ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಪೆನ್ನು ಬರೆದ ಪನ್ನು.

ಮೊನ್ನೆ ಪನ್ನು ಬರೆಯುವ ಮನಸಾಯ್ತು,
ಹಾಳೆ ಮೇಜಿನ ಮೇಲಿಟ್ಟೆ,
ಪೆನ್ನ ಹೊರತೆಗೆದೆ.
"ಬರೆ ಪೆನ್ನು" ಎಂದೆ.
ಪೆನ್ನು ಸುಮ್ಮನಿತ್ತು.
"ಬರೆ ಪೆನ್ನು" ಎಂದೆ ಇನ್ನೊಮ್ಮೆ.
ನಾನಿನ್ನು ಬರೆಯಲೊಲ್ಲೆ, ಎಂದಿತು ಪೆನ್ನು.
ಕೊನೆಯ ಬಾರಿಯೋ ಎಂಬಂತೆ,
"ಬರೆ ಪೆನ್ನು" ಎಂದೆ ಗಟ್ಟಿಯಾಗಿ.
ಪೆನ್ನು ಸ್ಫೋಟಿಸಿತು.
ಹೂಡುವೆ ಮಾನ ನಷ್ಟ ಮೊಕದ್ದಮೆ,

ಒಂದು ಅಸಂಭದ್ದ ಕವನ

ಹರನನ್ನು ಒಲಿಸುವ ಮೊದಲು
ಮಾಡು ಅವನಲ್ಲಿ ಪ್ರಾರ್ಥನೆ

ಕೆರೆ ಕರಗುವ ಮೊದಲು
ಮನವನ್ನು ಹುದುಗಿಸೊ ನಿನ್ನವಳ ಮನಸ್ಸಿನಲ್ಲಿ

ನಿನ್ನವಳನ್ನು ಪ್ರೀತಿಯಲ್ಲಿ ಬೀಳಿಸುವ ಮೊದಲು
ಅವಳನ್ನು ಚೆನ್ನಾಗಿ ಅರ್ಥಮಾಡಿಕೊ

ನಿನ್ನವಳಿಂದ ಹೊರಡುವ ಪ್ರತಿ ಮಾತು ಸ್ವರವಾಗಬೇಕೆಂದರೆ
ಮೊದಲು ಅವಳ ಪ್ರaತಿ ಪದಗಳಿಗೆ ಧನಿಯಾಗು

* * *

ಕವನ ಮುಗಿಸುವ ಮೊದಲು:

ಮತದಾನದ ಬಗ್ಗೆ ಸ್ವಲ್ಪ ಸಮಯ ನನ್ನೊಂದಿಗೆ

ನನ್ನ ಆತ್ಮಿಯ ಗೆಳೆಯ ಗೆಳೆತಿಯರೇ ದಯವಿಟ್ಟು ಗಮನಿಸಿ. ಈ ಬಾರಿಯ ಲೋಕಸಭೆಯ ಮತದಾನದಲ್ಲಿ ನಾವೆಲ್ಲರು ಮತ ನೀಡಿವುದಾ ಅಥವಾ ಬಿಡುವುದಾ ಅನ್ನುವುದರ ಬಗ್ಗೆ ಖಂಡಿತಾ ಚರ್ಚೆ ಆಗಲೇಬೇಕಾಗಿದೆ.

ಗುಂಗುರು, ಗುಂಗುಱು

ಗುಂಗುರು(ವಿಶೇಷಣ)=ಸುರುಳಿ ಸುರುಳಿಯಾದ. ಉದಾಹರಣೆ ಗುಂಗುರು ಕೂದಲು. ಸ್ತ್ರೀಯರ ಗುಂಗುರು ಕೂದಲನ್ನು ಮೋಡಕ್ಕೆ ಹೋಲಿಸುತ್ತಾರೆ ಕವಿಗಳು.

ಗುಂಗುಱು=ಗುಂಗಾಡು, ಗುಂಯ್ ಎಂದು ಶಬ್ದ ಮಾಡುವ ಸೊಳ್ಳೆ ಅಥವಾ ನೊಣ.

ಲೋಕಸಭೆ ಮತದಾನ

ಲೋಕಸಭೆ ಮತದಾನದ ಬಗ್ಗೆ ನನ್ನೋಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಇಚ್ಚಿಸುವರು ನನಗೆ ಮರು ಇ-ಮೇಲ್ ನ್ನು ಕಳುಹಿಸಿ. ಯಾರು ಯಾರು ಯಾವ ಯಾವ ಕ್ಶೆತ್ರದಲ್ಲಿ ನಿಂತಿದ್ದಾರೆ ಅನ್ನುವುದರಿಂದ ಹಿಡಿದು ಇನ್ನು ಬಹಳ್ ಶ್ಟು ಮಾತನಾಡುವುದಿದೆ.

