ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೇಳೋದೊಂದು ಮಾಡೋದೊಂದು :(

ಮೊನ್ನೆ ಓಂಶಿವು ಕೇಳ್ದ್ರು, ಒಂದ್ಲೇಖ್ನಾ ಬೇಕು, ಹೊಸ್ದಾಗಿ (ಗ್ನು/ಲಿನಕ್ಸ್ನಲ್ಲಿ) ಪ್ರೋಗ್ರಾಮಿಂಗ್ ಮಾಡ್ಬೇಕೂಂತ/ಕಲೀಬೇಕು ಅನ್ನೋರ್ಗೆ ಸಣ್ಣ್ದಾಗಿ ವಿಷ್ಯ ತಿಳಿಪಡ್ಸೋ ಬಗ್ಗೆ . ಒಂದು ಪ್ರೈಮರ್ ಥರಾ. ನಾಳಿದ್ದೊಳಗಿರತ್ತೆ ಅಂತಂದ್ಬಿಟ್ಟೆ. ಆಗ್ಲೇ ಬರ್ಯೋಕ್ಕೂ ಶುರು ಮಾಡ್ದೆ ಕೂಡ. :) ಆದ್ರೆ ಅದು ಎಳ್ಕೋತಾ ಹೋಗ್ತಿದೆ.

ಖರ್ಚು-ಎಷ್ಟು?-ಒ೦ದು ರಸಕ್ಷಣ

ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ತಾನು ವಾಸಿಸುತಿದ್ದ ದಕ್ಷಿಣ ಫ್ರಾನ್ಸ್ ನಲ್ಲಿನ ತನ್ನ ಬ೦ಗಲೆಯನ್ನು ಸುಸಜ್ಜಿತಗೊಳಿಸಲು ಒಬ್ಬ ಸುಪ್ರಸಿದ್ಧ ಬಡಗಿಯ ಬಳಿ ಹೋಗಿ ತನಗೆ ಒ೦ದು ಮಹೋಗನಿಯ ವಾರ್ಡ್ರೋಬ್ ನ್ನು ಮಾಡಿಕೊಡು ಎ೦ದು ಕೇಳಿದ.

ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳು ಇಲ್ಲದಿದ್ರೆ ಸಂವಹಿಸುವುದು ಹೇಗೆ?

ಹೇಳಿ ಕೇಳಿ ಬ್ಯಾಕ್ಟೀರಿಯಾಗಳು ಎಕ ಕೋಶ ಜೀವಿಗಳು. ಅವುಗಳಿಗೆ ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳು ಇಲ್ಲ. ಕೆಲವು ಬ್ಯಾಕ್ಟೀರಿಯಾಗಳಿಗೆ ಅತ್ಲಾಗ್ ಬಾಲವು ಅಲ್ಲದ ಇತ್ಲಾಗ್ ಕಾಲೂ ಅಲ್ಲದ ಬಾಲಕಾಲುಗಳಿರ್ತಾವೆ (flagella). ಪರಿಸ್ಥಿತಿ ಹೀಗಿರಬೇಕಾದ್ರೆ, ಬ್ಯಾಕ್ಟೀರಿಯಾಗಳು ತಮ್ಮಗಳ ನಡುವೆ ಸಂವಹಿಸುತ್ತಾವೆ ಅಂದ್ರೆ, ಅದು ಆಶ್ಚರ್ಯದ ಮಾತೇ ಸೈ. ಈ ಎರಿಯಾದಲ್ಲಿ ತಮ್ಮ ಸಂಖ್ಯೆ ಎಷ್ಟಿದೆ ಅಂತ ತಿಳ್ಕೊಕೆ, ಬ್ಯಾಕ್ಟೀರಿಯಾಗಳು ಒಂದು ವಿಶೇಷ ರಾಸಾಯನಿಕವನ್ನು (chemical compound) ಸುತ್ತಲಿನ ವಾತಾವರಣಕ್ಕೆ ಬಿಡುಗಡೆ ಮಾಡ್ತವೆ. ಹತ್ತಿರದಲ್ಲಿರುವ ಅದೇ ಪ್ರಭೇದದ ಬೇರೇ ಬ್ಯಾಕ್ಟೀರಿಯಾಗಳ ಮೇಲ್ಮೈಯಲ್ಲಿರುವ ಜೈವಿಕ ಬುಟ್ಟಿಗಳಿಗೆ (receptors) ಈ ವಿಶೇಷ ರಾಸಾಯನಿಕಗಳು ಅಂಟಿಕೊಂಡಾಗ, ಆ ಬ್ಯಾಕ್ಟೀರಿಯಾಗಳಿಗೆ ಅಕ್ಕಪಕ್ಕದಲ್ಲಿ ತಮ್ಮ ಮಂದಿ ಇದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ. ಜಾಸ್ತಿ ರಾಸಾಯನಿಕಗಳು ಜೈವಿಕ ಬುಟ್ಟಿಗಳಿಗೆ ಅಂಟಿಕೊಂಡಂತೆಲ್ಲಾ ತಮ್ಮ ಸಂಖ್ಯೆ ಜಾಸ್ತಿ ಇದೆ ಅಂತ ಬ್ಯಾಕ್ಟೀರಿಯಾಗಳು ಅರ್ಥ ಮಾಡ್ಕೋತಾವೆ. ಇದನ್ನು bacterial quorum sensing ಎನ್ನುತ್ತಾರೆ.

