ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಬದುಕಿನ ಗುರಿ

ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜಕ್ಕೂ ಬದುಕಿನ ಪ್ರತಿ ಕ್ಷಣವನ್ನೂ ತನಗೆ ಅತಿ ಹೆಚ್ಚು ಸಂತಸ ಕೊಡುವ ಕ್ರಿಯೆಯಲ್ಲೇ ಕಳೆದ ಅನ್ನಬಹುದು. ಈ ಮಾತು ಎಷ್ಟು ಜನರು ಹೇಳಲು ಸಾಧ್ಯ?

ತಡವಾಗಿ ಬಂದ ಮರುಕ

ಅಮೆರಿಕೆಯ ಎಲ್ವಿನ್ ಹೋಪ್ ವಿಲ್ಸೋನ್ನಿನ ಫೋನು ಒಂದೇ ಸಮನೆ ದಿನವಿಡೀ ರಿಣಗುಟ್ಟುತ್ತಿತ್ತು. ಯಾರೀ ಎಲ್ವಿನ್? ನಟನಾ? ರಾಜಕಾರಣಿಯಾ ಅಥವಾ ಖ್ಯಾತ base ಬಾಲ್ ಆಟಗಾರನಾ? ಅಲ್ಲ, ಆತ ನಮ್ಮ ನಿಮ್ಮಂಥ obba ಸಾಧಾರಣ ಮನುಷ್ಯ, ordinary folk. ಹಾಗಾದರೆ ಅವನಿಗೇಕೆ ಇಷ್ಟೊಂದು ಪಬ್ಲಿಸಿಟಿ. ಯಾಕೆಂದರೆ ಆತನಲ್ಲಿರು ಅಪರೂಪದ ಗುಣ. ಅದೆಂದರೆ ಕರಿಯರನ್ನು ಕಂಡರೆ ಕೆಂಡಾ ಮಂಡಲನಾಗುವುದು. ಯಾವುದೇ ಕಾರಣವಿಲ್ಲದಿದ್ದರೂ ಕರಿಯರನ್ನು ಹೀಗಳೆಯುತ್ತಿದ್ದ, ಸಿಡಿಮಿಡಿಗೊಳ್ಳುತ್ತಿದ್ದ. ದಾರಿ ಹೋಕರನ್ನೂ, ತನ್ನ ಪುತ್ರನ ಸ್ನೇಹಿತರನ್ನೂ ಬಿಡುತ್ತಿರಲಿಲ್ಲ ಆತ.
ಈಗ ೭೧ ವಯಸ್ಸಿನ, ಡಯಾಬಿಟಿಸ್ ರೋಗದಿಂದ ನರಳುತ್ತಿರುವ ಈತನಿಗೆ ಬಂತು ತಡವಾಗಿ ಬುದ್ಧಿ. ಈತನ ಈ ಕರಿಯರನ್ನು ದ್ವೇಷಿಸುವ ಗುಣದಿಂದ ರೋಸಿ ಹೋಗಿದ್ದ ಆತನ ಮಗನಿಗೆ ಈಗ ತಂದೆಯ ಮೇಲೆ ಅಭಿಮಾನ. ತಡವಾಗಿಯಾದರೂ ತಿದ್ದಿ ಕೊಂಡನಲ್ಲ ಅಪ್ಪ ಎಂದು.
೬೦ರ ದಶಕದವರೆಗೂ ಕರಿಯರನ್ನು ಪೀಡಿಸುವುದು ಬಿಳಿಯರಿಗೆ ಒಂದು ಮೋಜು. ಬಸ್ಸಿನಲ್ಲಿ ಮುಂದಿನ ಬಾಗಿಲಿನಿಂದ ಹತ್ತುವಂತಿಲ್ಲ, ಶಾಲೆಗಳಲ್ಲಿ ಪ್ರವೇಶವಿಲ್ಲ. ಕರಿಯರ ಚರ್ಚೇ ಬೇರೆ, ಕೆಲಸ ಸಿಗುವುದು ಅಪರೂಪ. ಇಂಥ ವಾತಾವರಣದಲ್ಲಿ ಬೆಳೆದ ಎಲ್ವಿನ್ ಮಿತ್ರರೊಂದಿಗೆ ಸೇರಿ ಕರಿಯರನ್ನು ಹೊಡೆಯುವುದು, ಅಪಹಾಸ್ಯ ಮಾಡುವುದು ಕಲಿತ. ಅಷ್ಟು ಮಾತ್ರ ಅಲ್ಲ, ಕರಿಯರನ್ನು, ಯಹೂದಿಗಳನ್ನು ಧ್ವೇಷಿಸುವುದೇ ಕಸುಬಾಗಿಸಿಕೊಂಡ ku klux klan ಎಂಬ ಸಂಘಟನೆಯ ಸದಸ್ಯನೂ ಆಗಿದ್ದ. ಈ ರೀತಿಯ ಕರಿಯರನ್ನು ದ್ವೇಷಿಸುವ ಚಾಳಿ ಎಲ್ಲಿಂದ ಬಂತು ಎಂದು ಕೇಳಿದಾಗ ತನಗೆ ಗೊತ್ತಿಲ್ಲ ಆದರೆ ತನ್ನ ತಂದೆ ku klux klan ಸದಸ್ಯ ಆಗಿದ್ದ ಎಂದು ಉತ್ತರವಿತ್ತ.