ಮಳೆ ನೀರು

                                                 
ಶಾಂತ: ಏನೇ ಕಮಲಿ ಆಯ್ತೇನೆ ಅಡಿಗೆ
ಕಮಲಿ: ಆಯ್ತೆ ಅಡಿಗೆ ಮಾಡಿ ಮಕ್ಕಳನ್ನ ನಮ್ಮ ಮನೆಯವರನ್ನ ಆಪೀಸಿಗೆ ಕಳುಹಿಸೋ ಒಳಗೆ ಸುಸ್ತೋ ಸುಸ್ತು ......
ಶಾಂತ: ಇದೇನೇ ಇಷ್ಟೊಂದು ನೀರು ಚೆಲ್ತಾ ಇದ್ದೀಯಾ ? ಅಲ್ಲಿ ನೋಡು ಬಿಂದಿಗೆ ತುಂಬಿ ಎಷ್ಟೋದು ನೀರು ನಲ್ಲಿಯಲ್ಲಿ ಹೋಗ್ತಾ ಇದೆ....                                                   
ಕಮಲಿ: ಬಿಡೆ ಪರವಾಗಿಲ್ಲ... ಇಲ್ಲಿರೋ ಗಲೀಜು ಹೋದ್ರೆ ಸಾಕು                                                

ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 2

(ಇದು ಈ ಲೇಖನದ ೨ನೇ ಭಾಗ. ಮೊದಲನೇ ಭಾಗ ಓದಲು http://sampada.net/article/19036 ಕ್ಲಿಕಿಸಿ.)

ಸ್ವಲ್ಪ ದಿನಗಳ ನಂತರ....

ಎಂದಿನಂತೆ ರಾಜ ಸಭೆ ಶುರುವಾಯಿತು.. ರಾಜರು ಮಂತ್ರಿಗಳಾದಿಯಾಗಿ ಎಲ್ಲರೂ ಗಂಭಿರವಾಗಿ ಆರ್ಥಿಕ ಹಿಂಜರಿತದ ಕುರಿತು ಚರ್ಚೆ ಮಾಡುತ್ತಿದ್ದಾರೆ... ಅಷ್ಟರಲ್ಲಿ, ರಾಜ ಭಟರು ಒಬ್ಬನನ್ನು ಹಿಡಿದು ಸಭೆಗೆ ಕರೆ ತಂದರು.

ಈ ಊರುಗಳಲ್ಲಿ ನಾಯಿಗಳಿಗೆ ಕಿವಿ ಬಾಲಗಳೇ ಇಲ್ಲ... !

ಕೆಲವು ದಿನಗಳ ಹಿಂದೆ ಪಾವಗಡ ತಾಲ್ಲೂಕಿನ ಇತಿಹಾಸ ಪ್ರಸಿದ್ದ ನಾಗಲಮಡಿಕೆ ಹೋಬಳಿಯಲ್ಲಿ ಕೆಲವು ಕೆರೆಗಳ ಸಂದರ್ಶನಕ್ಕೆಂದು ಹೋಗಿದ್ದೆ.ಅಲ್ಲಿನ ನಾಗಲಮಡಿಕೆಯ ಸುಬ್ರಮಣ್ಯನ ದೇವಸ್ಠಾನ ಪುರಾಣ ಪ್ರಸಿದ್ದವಾದದ್ದು.ಇದು ಆಂಧ್ರದ ಗಡಿ ಭಾಗವಾದ್ದರಿಂದ ತೆಲುಗು ಮನೆ ಮಾತು.
ಇದೇ ಹೋಬಳಿಯ ತಿರುಮಣಿ ,ವಳ್ಳೂರು,ಬಳ್ಳಸಮುದ್ರ,ರಾಯಚೆರ್ಲು,ರಾಪ್ಟೆ,ಇನ್ನೂ ಕೆಲವು ಊರುಗಳ ಕೆರೆಗಳನ್ನು ಸಂದರ್ಶಿಸಿ,ಊರೊಳಗೆ ಬಂದಾಗ ಕಾಣುತ್ತಿದ್ದ ಅತಿ ಸಾಮಾನ್ಯ ಸಂಗತಿಯೆಂದರೆ ಈ ಊರುಗಳ ಸಾಕಿದ ನಾಯಿಗಳಿಗೆ ಕಿವಿ,ಮತ್ತು ಬಾಲ ಮೊಟಕಾಗಿದ್ದದ್ದು.ಇದು ನನಗೆ ವಿಸ್ಮಯವಾಗಿ ಕಾಣದಿದ್ದರೂ(ನಮ್ಮೂರಲ್ಲೂ ಅಲ್ಲೊಂದು ಇಲ್ಲೊಂದು ಬೇಟೆ ನಾಯಿಗಳಿಗೆ ಕಿವಿ ಇಲ್ಲದ್ದನ್ನು ನೋಡಿದ್ದೆನಲ್ಲಾ!!!) ಇಂತಹ ಅಪಾರ ಪ್ರಮಾಣದ ಪ್ರಾಣಿ ಹಿಂಸೆ ಅಸಹನೀಯವಾಗಿತ್ತು.ಈ ಚಿಕಿತ್ಸೆಯಿಂದ ಬಚಾವ್ ಆಗಿದ್ದ ನಾಯಿಗಳು ಬೀದಿ ನಾಯಿಗಳಾಗಿದ್ದವು.