ಬ್ಯಾಕ್ಟೀರಿಯಾಗಳು ಅನೇಕ ಸಂದರ್ಭಗಳಲ್ಲಿ quorum sensingನ್ನು ಉಪಯೋಗಿಸುತ್ತವೆ. ಉದಾಹರಣೆಗೆ, ಜೀವಿಗೆ ರೋಗ ಉಂಟು ಮಾಡಲು ಬ್ಯಾಕ್ಟೀರಿಯಾಗಳು ಆ ಜೀವಿಯಲ್ಲಿ ಒಂದು ನಿರ್ಣಾಯಕ ಸಂಖ್ಯೆಯಲ್ಲಿರಬೇಕು. ಇಲ್ಲದಿದ್ದಲ್ಲಿ ಜೀವಿಯ ಜೈವಿಕ ಪ್ರತಿರೋಧ ವ್ಯವಸ್ಥೆ (immune system) ಬ್ಯಾಕ್ಟೀರಿಯಾಗಳನ್ನು ಯಶಸ್ವಿಯಾಗಿ ನಿರ್ಮೂಲನಗೊಳಿಸುತ್ತದೆ. ತಮ್ಮ ಪ್ರಯತ್ನ ವ್ಯರ್ಥವಾಗಬಾರದೆಂದು, ಬ್ಯಾಕ್ಟೀರಿಯಾಗಳು ತಮ್ಮ ಸಂಖ್ಯೆ ಒಂದು ನಿರ್ಣಾಯಕ ಘಟ್ಟಕ್ಕೆ ಬರೋ ತನಕ ಕಾಯ್ತಾವೆ . ಆ ಘಟ್ಟ ಸಮೀಪಿಸುತ್ತಿದ್ದಂತೆ (ಜಾಸ್ತಿ ರಾಸಾಯನಿಕಗಳು ಬ್ಯಾಕ್ಟೀರಿಯಾಗಳ ಜೈವಿಕ ಬುಟ್ಟಿಗಳಿಗೆ ಅಂಟಿಕೊಂಡಂತೆಲ್ಲಾ) , ಎಲ್ಲಾ ಬ್ಯಾಕ್ಟೀರಿಯಾಗಳು ಜೊತೆಯಾಗಿ ರೋಗವುಂಟು ಮಾಡುವ ಪ್ರೋಟಿನ್ಗಳನ್ನು ಉತ್ಪಾದಿಸುತ್ತವೆ. ಈ ಪ್ರೋಟಿನ್ಗಳು ಭಾರಿ ಪ್ರಮಾಣದಲ್ಲಿರುವುದರಿಂದ ಜೀವಿಯ ಜೈವಿಕ ಪ್ರತಿರೋಧ ವ್ಯವಸ್ಥೆ ಸೋಲೊಪ್ಪಿಕೊಳ್ಳುತ್ತದೆ.

