ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಪ್ಪ ಎಂದರೆ.........

ಅಪ್ಪ ಎಂದರೇ..........
(ದಟ್ ಈಸ್ ವಾಟ್ ಡ್ಯಾಡ್ ಈಸ್... )ಅನುವಾದ
ನಾವು ಬೆಳೆದಂತೆಲ್ಲಾ, ನಾವು ನಮ್ಮ ಅಪ್ಪನ ಬಗ್ಗೆ ಏನು ಯೋಚಿಸುತ್ತೇವೆಂದರೆ :
ನಾವು ೪ ವರ್ಷದ ಮಗುವಾದಾಗ ನನ್ನ ಅಪ್ಪ ಏನನ್ನು ಬೇಕಾದರೂ ಮಾಡುತ್ತಾರೆ
೫ ನನ್ನ ಅಪ್ಪನಿಗೆ ಎಲ್ಲಾ ಗೊತ್ತಿದೆ
೬ ನನ್ನ ಅಪ್ಪ ಬೇರೆಯವರಿಗಿಂತ ಬುದ್ಧಿವಂತರು

ಪೆಟ್ರೋಲ್ ಬಂಕಿನಲ್ಲಿ ನಾ ಕಲಿಸಿದ ಪಾಠ

ನೆನ್ನೆ ರಾತ್ರಿ ಒಂಭತ್ತು ಘಂಟೆ ಆಫೀಸ್-ನಿಂದ ಹೊರಬಿದ್ದು, ಬೈಕ್ ಅಲ್ಲಾಡಿಸುತ್ತಾ, ಒಂದು ಕಿವಿಯನ್ನ ಟ್ಯಾಂಕ್ ಹತ್ತಿರ ಒಯ್ದುರೂ, ಪೆಟ್ರೋಲ್ ಯಾವತ್ತು ಹಾಕ್ಸಿದ್ದೂ ಅಂತ ನೆನಪು ಬರ್ಲಿಲ್ಲ.

ಮುಂಜಾನೆಯ ಸವಿ ಶುಭಾಶಯಗಳು,

ಬೆಳಿಗ್ಗೆ ನನ್ನ ಎಲ್ಲ ಗೆಳಯರಿಗೆ ಈ ಕೆಳಗಿನ ಇ-ಮೇಲ್ ಕಳಿಸಿದ್ದೆ, ಇದಕ್ಕೆ ಬಂದ ಪ್ರರ್ತ್ಯುತ್ತರಗಳು ೬೫.
ಸಂಪದ ಗೆಳೆಯರೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಅದಕ್ಕೆ ಇಲ್ಲಿ ಹಾಕಿದೆ.
***************************************

ಮುಂಜಾನೆಯ ಸವಿ ಶುಭಾಶಯಗಳು,

ಸಂಪದಿಗರೇ, ನಿಮಗಿದೋ ಈ ಚುಟುಕ

ಚುಟುಕವೇ, ನಿನ್ನನ್ನು ಹೊರ ಹಾಕಿದ್ದೇನೆ.
ಸಂಪದವ ಸುತ್ತಿ, ನೀ ತಿರುಗಿ ಬಂದರೆ
ನೀ ನನ್ನ ಪ್ರೀತಿಯ ಮಗಳು,
ನೀನೇನಾದರೂ ವಾಪಸ್ ಬರಲಿಲ್ಲವೆಂದೆ,
ತಿಳಿ ನಾನಲ್ಲ ನಿನ್ನ ತಂದೆ.

("If you love something set it free.
If it comes back to you, it's yours.
If it doesn't, it never was".ಇಂದ ಪ್ರೇರಿತ)

ಸಂಪದದ ಗರಿಮೆ!!!

