ಅಪ್ಪ ಎಂದರೆ.........

ಅಪ್ಪ ಎಂದರೆ.........

ಅಪ್ಪ ಎಂದರೇ..........
(ದಟ್ ಈಸ್ ವಾಟ್ ಡ್ಯಾಡ್ ಈಸ್... )ಅನುವಾದ
ನಾವು ಬೆಳೆದಂತೆಲ್ಲಾ, ನಾವು ನಮ್ಮ ಅಪ್ಪನ ಬಗ್ಗೆ ಏನು ಯೋಚಿಸುತ್ತೇವೆಂದರೆ :
ನಾವು ೪ ವರ್ಷದ ಮಗುವಾದಾಗ ನನ್ನ ಅಪ್ಪ ಏನನ್ನು ಬೇಕಾದರೂ ಮಾಡುತ್ತಾರೆ
೫ ನನ್ನ ಅಪ್ಪನಿಗೆ ಎಲ್ಲಾ ಗೊತ್ತಿದೆ
೬ ನನ್ನ ಅಪ್ಪ ಬೇರೆಯವರಿಗಿಂತ ಬುದ್ಧಿವಂತರು
೮ ವರ್ಷದ ಹುಡುಗನಾದಾಗ ನನ್ನ ಅಪ್ಪನಿಗೆ ನಿಜವಾಗಿ ಎಲ್ಲವೂ ತಿಳಿದಿಲ್ಲ
೧೦ ನನ್ನ ಅಪ್ಪ ಚಿಕ್ಕವರಿದ್ದಾಗ ವಾತಾವರಣ ಹೀಗಿರಲಿಲ್ಲ, ಬೇರೆಯದೇ ಇತ್ತು
೧೨ ನನ್ನ ಅಪ್ಪನಿಗೆ ಅದರ ಬಗ್ಗೆ ಏನೂ ಗೊತ್ತಿಲ್ಲ, ಅವರಿಗೆ ವಯಸ್ಸಾಗಿದೆ, ಅವರ ಬಾಲ್ಯ ನೆನಪಿಲ್ಲ
೧೪ ನನ್ನ ಅಪ್ಪನನ್ನು ಯಾರೂ ವಿಚಾರಿಸುವ ಅಗತ್ಯವಿಲ್ಲ, ಅವರು ತುಂಬಾ ಹಳೆಯಕಾಲದವರು
೨೧ ವರ್ಷದ ಯುವಕನಾದಾಗ ಅವರಾ ? ಅಬ್ಬಬ್ಬಾ ಅವರು ತೀರಾ ಅಂದರೆ ತೀರಾ ಹಳೆಯ ಶತಮಾನದವರು
೨೫ ಅಪ್ಪನಿಗೆ ಸ್ವಲ್ಪ ಸ್ವಲ್ಪ ಗೊತ್ತಿದೆ ಆದರೆ ಆಶ್ಚರ್ಯ ಏನಿಲ್ಲ, ಅವರಿಗೆ ಅಷ್ಟು ವಯಸ್ಸಾಗಿದೆ
೩೦ ಅಪ್ಪನ ಸಲಹೆ ಕೇಳಬಹುದು ಅನ್ಸತ್ತೆ.......
೩೫ ನಾನು ಅಪ್ಪನನ್ನು ಕೇಳದೆ ಒಂದೇ ಒಂದು ಕೆಲಸವನ್ನೂ ಮಾಡುವುದಿಲ್ಲ
೪೦ ಅಪ್ಪ ಇದನ್ನು ಹೇಗೆ ನಿಭಾಯಿಸುತ್ತಿದ್ದರೋ ಏನೋ ? ಅವರಿಗೆ ನಿಜವಾಗಿ ಎಷ್ಟೊಂದು ಅನುಭವ
ಇತ್ತು
೫೦ ಈಗ ಅಪ್ಪ ನನ್ನ ಜೊತೆ ಇದ್ದಿದ್ದರೆ... ಅವರ ಜೊತೆ ಮಾತಾಡಿ ಈ ವಿಷಯವನ್ನು
ನಿರ್ಧರಿಸಬಹುದಿತ್ತು.. ಅವರಿದ್ದಾಗ ಅವರ ಬೆಲೆ ತಿಳಿಯಲಿಲ್ಲ.. ಛೆ..ಅನ್ನಾಯವಾಯ್ತು. ಅವರಿಂದ
ಕಲಿಯುವುದು ತುಂಬಾ ಇತ್ತು. ನಾನೇ ಅರ್ಥ ಮಾಡಿಕೊಳ್ಳಲಿಲ್ಲ...

Rating
No votes yet

Comments