ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು ಮಾಡಿದ್ದು ತಪ್ಪಾಗಿತ್ತಾ?

ನೆನ್ನೆ ಆಕೆ ಬಂದಿದ್ದಳು.ಸರಿಯಾಗಿ ಎರೆಡು ವರ್ಷದ ನಂತರ ಆ ಕಹಿ ನೆನಪು ಮನದಿಂದ ಮಾಸುತ್ತಿದ್ದಂತೆ ಹಸಿ ಮಾಡಲು.
"ಏನ್ ಮೇಡಮ್ ನಾವಿನ್ನೂ ಎಪ್ಪ ಬದುಕೋದು. ನನ್ಮಗ ಇದ್ರಾದ್ರೂ ನಲ್ಲ ಇರ್ತಿತ್ತು . ನಮ್ಮನ್ನಾದರ್"ಊ ನೋಡ್ಕೋತಿದ್ದ
ಈಗ ಕಾಸ್ ಇಲ್ಲೆ ಎನ್ನ ಪಣ್ರುದು" ತಮಿಳ್ ಮಿಶ್ರಿತ ಕನ್ನಡ ಅವಳದು

ಚಿಕಾಗೋ ನಗರದಲ್ಲಿ ಆಯೋಜಿಸಲಾಗಿದ್ದ, ೨೦೦೮ ರ ೫ ನೆಯ, ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ, " ಮಂಥನ," ಚೆನ್ನಾಗಿ ಮೂಡಿಬಂದಿದೆ !

ಇದೇನಪಾ ವಿಶ್ವಕನ್ನಡ ಸಮ್ಮೇಳನ ನಡೆದದ್ದು, ೨೦೦೮ ರ ಆಗಸ್ಟ್ ೨೯, ೩೦, ೩೧ ರಂದು. ಈಗ್ಯಾಕೆ ಈ ಸ್ಮರಣಸಂಚಿಕೆಯ ಪುರಾಣ, ಅಂತ ಅಂತೀರ, ನನಗ್ ಗೊತ್ತು. ಆದ್ರೆ, ಏನ್ಮಾಡೋದು. ಈ ಸಂಚಿಕೆ, ನನ್ನ ಕೈಗೆ ವಾಪಸ್ ಬಂದಿದ್ದು, ಮೊನ್ನೆ ಮೊನ್ನೆ. ಕೆಲವರು ತುಂಬಾ ಇಷ್ಟಪಟ್ರು. ಯಾಕೆ ಅಂತಾ ವಿಚಾರಿಸಿದಾಗ, ಅಬ್ಬ, ಅಮೆರಿಕದಲ್ಲಿ ಕನ್ನಡನ ಓದೋ ಜನ ಇದಾರಲ್ವ ? ಅಷ್ಟೆ ಅವರು ಮಾಡಿದ ಕಾಮೆಂಟ್ ! ಒಟ್ಟಿನಲ್ಲಿ ಅಮೆರಿಕ ಏನು ಮಾಡಿದರೂ ಅದು ಸುದ್ದಿಯಲ್ಲಿ ಬರದಿದ್ದರೆ ಹೇಗೆ ?

ಏನಿದು IRC (Internet Relay Chat)?

IRC - ಸಿಂಪಲ್ಲಾಗಿ ಹೇಳ್ಬೇಕಂದ್ರೆ ಅದು ಸಮುದಾಯ ತನ್ನ ಕೆಲವೊಂದು ವಿಷಯಗಳ ಚರ್ಚೆಗೆಂದೇ ರೂಪಿಸಿಕೊಂಡ ಚಾಟ್ ರೂಮ್ ಅನ್ನ ಬಹುದು. ಆದ್ರೆ ಇಲ್ಲಿ ಚಾಟ್ ರೂಮಿನಲ್ಲಿ ಸಮುದಾಯದ್ದೇ ಆದ ಕೆಲವು ನೀತಿ ನಿಯಮಗಳು, ಕಟ್ಟಳೆಗಳಿದ್ದು, ಭಾಗಿಗಳು ಬೇಡದ ವಿಷಯ ಪ್ರಸ್ತಾಪ ಮಾಡಿದಾಗ ಅವರನ್ನು ಹೊರದೂಡುವ ಮಾಡರೇಟರ್ಗಳೂ ಇರುತ್ತಾರೆ.