ಇದು ವೋಡಾಫೋನೊ ಅಥವಾ ಪೋಡಾ-ಫೋನೋ ?

ಇತ್ತೀಚಿಗೆ ವೊಡಾಫೋನ್ ರವರ "ಟೆಲಿ ಮಾರ್ಕೆಟಿಂಗ್" ಕರೆಗಳು ತಮಿಳಿನಲ್ಲಿ ಬರ್ತಿವೆ.
ಇದನ್ನು ನನ್ನ ಗೆಳೆಯರಲ್ಲಿ ಮತ್ತು ಸಹೋದ್ಯೋಗಿಗಳಲ್ಲಿ ಕೇಳಿದಾಗ ಅವರಿಗೂ ಇದೇ ರೀತಿಯ ಕರೆಗಳು ಈಗಾಗಲೇ ಬಂದಿದ್ದು ತಿಳಿದು ಬಂತು.

ನಾನು ಸಣ್ಣಗಾಗಲು ಹೊರಟಿದ್ದು

ಈಗಂತೂ ಎಲ್ಲರೂ ಸಣ್ಣಗಾಗುತ್ತಿದ್ದಾರೆ. ನಾನೂ ಯಾಕೆ ಇದರ ಉಪಯೋಗ ಪಡ್ಕೋಬಾರದು? ಅಂತ ಯೋಚಿಸಿದ್ದೇ ತಡ ಸಣ್ಣ ಗಾಗಲು ನೂರಾರು ಯೋಚನೆಗಳು ಹೊಳೆದವು. ಅದನ್ನೇಲ್ಲಾ ಕಾರ್ಯರೂಪಕ್ಕೆ ತರಲು ಸಿದ್ಧಳಾದೆ.

ಚಿತ್ರಗಳ ಮೇಲೆ ಕವನ, ಪದ್ಯ, ಚುಟುಕ...

ಗೆಳೆಯರೆ, ಹೀಗೊಂದು ವಿಷಯ ಸಂಪದದಲ್ಲಿ ಇದೆಯಾ, ನನಗೊತ್ತಿಲ್ಲ. ಏನೆಂದರೆ, ಒಂದು ಚಿತ್ರ ಪ್ರಕಟಿಸಿ, ಓದುಗರು, ತಮ್ಮ ತಮ್ಮ ಯೊಚನೆಗನುಸಾರವಾಗಿ, ಸಣ್ಣದೊಂದು ಪದ್ಯಾನೋ, ಚುಟುಕಾನೋ, ಬರೀಬಹುದು. ಆ ಕ್ಷಣಕ್ಕೆ ಅವರವರ ಅಭಿಪ್ರಾಯಕ್ಕೆ ತಕ್ಕ ಹಾಗೆ, ತಮ್ಮ ಭಾವಲಹರಿಯನ್ನು ಹರಿಬಿಡಬಹುದು.
ಲೋಕೋಭಿನ್ನರುಚಿಹಿ...
ನೀವೇನಂತೀರಿ?

ಕಾರಂತರ ವಿಜ್ಞಾನ ಪ್ರೀತಿ

ಇತ್ತೀಚೆಗೆ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಬರವಣಿಗೆ ಕುರಿತಂತೆ ಸಂಪದದಲ್ಲಿ ನಡೆಯುತ್ತಿರುವ ಉತ್ಸಾಹಪೂರ್ಣ ಚರ್ಚೆಗಳು ಈ ಬರಹಕ್ಕೆ ಪ್ರೇರಣೆ.

ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ - ಶಿವರಾಮಕಾರಂತರು ಕನ್ನಡದ ಶ್ರೇಷ್ಠ ಕಾದಂಬರಿಕಾರರಾಗಿ ಸುಪ್ರಸಿದ್ದರು. ಆದರೆ ಆಶ್ಚರ್ಯವಾಗಬಹುದು - ಅವರ ಪ್ರಥಮ ಆಸಕ್ತಿ ಇದ್ದುದು - ವೈಚಾರಿಕ ಬರಹಗಳಲ್ಲಿ - ಅದರಲ್ಲೂ ವಿಜ್ಞಾನ ಸಾಹಿತ್ಯದಲ್ಲಿ.