ಏನನ್ನಲೀ ನಾನು ನಮ್ಮ ಸಂಪದದ ಈ ಗರಿಮೆಯನು
ಸಂಪದಿಗನಾದುದಕೆ ನಾನಿಂದು ಹೆಮ್ಮೆ ಪಡುತಿಹೆನು

ಪತ್ರಿಕೆಗಳ ಹಂಗು ಇಲ್ಲದೆಯೇ ಬರೆಯಬಹುದಿಲ್ಲಿ
ಸಂಪಾದಕರುಗಳ ತಿರಸ್ಕಾರದ ಭಯವಿಲ್ಲ ಇಲ್ಲಿ

ಪತ್ರಿಕೆಗಳಿಗೆ ನಿಜದಿ ಓದುಗರು ಲಕ್ಷಾಂತರ ಮಂದಿ
ಸಂಪದದಲಿ ಓದುಗರು ಕೆಲವು ಸಾವಿರ ಮಂದಿ

ಓದುಗರು ಕಡಿಮೆಯಾದರೂ ಚಿಂತಿಲ್ಲ ಸಂಪದದಡಿ

ಗೃಹ ಪ್ರವೇಶ

DSC09355ಬೆಂಗಳೂರಿನ ಖ್ಯಾತ ಬಡಾವಣೆಯಲ್ಲಿ ಹೊಸದಾಗಿ ತಲೆ ಎತ್ತಿ ನಿಂತ ಮೂರಂತಸ್ಥಿನ ಭವ್ಯ ಬಂಗಲೆ. ಮನೆಯೆದುರಿನ ರಸ್ತೆಯಲ್ಲಿ ಶಾಮಿಯಾನ ಹಾಕಿಸಿ, ಸುಮಾರು ೨೦೦ ಜನ ಒಮ್ಮೆಲೇ ಕುಳಿತು ಊಟ ಮಾಡುವಷ್ಟು ಮೇಜು ಕುರ್ಚಿಗಳನ್ನಿರಿಸಿ, ಪಕ್ಕದಲ್ಲಿಯೇ ಅಡುಗೆಗಾಗಿ ತಾತ್ಕಾಲಿಕ ಏರ್ಪಾಡು ಮಾಡಲಾಗಿತ್ತು. ಮಗನ ಮನೆಯ ಗೃಹ ಪ್ರವೇಶವಾದ್ದರಿಂದ ರಾಯರು ಗೆಲುವಿನಿಂದಲೇ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದರು. ಬಂದವರಿಗೆ ನೀರು, ಕಾಪಿ, ಮಾತುಗಳಿಂದ ಉಪಚರಿಸಿ, ಮಗ ಕಟ್ಟಿಸಿದ್ದ ಮನೆಯ ಅಂಚಂಚನ್ನು ಹುಮ್ಮಸ್ಸಿನಿಂದ ತೋರಿಸಿ, ಅವರಾಡಿದ ಮೆಚ್ಚುಗೆಯ ಮಾತುಗಳಿಂದ ಪುಳಕಿತರಾಗಿದ್ದರು.

ಬಡತನದಲ್ಲಿ ಬೆಳೆದು, ವಿದ್ಯೆಯನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಬಂದು ಕೆಲಸ ಹುಡುಕುತ್ತಿರಬೇಕಾದರೆ ಅವರಿಗೆ ಸಿಕ್ಕಿದ್ದು ಬ್ಯಾಟರ್ ಫ್ಯಾಕ್ಟರಿಯಲ್ಲೊಂದು ಸಣ್ಣ ಕೆಲಸ. ತೀರಾ ಸಿರಿತನ ಅಲ್ಲದ್ದಿದ್ದರೂ ಇನ್ನೊಬ್ಬರ ಮುಂದೆ ಕೈಚಾಚಿ ಬದುಕಬೇಕಿಲ್ಲದಿದ್ದ ಪರಿಸ್ಥಿತಿಯಲ್ಲಿ, ತಮ್ಮ ಊರಿನ ಒಬ್ಬ ಕನ್ಯೆಯನ್ನೇ ವಿವಾಹವಾಗಿ ಸುಖವಾಗಿಯೇ ಇದ್ದರು. ಒಂದೆರಡು ವರ್ಷಗಳೊಳಗಾಗಿ ಗಂಡು ಮಗುವನ್ನು ಹೆತ್ತು, ಆ ಮಗುವಿನಲ್ಲಿ ತಮ್ಮ ಸುಖ ಕಾಣಲು ಮೊದಲುಗೊಂಡರು. ಸಂಸಾರಕ್ಕೆ ಹೊಸಬ್ಬನ ಆಗಮನದಿಂದ ಮನೆಯ ಅವಶ್ಯಕತೆ ಹೆಚ್ಚಿ ರಾಯರು ಫ್ಯಾಕ್ಟರಿಯಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಿ ಇನ್ನಷ್ಟು ಹಣ ಹೊಂದಿಸಬೇಕಾದ ಪರಿಸ್ಥಿತಿ ಬಂದಿತ್ತು. ಎಡ ಬಿಡದ ದುಡಿತ, ಬ್ಯಾಟರಿ ಆಸಿಡ್ಗಳೊಂದಿಗಿನ ನಂಟು ರಾಯರ ಆರೋಗ್ಯವನ್ನು ದಿನೇ ದಿನೇ ಹದಗೆಡಿಸುತ್ತಿತ್ತು. ಮಡದಿ ಬಂದಾಗಿನಿಂದ ಆಕೆಗೊಂದು ಹೊಸ ಬಟ್ಟೆ, ಆಭರಣ, ಅಪೂರ್ವಕ್ಕೊಮ್ಮೆಯಾದರೂ ತಿರುಗಾಟ ಮೊದಲಾದ ಸೌಲಭ್ಯ ಒದಗಿಸಲಾರದೇ ರಾಯರು ಖಿನ್ನರಾಗಿದ್ದರು.

