ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ಸಣ್ಣ ತಲೆ - ಹರಟೆ

ಮೊನ್ನೆ ಸ್ನೇಹಿತರ ಮನೆಯಲ್ಲಿ ಸಂತೋಷ ಕೂಟವೊಂದಕ್ಕೆ ಹೋಗಿದ್ದೆ. ಅನೇಕ ಮನರಂಜನಾ ಕಾಯಱಕ್ರಮಗಳಲ್ಲಿ ಆಶು ಭಾಷಣವೂ ಇತ್ತು. ಎಲ್ಲರೂ ಬಲವಂತವಾಗಿ ನನ್ನನ್ನು ವೇದಿಕೆಗೆ ನೂಕಿದಾಗ ನನಗೆ ಬಂದ ವಿಷಯ ತಲೆ! ಮುಂದೆ ಮ್ಐಕು, ಸಾಕಷ್ಟು ಜನ ಮತ್ತು ಸಾವಱಜನಿಕವಾಗಿ ಧ್ಐಯಱವಾಗಿ ಮಾಡನಾಡಲು ಬಾರದ ಪರಿಸ್ಥಿತಿಯಿಂದ ನನ್ನ ತಲೆ ಬಿಸಿಯಾಯಿತು.

ಕೊನೆಗೂ ಫೈನ್ ಕಟ್ಟಿದೆ

ಯಾವಾಗಲೂ ಹಾಗೆ ಮಾಡುತ್ತಿದ್ದೆ ಒಂದಿನಾನೂ ಈ ಟ್ರಾಫಿಕ್ ಪೋಲೀಸರು ಹಿಡಿದಿರಲಿಲ್ಲ
ನೆನ್ನೆ ಎಂದಿನಂತೆ ಒನ್ ವೇ ನಲ್ಲಿ ಸ್ಕೂಟಿ ವಿರುದ್ದ ದಿಕ್ಕಿನಲ್ಲಿ ತಂದು ಟರ್ನ್ ಮಾಡಲು ಬರುತ್ತಿದ್ದಂತೆ
ಟ್ರಾಫಿಕ್ ಪೋಲೀಸ್ ತಡೆದರು. ಅವರು ನಂಗೆ ಗೊತ್ತಿರೋರೆ. ಯಾವಾಗಲೂ ನಾನು ಅದೇ ದಾರೀಲಿ ಹೋಗೋದು,
ಬರೋದು. ಆಗೆಲ್ಲಾ ತಡೆದಿರಲಿಲ್ಲ

ಶುಕ್ರಮಂಗಳಯುತಿ

ಇಷ್ಟು ದಿನಗಳ ನಂತರ ಮೋಡಗಳು ಸ್ವಲ್ಪ ಅನುವು ಮಾಡಿಕೊಟ್ಟಿದ್ದಱಿಂದ ಇಂದು (೧೫ನೇ ಏಪ್ರಿಲ್ ೨೦೦೯) ಬೆಳಿಗ್ಗೆ ೫.೩೦ಱಿಂದ ೬.೧೦ ಱವರೆಗೆ ಪೂರ್ವ ದಿಕ್ಕಿನಲ್ಲಿ ಪೂರ್ವದೆಡೆಗೆ ಶುಕ್ರನನ್ನು, ಸ್ವಲ್ಪ ಮೇಲೆ ಪಶ್ಚಿಮದೆಡೆಗೆ ಗುರುವನ್ನು ಮತ್ತು ನೆತ್ತಿಯಿಂದ ಸ್ವಲ್ಪ ಪಶ್ಚಿಮದೆಡೆಗೆ ಚಂದ್ರನನ್ನು ನೋಡಿದೆ.

" ಶ್ರೀ ಶಂಕರ ಜಯಂತಿ ಮಹೋತ್ಸವ "

ರವಿವಾರ, ೨೬, ಏಪ್ರಿಲ್, ೨೦೦೯ ರಿಂದ ಬುಧವಾರ, ೨೯, ಏಪ್ರಿಲ್, ೨೦೦೯

೧೮ ನೆಯವರ್ಷದ ಪ್ರತಿಷ್ಠಾಪನ ದಿನ. ಮಹಾಭಿಷೇಕ

ಶಾರದಾವಿದ್ಯಾಕೇಂದ್ರ,

ಶ್ರೀ ಶ್ರಿಂಗೇರಿ ಶಂಕರ ಮಠ ಚೌಕ್, ೫ನೆಯ ರಸ್ತೆ.

