ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಮಾಯಕ ಸರ್ದಾರ್ಜಿಗಳ ಕೊಲ್ಲಿಸಿದ ರಾಜೀವನ ಕಾಂಗ್ರೇಸ್

ಈಗ ಸರ್ದಾರ್ಜಿ ಪತ್ರಕರ್ತನೊಬ್ಬ ಪಚಿಗೆ ಬೂಟೆಸೆದ ಪರಿಣಾಮ ಟೈಟ್ಲರಿಗೆ ಟಿಕೇಟು ಇಲ್ಲ ಎನ್ನುವುದೇ ಸುದ್ದಿ. ಆದರೆ ಟೈಟ್ಲರ ಪ್ರಭೃತ್ತಿಗಳ ಮುಂದಾಳ್ತನದಲ್ಲಿ ಸಾವಿರಾರು ಸಿಖ್ ಜನರು ಸತ್ತದ್ದು ಮಾತ್ರವಲ್ಲ ಕಾಂಗ್ರೇಸ್ ಪಕ್ಷ ಇಂದಿರಾ ಗಾಂಧಿ ಕೊಲೆ ಪ್ರಕರಣದಲ್ಲಿ ಒಬ್ಬ ನಿರ್ದೋಷಿಯನ್ನು ನೇಣು ಹಾಕಿದ ಅಪವಾದವನ್ನೂ ಹೊತ್ತಿದೆ.

ಮರೆಯಾದ ಕೊಂಡಿ...

ಪೇಪರ್ ನಲ್ಲಿ ಮೂಲೆಯಲ್ಲಿದೆ ಆ ಸುದ್ದಿ ಶಕ್ತಿ ಸಾಮಂತ್ ಇನ್ನಿಲ್ಲ ಎಂದು. ಹೊಸ ಪೀಳಿಗೆಗೆ ಇವರ ಬಗ್ಗೆ ಅಷ್ಟು ಗೊತ್ತಿರಲಿಕ್ಕಿಲ್ಲ. ರಾಜೇಶಖನ್ನನಿಗೆ ಸುಪರ್ ಸ್ಟಾರ್ ಪಟ್ಟ ತಂದುಕೊಟ್ಟವ ಹಾಗೂ ಅನೇಕ ಹಿಟ್ ಸಿನೆಮಾ ಕೊಟ್ಟವರು ಶಕ್ತಿ ಸಾಮಂತ್. ಮೂಲತಃ ಬಂಗಾಳಿ ಬಾಬು ಆ ಪ್ರದೇಶದ ಸೊಬಗು, ಸಂಗೀತ

ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು

(ಕೃಷ್ಣನ ಕೊರಳಿನಾ ಕರೆಯ ರಚನೆಕಾರರ ಕ್ಷಮೆ ಕೋರಿ)

ನೆಚ್ಚಿನಾ ಬ್ಲಾಗನ್ನ ತೆರೆ

ವೀಕ್ಷಿಸು ನೆಚ್ಚಿನ ಬ್ಲಾಗನ್ನ ತೆರೆ

ತೆರೆ ತೆರೆ
------------------------------

ರಿಂಗಿಸೊ ಫೋನನ್ನು ತೊರೆ ತೊರೆ
ಕಡತದ ವಿಷಯಾನಾ ಮರೆ ಮರೆ
ಗಣಕದಲಿ ಬ್ಲಾಗನ ತೆರೆ ತೆರೆ
ನೆಟ್ಟಿನಾ ಬ್ಲಾಗಿನಾ ತೆರೆ
-----------------------------------
ಮನೆಯಲ್ಲಿನ ಗಂಡನ್ನ ಮರೆ ಮರೆ
ಅಳುತ್ತಿರೋ ಕಂದನ್ನ ಮಾಡು ಮರೆ

ಈ ಕವಿಗಳೇ ಹೀಗೆ!!!

ಸಖೀ,

ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ
ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ

ಆದದ್ದನ್ನೆಲ್ಲಾ ಈತ ಒಮ್ಮೊಮ್ಮೆ ಆಗಿಲ್ಲವೆನ್ನುತ್ತಾನೆ
ಆಗದ್ದನ್ನೆಲ್ಲಾ ಕೆಲವೊಮ್ಮೆ ಆಗಿದೆಯೆನ್ನುತ್ತಾನೆ

ಕಾಣದ್ದನ್ನೂ ಈತ ನಿಜಕ್ಕೂ ಕಂಡವರಂತಾಡುತ್ತಾನೆ
ಕಂಡದ್ದನ್ನೂ ಬೇಕೆಂದೇ ಮರೆಯಲೆತ್ನಿಸುತ್ತಾನೆ

ನಗೋ ಬುದ್ಧ - ಝೆನ್ ಕತೆ

ನೀವು ಲಾಫಿಂಗ್ ಬುದ್ಧ ಅಂತ ಒಂದು ಚೀಲ ಹೊತ್ತುಕೊಂಡು ನಗುತ್ತಿರುವ ಬೌದ್ಧ ಸನ್ಯಾಸಿಯ ಚಿಕ್ಕ ದೊಡ್ಡ ಮೂರ್ತಿ ನೋಡಿರಬಹುದು . ಒಳ್ಳೇದಾಗುತ್ತದೆ ಅಂತ ನಿಮ್ಮ ಮನೆಗಳಲ್ಲಿ ಇಟ್ಕೊಂಡೂ ಇರಬಹುದು .
ಯಾರಿವನು ?