ಧರ್ಮ

ಧರ್ಮ ನಿನ್ನಿಂದಾಗಿ ನಮಗೇಕೆ ಈ ಕರ್ಮ
ಅಂದು ನಾಗರೀಕತೆಯನ್ನು ನುಂಗಿದೆ
ಮೊನ್ನೆ ಸಂಸ್ಕ್ರುತಿಯನ್ನು ನುಂಗಿದೆ
ನಿನ್ನೆಯ ನಾಳೆಗಳನ್ನು ನುಂಗಿದೆ
ಇಂದು ಸಂಪದವನ್ನೇ ನುಂಗಲು ಹೊರಟಿರುವೆ
ಧರ್ಮ ನಿನ್ನಿಂದಾಗಿ ನಮಗ್ಯಾಕೆ ಈ ಕರ್ಮ....

http://sampada.net/article/18958

ಫಲಜ್ಯೋತಿಷ್ಯ ನಿಜನಾ ?

'ನಿಮ್ಮ ರಾಶಿಗೆ ಶನಿ ಆಗಮನವಾಗಿದೆ. ಕಷ್ಟ ಕಾಲ ಕಾದಿದೆ.ಯಾವ ಕೆಲಸಕ್ಕೆ ಹೋದರು ತೊಂದರೆಯೇ ಹೆಚ್ಚು.'
-ಈ ರೀತಿಯ ಮಾತುಗಳು ಆಗಾಗ ಕೇಳಿಬರುತಿರುತ್ತದೆ. ಇವು ನಿಜಾನಾ? ಸಾದ್ಯನಾ?
ನಾನಂತೂ ನಂಬುದಿಲ್ಲ.
ನೀವು?

ಅಂತರ್ಜಾಲವಿಲ್ಲದ ನೀರಸ ದಿನಗಳು

ಅಬ್ಬಾ ಈ ಅಂತರ್ಜಾಲವೆಂಬ ಮಾಯಾಲೋಕದ ಹುಚ್ಚು ಹತ್ತಿಸಿಕೊಂಡಾಗಿನಿಂದ, ಅದರಲ್ಲೂ "ಸಂಪದ" ಬಳಗಕ್ಕೆ ಬಂದಾಗಿನಿಂದ, ದಿನದ ೨೪ ಘಂಟೆಗಳೂ ಸಾಲದೆಂಬಂತಾಗಿತ್ತು. ಒಂದು ಹೊಸಾ ಅನುಭವ, ಹೊಸ ಹೊಸ ವಿಷಯಗಳ ಮತ್ತು ಹೊಸ ಹೊಸ ಸ್ನೇಹಿತರ ಮಾತು ಕಥೆಗಳು, ಎಲ್ಲವೂ ನನ್ನಲ್ಲಿ ಹುಮ್ಮಸ್ಸನ್ನು ಹುಟ್ಟಿಸಿತ್ತು. ಜೀವನದಲ್ಲಿ ಉಮೇದು ಹೆಚ್ಚಿಸಿತ್ತು.

"ಹಾಳು ಜಾತಿಗಳು - ಪರಿಹಾರ ಏನು?" ಎಂಬ ಪ್ರಶ್ನೆ ಮತ್ತು ನನ್ನ ಕನಸು.

ಸಪ್ತಗಿರಿವಾಸಿಯವರ "ಮತಾಂತರ ಹೇಗೆ? ಏನು? ಏಕೆ? ಮತ್ತು ಅದಕ್ಕೆ ಪರಿಹಾರ" ಎಂಬ ಬ್ಲಾಗ್ನಲ್ಲಿ ಪ್ರತಿಕ್ರಿಯಿಸಬೇಕಿನಿಸಿದಾಗ, 'ಪರಿಹಾರ' ಎಂಬ ವಿಷಯವೇ ಒಂದು ಚರ್ಚೆಯ ವಿಷಯವಾಗಬಹುದು ಎನಿಸಿ ಈ ಬ್ಲಾಗ್ ಬರೆಯುತ್ತಿದ್ದೇನೆ.

