ನಾಗರೀಕತೆ

ನಾಗರೀಕತೆ

ವಿಲಿಯಂ ಜೇಮ್ಸ್ ದ್ಯುರಾಂಟ್ (http://en.wikipedia.org/wiki/Will_Durant) ಅನ್ನೋ ಒಬ್ಬಮಹಾಶಯ ನಾಗರಿಕತೆಯ ಬಗ್ಗೆ ವ್ಯಾಖ್ಯಾನಿಸುತ್ತಾ ಹೀಗೆ ಹೇಳುತ್ತಾನೆ. 

ನಾಗರೀಕತೆ ಅನ್ನೋದು ಒಂದು ನದಿ. ಜಗಳ, ಕೊಲೆ, ಕಳ್ಳತನ ಇತ್ಯಾದಿಗಳಿಂದ ಆ ನದಿಯಲ್ಲಿ ಒಮ್ಮೊಮ್ಮೆ ರಕ್ತ ಹರಿಯುತ್ತದೆ. ಅದನ್ನೇ ಇತಿಹಾಸಕಾರರು  "ಇತಿಹಾಸ" ಎಂದು ದಾಖಲಿಸುತ್ತಾರೆ. ಅದೇ ಸಮಯದಲ್ಲಿ ಆ ನದಿಯ ದಂಡೆಗಳ ಮೇಲೆ ಜನ ಮದುವೆ ಮಾಡಕೊಂಡು, ಮಕ್ಕಳ ಲಾಲನೆ ಪಾಲನೆ ಮಾಡುತ್ತಾ, ಅವರೊಂದಿಗೆ ಆಟೋಟದಲ್ಲಿ ಕಲೆಯುತ್ತಾ, ಸಮುದಾಯದಲ್ಲಿ ಹಾಡುತ್ತಾ ಕುಣಿಯುತ್ತಾ, ಕಾವ್ಯಗಳನ್ನು ಬರೆಯುತ್ತಾ  ಚೆನ್ನಾಗಿ ಬದುಕುತ್ತಿರುತ್ತಾರೆ. ಅದಲ್ಲವೇ ನಾಗರೀಕತೆ. ವಿಚಿತ್ರವೆಂದರೆ ಇತಿಹಾಸಕಾರರು ದಂಡೆಯನ್ನು ಮರೆತು ನದಿಯನ್ನು ವಿವರಿಸುತ್ತಾರೆ.

ವಿಲ್ ದ್ಯುರಾಂಟನ ಪುಸ್ತಕಗಳನ್ನು ನಾನು ಓದಿಲ್ಲ, ಆದರೆ ಅವನ ಈ ಮೇಲಿನ ಹೇಳಿಕೆ ನನಗೆ ತುಂಬಾ ಹಿಡಿಸಿತು. 

Rating
No votes yet

Comments