ಹೋಗು ಸುಮ್ಮನೆ ಮಲಗು-ಜ಼ೆನ್

ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ.
ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ್ತು. ಗಾಸನ್ ಮತ್ತೆ ಆ ದೇಗುಲವನ್ನು ಪುನನಿರ್ಮಾಣಮಾಡುವುದರಲ್ಲಿ ನಿರತನಾಗಿದ್ದ. ಟೆಕಿಸ್ಯು ಅವನನ್ನು ಕೇಳಿದ;

ತೀರದ ಆಸೆ

'ನಾನು ಹೆ೦ಡ, ಹೆಣ್ಣು ಮತ್ತು ಹಣವನ್ನು ಹುಡುಕಿಕೊ೦ಡು ಮನೆ ಬಿಟ್ಟು ಹೋಗುತ್ತಿದ್ದೇನೆ.' ಮಗ ಬೇಸತ್ತು ಹೇಳಿದ.
ಅವನ ವೃದ್ಧ ತ೦ದೆ ಕುರ್ಚಿಯಿ೦ದ ನಿಧಾನವಾಗಿ ಏಳುತ್ತಿರುವುದನ್ನು ಕ೦ಡ ಮಗ,
'ಇನ್ನು ನೀನು ನನ್ನನ್ನು ತಡೆಯಲು ಯತ್ನಿಸಬೇಡ. ಏನೇ ಆಗಲಿ ನಾನು ನಿಲ್ಲುವವನಲ್ಲ.' ಹೇಳಿದ.

ನಿಧಾನ ಸೌಧ

 

(ಕುವೆಂಪು ಅವರ ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ರಾಗದಲ್ಲಿ ಹಾಡಿಕೊಳ್ಳಬೇಕು) 

ಮೂಗನೊಳು ಕೈ ಹಿಡಿದು, ಒಳಗೆ ಬಾ  ಅರ್ಜಿಗನೆ

ನೆಲೆಯಲ್ಲವೀ ಗುಡಿಯು, delay a ಬಲೆಯು |ಪಲ್ಲವಿ|

 

ಅರ್ಜಿಗಳ ಧಣಿಯಿಲ್ಲ, ಜಾಗೃತಿಗಳಿಲ್ಲ|

ವಿಲೇವಾರಿಯಾರತಿಯ ಜ್ಯೋತಿ ಇಲ್ಲಾ||

ಋಷುವತ್ತಿನಾನಂದ ಕೂಪಗೊಂಡಿಹುದಿಲ್ಲ|

ಚುನಾವಣೆ - ಹೊರಟಿದೆ ನೋಡ ಮಲದ ಮೆರವಣಿಗೆ

{ದೇಶದಿ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮುಖಂಡರು. ಪ್ರಮುಖವಾದ ಮೂರು ಪಕ್ಷಗಳು ಸೆಣಸುತ್ತಿರುವ ಈ ರಾಜಕೀಯ ಯುದ್ದದಲ್ಲಿ ಮತದಾರನ ಮುಂದಿರುವ ಪ್ರಶ್ನೆ ’ಯಾರು ಹಿತವರು ಈ ಮೂವರೊಳಗೆ ?’ ಎಂದು.}

ಹೊರಟಿದೆ ನೋಡ ಮಲದ ಮೆರವಣಿಗೆ

ಮೈಯ ತೊಳೆವುದು ಗಂಗಾ ಜಲ
ತೊಳೆಯದದು ಮನದ ಮಲ
ಹೊರಟಿದೆ ನೋಡ ಮಲದ ಮೆರವಣಿಗೆ

ಸುತ್ತಿಬಂದರು ತಿರುಮಲ
ಕಳಿಯಲಿಲ್ಲ ಪಾಪದ ಫಲ
ಹೊರಟಿದೆ ನೋಡ ಮಲದ ಮೆರವಣಿಗೆ

ಕುಡಿದು ಬೆಳೆದರೂ ಕಾವೇರಿ ಜಲ
ಕರಗಲಿಲ್ಲ ಮನದ ಮಲ
ಹೊರಟಿದೆ ನೋಡ ಮಲದ ಮೆರವಣಿಗೆ