ತಡವಾಗಿ ಬಂದ ಮರುಕ

ತಡವಾಗಿ ಬಂದ ಮರುಕ

ಅಮೆರಿಕೆಯ ಎಲ್ವಿನ್ ಹೋಪ್ ವಿಲ್ಸೋನ್ನಿನ ಫೋನು ಒಂದೇ ಸಮನೆ ದಿನವಿಡೀ ರಿಣಗುಟ್ಟುತ್ತಿತ್ತು. ಯಾರೀ ಎಲ್ವಿನ್? ನಟನಾ? ರಾಜಕಾರಣಿಯಾ ಅಥವಾ ಖ್ಯಾತ base ಬಾಲ್ ಆಟಗಾರನಾ? ಅಲ್ಲ, ಆತ ನಮ್ಮ ನಿಮ್ಮಂಥ obba ಸಾಧಾರಣ ಮನುಷ್ಯ, ordinary folk. ಹಾಗಾದರೆ ಅವನಿಗೇಕೆ ಇಷ್ಟೊಂದು ಪಬ್ಲಿಸಿಟಿ. ಯಾಕೆಂದರೆ ಆತನಲ್ಲಿರು ಅಪರೂಪದ ಗುಣ. ಅದೆಂದರೆ ಕರಿಯರನ್ನು ಕಂಡರೆ ಕೆಂಡಾ ಮಂಡಲನಾಗುವುದು. ಯಾವುದೇ ಕಾರಣವಿಲ್ಲದಿದ್ದರೂ ಕರಿಯರನ್ನು ಹೀಗಳೆಯುತ್ತಿದ್ದ, ಸಿಡಿಮಿಡಿಗೊಳ್ಳುತ್ತಿದ್ದ. ದಾರಿ ಹೋಕರನ್ನೂ, ತನ್ನ ಪುತ್ರನ ಸ್ನೇಹಿತರನ್ನೂ ಬಿಡುತ್ತಿರಲಿಲ್ಲ ಆತ.
ಈಗ ೭೧ ವಯಸ್ಸಿನ, ಡಯಾಬಿಟಿಸ್ ರೋಗದಿಂದ ನರಳುತ್ತಿರುವ ಈತನಿಗೆ ಬಂತು ತಡವಾಗಿ ಬುದ್ಧಿ. ಈತನ ಈ ಕರಿಯರನ್ನು ದ್ವೇಷಿಸುವ ಗುಣದಿಂದ ರೋಸಿ ಹೋಗಿದ್ದ ಆತನ ಮಗನಿಗೆ ಈಗ ತಂದೆಯ ಮೇಲೆ ಅಭಿಮಾನ. ತಡವಾಗಿಯಾದರೂ ತಿದ್ದಿ ಕೊಂಡನಲ್ಲ ಅಪ್ಪ ಎಂದು.
೬೦ರ ದಶಕದವರೆಗೂ ಕರಿಯರನ್ನು ಪೀಡಿಸುವುದು ಬಿಳಿಯರಿಗೆ ಒಂದು ಮೋಜು. ಬಸ್ಸಿನಲ್ಲಿ ಮುಂದಿನ ಬಾಗಿಲಿನಿಂದ ಹತ್ತುವಂತಿಲ್ಲ, ಶಾಲೆಗಳಲ್ಲಿ ಪ್ರವೇಶವಿಲ್ಲ. ಕರಿಯರ ಚರ್ಚೇ ಬೇರೆ, ಕೆಲಸ ಸಿಗುವುದು ಅಪರೂಪ. ಇಂಥ ವಾತಾವರಣದಲ್ಲಿ ಬೆಳೆದ ಎಲ್ವಿನ್ ಮಿತ್ರರೊಂದಿಗೆ ಸೇರಿ ಕರಿಯರನ್ನು ಹೊಡೆಯುವುದು, ಅಪಹಾಸ್ಯ ಮಾಡುವುದು ಕಲಿತ. ಅಷ್ಟು ಮಾತ್ರ ಅಲ್ಲ, ಕರಿಯರನ್ನು, ಯಹೂದಿಗಳನ್ನು ಧ್ವೇಷಿಸುವುದೇ ಕಸುಬಾಗಿಸಿಕೊಂಡ ku klux klan ಎಂಬ ಸಂಘಟನೆಯ ಸದಸ್ಯನೂ ಆಗಿದ್ದ. ಈ ರೀತಿಯ ಕರಿಯರನ್ನು ದ್ವೇಷಿಸುವ ಚಾಳಿ ಎಲ್ಲಿಂದ ಬಂತು ಎಂದು ಕೇಳಿದಾಗ ತನಗೆ ಗೊತ್ತಿಲ್ಲ ಆದರೆ ತನ್ನ ತಂದೆ ku klux klan ಸದಸ್ಯ ಆಗಿದ್ದ ಎಂದು ಉತ್ತರವಿತ್ತ.

