ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಂಗಳೂರಿಗೆ ಅಂಟಿದ ಧರ್ಮಪೀಡೆ!

ಬಿಜೆಪಿ ಅಧಿಕಾರಕ್ಕೆ ಬಂದ ಹೊಸತರಲ್ಲಿ ಅಥವಾ ಅದಕ್ಕಿಂತ ಮುಂಚೆ ಬದಲಾವಣೆ ನಿರೀಕ್ಷೆಯಲ್ಲಿದ್ದ ಜನತೆಗೆ ಗುಜರಾತ್ ಮಾಡೆಲ್ ಅಭಿವ್ರದ್ಧಿ ಮೂಲಮಂತ್ರವನ್ನ ಜಪಿಸುತ್ತಿದ್ದ ಬಿಜೆಪಿ ಇಂದು ಮಾಡುತ್ತಿರುವುದಾದರೂ ಏನು?

LG ಗ್ರಾಹಕ ಸೇವಾ ಕೇಂದ್ರದ ಭಾಷಾ ಆಯ್ಕೆಗಳು

ನೆನ್ನೆ ನಾನು LG Customer Careಗೆ ಕರೆ ಮಾಡಿದ್ದೆ. ನಮ್ಮ ಮನೆಯ Washing machine ಸ್ವಲ್ಪ ಕೆಟ್ಟಿತ್ತು, ಹಾಗಾಗಿ ದೂರು ದಾಖಲಿಸಲು ಕರೆ ಮಾಡಿದ್ದೆ. ರೆಕಾರ್ಡೆಡ್ ಮೆಸೇಜ್ನಲ್ಲಿ ೩ ಭಾಷಾ ಆಯ್ಕೆಗಳಿದ್ದವು, ಅವು ಯಾವ್ಯಾವು ಗೊತ್ತ???

 

೧. ಇಂಗ್ಲಿಷ್

೨. ಹಿಂದಿ, ಮತ್ತು

೩. ಬೆಂಗಾಲಿ

ಇಲ್ಲಿ ಕನ್ನಡದ ಆಯ್ಕೆಯೇ ಇಲ್ಲ! ಕರ್ನಾಟಕದಲ್ಲೇಕೆ ಬೆಂಗಾಲಿ???

ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ ೨೦೦೯ - ಉದ್ಘಾಟನೆ

ಈ ವರ್ಷ ಗೆಲಿಲಿಯೊ ತನ್ನ ದೂರದರ್ಶಕದ ಮೂಲಕ ಆಕಾಶವನ್ನು ಶೋಧಿಸಿದ ೪೦೦ನೇ ವರ್ಷ. ಇದನ್ನು ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ (IYA 2009) ಎಂದು ಆಚರಿಸಲಾಗುತ್ತಿದೆ. ಇದು ನಮ್ಮ ಸಮಾಜ, ಸಂಸ್ಕೃತಿಗೆ ಖಗೋಳ ವಿಜ್ಞಾನ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಜಾಗತಿಕ ಹಬ್ಬ.

ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ ೨೦೦೯ - ಉದ್ಘಾಟನೆ

ಕ್ರಿ.ಶ.೧೬೦೯, ಇಟಲಿ: ಕೊರೆಯುವ ಚಳಿಯಲ್ಲಿ, ಇಡೀ ಇಟಲಿ ಮಲಗಿದೆ. ಆದರೆ ಒಬ್ಬ ವ್ಯಕ್ತಿ ಮಾತ್ರ ಎರಡು ಮಸೂರಗಳುಳ್ಳ ಕೊಳವೆಯೊಂದನ್ನು ಹಿಡಿದು ಚಂದ್ರನ ಮೇಲಿನ ಕುಳಿಗಳನ್ನು, ಗುರುಗ್ರಹದ ಉಪಗ್ರಹಗಳನ್ನು ವೀಕ್ಷಿಸಿ ಅವುಗಳ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದ. ಅವನ ಈ ಅನ್ವೇಷಣೆಗಳು ವಿಜ್ಞಾನ ಪ್ರಪಂಚದಲ್ಲಿ ಕ್ರಾಂತಿಯುಂಟುಮಾಡಿದವು.
ಕ್ರಿ.ಶ. ೨೦೦೯: ಈ ವರ್ಷ ಗೆಲಿಲಿಯೊ ತನ್ನ ದೂರದರ್ಶಕದ ಮೂಲಕ ಆಕಾಶವನ್ನು ಶೋಧಿಸಿದ ೪೦೦ನೇ ವರ್ಷ. ಇದನ್ನು ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ (IYA 2009) ಎಂದು ಆಚರಿಸಲಾಗುತ್ತಿದೆ. ಇದು ನಮ್ಮ ಸಮಾಜ, ಸಂಸ್ಕೃತಿಗೆ ಖಗೋಳ ವಿಜ್ಞಾನ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಜಾಗತಿಕ ಹಬ್ಬ. ಇದರ ಉದ್ದೇಶ ಜಗತ್ತಿನ ಎಲ್ಲೆಡೆ ಯುವಜನರಲ್ಲಿ ವಿಜ್ಞಾನ, ಖಗೋಳದ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವುದು. ಇದರ ಧ್ಯೇಯ ವಾಕ್ಯ "ನಮ್ಮ ವಿಶ್ವ, ನಿಮ್ಮ ಅನ್ವೇಷಣೆಗಾಗಿ".



ನಮ್ಮ ಬೆಂಗಳೂರಿನಲ್ಲಿ ಬೆಂಗಳೂರಿನ ಹವ್ಯಾಸಿ ಖಗೋಳ ತಜ್ಞರ ಒಕ್ಕೂಟ (ABAA - Association of Bangalore Amateur Astronomers) ಐವೈಎ ಅನ್ನು ಆಚರಿಸುತ್ತಿದೆ. ಐವೈಎ ಪ್ರಯುಕ್ತ ವರ್ಷದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಕರ್ವಾಲೊ ಮತ್ತು ಹಾರುವ ಓತಿ (ಇಲ್ಲಿ ಹಲ್ಲಿ)

ತುಂಬಾ ದಿನಗಳ ಹಿಂದೆ ಕನ್ನಡಪ್ರಭದಲ್ಲಿ ಹಾರುವ ಹಲ್ಲಿಯ‌ ಚಿತ್ರ ಪ್ರಕಟಿಸಿದ್ದರು, ಅದನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಮನಸ್ಸಾಯ್ತು

ಏಪ್ರಿಲ್ ಒಂದಕ್ಕೂ ಮುಂಚೆ ಫೋಟೋ ಕರಾಮತ್ತು

 ತುಮಕೂರಿನಿಂದ ವಾಪಸ್ ಬರ್ಬೇಕಾದ್ರೆ ಸುಮ್ಮನಿರದ ನನ್ನ ಕೈ ತೆಗೆದ ಚಿತ್ರಗಳು ಅನೇಕ. ಅದರಲ್ಲಿ ಒಂದು ಮುಖ್ಯ ಚಿತ್ರ ಇಲ್ಲಿದೆ ನೋಡಿ. ನಮ್ಮನ್ನೆಲ್ಲ ಕಾರ್ ನಲ್ಲಿ ತುಮಕೂರಿನ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ಕರ್ಕೊಂಡ್ ಹೋಗಿ ಅಲ್ಲಿಂದ ವಾಪಸ್ ಕರ್ಕೊಂಡ್ ಬಂದ ಅನಿಲ್ ಅವರ ಕಾರ್ ಒಳಗಿಂದ ತಗೆದ ಚಿತ್ರ ಇದು.