ಇದು ನಿಮ್ಮ ಜಿಟಾಕ್, ಯಾಹೂ ಚಾಟ್ ರೀತಿಯೇ ಕೆಲಸ ಮಾಡಿದ್ರೂ ಸ್ವಲ್ಪ ಭಿನ್ನತೆಗಳಿವೆ.
೧) ಇಲ್ಲಿ ನಿಮ್ಮ ಸಮುದಾಯದಲ್ಲಿ ಆನ್ಲೈನ್ ಇರುವ ಎಲ್ಲರಿಗೂ ನೀವು ಚಾಟ್ ರೂಮ್ ನಲ್ಲಿ ಕಳಿಸಿದ ಸಂದೇಶಗಳು ಕಾಣಿಸುತ್ತವೆ.
೨) ಯಾರಿಗಾದರೂ ಖಾಸಗಿ ಸಂದೇಶ ಕಳಿಸಬೇಕೆಂದರೆ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ ಸಂದೇಶ ಕಳಿಸಬೇಕು.
೩) ನೀವು IRC ನಲ್ಲಿ ಮಾತಾಡಿದ್ದೆಲ್ಲಾ (ಖಾಸಗಿ ಸಂದೇಶಗಳನ್ನು ಹೊರತು ಪಡಿಸಿ) ಇಂಟರ್ನೆಟ್ನಲ್ಲಿ ಉಳಿದುಕೊಳ್ಳುತ್ತದೆ. ಮುಂದೆ ಯಾರಾದರೂ ನಾವು ಮಾತಾಡಿದ್ದ ವಿಷಯದ ಬಗ್ಗೆ ಸರ್ಚ್ ಮಾಡಿದಾಗ ನಮ್ಮ ಚಾಟ್ ಕಾಣಿಸಿಕೊಂಡಲ್ಲಿ ಆಶ್ಚರ್ಯವಿಲ್ಲ.
೪) ಇದು ಸಮುದಾಯದಲ್ಲಿನ ಕೆಲಸಗಳಲ್ಲಿ ನೀವು ಹೇಗೆ ಭಾಗಿಯಾಗಿದ್ದಿರಿ, ನಿಮ್ಮ ಕೊಡುಗೆಗಳೇನು ಅನ್ನೋದನ್ನು ಇತರರು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
೫) ಮಾತು ಹಳಿ ತಪ್ಪಿ ಎಲ್ಲಿಗೋ ಹೊರಟರೆ, ನಿಮ್ಮ ಹೆಸರಿನಲ್ಲಿ ಉಳಿದುಕೊಳ್ಳುವ ಲಾಗ್ ನಿಮಗೆ ತೊಂದರೆಯಾದರೂ ಆಗಬಹುದು.

ಸುಳ್ಳು! ಸುಳ್ಳು!

ಅಪ್ಪನ ಹತ್ತಿರ, ಅಮ್ಮ ನ ಹತ್ತಿರ, ಗಂಡ ಹೆಂಡತಿಯ ಬಳಿ, ಹೆಂಡತಿ ಗಂಡನ ಬಳಿ, ಅಪ್ಪ ಅಮ್ಮಂದಿರು ಮಕ್ಕಳ ಬಳಿ, ನೆಂಟರಿಷ್ಟರ ಜೊತೆ, ನೆರೆಹೊರೆಯವರ ಹತ್ತಿರ, ಹೀಗೆ.......... ದಿನ ನಿತ್ಯ ಎಷ್ಟು ಸುಳ್ಳು ಹೇಳುತ್ತೇವೆ! generalise ಮಾಡ್ತಿದ್ದೀನಿ ಅಂತಾ ನನಗ್ಯಾರೂ ಬೈಬೇಡಿ :-) ಈ ಸುಳ್ಳುಗಳಲ್ಲೂ ಎಷ್ಟು ತರಹ, ಬಗೆ ಬಗೆಯ ಸುಳ್ಳುಗಳು!

ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ - 3

ಇದೇ ವಿಷಯದ ಮೇಲಿನ ಭಾಗ - 1 ಮತ್ತು ಭಾಗ - 2 ನ್ನು ನೋಡಿರುವ ಕೆಲವು ಭಕ್ತರು ಅಪಾರ ಕಿರಿಕಿರಿಗೆ ಒಳಗಾಗಿದ್ದಾರೆ. ಕೇವಲ ದ್ವೇಷ, ರೋಷ ಮತ್ತು ಅಸಹನೆಯಿಂದ ಕುದಿಯುವ ಕೆಲವರಿಗೆ ತಾವು ಎಷ್ಟು ಮಾತ್ರದ ಅಜ್ಞಾನಿಗಳು ಎನ್ನುವ ತಿಳಿವಳಿಕೆಯೂ ಇದ್ದಂತಿಲ್ಲ.

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?

ನಂ ಮನಸಲ್ಲಿ ಮೂಡೋ ಎಲ್ಲ ಭಾವನೆಗಳಿಗೂ ಈ ಪ್ರೀತಿನೆ ಕಾರಣ ಅಲ್ವ……..ಅನುಕಂಪ, ವಾತ್ಸಲ್ಯ, ಮಮತೆ ಏನೇ ಆಗಿರಬಹುದು ಅದಕ್ಕೆಲ್ಲ ಪ್ರೀತಿನೆ ಕಾರಣ……… ಇನ್ನೊಂದು ವಿಷಯ ಹೇಳಲಾ????

ನಾಗರೀಕತೆ

ವಿಲಿಯಂ ಜೇಮ್ಸ್ ದ್ಯುರಾಂಟ್ (http://en.wikipedia.org/wiki/Will_Durant) ಅನ್ನೋ ಒಬ್ಬಮಹಾಶಯ ನಾಗರಿಕತೆಯ ಬಗ್ಗೆ ವ್ಯಾಖ್ಯಾನಿಸುತ್ತಾ ಹೀಗೆ ಹೇಳುತ್ತಾನೆ. 

