* ಬಹುಶಃ ಇನ್ನು ಮುಂದೆ, ಒಳ್ಳೆದಿನಗಳು ಬರಲಾರವೇನೋ...ಇಂದಿನದಿನವೇ ಸುದಿನವಿರಬಹುದೇ ..! !

* ಬಹುಶಃ ಇನ್ನು ಮುಂದೆ, ಒಳ್ಳೆದಿನಗಳು ಬರಲಾರವೇನೋ...ಇಂದಿನದಿನವೇ ಸುದಿನವಿರಬಹುದೇ ..! !

ಬರಹ

ಹಾ ... ಕೇಳಿಸ್ಕೊಳ್ಳಿ, ಮತ್ತೂ ನೀವೇ ಓದಿಕೊಳ್ಳಿ ಮಾರಾಯ್ರೆ.

ಇದನ್ನು ವರದಿಮಾಡಲು ಅಸಹ್ಯ. ಆದರೇನು ಇದು ನಾವು-ನೀವು ಬದುಕುತ್ತಿರುವ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಕಟು-ಸತ್ಯ. ಹೂ.. ಏನ್ಮಾಡೋದು. ಕೇಳಿಸ್ಕೊಳ್ಳಿ ; ಆದ್ರೆ ಗಾಬರಿಯಾಗ್ಬೇಡಿ. ಕಣ್ಣು-ಕಿವಿ ತೆರೆದಿರಲಿ. ಅಷ್ಟೆ !

ಆಗಿದ್ದಿಷ್ಟು. ಮುಂಬೈನ 'ಥಾಣೆ ನಗರಪಾಲಿಕೆ' ಯ ಆಸ್ಪತ್ರೆಯ ವೈದ್ಯರು ಸೋಮವಾರ ಒಂದು ಅಪರೂಪದ ಶಸ್ತ್ರಚಿಕಿತ್ಸೆಮಾಡಿ ವ್ಯಕ್ತಿಯೊಬ್ಬನ ಗುದದ್ವಾರದಿಂದ ೧೮ ಸೆಂಟಿಮೀಟರ್ ಉದ್ದದ ’ಟಾರ್ಚ್ ಲೈಟ್ ’ ನ್ನು ಹೊರತೆಗೆದಿದ್ದಾರೆ.

ಇದೊಂದು ಅನಿಷ್ಟ ಹಾಗೂ ದುರದೃಷ್ಟಕರ ಸನ್ನಿವೇಷ, ಮತ್ತು ಇದುವರೆಗೂ ಧಾಖಲಿಸದ ದುಷ್ಕರ್ಮಗಳಲ್ಲೊಂದು, ಎನ್ನುವುದು ನಮ್ಮ ಕಲ್ವನೆ ! ಸಕಾಲದಲ್ಲಿ ಸಹಕರಿಸಿ, ತಮ್ಮ ವೈದ್ಯವೃತ್ತಿಯ ಗರಿಮೆ ಹಾಗೂ ಮರ್ಯಾದೆಯನ್ನು ನಿಭಾಯಿಸಿದ ವೈದ್ಯರ ಪ್ರಶಂಸೆಯೂ ಸಹಿತ !

ಮುಂಬೈ ನ ಹತ್ತಿರವಿರುವ ಉಪನಗರ, 'ಕಲ್ಯಾಣ್' ನ ವಾಸಿ, ೩೦ ವರ್ಷದ 'ಚಾಂದ್ ಬಾದ್ ಶಾ,' ತಡೆಯಲಾರದ ಹೊಟ್ಟೆನೋವಿನಿಂದ ನರಳುತ್ತಾ ಆಸ್ಪತ್ರೆಗೆ ದಾಖಲಾದ. ವೈದ್ಯರು ಮೊದಲು 'ಎಕ್ಸ್-ರೇ' ತೆಗೆದು, ಅವನ ಗುದದ್ವಾರದ ಬದಿಯಲ್ಲಿ ಬಾಹ್ಯವಸ್ತುವೊಂದು ಇರುವುದನ್ನು ಖಚಿತಪಡಿಸಿಕೊಂಡರು. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದಾಗ, ೧೮ ಸೆಂಟಿಮೀಟರ್ ವ್ಯಾಸದ, 'ಟಾರ್‍ಚ್ ಲೈಟ್' ದೊರೆಯಿತು. ಅದರ ಒಳಗೆ 'ಬ್ಯಾಟರಿ ಸೆಲ್,' ಇಲ್ಲದೆ ಇದ್ದದ್ದು ಒಂದುವಿಧದಲ್ಲಿ ಸಹಾಯಕಾರಿಯಾಯಿತು. ಇಲ್ಲದಿದ್ದಿದ್ದರೆ, ಹೊಟ್ಟೆ ಕೆಡುವ ಸಾಧ್ಯತೆಯಿಂದ ಕೇಸ್ ಹದಗೆಟ್ಟು, ವಿಪರೀತಕ್ಕೆ ಹೋಗುತ್ತಿತ್ತು.