ಬೆಳಗಾವಿಯ ವೀರ ವನಿತೆ!!

ಗ೦ಡು ಮೆಟ್ಟಿದ ಭೂಮಿಯಲ್ಲಿ ವೀರ ವನಿತೆಯರಿಗೆ ಕಮ್ಮಿ ಇಲ್ಲ... ಅ೦ದು ಕಿತ್ತೂರು ರಾಣಿ ಚೆನ್ನಮ್ಮ... ಇ೦ದು ಕಸ್ತೂರಿ ಬಾವಿ.

ಈಕೆ ಬೆಳಗಾವಿಯಲ್ಲಿ ಕನ್ನಡಿಗರ ಶೋಶಣೆಯನ್ನು ಕ೦ಡು ರೋಷದಿ೦ದ ಪ್ರತಿಭಟಿಸಿ ಕನ್ನಡದ ಚಳುವಳಿಗೆ ಧುಮುಕಿದ್ದಳು. ಹಲವಾರು ಬಾರಿ ಜೈಲು ಪ್ರವಾಸ ಮಾಡಿರುವುದಲ್ಲದೆ, ಈಗ ಪ್ರತ್ಯೇಕವಾಗಿ ಚುನವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ..

ನಾನೊಂದು ಪನ್ನು ಬರೆದೆ

ಸಮಯದ ಚಲನೆ
ನಿಲ್ಲಲೇ ತಿಳಿಯದ ಸಮಯ,
ನಡೆಯಲು ಕಲ್ತಿದ್ದು ಹೇಗೆ?

ರಾತ್ರಿ-ಹಗಲು
ರಾತ್ರಿಯೆಂಬುದು ಸೋಮಾರಿ ಗಂಡ,
ಹಗಲೆಂಬುದು ರಾತ್ರಿಯ ಹೆಂಡತಿ.
ಅದಿಕ್ಕೆ ರಾತ್ರಿ ನಿದ್ರೆ ಮಾಡುವುದು,
ಹಗಲು ಕೆಲಸ ಮಾಡುವುದು ಪದ್ಧತಿ!

ಮಳೆ
ಆಕಾಶ ಮಿಂಚಿಸಿ ಮೋಡದ
ಫೋಟೋ ತೆಗೆಯಿತು;
ಮೋಡದ mood ಸರಿ ಇರಲಿಲ್ಲ;
ಮೊದಲು ಗುಡುಗಿತು,
ನಂತರ ಅತ್ತು ಮಳೆ ಸುರಿಸಿತು.

ಯು ಶ್ರೀನಿವಾಸ್ ಹಾಗೂ ಯು ರಾಜೇಶ್ ದ್ವಂದ್ವ ಮ್ಯಾಂಡೊಲಿನ್ ವಾದನ

ಸ್ಥಳ: ಕೋಟೆ ಮೈದಾನ, ಚಾಮರಾಜಪೇಟೆ, ಬೆಂಗಳೂರು

ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಇದೆ.

ಪತ್ನಿಯ ಲಿವರ್ ಮಾರಿದವನ ಕಥೆ

ನಮ್ಮ ಮಮ್ಮದೆ ಕೆಲಸದಲ್ಲಿ ಎಷ್ಟು ಚುರುಕೋ ಅಷ್ಟೇ ತಲೆಹರಟೆ ಆಸಾಮಿನೂ ಹೌದು. ಒ೦ದು ಕೆಲಸ ಹೇಳಿದ್ರೆ, ಹೇಳದೆ ಇದ್ದ ಮೂರೂ ಕೆಲಸ ಮಾಡಿಕೊ೦ಡು ಬರ್ತಿದ್ದ. ಮೂರೂ ಕೆಲಸ ಹೇಳಿದ್ರೆ ಒ೦ದೂ ಮಾಡದೇ ತಲೆಮೇಲೆ ಕೈ ಹೊತ್ತು ಬರುವ೦ತಹ ವಿಚಿತ್ರ ಆಸಾಮಿ. ಊರಿನಲ್ಲಿ ನಾನು ಮನೆ ಕಟ್ಟಿಸುತ್ತಿರಬೇಕಾದ್ರೆ ಈತನೇ ನನಗೆ ಕ೦ಟ್ರಾಕ್ಟರ, ಮೇಸ್ತ್ರಿ, ಇ೦ಜಿನಿಯರ ಎಲ್ಲಾ ಆಗಿದ್ದಾತ.