ಬರೆಯದ ಕವಿತೆಯ ರೂಪಕ (ಡಾ.ರಾಜ್ ಕುಮಾರ್ ಕುರಿತು)

‘ಅಣ್ಣ'- ಪ್ರೀತಿಗೆ, ಹಿರಿತನಕ್ಕೆ, ಭಯಕ್ಕೆ ಮತ್ತು ಕೆಲವೊಮ್ಮೆ ದಾಸ್ಯವನ್ನು ಪ್ರದರ್ಶಿಸಲು ಬಳಸುವ ಪದ. ನಿಜ, ‘ಅಣ್ಣ' ಎಂದು  ಡಾ.ರಾಜಕುಮಾರ್‌ರನ್ನು ಯಾರು ಯಾರು ಯಾವ ಯಾವ ಕಾರಣಕ್ಕೆ ಕರೆದರು ಎನ್ನುವುದರ ಮೇಲೆ, ಅವರು ಆ ಅಣ್ಣನೊಂದಿಗಿಟ್ಟುಕೊಂಡಿದ್ದ ಸಂಬಂಧಗಳ ಅರಿವು ನಮಗಾಗುತ್ತದೆ.

ಸತ್ತ ಶ್ರೇಷ್ಠರೆಲ್ಲ ನಕ್ಷತ್ರಗಳಾಗಿ ಮಿನುಗುತ್ತಾರೆನ್ನುವುದು ಒಂದು ರಮ್ಯ ಕಲ್ಪನೆ. ಆದರೆ ಚಿತ್ರರಂಗದ ‘ಈ ತಾರೆ' ಕನ್ನಡದ ನೆಲದಲ್ಲಿ ಬರೀ ಮಿನುಗಲಿಲ್ಲ. ಬದಲಿಗೆ ಸೂರ್ಯನಾಗಿ ಪ್ರಖರಿಸಿದ್ದು ಈಗ ಇತಿಹಾಸ. ಅವರ ನಿಧನದಿಂದ ಒಂದು ಯುಗ ಮುಕ್ತಾಯವಾಯಿತೆಂದು ಇತ್ತೀಚಿನ ಬೆಳವಣಿಗೆಗಳು ದೃಢಪಡಿಸಿವೆ.

ಸಾಮಾನ್ಯರು ಸತ್ತಾಗ ಕೂಡ ಸಂತಾಪ ಸೂಚಕ ಸಭೆಗಳು ಸೂತಕ ಕಳೆಯುವವರೆಗೂ ಮಾತಲ್ಲಿ, ಆಚರಣೆಯಲ್ಲಿ ನಡೆಯುತ್ತಲೇ ಇರುತ್ತವೆ.  ರಾಜ್‌ರಂಥ ‘ಜನಪ್ರಿಯ'ರು ನಿಧನರಾದಾಗ ಆ ಸಂತಾಪದ ಕಣ್ಣೀರ ಹನಿಗಳನ್ನು ಕೂಡಿಸಿದರೆ ಸಾಗರವಾಗುವುದು ನಿಶ್ಚಿತ.  ಆದರೆ ರಾಜ್ ಕುರಿತ ಪುಸ್ತಕಗಳು, ಆಡಿಯೊ, ವಿಡಿಯೊ ಸಿ.ಡಿಗಳು, ಮಾರ್ಕೆಟ್ಟಿನ ತುಂಬ ತುಂಬಿಕೊಳ್ಳುತ್ತಿರುವಾಗ, ಸಾವು ಕೂಡ ಹೇಗೆ ವ್ಯಾಪಾರದ ಸರಕಾಗಿ ಬಿಡುತ್ತದೆ ಮತ್ತು ಇಂಥ ಚರಮ ಶ್ಲೋಕ ಬರೆಯಲೆಂದೇ ಕಾದು ಕುಳಿತವರ ಮನಸ್ಥಿತಿಯ ಬಗ್ಗೆಯೂ ಸಂಕಟವಾಗುತ್ತದೆ.