ಈ 'ಘನಪ್ರಸಂಗ' ದ ಹಿನ್ನೆಲೆ :

'ಚಾಂದ್ ಬಾದ್ ಶಾ, ತನ್ನ ಸ್ನೇಹಿತರ ಜೊತೆಗೆ ಮದುವೆಯ ಪಾರ್ಟಿಗೆ ಹೋಗಿದ್ದಾಗ, ಅಲ್ಲಿ ಅವನ ಸ್ನೇಹಿತರು ಬಲವಂತದಿಂದ ಶರಾಬು ಕುಡಿಸಿದರಂತೆ. (ಮದುವೆಯೆಂದಮೇಲೆ, ಅಮಲೇರುವಷ್ಟು ಶರಾಬ್ ಕುಡಿಸದಿದ್ದರೆ ಅದೆಂಥ ಮದುವೆ ? ) ಯಾವುದೋ ಮಾತಿನ ಚಕಮಕಿಯಾಯಿತು, ಹೆಂಡದ ಅಮಲೂ ಸೇರಿ, ಸ್ಥಿತಿ ಗಂಭೀರವಾಯಿತು. ಅವನ ಸ್ನೇಹಿತರು [ನಿಜಕ್ಕೂ ಅವರು ಸ್ನೇಹಿತರೇ ?] ತಮಾಷೆಗೆಂದು ( ಇದು ತಮಾಷೆಯೇ ?) ಆತನ ಗುದದ್ವಾರದೊಳಗೆ 'ಟಾರ್ಚ್ ಲೈಟ್' ಒಂದನ್ನು ತಳ್ಳಿದ್ದರಂತೆ. 'ಚಾಂದ್ ಬಾದ್ ಶಾ,’ 'ಪಾರ್ಟಿ' ಯನಂತರ ತಡವಾಗಿ ಮನೆಗೆ ಬಂದ. 'ಹೆಂಡತಿ ಯೆಲ್ಲಿ ಬೈಯ್ಯುವಳೋ' ಎಂಬ ಭಯಬೇರೆ. 'ಚಾಂದ್ ಬಾದ್ ಶಾ, ಹೇಗೋ ನೋವು ಸಹಿಸಿಕೊಂಡ. ಪಾಪ ; ಆ ಹೆಣ್ಣುಮಗಳು ಅವನ ನೋವು-ಸಂಕಟಗಳನ್ನು ಹೇಗೆತಾನೇ ನೋಡಿ ಸಹಿಸಿಯಾಳು ? ಆಸ್ಪತ್ರೆಗೆ ದಾಖಲುಮಾಡಿದಳು.

೨ ದಿನ ಅಲ್ಲಿದ್ದು ಮದ್ದು ಮಾಡಿದಮೇಲೂ, ಏನೂ ಉಪಯೋಗವಾಗದಿದ್ದಾಗ, 'ಚಾಂದ್ ಬಾದ್ ಶಾ ನನ್ನು ಸಮೀಪದ 'ಭಿವಂಡಿ' ಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಯೂ ಉಪಯೋಗವಾಗದೆ, ಮತ್ತೆ ಅಲ್ಲಿಂದ 'ಥಾಣೆ' ಯ ಆಸ್ಪತ್ರೆಗೆ ಕೇಸನ್ನು ವರ್ಗಾಯಿಸಲಾಯಿತು. 'ಮಲವಿಸರ್ಜನೆ' ಬರಬರುತ್ತಾ ಕಷ್ಟವಾಗುತ್ತಾ ಬಂತು. ಪರಿಸ್ಥಿತಿ ಉಲ್ಬಣಕ್ಕೆ ತಿರುಗಿತು. ಹೇಗೋ ಪುಣ್ಯಕ್ಕೆ 'ಟಾರ್ಚ್' ಮಲವಿಸರ್ಜನೆಯ ದಾರಿಯಲ್ಲಿ ಅಡ್ಡವಾಗಿರಲಿಲ್ಲವಾದರೂ, ಸ್ವಲ್ಪ ಅಜಾಕರೂಕತೆ ನಡೆದಿದ್ದರೆ ಪ್ರಾಣಾಪಾಯವಾಗುವುದರಲ್ಲಿ ಸಂಶಯವಿರಲಿಲ್ಲ. 'ಅಲ್ಲಾ' ನ ದಯದಿಂದ ಅವನಿಗೆ ’ಹೊಸಜೀವ,’ ಬಂತು. ಕೊನೆಗಾದರೂ 'ಚಾಂದ್ ಬಾದ್ ಶಾ, ಹೆಂಡತಿಗೆ, ತನ್ನ ಆಪ್ತ-ಸ್ನೇಹಿತರ ಘನಕಾರ್ಯ, ಹಾಗೂ ಗೆಳೆಯರ ನಡವಳಿಕೆಯ ಬಗ್ಗೆ ತಿಳಿಸಿರಬಹುದೆ ?

ನೀವೇನಂತೀರ ?

ಬೈಬೇಡಿ ಮಾರಾಯ್ರೆ !

-* (ಬುಧವಾರ, ೧೮, ಮಾರ್ಚ್, ೨೦೦೯, 'ಉದಯವಾಣಿ' ಯ ಮುಂಬೈ ನ ಕೊನೆಯಪುಟದಲ್ಲಿ ' ಗುದದ್ವಾರದಲ್ಲಿ ಟಾರ್ಚ್' ಎಂಬ ಶೀರ್ಶಿಕೆಯಡಿಯಲ್ಲಿ ಪ್ರಕಟಿತ).