ಈತನ ಔದಾರ್ಯವನ್ನು ಮೆಚ್ಚಿ ಪತ್ರಗಳ ಮಹಾಪೂರವೂ, ಪ್ರಶಂಸಿಸುವ ಮಾತುಗಳೂ ಕೇಳಿ ಬರುತ್ತಿವೆ.
ಈತನ bio data ದಲ್ಲಿ ಬರೀ ಕರಿಯರನ್ನು ಹೀಯಾಳಿಸಿದ ಕಥೆಯಲ್ಲದೆ ಇನ್ನೂ ಹಲವು ಘಟನೆಗಳಿವೆ. ಕರಿಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಒಬ್ಬ ನಾಯಕನ ಮೇಲೆ ಹಲ್ಲೆ, ಕರಿಯರ ಮೇಲೆ ಮೊಟ್ಟೆ ಮತ್ತಿತರ ವಸ್ತುಗಳನ್ನು ಎಸೆಯುವುದು, ಯಾವನಾದರೂ ಕರಿಯ ಈತನೊಂದಿಗೆ ಮಾತಿಗೋ, ತಗಾದೆಗೋ ನಿಂತರೆ ಹಿಗ್ಗಾ ಮುಗ್ಗಾ ಥಳಿಸುವುದು, ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ಅಪಮಾನಿಸುವುದು ಹೀಗೆ ಒಂದೇ ಎರಡೇ ಈ ಮನುಷ್ಯನ ಹೆಗ್ಗಳಿಕೆಗಳು.
ಕೊನೆಗೆ, ಈ ಇಳಿ ವಯಸ್ಸಿನಲ್ಲಿ ಜ್ಞಾನೋದಯವಾಗಲು ಕಾರಣವೇನೆಂದು ಕೇಳಿದಾಗ, ಈ ಪಾಪವನ್ನು ಹೊತ್ತು ಸ್ವರ್ಗ ಸೇರಲು ಸಾಧ್ಯವಿಲ್ಲ, ಅದಕ್ಕಾಗಿ ನಾನು ಪೀಡಿಸಿದವರನ್ನೆಲ್ಲಾ ಭೆಟ್ಟಿಯಾಗಿ ಕ್ಷಮೆ ಕೇಳುತ್ತಿದ್ದೇನೆ ಎನ್ನುತ್ತಾನೆ ಎಲ್ವಿನ್.
ಕಾಲ ನೋಡಿ ಹೇಗೆ ಬದಲಾಯಿತು. ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಎಷ್ಟೊಂದು ವ್ಯತ್ಯಾಸ. ಕರಿಯರು ಇಂದು ಎಲ್ಲಾ ರಂಗಗಳಲ್ಲೂ ಮುಂದುವರೆದಿದ್ದಾರೆ.
ಈಗ ಅಮೇರಿಕೆಗೆ ಒಬ್ಬ ಕರಿಯ ಅಧ್ಯಕ್ಷ. world's most powerful man, a black.

Rating
No votes yet

Comments