ಚೆಂಬೂರ್ ಡೈಮಂಡ್ ಗಾರ್ಡನ್ ನ ಹತ್ತಿರ, ಮುಂಬೈ-೪೦೦ ೦೭೧

ದೂರವಾಣಿ : ೨೫೨೦ ೬೯೭೮

ದಿನವೂ ಪ್ರವಚನವಿರುತ್ತದೆ.

ತಥಾಸ್ತು ಎನ್ನಿ

ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ,
ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ.

ನನ್ನನ್ನು ಕೇಳಿ,

ದೇವರು ಇದ್ದುದಾದಲ್ಲಿ,
ಇದ್ದೂ ಇಲ್ಲವಾಗಿದ್ದಾನೆ*.

ದೇವರು ಇಲ್ಲವಾದಲ್ಲಿ
ಇಲ್ಲದೆಯೂ ಇದ್ದಾನೆ#.

ಒಂದು ಘಟ್ಟ ಇಲ್ಲಿಗೆ,
ಸ್ವಲ್ಪ ಸಾವರಿಸಿಕೊಳ್ಳಿ,
ಈಗ ಬನ್ನಿ, ಮೇಲಕ್ಕೆ.

ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ,
ಅವರಿವರ ಮಾತು ಒಪ್ಪುವದಿಲ್ಲ,

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೧

“ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರ ಇದ್ದೇ ಇರುತ್ತಾನೆ” ಹೀಗೆಂದು ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಆದರೆ ಆ ಬರಹಗಾರ ಯಾವಾಗ ಮತ್ತು ಹೇಗೆ ಮೊಳಕೆಯೊಡೆದು ಹೊರಬರುತ್ತಾನೆ ಎಂದು ಹೇಳುವದು ಸ್ವಲ್ಪ ಕಷ್ಟವೇ. ಹಾಗೂ ಅವನನ್ನು ಬೆಳೆಸುವದು ಬಿಡುವದು ಆಯಾ ವ್ಯಕ್ತಿಯ ಅಭಿರುಚಿ, ಅಭಿವ್ಯಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ನನ್ನ ಬಂಜೀ ಜಂಪಿಂಗ್ ಅನುಭವ

ಬಂಜೀ ಜಂಪಿಂಗ್ ವೀಡಿಯೊ ಯುಟ್ಯೂಬ್ನಲ್ಲಿ ಇನ್ನೂ ಅಪ್ಲೋಡ್ ಮಾಡಿರ್ಲಿಲ್ಲ. ಅಷ್ಟರಲ್ಲಿ ನ್ಯೂಸ್ ಗೊತ್ತಾಯ್ತು. ಬೆಂಗಳೂರಲ್ಲಿ ಬಂಜೀ ಜಂಪಿಂಗ್ ಅಚಾತುರ್ಯದಲ್ಲಿ ಯುವಕನ ಸಾವು. ದೇವ್ರೇ!! ಮೈ ಒಂದ್ ಸಲ ನಡುಗ್ತು. ಮತ್ತೆ ವೀಡಿಯೊ ಅಪ್ಲೋಡ್ ಮಾಡ್ತಾ ಒಂದ್ ಸಲ ಅಂದ್ಕೊಂಡೆ "ಇದನ್ನ ಮನೇಲಿ ತೋರ್ಸಿದ್ರೆ ಮಂಗಳಾರತಿ ಗ್ಯಾರಂಟಿ".

ತುಂಬಾ ಹಳೇ ಪ್ರಶ್ನೆ...

ಜೀವನೋಪಾಯಕ್ಕಾಗಿ
ಸುತ್ತಾಡುತ್ತೇವೆ
ಊರೂರು,
ಪರಿಚಯವಾಗುತ್ತಾರೆ
ಜನರು, ಸಾವಿರಾರು.
ಹತ್ತಿರದವರು ಎನಿಸುವರು
ಅವರಲ್ಲಿ ಕೆಲ ನೂರು,
ತೀರ ನಮ್ಮವರೆನಿಸುವವರು
ಕೆಲವೇ ಕೆಲವರು.
ಅದೆಲ್ಲ ಇರಲಿ, ಈ ಪ್ರಶ್ನೆಗೆ
ಉತ್ತರ ಹೇಳುವವರರ್ಯಾರು?
ನಾನ್ಯಾರು?