ಅಂತರ್ಜಾಲವಿಲ್ಲದ ನೀರಸ ದಿನಗಳು

ಅಂತರ್ಜಾಲವಿಲ್ಲದ ನೀರಸ ದಿನಗಳು

ಅಬ್ಬಾ ಈ ಅಂತರ್ಜಾಲವೆಂಬ ಮಾಯಾಲೋಕದ ಹುಚ್ಚು ಹತ್ತಿಸಿಕೊಂಡಾಗಿನಿಂದ, ಅದರಲ್ಲೂ "ಸಂಪದ" ಬಳಗಕ್ಕೆ ಬಂದಾಗಿನಿಂದ, ದಿನದ ೨೪ ಘಂಟೆಗಳೂ ಸಾಲದೆಂಬಂತಾಗಿತ್ತು. ಒಂದು ಹೊಸಾ ಅನುಭವ, ಹೊಸ ಹೊಸ ವಿಷಯಗಳ ಮತ್ತು ಹೊಸ ಹೊಸ ಸ್ನೇಹಿತರ ಮಾತು ಕಥೆಗಳು, ಎಲ್ಲವೂ ನನ್ನಲ್ಲಿ ಹುಮ್ಮಸ್ಸನ್ನು ಹುಟ್ಟಿಸಿತ್ತು. ಜೀವನದಲ್ಲಿ ಉಮೇದು ಹೆಚ್ಚಿಸಿತ್ತು. ಸ್ವಚ್ಛಂದವಾಗಿ, ಗಾಳಿಯಲ್ಲಿ ಹಾರುತ್ತಿದ್ದ, ಮನಸ್ಸು ಸೂತ್ರ ಕಿತ್ತ ಪಟದಂತೆ, ಹುಮ್ಮಸ್ಸು ಕಳೆದುಕೊಂಡು ಬಿಟ್ಟಿತ್ತು, ಏಕೆ ಅಂತೀರಾ ? ಕಳೆದ ನಾಲಕ್ಕು ದಿನಗಳಿಂದ ನಮ್ಮ ಅಂತರ್ಜಾಲ, ಸತ್ಯಾಗ್ರಹ ಹೂಡಿ ಬಿಟ್ಟಿತ್ತು. ತೆರೆದುಕೊಳ್ಳದ ಅಂತರ್ಜಾಲ, ಬೇಸರ ಮೂಡಿಸಿತ್ತು. ಏನು ಮಾಡಬೇಕೆಂದು ತೋಚದಂತೆ ಮಾಡಿತ್ತು. ಮನಸ್ಸು ಉದಾಸೀನತೆಯಿಂದ ಮುದುರಿಕೊಂಡು ಮಲಗಿತ್ತು. ತಾಂತ್ರಿಕ ತಿಳುವಳಿದೆ ಇಲ್ಲದ, ನಮ್ಮಂತಹ "ಕಟ್ಟ ಕಡೆಯ ಉಪಯೋಗಕರು" (end users) ಅಸಹಾಯಕತೆಯಿಂದ ಕಿರಿ ಕಿರಿ ಮಾಡಿಕೊಂಡಿರಬೇಕಷ್ಟೆ ! ಈ ಪೇಚಾಟ ಅನುಭವಿಸಿದವರಿಗೆ ಮಾತ್ರವೇ ಅರ್ಥವಾಗುವುದು.

ಈ ದಿನ ಅಂತರ್ಜಾಲ ತೆರೆದುಕೊಂಡಾಗ, ಯಾವುದೋ ಮಾಯಾಲೋಕ ನೋಡಿದಷ್ಟು ಖುಷಿಯಾಯಿತು. ಉತ್ಸಾಹ ಮುಗಿಲೆತ್ತರಕ್ಕೇರಿದೆ. ಪ್ರಪಂಚದ ಕೊಂಡಿಯೇ ಕಳೆದುಹೋಗಿತ್ತೇನೋ ಅಂತ ಅನ್ನಿಸಿತ್ತು. ಅಬ್ಬಾ ಈಗ ಸಮಾಧಾನವಾಯಿತು. ನಿಮಗೂ ಯಾವಾಗಲಾದರೂ ಈ ತರಹದ ಅನುಭವ ಆಗಿದೆಯಾ?

Rating
No votes yet

Comments