" ಶ್ರೀ ಶಂಕರ ಜಯಂತಿ ಮಹೋತ್ಸವ "

" ಶ್ರೀ ಶಂಕರ ಜಯಂತಿ ಮಹೋತ್ಸವ "

ರವಿವಾರ, ೨೬, ಏಪ್ರಿಲ್, ೨೦೦೯ ರಿಂದ ಬುಧವಾರ, ೨೯, ಏಪ್ರಿಲ್, ೨೦೦೯

೧೮ ನೆಯವರ್ಷದ ಪ್ರತಿಷ್ಠಾಪನ ದಿನ. ಮಹಾಭಿಷೇಕ

ಶಾರದಾವಿದ್ಯಾಕೇಂದ್ರ,

ಶ್ರೀ ಶ್ರಿಂಗೇರಿ ಶಂಕರ ಮಠ ಚೌಕ್, ೫ನೆಯ ರಸ್ತೆ.

ಚೆಂಬೂರ್ ಡೈಮಂಡ್ ಗಾರ್ಡನ್ ನ ಹತ್ತಿರ, ಮುಂಬೈ-೪೦೦ ೦೭೧

ದೂರವಾಣಿ : ೨೫೨೦ ೬೯೭೮

ದಿನವೂ ಪ್ರವಚನವಿರುತ್ತದೆ.

೨೯ ರವರೆಗೆ, ಗಣಪತಿಹೋಮ ಮತ್ತು, ಆದಿ ಶಂಕರಾಚಾರ್ಯರ ಮೆರವಣಿಗೆ ಇರುತ್ತದೆ.

ಸರ್ವರಿಗೂ ಆದರದ ಸ್ವಾಗತ.

ಶ್ರೀ. ಶ್ರೀ. ಭಾರತೀಸ್ವಾಮಿಗಳು ೧೯೯೨ ರಲ್ಲಿ, ಚೆಂಬೂರಿನ ಈಗಿರುವ ಶಾರದಾ ವಿದ್ಯಾಕೇಂದ್ರದಲ್ಲಿ, ಮಹಾಕುಂಭಾಭಿಷೇಕವನ್ನು ನೆರೆವೇರಿಸಿದ್ದರು. ವಾರ್ಷಿಕ ಪ್ರತಿಷ್ಥಾಪನಾ ದಿನ ಈ ವರ್ಷದ ವೈಶಾಖ ಶುಕ್ಲ ಶಷ್ಟಿ ಗುರುವಾರ, ಏಪ್ರಿಲ್, ೩೦ ೨೦೦೯ ರಂದು ಜರುಗಲಿದೆ.

ತಾವೆಲ್ಲಾ ಆ ಶುಭದಿನದಂದು ಆಗಮಿಸಿ, ಮಹಾಗಣಪತಿ, ಆದಿಶಂಕರಾಚಾರ್ಯ, ಹಾಗೂ ಶಾರದಾಂಬದೇವಿಯವರ ಆಶೀರ್ವಾದಗಳಿಗೆ ಪಾತ್ರರಾಗುವಿರೆಂದು ಭಾವಿಸುತ್ತೇವೆ.

ಜಗದ್ಗುರುಗಳ ಆಜ್ಞಾರಾಧಕರು.

ಗುರುಸೇವಾ ಧುರೀಣ, ಪದ್ಮಶ್ರೀ,

ವಿ. ಆರ್. ಗೌರೀಶಂಕರ್,

ಶೃಂಗೇರಿ ಸಂಸ್ಥಾನಾಧಿಪೀಠದ ಸ್ಥಿರ-ಚರ ಆಸ್ತಿಗಳಿಗೆ ಮೇಲ್ವಿಚಾರಕ,

ಶ್ರಿಂಗೇರಿ,

ಕರ್ನಾಟಕ

ವಿ. ಸೀತಾಪತಿ,

ಗೌ. ಮ್ಯಾನೇಜರ್,

ಮುಂಬೈ

ಕಾರ್ಯಕ್ರಮಗಳು : ೨೦೦೯ ನೆ ಇಸವಿ, ಏಪ್ರಿಲ್, ೩೦ ನೇ ತಾರೀಖು ಪ್ರಾತಃಕಾಲದಂದು.

ಬೆಳಿಗ್ಯೆ ೭-೩೦ ಕ್ಕೆ, ಮಹಾಗಣಪತಿ ಹೋಮ.

೭-೩೦ ಕ್ಕೆ, ಆದಿಶಂಕರಾಚಾರ್ಯ ಹಾಗೂ ಶಾರದಾದೇವಿಯವರಿಗೆ ಅಭಿಷೇಕ,

೧೨-00 -ಮಹಾಮಂಗಳಾರತಿ,

೭-೩೦ ಕ್ಕೆ, ಶಾರದಾಂಬಾದೇವಿಯವರ ಉತ್ಸವ.

೯-೩೦ ಕ್ಕೆ ಮಂಗಳಾರತಿ, ಯೊಂದಿಗೆ ಪರಿಸಮಾಪ್ತಿ.

ಎಲ್ಲರಿಗೂ ಆದರದ ಸ್ವಾಗತ.