೊನೆಯಲ್ಲಿ “ಹುಯ್ಯಿತು ಮಳೆ/ತೊಳೆಯಿತು ಕೊಳೆ” ಎಂದೇನೋ ಬಾಲಿಶವಾಗಿ ಬರೆದಿಟ್ಟೆ. ಆಮೇಲೆ ಅದನ್ನು ಮರೆತೂಬಿಟ್ಟೆ! ನಂತರ ಅದೆಲ್ಲಿ ಕಳೆದುಹೋಯಿತೋ ಗೊತ್ತಿಲ್ಲ. ಪುನಃ ಎರಡು ತಿಂಗಳು ಕಳೆದ ಮೇಲೆ ನಾನು ಬರೆದಿದ್ದನ್ನೇ ಜ್ಞಾಪಿಸಿಕೊಂಡು ಮತ್ತೆ ಅದೇ ಕವನವನ್ನು ಬರೆದೆ. ಈ ಸಾರಿ ಮುಂಚೆಗಿಂತ ಪರ್ವಾಗಿಲ್ಲ ಎನ್ನುವಷ್ಟರಮಟ್ಟಿಗೆ ಬರೆದಿದ್ದೇನೆಂದು ಅನಿಸುತಿತ್ತು. ಆದರೆ ಬಾಲಿಶತನ ಇನ್ನೂ ಮಾಯವಾಗಿರಲಿಲ್ಲ. ನಂತರ “ಹೊಸವರ್ಷ” ಎನ್ನುವ ಕವನವನ್ನು ಹಾಗು ಒಂದೆರಡು ಚುಟುಕುಗಳನ್ನು ಬರೆದೆನಂದು ಕಾಣುತ್ತದೆ. ಬರೆದಿದ್ದನ್ನು ಯಾಕೆ ಸಂಗ್ರಹಿಸಿಡಬಾರದೆಂದೆನಿಸಿ ನಾನು ಬರೆದ ಕವನಗಳನ್ನು ಒಂದೆಡೆ ಸಂಗ್ರಹಿಸಡತೊಡಗಿದೆ. ಆಮೇಲೆ ಪರೀಕ್ಷೆ ಅದು ಇದೂಂತಾ ಆಗಾಗ ಏನನ್ನೋ ಗೀಚಿಡುವದು ಕೂಡ ನಿಂತುಹೋಯಿತು. ನಮ್ಮ ಓದಿನ ಅವಧಿ ಮುಗಿಯುತ್ತಿದ್ದಂತೆ ನಾವೆಲ್ಲಾ ಸಹಪಾಠಿಗಳಿಂದ “ಆಟೋಗ್ರಾಫ್” ತೆಗೆದುಕೊಳ್ಳುವದು ಪರಿಪಾಠವಷ್ಟೆ? ಹೀಗಿರಬೇಕಾದರೆ ನನ್ನ ಸಹಪಾಠಿಯೊಬ್ಬಳು ಆಟೋಗ್ರಾಫ್ ಕೊಟ್ಟಳು. ಅದರಲ್ಲಿ “What do you want to become in future?” ಎನ್ನುವ ಕಾಲಂ ಇತ್ತು. ಎಲ್ಲರೂ ಡಾಕ್ಟರ್, ಇಂಜಿನೀಯರ್ ಅಂತ ಏನೇನೋ ಬರೆದಿದ್ದರೆ ನಾನು ಮಾತ್ರ ನನಗೆ ಅರಿವಿಲ್ಲದಂತೆ “writer” ಆಗುತ್ತೇನೆ ಎಂದು ಬರೆದುಕೊಟ್ಟಿದ್ದೆ. ಇದನ್ನು ನಾನು ಅಳೆದು ತೂಗಿ ಸಾಕಷ್ಟು ಯೋಚಿಸಿ ಬರೆದದ್ದಲ್ಲ. ಆಗ ತಾನೆ ಏನೇನೋ ಬರೆಯಲು ಆರಂಭಿಸಿದ ಹುಮ್ಮುಸ್ಸಿನಲ್ಲಿ ಬರೆದು ಕೊಟ್ಟಿದ್ದು.

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೨

ನನಗೆ ಮೊದಲಿನಿಂದಲೂ ಹೇಳಿಕೊಳ್ಳುವಂಥ ಬರೆಯುವ ತುಡಿತವೇನೂ ಇರಲಿಲ್ಲ. ಆದರೆ ಓದುವ ತುಡಿತಕ್ಕೆ ಏನೂ ಕೊರತೆಯಿರಲಿಲ್ಲ. ಕತೆ, ಕಾದಂಬರಿಗಳನ್ನು ಓದುತ್ತಲೇ ಇರುತ್ತಿದ್ದೆ. ಒಂದೊಂದು ಸಾರಿ ಮನೆಯವರಿಂದ “ಬರಿ ಕತೆ, ಕಾದಂಬರಿ ಓದಿದರೆ, ಪಠ್ಯಪುಸ್ತಕಗಳನ್ನು ಓದೋದು ಯಾವಾಗ?” ಎಂದು ಬೈಸಿಕೊಂಡಿದ್ದಿದೆ.

ಗುಮ್ಮ ಬಂತು ಗುಮ್ಮ

ಓದ್ತಾ, ಓದ್ತಾ ಕಣ್ಣು ಬಿಟ್ಟುಕೊಂಡೇ ಕೆಳಗಿರೋ ಚಿತ್ರ ನೋಡ್ತಿರಿ...

೧) ನಾನಾ ಗುಮ್ಮಾ? ಯಾವ ಗುಮ್ಮಾ?

೨) ನಾನೇಳ್ತೀನಿ..... ಗುಡ್ಡದ ಭೂತ....

೩) ಇಲ್ಲ ನಾನೇಳ್ತೀನಿ. ಇದು ನಮ್ಮನೆ ಪಕ್ಕದ್ದು...

೪) ಗುರ್ರ್ರ್ರ್.... ಟೈಮಾಯ್ತು... ಹೋಗಿ ಮಲಗ್ಕೋ....