ನಮ್ಮ ಹೆಚ್ಚಿನವರಂತೆ ಕಾಲೇಜು ಮೆಟ್ಟಲೇರಿ, ವಿಶ್ವವಿದ್ಯಾಲಯದ ಅಂಗಣದಲ್ಲಿ ವಿಜ್ಞಾನದ "ಕ್ರಮಬದ್ಧ ಶಿಕ್ಷಣ" ಪಡೆಯದೇ ಹೋದರೂ ಬೆರಗಾಗುವಷ್ಟು ವಿಪುಲವಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ನಿರ್ಮಿಸಿದವರು ಅವರು. ಮೂರು ಸಂಪುಟಗಳ "ಬಾಲಪ್ರಪಂಚ" (೧೯೩೬) ಮತ್ತು ನಾಲ್ಕು ಸಂಪುಟಗಳ "ವಿಜ್ಞಾನ ಪ್ರಪಂಚ" (೧೯೫೯) ವಿಜ್ಞಾನದ ಬಗ್ಗೆ ಕಾರಂತರಿಗೆ ಎಂಥ ತೀವ್ರ ಆಸ್ಥೆ ಇತ್ತೆನ್ನುವುದಕ್ಕೆ ಸಾಕ್ಷಿಯಾಗಿವೆ. ಸುಮಾರು ಮೂರು ಸಾವಿರ ಪುಟಗಳಿಗೆ ವಿಸ್ತರಿಸಿಕೊಂಡಿರುವ ಈ ಸಂಪುಟಗಳು ಒಂದು ವಿಶ್ವವಿದ್ಯಾಲಯದ ಹಲವು ಪ್ರಾದ್ಯಾಪಕ ಮಹೋದಯರು ಸೇರಿ ಮಾಡಬಹುದಾದ ಮಹೋನ್ನತ ಕಾರ್ಯ. ಆದರೆ ಶಿವರಾಮ ಕಾರಂತರು ಇವೆಲ್ಲವನ್ನು ಏಕಾಂಗಿಯಾಗಿ ಮಾಡಿದರು. ಇವಷ್ಟೇ ಅಲ್ಲ, ಮತ್ತೂ ಹಲವು ವಿಜ್ಞಾನ ಪುಸ್ತಕ ಮತ್ತು ಲೇಖನಗಳನ್ನು ಬರೆದರು.

ಆರ್ ವಿ ಭದ್ರಯ್ಯ = ನೀರ್ ಭದ್ರಯ್ಯ: ಇಂತವರೂ ಇದ್ದಾರೆ......

 

 

ಸಂಪದ ಮಿತ್ರರೇ

ಇದು ಒಬ್ಬ ಸಾಮಾನ್ಯ ಮನುಷ್ಯನ ಜನೋಪಯೋಗಿ ಕೆಲಸದ ಕಥೆ ...

ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಆಧಾರ:ಬೆಂಗಳೂರು ಮಿರರ್ ೦೫.೦೪.೨೦೦೯ (ಒಳ್ಳೆಯದ್ದು ಎಲ್ಲಿದ್ದರು ಅದನ್ನು ಎಲ್ಲರಿಗೂ ತಿಳಿಸುವುದು , ತಿಳಿಯುವಂತೆ ಮಾಡುವುದು ನಡೆಯುತ್ತಿರಬೇಕು)

 

ಗೂಗಲ್ ಟಾಕ್ ತರಹ ಸಂಪದ ಟಾಕ್ ಇದ್ದಿದ್ದರೆ ಚೆನ್ನಾಗಿತ್ತು

ನಮಗೆಲ್ಲಾ google talk ಗೊತ್ತು.ಹಾಗೆಯೆ ಸಂಪದ ಟಾಕ್ ಮಾಡಬಹುದಲ್ಲಾ..ಎಲ್ಲಾ online ಇರುವವರು ಮಾತನಾಡಬಹುದು ಅಲ್ವಾ

ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ.

ಸಾರ್ವತ್ರಿಕ ಚುನಾವಣೆ -೨೦೦೯ .ಮತ ಚಲಾಯಿಸಿ ಮತ್ತು ಪ್ರಜಾ ಪ್ರಭುತ್ವ ಉಳಿಸಿ .
ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನೂ ಅನಾವರಣ ಮಾಡಲಾಗಿದೆ .
ಎಲ್ಲಾ ಪಕ್ಷಗಳು ಅಭಿವ್ರದ್ಧಿ ಮಂತ್ರ ಜಪಿಸಿವೆ .
ಇಂದಿನ ಮಕ್ಕಳು ನಾಳೆಯ ಪ್ರಜೆಗಳು .ಇವರ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲಾ .
ಒಂದು ಪಕ್ಷದ ಮೇಲೆ ಇನ್ನೊಂದು ಸವಾರಿ,