ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಂಧನದ ಗೋಡೆಗಳ ಒದ್ದು ಬಾ ಸಖೀ!!!

ಸಖೀ
ನೀನಾಗಿಯೇ ಬಹಿರಂಗ
ಪಡಿಸಿರುವ ನಮ್ಮ ಪ್ರೀತಿಯ
ನೀನೀಗ ಬಚ್ಚಿಡು-ಆದಷ್ಟು
ಮುಚ್ಚಿಡು ಎನ್ನುವೆಯಾ?
ನಾ ಹೇಗೆ ಮುಚ್ಚಿಡಲಿ?

ರಭಸದಲಿ ಮುನ್ನುಗ್ಗುತ್ತಿರುವ
ನದಿಯ ನೀರನು ನೀ ಕಟ್ಟು
ಎನ್ನುವೆಯಾ?
ನಾ ಹೇಗೆ ಕಟ್ಟಿಡಲಿ?

ಒಮ್ಮೆ, ಪಂಜರವನೇ ಒದ್ದು
ರೆಕ್ಕೆ ಬಿಚ್ಚಿ ಹಾರಿಹೋಗಿರುವ
ಹೃದಯ ಪಕ್ಷಿಯನು ಮತ್ತೆ
ಹಿಡಿದಿಡು ಎನ್ನುವೆಯಾ?
ನಾ ಹೇಗೆ ಹಿಡಿದಿಡಲಿ?

ಕೆರೆ ಕರಗುವ ಸಮಯ; ನಿಮಗಿದೋ ಆಮಂತ್ರಣ

ಆತ್ಮೀಯ ಸ್ನೇಹಿತರೆ,
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬೆಂಗಳೂರಿನ ಕೆರೆಗಳ ಲೇಖನ ಮಾಲಿಕೆ ನಿಮಗೆ ಮಾಹಿತಿ
ಇದೆ ಎಂದು ನಾನು ಭಾವಿಸುತ್ತೇನೆ. ಈ ಕೆರೆಗಳ ಬಗ್ಗೆ ನಾನು ‘ಕೆರೆ ಕರಗುವ ಸಮಯ’ ಎಂಬ
ಪುಸ್ತಕವನ್ನು ಪ್ರಕಟಿಸಿದ್ದೇನೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್‌

ನಾನು ಓದಿದ ಸುಭಾಷಿತ - ೨

ನಮಸ್ಕಾರ ಸ೦ಪದಿಗರೆ,

ನನ್ನ ಸ೦ಸ್ಕೃತ ಸುಭಾಷಿತ ಭಾವಾರ್ಥದ ಸರಣಿಯಲ್ಲಿ ಇದು ಎರಡನೆಯದು. ಇದು ಸುಭಾಷಿತ ಅನ್ನುವುದಕ್ಕಿ೦ತ ಹಾಸ್ಯೋಕ್ತಿ ಎನ್ನಬಹುದು

ಸ೦ಸ್ಕೃತ ಮೂಲ:
ಕಮಲೇ ಬ್ರಹ್ಮಾ ಶೇತೆ ಹರಃ ಶೇತೆ ಹಿಮಾಲಯೆ |
ಕ್ಷೀರಬ್ಧೌ ಚ ಹರಿ: ಶೇತೆ ಮನ್ಯೆ ಮತ್ಕುಣಶ೦ಕಯ ||

ಕನ್ನಡ ಭಾವಾರ್ಥ:
ಕಮಲದಲಿ ಮಲಗಿಹ ಬೊಮ್ಮ
ಹಿಮಶಿಖರದಲಿ ಮಲಗಿಹ ನಮ್ಮ ಉಮಾಪತಿಯು |

ಕಪ್ಪು ಮತ್ತು ಬಿಳುಪು

ಕಪ್ಪು ಮತ್ತು ಬಿಳುಪು

ಕಪ್ಪಾಗಿಯೇ ನಾನು ಜನಿಸಿದೆ
ಕಪ್ಪಾಗಿಯೆ ನಾನು ಬೆಳೆದೆ
ಉರಿವ ಬಿಸಿಲಲೂ ನಾನು ಕಪ್ಪಾಗಿಯೇ ಹೊಳೆವೆ!

ಭಯ-ಭೀತನಾದಾಗ ಬದಲಾಗದ ಬಣ್ಣ
ನರಳುತ್ತ ಮಲಗಿದರೂ ನಾನು ಕಪ್ಪಗಿಯೇ ಇರುವೆ

ಮತ್ತೆ ನೀವು?

ಬಿಳಿಯರೇ ಇಲ್ಲಿ ಕೇಳಿ,...
ಬೆಳೆಯುವಾಗ ಮಾತ್ರ ನೀವು ಬಿಳಿಯರು
ಬಿರುಬಿಸಿಲಿಗೆ ಕೆಂಪಾಗಿ ಬಿಡುವಿರಿ
ಕಡುತಂಪಿನಲಿ ನೀಲಿಯಾದರೆ ನೀವು

ಥಟ್ ಅಂತ ಹೇಳಿ! ಈ ಕಂತನ್ನು ನೋಡಲು ಮರೆಯದಿರಿ!!

ಗೆಳೆಯರೆ!