ಸಂಪದಿಗರ ಗಮನಕ್ಕೆ

ಇತ್ತೀಚೆಗೆ "flame" ಹತ್ತಿಸುವ "ಜಾತಿ" ಸುತ್ತಲಿನ ಲೇಖನಗಳು ಸಂಪದಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಕಂಡುಬಂದಿದೆ. ದಯವಿಟ್ಟು ಇಂತಹ ಲೇಖನಗಳನ್ನು ಜನರ ಮುಂದಿಡಲು ಸಂಪದದಂತಹ ಸಮುದಾಯವನ್ನು ಬಳಸದಿರಿ. ಹೀಗೆ ಬಳಸಿದ್ದು ಕಂಡುಬಂದಲ್ಲಿ ಆಯಾ ಲೇಖನವನ್ನೂ, ಅದರೊಂದಿಗಿರುವ ಎಲ್ಲ ಪ್ರತಿಕ್ರಿಯೆಗಳನ್ನೂ ಮುಲಾಜಿಲ್ಲದೆ ಅಳಿಸಿಹಾಕಲಾಗುವುದು.

ಸಂಪದ ನಡೆಸಿಕೊಂಡು ಹೋಗುತ್ತಿರುವುದೇ ಸಾಹಸವಾಗಿರುವ ಈ ಸಮಯದಲ್ಲಿ ಇಂತಹ ಅನಿವಾರ್ಯವಿಲ್ಲದ ಕಪ್ಪು ಚುಕ್ಕೆಗಳು ಸಂಪದದ ನಿರ್ವಹಣೆಯಲ್ಲಿ ಬೇಡದ ತೊಂದರೆಗಳನ್ನು ತಂದೊಡ್ಡುತ್ತದೆ. ಈಗಿನಂತೆ ಸಂಪದದ ಸುತ್ತ ಇರುವ ಪುಟ್ಟ ವ್ಯವಸ್ಥೆಗೆ ಇಂತಹ ತೊಂದರೆಗಳನ್ನು ನಿಭಾಯಿಸಲು ಬೇಕಿರುವ ಸಂಪನ್ಮೂಲಗಳು ಇಲ್ಲದೇ ಇರುವುದರಿಂದ ಈ ರೀತಿಯ ಲೇಖನಗಳಿಗೆ, ಈ ರೀತಿಯ ಚರ್ಚೆಗಳಿಗೆ ಜಾಗ ನೀಡಲು 'ಸಂಪದ'ಕ್ಕೆ ಈಗಿನಂತೆ ಸಾಧ್ಯವಿಲ್ಲ. ಆ ಸಮಯದ ಉದ್ವೇಗದಲ್ಲಿ, ವಿಷಯ ಹರಿತದ ಮೊನಚು ಹತ್ತಿಸಿಕೊಂಡು ಬರೆಯುವವರಿಗೆ ಸಂಪದ ನಿರ್ವಹಣೆ ಉತ್ತರ ಕೊಡಲು ಸಾಧ್ಯವಿಲ್ಲ, ಬದಲಿಗೆ "ಒಂದು ರೀತಿಯ ಸ್ವ-ನಿಯಂತ್ರಣ ಕಂಡುಕೊಳ್ಳಿ" ಎಂದಷ್ಟೆ ಹೇಳಬಹುದು. ಈ ನಿಮ್ಮ ಸಂಪದ ಸಮುದಾಯ ಉಳಿಯಬೇಕು ಎಂದರೆ ಇದರ ಸದುಪಯೋಗ ಮಾಡಿಕೊಳ್ಳುವುದರ ಕಡೆ ಗಮನ ಕೊಡಿ. ದುರುಪಯೋಗ ಸಲ್ಲದು. ಒಂದೊಮ್ಮೆ ಹೆಚ್ಚಿನ ದುರುಪಯೋಗಗಳು ಕಂಡುಬಂದಲ್ಲಿ ಅಂತರ್ಜಾಲದ ಉಳಿದ ವೆಬ್ಸೈಟುಗಳಂತೆ ಸಂಪದದಲ್ಲಿ ಕೂಡ ಲೇಖನ, ಪ್ರತಿಕ್ರಿಯೆ ಎಲ್ಲವನ್ನೂ ಮಾಡರೇಟ್ ಮಾಡುವ ಸಹಜ ಸ್ಥಿತಿಗೆ ಮರಳಬೇಕಾಗಿ ಬರುವುದು ಅಥವ ಸಮುದಾಯಕ್ಕೇ ಇತಿಶ್ರೀ ಹಾಡಬೇಕಾಗಿ ಬರುವುದು.