ಪ್ರಸ್ತುತ..

ಸರ್ವಧಾರಿಯ ಪ್ರಮಾದದ ಬೆಂಕಿ ಇನ್ನೂ ಆರಿಲ್ಲ
ವಕ್ಕರಿಸಿದ್ದಾನೆ ಅದಾಗಲೇ ವಿರೋಧಿ...
ತಂದಿದ್ದಾನೆ ಜತೆಯಲ್ಲಿ ಪೆಟಾರಿಯೊಂದ
ತುಂಬಿರಬಹುದು ಅದರಲ್ಲಿ ಬಣ್ಣಬಣ್ಣದ ಕನಸುಗಳ..!
ವಿಕ್ರಯಿಸಲೇ ಬದಂತಿದೆ ನಮ್ಮ ಇರುವನ್ನು..
ಹೇಳಿಕೇಳಿ ರಿಸೆಶನ್ನು.....

ಪ್ರಶ್ನೆಗಳಿವೆ ತುಸು ದ್ವಂದ್ವವೂ ಇದೆ ನನ್ನಲ್ಲಿ

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಹಟ್ಟಿಯಂಗಡಿ (ಹಟ್ಟಿಅಂಗಡಿ)

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಒಂದಾದ ಹಟ್ಟಿಯಂಗಡಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಕುಂದಾಪುರದಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಹಟ್ಟಿಯಂಗಡಿ ಒಂದು ಸಣ್ಣ ಹಳ್ಳಿ. ಇಲ್ಲಿ ಗಣಪನ ವಾಸ. ದೇವಸ್ಥಾನ ಸಣ್ಣವಾಗಿ ಕಂಡರೂ ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಳದಲ್ಲಿ ನವಗ್ರಹ ಮಂದಿರ ಕೂಡ ಇದೆ. ಗರ್ಭಗುಡಿಯ ಸುತ್ತಲೂ ವಿವಿಧ ಭಂಗಿಯ ಗಣಪತಿ ಮೂರ್ತಿಗಳಿವೆ (ಊರ್ಧ್ವ, ಹೇರಂಬ, ನೃತ್ಯ ಮುಂತಾದವು).

 


ಹಿನ್ನೆಲೆ:
ಪಶ್ಚಿಮಾಭಿಮುಖವಾಗಿ ಹರಿಯುವ ವರಾಹಿ ನದಿ ಉತ್ತರ ದಂಡೆಯ ಮೇಲೆ ಇರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ. ’ಹಟ್ಟಿಯಂಗಡಿ’ ಎಂಬ ಹೆಸರಿನ ಗ್ರಾಮಕ್ಕೆ ಹಿಂದೆ ’ಪಟ್ಟಿ-ಪಟ್ಟಿಯ’ನಗರ ಎಂಬ ಹೆಸರಿತ್ತು. ಇದಕ್ಕೆ ಶಾಸನಾಧಾರಗಳಿವೆ. ತುಳುನಾಡು ಆಳಿದ ಪ್ರಪ್ರಥಮ ರಾಜವಂಶದ ಆಳುಪ ರಾಜರ ಹೆಸರಿನಲ್ಲಿ ’ಪಟ್ಟಿ’ ಪ್ರಮುಖವಾಗಿ ಕಾಣಿಸಿಕೊಂಡಿದೆ. ಪಟ್ಟಿ ಅಥವಾ ಹಟ್ಟಿ ಎಂದರೆ ಒಂದು ಕಿರುಗ್ರಾಮ, ಒಂದು ಗುಂಪಿನವರು ವಾಸಿಸುವ ಸ್ಥಳ, ಮನೆ, ಬೀಡು ಎಂಬಿತ್ಯಾದಿ ಅರ್ಥಗಳು ಇವೆ. ಹಟ್ಟಿಯಂಗಡಿಯಲ್ಲೇ ಎರಡು ಪ್ರಾಚೀನವಾದ ಗಣಪತಿ ವಿಗ್ರಹಗಳಿವೆ. ಒಂದು ಲೋಕನಾಥೇಶ್ವರ ದೇವಸ್ಥಾನದಲ್ಲಿ (ಈ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ) ಮತ್ತೊಂದು ಸಿದ್ಧಿವಿನಾಯಕ ದೇವಸ್ಥಾನದಲ್ಲಿದೆ.

ಹೀಗೊಂದು ಚುಟಕು

ಚುಟಕು ಭಾಗ ೧
ನಾನು ಸತ್ತಿದ್ದರೆ, ಈಗ ಇಲ್ಲಿ
ಚುಟಕ ಬರೆಯುತ್ತಿದ್ದೆನೆ?

ಚುಟಕು ಭಾಗ ೨ (ಅಸಂಗತ)
ನಾನು ಬದುಕಿದ್ದರೆ ಈಗ
ಇಲ್ಲಿ ಚುಟಕ ಬರೆಯುತ್ತಿದ್ದೆನೆ?