ನೀವು ೧೮.೦೩.೦೯ ರಾತ್ರಿ ಪ್ರಸಾರವಾದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನೋಡಿದಿರಾ? ಎಚ್.ಐ.ವಿ ಕಾರ್ಯಕರ್ತರು ಭಾಗವಹಿಸಿದ್ದ ಈ ಕಾರ್ಯಕ್ರಮವು ಮಾಹಿತಿಪೂರ್ಣವಾಗಿತ್ತು.

* ಬಹುಶಃ ಇನ್ನು ಮುಂದೆ, ಒಳ್ಳೆದಿನಗಳು ಬರಲಾರವೇನೋ...ಇಂದಿನದಿನವೇ ಸುದಿನವಿರಬಹುದೇ ..! !

ಹಾ ... ಕೇಳಿಸ್ಕೊಳ್ಳಿ, ಮತ್ತೂ ನೀವೇ ಓದಿಕೊಳ್ಳಿ ಮಾರಾಯ್ರೆ.

ಇದನ್ನು ವರದಿಮಾಡಲು ಅಸಹ್ಯ. ಆದರೇನು ಇದು ನಾವು-ನೀವು ಬದುಕುತ್ತಿರುವ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಕಟು-ಸತ್ಯ. ಹೂ.. ಏನ್ಮಾಡೋದು. ಕೇಳಿಸ್ಕೊಳ್ಳಿ ; ಆದ್ರೆ ಗಾಬರಿಯಾಗ್ಬೇಡಿ. ಕಣ್ಣು-ಕಿವಿ ತೆರೆದಿರಲಿ. ಅಷ್ಟೆ !

ಮರುಗದ ಜೊತೆಗೆ ಜಗಳ

ಕೂರೋದೊಳ್ಳೇದ್ ತಕ್ಕೋರ್ಜೊತೆಗೆ
ಒಡ್ನಾಟ ಇರ್ಲಿ ತಕ್ಕೋರ್ಜೊತೆಗೆ
ಗೆಳೆತನ ಆಗ್ಲೀ ಗುದ್ದಾಟ ಆಗ್ಲೀ
ಮಾಡ್ಬೇಕ್ ಬರೀ ತಕ್ಕೋರ್ಜೊತೆಗೆ

ಸಂಸ್ಕೃತ ಮೂಲ:

ಸದ್ಭಿರೇವ ಸಹಾಸೀತ ಸದ್ಭಿಃ ಕುರ್ವೀತ ಸಂಗತಿಮ್ |
ಸದ್ಭಿರ್ವಿವಾದಂ ಮೈತ್ರಿಂ ಚ ನಾಸದ್ಭಿಃ ಕಿಂಚಿದಾಚರೇತ್ ||

ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ

ಎಂಟು ವರ್ಷಗಳ ಹಿಂದಿನ ಘಟನೆ.

ಮೈಸೂರಿನ ಒಂಟಿಕೊಪ್ಪಲು ಪ್ರದೇಶದಲ್ಲಿದ್ದ ತಮ್ಮ ಕ್ಲಿನಿಕ್‌ನ ಬಾಗಿಲು ಹಾಕಿದ ನಂತರ ಯುವ ವೈದ್ಯೆಯೊಬ್ಬರು ಮನೆಯತ್ತ ಹೊರಟಿದ್ದರು. ರಸ್ತೆಯಲ್ಲಿನ್ನೂ ಜನಸಂಚಾರವಿತ್ತು. ಇದ್ದಕ್ಕಿದ್ದಂತೆ ಬಂದ ವ್ಯಕ್ತಿಯೊಬ್ಬ ಅವರ ಮುಖದ ಮೇಲೆ ಆಸಿಡ್ ಎರಚಿ ಓಡಿಹೋದ.

ಜೋರಾಗಿ ಚೀರಿಕೊಂಡ ವೈದ್ಯೆ ನೆಲಕ್ಕೆ ಕುಸಿದಳು. ಮುಖಕ್ಕೆ ಬೆಂಕಿ ಹೊತ್ತಿಕೊಂಡಂತಾಗಿತ್ತು. ಆಸಿಡ್ ಹೊಕ್ಕಿದ್ದರಿಂದ ಒಂದು ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿತ್ತು. ನೋವಿನಿಂದ ಚೀರುತ್ತಿದ್ದ ಆಕೆ, ನೆರವಿಗಾಗಿ ಮೊರೆಯಿಟ್ಟಳು. ಆದರೆ, ಮೈಸೂರಿನ ಸುಸಂಸ್ಕೃತ ಜನ ಸಹಾಯ ಮಾಡುವುದಿರಲಿ, ಆಕೆಯ ನೋವನ್ನು ನೋಡುತ್ತ ಸುಮ್ಮನೇ ನಿಂತಿದ್ದರು. ಆಟೊದಲ್ಲಾದರೂ ಹತ್ತಿಸಿ ಕಳಿಸಿ, ನಾನು ಆಸ್ಪತ್ರೆಗೆ ಹೋಗುತ್ತೇನೆ ಎಂದು ಈ ಹೆಣ್ಣುಮಗಳು ಬೇಡಿಕೊಂಡರೂ ಸಾಂಸ್ಕೃತಿಕ ಊರಿನ ಜನರ ಮನ ಕರಗಲಿಲ್ಲ.